ಗೆಜ್ಜೆಗಿರಿ ಜಾತ್ರಾ ಮಹೋತ್ಸವದ ಮೂಡಬಿದ್ರೆ ವಲಯ ಆಮಂತ್ರಣ ಪತ್ರಿಕೆಯ ವಿತರಣೆಗೆ ಚಾಲನೆ ವಿನೂತನ ರೀತಿಯಲ್ಲಿ ಕಂಬಳಚಲನ ಚಿತ್ರ ಚಿತ್ರೀಕರಣ ಪರಿಸರದಲ್ಲಿ ಜರಗಿತು. ಗೆಜ್ಜೆಗಿರಿ ಕ್ಷೇತ್ರಾಡಳಿತ ಸಮಿತಿಯ ಗೌರವ ಅಧ್ಯಕ್ಷ ರಾದ ರಾಜಶೇಖರ್ ಕೋಟ್ಯಾನ್, ಅಧ್ಯಕ್ಷ ರಾದ ಪೀತಾಂಬರ ಹೆರಾಜೆ, ನೇಮೋತ್ಸವ ಸಮಿತಿಯ ಅಧ್ಯಕ್ಷರಾದ ಸತೀಶ್ ಕೆಡಿಂಜಿ, ಚಲನಚಿತ್ರ ನಟ ನವೀನ್ ಡಿ ಪಡೀಲ್, ರಾಜೇಂದ್ರ ಚಿಲಿಂಬಿ, ಗೆಜ್ಜೆಗಿರಿ ಮೂಡಬಿದ್ರೆ ವಲಯ ಪ್ರಮುಖರಾದ ಸುರೇಶ್ ಕೋಟ್ಯಾನ್ ಮತ್ತು ಕುಮಾರ್ ಇರುವೈಲ್ ಮೂಡಬಿದ್ರೆ ವಲಯದ ಸಮಾಜದ ಸಂಘ ಸಂಸ್ಥೆ ಗಳಿಗೆ ಆಮಂತ್ರಣ ಪತ್ರಿಕೆ ವಿತರಣೆ ಮಾಡುವ ಜವಾಬ್ಧಾರಿ ವಹಿಸಿಕೊಂಡರು. ಈಸಂಧರ್ಭ ಕಂಬಳ ಚಲನ ಚಿತ್ರದ ಕಲಾವಿದರು ಉಪಸ್ಥಿತರಿದ್ದರು.