TOP STORIES:

ಮಂಗಳೂರಿನಲ್ಲೊಬ್ಬ ಸೋನು ಸೂದ್: ಪನಾಮ ಸಂಸ್ಥೆಯ ಅಧ್ಯಕ್ಷ ರಾಗಿರುವ ವಿವೇಕ್ ರಾಜ್ ಪೂಜಾರಿ


ಮಂಗಳೂರು: ದೇಶದಲ್ಲಿ ಕೋವಿಡ್ -೧೯ ರ ಅಲೆ ತಾಂಡವ ವಾಡುವ ಸಂಧರ್ಭದಲ್ಲಿ ಮಂಗಳೂರಿನಲ್ಲೊಬ್ಬ ಯುವ ನಾಯಕ ಮತ್ತು ಉದ್ಯಮಿ ಸಂಕಷ್ಟದಲ್ಲಿರುವ ಸಹಸ್ರಾರು ಮಂದಿಗೆ ತಮ್ಮ ಕೈಲಾಗುವಷ್ಟು ಸಹಾಯ ಹಸ್ತ ನೀಡುತ್ತಾ ಬಡವರ ಪಾಲಿಗೆ ಕಣ್ಮಣಿ ಯಾಗುತ್ತ “ಮಂಗಳೂರಿನಲ್ಲೊಬ್ಬ ಸೋನು ಸೂದ” ಆಗುತ್ತಿದ್ದಾರೆ.ಅವರೇ ಪನಾಮ ನೇಚರ್ ಫ್ರೆಶ್ ಸಂಸ್ಥೆಯ ಅಧ್ಯಕ್ಷ ರಾಗಿರುವ ವಿವೇಕ್ ರಾಜ್ ಪೂಜಾರಿ ಯವರು.
ಇಂದು ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ವಿವೇಕ್ ರಾಜ್ ಪೂಜಾರಿ ಯವರು ಈ ಬಾರಿ ಇಷ್ಟರತನಕ 16೦೦೦ ಮಂದಿಗೆ ಊಟ, ಸುಮಾರು 4350 ಕುಟುಂಬ ದವರಿಗೆ ಮತ್ತು ದಿನಗೂಲಿ ನೌಕರರಿಗೆ ಕಿಟ್ ಗಳನ್ನೂ ನೀಡಿದ್ದು , ಜೊತೆಗೆ ಹಲವು ಬಡ ಕುಟುಂಬ ಗಳ ಆಸ್ಪತ್ರೆ ಚಿಕಿತ್ಸೆಯ ವೆಚ್ಚ ವನ್ನು ಸಹ ಪನಾಮ ಕಂಪೆನಿ ವತಿಯಿಂದ ಬರಿಸಿದ್ದೇನೆ .ಪ್ರಸಕ್ತ ತಮ್ಮ ಕಡೆಯಿಂದ ನೀಡುವ ಕಿಟ್ ಒಂದು ಕುಟುಂಬಕ್ಕೆ 15 ದಿನಗಳ ಕಾಲ ಉಪಯೋಗಕ್ಕೆ ಬರಲಿದೆ. ಇದು ಹಲವು ಕುಟುಂಬಗಳಿಗೆ ಸಹಾಯವಾಗಲಿದೆ.

ಕಳೆದ ಲೊಕ್ಡೌನ್ ಸಂಧರ್ಭ ಸುಮಾರು ೧೪೦೦೦ ಮಂದಿಗೆ ಬೀದಿ ಬದಿ ಊಟ, ೨೦೦೦ ಮಂದಿಗೆ ಕಿಟ್ ,12 ಮಂದಿಗೆ ಮಾರಲು ತಳ್ಳುಗಾಡಿಯಲ್ಲಿ ಗಾಡಿ ತುಂಬಾ ತರಕಾರಿ , ಮತ್ತು ೫೦ ದೊಡ್ಡ ದೊಡ್ಡ ಕೊಡೆಗಳನ್ನು ಉಚಿತವಾಗಿ ಸಹ ನೀಡಿದ್ದಾರೆ. ಜೊತೆ ತಮ್ಮ ಊರಿಗೆ ಹೋಗಲು ಸಂಕಷ್ಟ ದಲ್ಲಿದ್ದಾಗ ಆರ್ಥಿಕ ಸಹಾಯ ಮಾಡಿದ್ದಾರೆ.

