ಯುವವಾಹಿನಿ (ರಿ ) ಪಣಂಬೂರು ಕುಳಾಯಿ ಘಟಕದ 2021 ನೇ ಸಾಲಿನ ಪದಗ್ರಹಣ ಕಾರ್ಯಕ್ರಮವು ದಿನಾಂಕ 26 /9/ 2021 ಆದಿತ್ಯವಾರ 9.30 ಕ್ಕೆ ಕುಳಾಯಿ ಬ್ರಹ್ಮಶ್ರೀ ನಾರಾಯಣಗುರು ಸಭಾಭವನದಲ್ಲಿ ನಡೆಯಿತು.
ಘಟಕದ ಅಧ್ಯಕ್ಷರಾದ ಹರೀಶ್ ಪೂಜಾರಿಯವರ ವೇದಿಕೆಯಲ್ಲಿದ್ದ ಅತಿಥಿ ಗಣ್ಯರನ್ನು ಸ್ವಾಗತಿಸಿದರು.
ಕಾರ್ಯಕ್ರಮದ ಪ್ರಸ್ತಾವನೆಯನ್ನು ಘಟಕದ ಹಾಗೂ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರಾದ ಶ್ರೀ ಪದ್ಮನಾಭ ಮರೋಳಿಯವರು ಮಂಡಿಸಿದರು.
ಕಾರ್ಯಕ್ರಮವನ್ನು ಬ್ರಹ್ಮ ಶ್ರೀ ನಾರಾಯಣ ಗುರು ಸಮಾಜ ಸೇವಾ ಸಂಘದ ಅಧ್ಯಕ್ಷರಾದ ಶ್ರೀ ಪ್ರಭಾಕರ್ ಕುಳಾಯಿ ಅವರು ದೀಪ ಪ್ರಜ್ವಲಿಸುವ ಮೂಲಕ ಉದ್ಘಾಟಿಸಿ, ನಂತರ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಘಟಕದ ಕಾರ್ಯದರ್ಶಿಯವರಾದ ಶ್ರೀಮತಿ ಮನಿಷಾ ರೂಪೇಶ್ ರವರು 2020-21 ನೇ ಸಾಲಿನ ವಾರ್ಷಿಕ ವರದಿಯನ್ನು ಮಂಡಿಸಿದರು.
ಪ್ರಸಕ್ತ ಸಾಲಿನ ಚುನಾವಣಾಧಿಕಾರಿ ಯವ ರಾದ ಸುರೇಶ್ ಪೂಜಾರಿಯವರು 2021-22 ನೇ ಸಾಲಿಗೆ ಆಯ್ಕೆಯಾದ ಯುವ ಪದಾಧಿಕಾರಿಗಳ ತಂಡವನ್ನು ವೇದಿಕೆಗೆ ಬರಮಾಡಿಕೊಂಡರು. ಕೇಂದ್ರ ಸಮಿತಿಯ ಅಧ್ಯಕ್ಷರಾದ ಡಾl ರಾಜಾರಾಮ್ ರವರು ನೂತನ ತಂಡಕ್ಕೆ ಪ್ರತಿಜ್ಞಾವಿಧಿ ಬೋಧಿಸಿದರು.
ಯುವವಾಹಿನಿ (ರಿ ) ಕೇಂದ್ರ ಸಮಿತಿ ಅಧ್ಯಕ್ಷರಾದ ಡಾ | ರಾಜಾರಾಮ್ ಕೆ. ಬಿ ರವರು ಸಭೆಯನ್ನುದ್ದೇಶಿಸಿ ಮಾತನಾಡಿ ಯುವ ಸದಸ್ಯರುಗಳಿಗೆ ಸಮರ್ಪಕವಾಗಿ ಮಾರ್ಗದರ್ಶನ ನೀಡುವ ಮೂಲಕ ಇನ್ನಷ್ಟು ಸಮಾಜಮುಖಿ ಕಾರ್ಯಕ್ರಮವನ್ನು ಮಾಡುವಂತಾಗಲಿ ಎಂದು ಶುಭ ಹಾರೈಸಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ ಸಹಾಯಕ ಪೊಲೀಸ್ ಆಯುಕ್ತರಾದ ಶ್ರೀಯುತ ಮಹೇಶ್ ಕುಮಾರ್ ರವರು ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
2021 ನೇ ಸಾಲಿನಲ್ಲಿ ಎಸೆಸೆಲ್ಸಿ ಮತ್ತು ಪಿಯುಸಿಯಲ್ಲಿ ಹೆಚ್ಚು ಅಂಕಗಳಿಸಿದ ಮೂರು ವಿದ್ಯಾರ್ಥಿನಿಯರಿಗೆ ಶ್ರೀಯುತ ಅನಿಲ್ ಕುಮಾರ್ ಪೂಜಾರಿ ಪಂಜಿಮೊಗರು ಕಾರ್ಪೊರೇಟರ್ ಮಹಾನಗರ ಪಾಲಿಕೆ ಮಂಗಳೂರು ಪ್ರತಿಭಾ ಪುರಸ್ಕಾರವನ್ನು ನೆರವೇರಿಸಿದರು.
