ಲೇಡಿಹಿಲ್ ವೃತ್ತಕ್ಕೆ ಬ್ರಹ್ಮ ಶ್ರೀನಾರಾಯಣ ಗುರುಗಳ ಹೆಸರು ನೀಡುವ ಬಗ್ಗೆ ಮನಪಾ ಮೇಯರ್‌ಗೆ ಮನವಿಫ್ರೆಂಡ್ಸ್ ಬಳ್ಳಾಲ್ ಭಾಗ್ ಬಿರುವೆರ್ ಕುಡ್ಲ(ರಿ) ಕೇಂದ್ರೀಯ ಸಮಿತಿ ಮನವಿ ಸಲ್ಲಿಸಿದರು.
ಫ್ರೆಂಡ್ಸ್ ಬಳ್ಳಾಲ್ ಭಾಗ್ ಬಿರುವೆರ್ ಕುಡ್ಲ (ರಿ) ಕೇಂದ್ರೀಯ ಸಮಿತಿಯು ಈ ವಿಚಾರದ ಬಗ್ಗೆ 2018ರಂದು ಮನವಿಯನ್ನು ಶಾಸಕ ವೇದವ್ಯಾಸ್ ಕಾಮತ್ ಅವರಿಗೆ ಈ ಮೊದಲೇ ಮನವಿಯನ್ನು ನೀಡಿದ್ದು, ಈಗ ಮತ್ತೊಮ್ಮೆ ಶಾಸಕರಿಗೆ ಮರು ಮನವಿಯನ್ನು ಸಲ್ಲಿಸಿದ್ದಾರೆ.
ಅಲ್ಲದೇ, ಮನಪಾ ಮೇಯರ್‌ಗೆ ಮನವಿಯನ್ನು ಸಲ್ಲಿಸಿದ್ದಾರೆ.
ಈ ಮನವಿಗೆ ಈಗಾಗಲೇ ಶಾಸಕರು ಹಾಗೂ ಮನಪಾ ಮೇಯರ್ ಸ್ಪಂದನೆ ನೀಡಿದ್ದು, ಮುಂದಿನ ದಿನಗಳಲ್ಲಿ ಲೇಡಿಹಿಲ್ ವೃತ್ತಕ್ಕೆ ಬ್ರಹ್ಮಶ್ರೀ ನಾರಾಯಣ ಗುರುಗಳ ಹೆಸರನ್ನು ನಾಮಕರಣ ಮಾಡುತ್ತೇವೆ ಎಂದು ತಿಳಿಸಿದ್ದಾರೆ.