ಯಶಸ್ವಿ ಉದ್ಯಮಿ ಹಾಗೂ ಸಮಾಜ ಸೇವಕ ಶ್ರೀ ಗೋವಿಂದ ಬಾಬು ಪೂಜಾರಿಯವರ ಸಮಾಜ ಸೇವೆಯನ್ನು ಗುರುತಿಸಿ ಏಶಿಯಾ ವೇದಿಕ್ ಕಲ್ಚರ್ ಫೌಂಡೇಷನ್ ವತಿಯಿಂದ ಹೆಮ್ಮೆಯ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ.
ಶ್ರೀ ಗೋವಿಂದ ಬಾಬು ಪೂಜಾರಿಯವರು ವರಲಕ್ಷ್ಮಿ ಚಾರಿಟೇಬಲ್ ಟ್ರಸ್ಟ್ ನ್ನು ಹುಟ್ಟು ಹಾಕಿ ನೊಂದ ಕುಟುಂಬಕ್ಕೆ ಆಸರೆಯಾಗಿದ್ದಾರೆ.
ಯಶಸ್ವಿ ಉದ್ಯಮಿ ಚೆಫ್ ಟಾಕ್ ಫುಡ್ & ಹಾಸ್ಪಿಟಾಲಿಟಿ ಸರ್ವಿಸಸ್ ಪ್ರೈ. ಲಿ. ಸಂಸ್ಥಾಪಕರಾದ ಶ್ರೀ ಗೋವಿಂದ ಬಾಬು ಪೂಜಾರಿ ಕೃಷಿ ಕುಟುಂಬದಲ್ಲಿ ಜನಿಸಿದ ಗೋವಿಂದ ಬಾಬು ಪೂಜಾರಿ ಅವರಿಗೆ ಬಾಲ್ಯದಲ್ಲಿ ಬಡತನ ಕಂಡಿದ್ದರು. ಬೈಂದೂರು ತಾಲೂಕಿನ ಬಿಜೂರು ಗ್ರಾಮದ ಚಮ್ಮಾನ್ ಹಿತ್ಲು ಮೂಲದವರು. ಕಡು ಬಡತನ ಭೂತ ಇವರ ಬೆನ್ನುಹತ್ತಿ ಇವರು ಎಳೆವೆಯಲ್ಲಿಯೇ ಹುಟ್ಟೂರನ್ನು ಬಿಟ್ಟು ದುಡಿಯಲು ಮಂಬೈ ಸೇರಿದವರು. ಐದು ರಾಜ್ಯಗಳಲ್ಲಿ ಚೆಫ್ ಟಾಕ್ ಫುಡ್ ಆಂಡ್ ಹಾಸ್ಪಿಟಾಲಿಟಿ ಸಂಸ್ಥೆ ಹಾಗೂ ಮತ್ಸ್ಯ ಬಂಧನ ಸಂಸ್ಥೆ ಹಾಗೂ ಹಲವು ಹೋಟೆಲ್ ಗಳ ಮಾಲೀಕರಾದ ಶ್ರೀಯುತರು ಪ್ರಸ್ತುತ 5 ರಿಂದ 6 ಸಾವಿರ ಕಾರ್ಮಿಕರಿಗೆ ” ಅನ್ನದಾತ” ರಾಗಿದ್ದಾರೆ.