ಇದೆ ಸಂಧರ್ಭ ಸರ್ಕಾರ ಈ ಬಾರಿಯ ಲೊಕ್ಡೌನ್ ಸಂಧರ್ಭ ಮಾಡಿದ ವ್ಯವಸ್ಥೆಗಳು ಸಂಪೂರ್ಣ ವಿಫಲ ವಾಗಿದ್ದು, ಅಗತ್ಯ ವಸ್ತುಗಳ ಖರೀದಿಗೆ ಬೆಳಿಗ್ಗೆ ೬ ರಿಂದ -೧೦ರ ತನಕ ಲಾಕ್ ಡೌನ್ ಓಪನ್ ಮಾಡಿದ್ದಾರೆ.

ಜೊತೆಗೆ ವಸ್ತುಗಳನ್ನು ಖರೀದಿಸಲು ವಾಹನಗಳನ್ನು ಉಪಯೋಗಿಸುವಂತಿಲ್ಲ. ಜನರು 3-4 ಕಿಮೀ ನಡೆದುಕೊಂಡು ಬಂದು ವಾಪಾಸ್ ಹೋಗುವಾಗ 12 ಗಂಟೆ ಆಗುತ್ತೆ.ಕೆಲಸಗಾರರಿಗೆ ಸಂಚಾರಕ್ಕೆ ಬೇರೆ ವ್ಯವಸ್ಥೆ ಇಲ್ಲ. ಜೊತೆಗೆ ಸರ್ಕಾರ ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ ಮಾಡಿದ್ದರಿಂದ ಜನರ ಸಮಸ್ಯೆಗಳು ಇನ್ನಷ್ಟು ಬಿಗಡಾಯಿಸಿವೆ.

ಈ ಬಾರಿ ಸರಕಾರ ಸಾರ್ವಜನಿಕರನ್ನು ಕಳೆದ ಬಾರಿಗಿಂತ ಜಾಸ್ತಿ ನೆಗ್ಲೆಕ್ಟ್ ಮಾಡಿದೆ. ಸರಕಾರ ಬ್ಯಾಂಕ್ಗಳನ್ನೂ ಮದ್ಯಾಹ್ನ 2 ಗಂಟೆಯ ತನಕ ಓಪನ್ ಇಟ್ಟಿದ್ದಾರೆ. ಆದರೆ ಸಾರ್ವಜನಿಕರು ೧೦ ಗಂಟೆ ಮೇಲೆ ರಸ್ತೆ ಯಲ್ಲಿ ತಿರುಗುವಂತಿಲ್ಲ. ಆದರೆ ಇದರಿಂದ ಸಾರ್ವಜನಿಕರಿಗೆ ಉಪಯೋಗಕ್ಕಿಂತ ತೊಂದರೆ ಆಗಿದೆ.

ಸರ್ಕಾರಕ್ಕೆ ತೆರಿಗೆ ಕಟ್ಟುವ ಉದ್ದಿಮೆದಾರರಿಗೂ ಇದರಿಂದ ಯಾವುದೇ ಉಪಯೋಗವಿಲ್ಲ ಎಂದು ಸರ್ಕಾರದ ಧೋರಣೆ ಬಗ್ಗೆ ಖೇದ ವ್ಯಕ್ತ ಪಡಿಸಿದರು.
ಮುಂದೆ ಮಾತನಾಡುತ್ತ ರಾಜ್ಯದ ಹಲವಾರು ಜಿಲ್ಲೆಗಳಲ್ಲಿ ರೈತರು ತಾವು ಬೆಳೆದ ಬೆಳೆದ ತರಕಾರಿ, ಹಣ್ಣುಗಳನ್ನು ಖರೀದಿಸಲು ಯಾರು ಮುಂದೆ ಬರದೇ ಇರುವುದರಿಂದ ತಮ್ಮ ಬೆಳೆಗಳನ್ನು ಬೀದಿಗೆಸುರಿಯುವುದನ್ನು ನೋಡಿದ್ದೇನೆ. ಇನ್ನು ಮುಂದಕ್ಕೆ ರೈತರು ತಾವು ಬೆಳೆದ ಬೆಳೆದ ತರಕಾರಿ, ಹಣ್ಣುಗಳನ್ನು ನಮ್ಮ ಸಂಸ್ಥೆಯ ಸಿಬ್ಬಂದಿಗಳಿಗೆ, ಅವರ ಸ್ಥಳಗಳಿಗೆ ಫಾರ್ಮ ಗಳಿಗೆ ಬಂದು ನಮ್ಮ ಪನಾಮ ಕಂಪೆನಿ ಖರೀದಿ ಮಾಡಲಿದೆ ಎಂದರು .

