TOP STORIES:

ಶಬರಿಮಲೆಗೆ ಪಾದಯಾತ್ರೆ: ಬಂಟ್ವಾಳ ತಂಡದ ಜತೆ ಹೆಜ್ಜೆ ಹಾಕಿದ ದಾರಿಯಲ್ಲಿ ಸಿಕ್ಕ ಶ್ವಾನ !


ಬಂಟ್ವಾಳ: ಶಬರಿಮಲೆಗೆ ಪಾದಯಾತ್ರೆಯಲ್ಲಿ ಹೊರಟ ಅಯ್ಯಪ್ಪ ಸ್ವಾಮಿ ವ್ರತಾಧಾರಿಗಳ ತಂಡಕ್ಕೆ ದಾರಿ ಮಧ್ಯೆ ಸಿಕ್ಕಿ ಶ್ವಾನವೊಂದು ಅವರ ಜತೆಗೆ ಕಿಲೋ ಮೀಟರ್‌ಗಟ್ಟಲೆ ಹೆಜ್ಜೆ ಹಾಕಿ, ಅವರು ವಾಸ್ತವ್ಯ ಹೂಡಿದ ಸ್ಥಳದಲ್ಲೇ ನಿಂತು, ಅವರು ಕೊಟ್ಟ ತಿಂಡಿ ತಿನಸುಗಳನ್ನು ತಿಂದು, ಅವರ ತಂಡದ ಪ್ರೀತಿಯ “ಮಲ್ಲಿ’ಯಾಗಿ ಇದೀಗ ವ್ರತಾಧಾರಿಗಳು ಅದನ್ನು ಊರಿಗೆ ತರುವುದಕ್ಕೆ ನಿರ್ಧರಿಸಿದ್ದಾರೆ.

ಮಣಿನಾಲ್ಕೂರು ಗ್ರಾಮದ ಬಡೆಕೊಟ್ಟಿನಿಂದ ಡಿ. 11ರಂದು ಅಯ್ಯಪ್ಪ ಸ್ವಾಮಿ ವ್ರತಾಧಾರಿಗಳ ತಂಡವೊಂದು ಪಾದಯಾತ್ರೆಯ ಮೂಲಕ ಶಬರಿಮಲೆಗೆ ಹೊರಟಿತ್ತು. ತಂಡವು ಎಟ್ಟುಮಾನೂರ್‌ ತಲುಪಿದ ಸಂದರ್ಭದಲ್ಲಿಅವರ ಜತೆ ಶ್ವಾನವೊಂದು ಹೆಜ್ಜೆ ಹಾಕುವುದನ್ನು ಕಂಡರು. ಬಳಿಕ ಅವರು ಅದಕ್ಕೆ ತಿಂಡಿ ಹಾಕಲು ಆರಂಭಿಸಿದ್ದು, ಅಂದಿನಿಂದ ನಿರಂತರವಾಗಿ ಹಲವು ದಿನಗಳ ಕಾಲ ಆ ತಂಡದ ಜತೆಗೆ ಶ್ವಾನ ಹೆಜ್ಜೆ ಹಾಕಿದೆ.

ದಾರಿ ಕಾಯುವ ಶ್ವಾನ
ಬೆಳಗ್ಗೆ ಇವರ ಜತೆಗೆ ಹೆಜ್ಜೆ ಹಾಕುವ ಶ್ವಾನವು ಮುಂದೆ ಹೋಗಿ ನಿಂತು ಇವರು ಬರುವುದನ್ನೇ ಕಾಯುತ್ತದೆ. ಇವರ ತಂಡ ಹತ್ತಿರಕ್ಕೆ ಬಂದ ಬಳಿಕ ಮತ್ತೆ ಮುಂದೆ ಸಾಗುತ್ತದೆ. ಹೀಗೆ ಸಾಗುತ್ತಿರುವ ವೇಳೆ ಮಣ್ಣಕಟ್ಟ ಬದ್ರಿ ದೇವಸ್ಥಾನದ ಬಳಿ ಶ್ವಾನ ತಪ್ಪಿ ತಮಿಳುನಾಡಿನ ತಂಡವೊಂದರ ಜತೆ ಸೇರಿತ್ತು. ಬಳಿಕ ಅದು ಇವರ ತಂಡ ಅಲ್ಲ ಎಂದು ತಿಳಿದು ಮತ್ತೆ ಇವರನ್ನು ಹುಡುಕಿಕೊಂಡು ಬಂದಿತ್ತು ಎಂದು ವ್ರತಾಧಾರಿಗಳು ವಿವರಿಸುತ್ತಾರೆ.