ವಿದ್ಯಾ ನಿಧಿ ಸಂಚಾಲಕರಾದ ಶ್ರೀ ಸುರೇಶ್ ಪೂಜಾರಿಯವರು 20 ಮಕ್ಕಳಿಗೆ ವಿದ್ಯಾ ನಿಧಿಯನ್ನು ವಿತರಿಸಿದರು.
ಶ್ರೀಯುತ ಅನಿಲ್ ಕುಮಾರ್ ಅವರು ಸಭೆಯನ್ನುದ್ದೇಶಿಸಿ ಮಾತನಾಡಿ ಯುವ ಶಕ್ತಿಯನ್ನು ಇನ್ನಷ್ಟು ಗಟ್ಟಿಗೊಳಿಸುವ ಅವಶ್ಯಕತೆ ಇದೆ ಈ ಕೆಲಸ ನೂತನ ಅಧ್ಯಕ್ಷರ ಹಾಗೂ ಅವರ ತಂಡದಿಂದ ಆಗಲಿ ಎಂದು ಶುಭ ಹಾರೈಸಿದರು.
2021-22 ನೇ ಸಾಲಿಗೆ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಶ್ರೀಯುತ ರವಿ ಮೂಡಬೆಟ್ಟು ಅವರು ಘಟಕದ ಮುಂದಿನ ಬೆಳವಣಿಗೆಯಲ್ಲಿ ಎಲ್ಲರ ಸಹಕಾರ ಅತೀ ಅಗತ್ಯ ಎಂದರ
ನಿರ್ಗಮನ ಅಧ್ಯಕ್ಷರಾದ ಹರೀಶ್ ಪೂಜಾರಿ ಹಾಗೂ ಅವರ ಧರ್ಮಪತ್ನಿ ಶ್ರೀಮತಿ ಶಮಿತಾ ರವರನ್ನು ಘಟಕದ ವತಿಯಿಂದ ಸನ್ಮಾನಿಸಲಾಯಿತು.
ವಿವಿಧ ಘಟಕಗಳಿಂದ ಆಗಮಿಸಿದ ಅತಿಥಿಗಳು ನೂತನ ತಂಡಕ್ಕೆ ಶುಭ ಹಾರೈಸಿದರು.
ನಿರ್ಗಮನ ಅಧ್ಯಕ್ಷರಾದ ಹರೀಶ್ ಪೂಜಾರಿಯವರು ಸಭೆಯನ್ನು ಉದ್ದೇಶಿಸಿ ಮಾತನಾಡಿ ತಮ್ಮ ಅಧ್ಯಕ್ಷೀಯ ಅನುಭವವನ್ನು ಹಂಚಿಕೊಂಡರು.ಈ ಸುಂದರ ಕಾರ್ಯಕ್ರಮದ ನಿರೂಪಣೆಯಲ್ಲಿ ಘಟಕದ ಮಾಜಿ ಅದ್ಯಕ್ಷ ರಾದ ಸಂಜೀವ ಸುವರ್ಣ, ಶ್ರೀಮತಿ ಸುಜಾತ ಕುಳಾಯಿ, ರಕ್ಷಿತ್. ಕೆ ಪೂಜಾರಿ ಯವರಿದ್ದರು. ನೂತನ ಸಾಲಿನ ಕಾರ್ಯದರ್ಶಿಯವರಾದ ಶ್ರೀಮತಿ ಹರಿಣಿ ಜಗದೀಶ್ ರವರು ವಂದನಾರ್ಪಣೆಯೊಂದಿಗೆ ಕಾರ್ಯಕ್ರಮ ಮುಕ್ತಾಯ ಗೊಳಿಸಿದರು.