ಇನ್ನೂ ಮುಂದೆ ಜನಜೀವನ ಸರಿಯಾಗಲು ಬಹಳ ಸಮಯ ಹಿಡಿಯಲಿದೆ. ಹೀಗಾಗಿ ಸಂಕಷ್ಟದಲ್ಲಿರುವ ಕುಟುಂಬಗಳಿಗೆ ನೆರವಾಗಲು ಮುಂಜಾಗ್ರತಾ ಕ್ರಮವಾಗಿ ರೂ 50 ಲಕ್ಷ ವನ್ನು ಇಟ್ಟಿದ್ದೇನೆ ಎಂದರು. ಪತ್ರಿಕಾ ಗೋಷ್ಠಿಯಲ್ಲಿ: ವಿವೇಕ್ ರಾಜ್ ಪನಾಮ ಸಿಇಓ, ರಜಾಕ್ ಉಪಸ್ಥಿತರಿದ್ದರು.


Related Posts

ಉದಯೋನ್ಮುಖ ಪ್ರತಿಭಾ ಪುರಸ್ಕಾರಕ್ಕೆ ಅಕ್ಷತಾ ಸುಧೀರ್


Share         ಮಂಗಳೂರು/ಬೆಂಗಳೂರು: ಕರ್ನಾಟಕ ಆರ್ಯ ಈಡಿಗ ಮಹಿಳಾ ಸಂಘದ ವತಿಯಿಂದ ಆಯೋಜಿಸಲಾದ ರಾಷ್ಟ್ರೀಯ ಸಮ್ಮೇಳನದಲ್ಲಿ, ಯುವವಾಹಿನಿಯ ಬೆಂಗಳೂರು ಘಟಕದ ಹೆಮ್ಮೆಯ ಸದಸ್ಯೆಯೂ ಹಾಗೂ ಪ್ರಸಕ್ತ ಲೆಕ್ಕಪರಿಶೋಧಕರೂ ಆಗಿರುವ ಶ್ರೀಮತಿ ಅಕ್ಷತಾ ಸುಧೀರ್ ಅವರಿಗೆ ಉದಯೋನ್ಮುಖ


Read More »

ಕಲರ್ಸ್ ಕನ್ನಡ ಬಿಗ್ ಬಾಸ್ 12ರ ಸ್ಪರ್ಧಿ ಧ್ರುವಂತ್ (ಚರಿತ್ ಬಾಳಪ್ಪ ಪೂಜಾರಿ) ಜೀವನದ ಯಶೋಗಾಥೆ


Share         ಜೀವನದಲ್ಲಿ ಅದೆಷ್ಟೋ ಕಷ್ಟಗಳನ್ನು ಸಹಿಸಿಕೊಂಡು, ಅವಕಾಶಗಳಿಂದ ವಂಚಿತನಾದರೂ ಧೃತಿಗೆಡದೆ, ಸಾಧನೆಯ ಹಾದಿಯಲ್ಲಿ ಹಂತ ಹಂತವಾಗಿ ಮುನ್ನಡೆಯುತ್ತ ಇಂದು ಎಲ್ಲರ ಮನಗಳಲ್ಲಿ ಮನೆ ಮಾಡಿರುವಂತಹ ನಮ್ಮೆಲ್ಲರ ಹೆಮ್ಮೆಯ ಸಾಧಕ ಧ್ರುವಂತ್ ಇವರ ಯಶಸ್ಸಿನ ಹಿಂದಿನ


Read More »

🩸 ಓಮಾನ್ ಬಿಲ್ಲವಾಸ್ ವತಿಯಿಂದ ಆಯೋಜಿಸಲಾದ ಸಾಮೂಹಿಕ ರಕ್ತದಾನ ಶಿಬಿರ 🩸 ಬೌಶರ್ ಬ್ಲಡ್ ಬ್ಯಾಂಕ್, ಘಾಲಾ ಇಲ್ಲಿ ಯಶಸ್ವಿಯಾಗಿ ನಡೆಯಿತು.


Share          ಒಂದು ಕಾಲದಲ್ಲಿ ತುಳುನಾಡಿನ ಮೂಲದವರಾದ ಬಿಲ್ಲವರು ಕೃಷಿಕರಾಗಿ ಹಾಗೂ ಬೈದರಾಗಿ ತಮ್ಮ ಪರಿಶ್ರಮ, ಶ್ರಮಸಾಧನೆ ಮತ್ತು ಸಾಮಾಜಿಕ ಜವಾಬ್ದಾರಿಗಳ ಮೂಲಕ ಸಮಾಜದಲ್ಲಿ ಗೌರವಯುತ ಸ್ಥಾನವನ್ನು ಪಡೆದವರು. ಪ್ರಕೃತಿಯೊಂದಿಗೆ ಸಮನ್ವಯದಿಂದ ಬದುಕನ್ನು ಸಾಗಿಸುತ್ತಾ, ಪರಸ್ಪರ


Read More »

ನಾನು ಕಂಡ ಪ್ರವೀಣ್ ಪೂಜಾರಿ


Share         ನಾನು ಕಂಡ ಪ್ರವೀಣ್ ಪೂಜಾರಿ ಸಾಧಾರಣ 15 ವರ್ಷಗಳಿಂದ ನಮ್ಮ ಆತ್ಮೀಯತೆ ಬಿಲ್ಲವ ಸಮಾಜದ ಸಾಮಾನ್ಯ ಜನರಿಗೂ ಸಮಸ್ಯೆ ಬಂದಂತ ಸಂದರ್ಭದಲ್ಲಿ ವಕೀಲನಾಗಿ ಅಥವಾ ಸಾಮಾಜಿಕ ಕಾರ್ಯಕರ್ತನಾಗಿ ನ್ಯಾಯ ದೊರಕಿಸಿಕೊಟ್ಟಂತಹ ಒಬ್ಬ ನಮ್ಮ


Read More »

ಚಾರ್ಟರ್ಡ್ ಅಕೌಂಟೆಂಟ್ (CA) ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕಗಳನ್ನು ಗಳಿಸಿ ನಿಶಾ ಪೂಜಾರಿ ಉತ್ತೀರ್ಣರಾಗಿದ್ದಾರೆ.


Share         ಮುಂಬಯಿ : ಕಾಂದಿವಲಿ ಪೂರ್ವದ ಠಾಕೂರ್ ಕಾಂಪ್ಲೆಕ್ಸ್ ನಿವಾಸಿ ನಿಶಾ ಪೂಜಾರಿ ಅವರು ಇತ್ತೀಚೆಗೆ ಸೆಪ್ಟೆಂಬರ್‌ನಲ್ಲಿ ನಡೆದ ಚಾರ್ಟರ್ಡ್ ಅಕೌಂಟೆಂಟ್ (CA) ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕಗಳನ್ನು ಗಳಿಸಿ ಯಶಸ್ವಿಯಾಗಿ ಉತ್ತೀರ್ಣರಾಗಿದ್ದಾರೆ. ಅವರು ಕಾರ್ಕಳ


Read More »

ಬಹುಮುಖ ಪ್ರತಿಭಾವಂತೆ ಹರ್ಷಿಕಾ ಕಾಣಿಯೂರು ಅವರಿಗೆ ಅಭಿನಂದನೆಗಳು


Share         ಹರ್ಷಿಕಾ ಕಾಣಿಯೂರು ಅವರ ಬಾಲ್ಯದ ವಯಸ್ಸಿನಲ್ಲಿಯೇ ಕೃಷಿ ಕಾರ್ಯದ ಮೇಲಿನ ಆಸಕ್ತಿ ಹಾಗೂ ಶ್ರಮವನ್ನು ಗುರುತಿಸಿ ಸೈಟ್ ರೀಟಾ ವಿದ್ಯಾ ಸಂಸ್ಥೆ ಗೌರವಿಸಿದ ಕ್ಷಣ ನಿಜಕ್ಕೂ ಹೆಮ್ಮೆಯದು. 🌾🌱👏   ಅಷ್ಟೇ ಅಲ್ಲದೆ,


Read More »