ಮತ್ತೊಂದು ಶ್ವಾನ ಬಂದಿತ್ತು!
ಪಾಲಾದ ಬಳಿಕ ಮತ್ತೊಂದು ದೊಡ್ಡ ಗಾತ್ರದ ಶ್ವಾನವೊಂದು ಇವರ ತಂಡದ ಜತೆಗೆ ಹೆಜ್ಜೆ ಹಾಕಲು ಆರಂಭಿಸಿತ್ತು. ಆದರೆ ಬಳಿಕ ಅದಕ್ಕೆ ನಡೆದು ಆಯಾಸವಾಗಿ ಕಾಲನೋವು ಆರಂಭಗೊಂಡಿತ್ತು. ವ್ರತಾಧಾರಿಗಳು ದೇವಸ್ಥಾನದಲ್ಲಿ ನಿಂತ ಸಂದರ್ಭ ಅದನ್ನು ಆರೈಕೆ ಮಾಡಿ ನೋವಿಗೆ ಸ್ಟ್ರೇ ಔಷಧ ಹಾಕಿದ್ದರು. ಆದರೆ ಸ್ವಲ್ಪ ದೂರ ಇವರ ಜತೆ ಸಾಗಿದ ಆ ಶ್ವಾನ ಮುಂದೆ ಕಣ್ಮರೆಯಾಗಿತ್ತು.

ಊರಿಗೆ ತರುವುದಕ್ಕೆ ನಿರ್ಧಾರ
ಜ. 3ರಂದು ಅಯ್ಯಪ್ಪ ವ್ರತಾಧಾರಿಗಳ ತಂಡ ಪಂಪೆಗೆ ತಲುಪಿದ್ದು, ಸ್ವಾಮಿಯ ಸನ್ನಿಧಿಗೆ ತೆರಳಿದ್ದಾರೆ. ತಂಡದ ಚೇತನ್‌ ಗುರುಸ್ವಾಮಿ ಅದನ್ನು ತಮ್ಮ ಊರಿಗೆ ಕರೆದುಕೊಂಡು ಬರುವುದಾಗಿ ನಿರ್ಧರಿಸಿ, ಹೀಗಾಗಿ “ಮಲ್ಲಿ’ಯನ್ನು ಹೊಟೇಲೊಂದರ ಬಳಿ ಕಟ್ಟಿ ಹಾಕಿ ದ್ದಾರೆ. ಸನ್ನಿಧಿಗೆ ಹೋಗಿ ಹಿಂದಿರು ವವರೆಗೆ ನೋಡಿಕೊಳ್ಳಿ, ಸ್ಥಳದ ಬಾಡಿಗೆ ಯನ್ನೂ ಕೊಡುತ್ತೇವೆ ಎಂದು ಹೊಟೇಲ್‌ನವರಲ್ಲಿ ವಿನಂತಿಸಿದ್ದಾರೆ.


Related Posts

ಚಿಕ್ಕ ವಯಸ್ಸಿನಲ್ಲಿ ಸಾಧನೆ ಇಂಡಿಯಾ ಬುಕ್ ಆಫ್ ರೆಕಾರ್ಡ್‌ನಲ್ಲಿ ಬಾಲಕ ಸುಹಾಂಶ್‌ನ ಎಸ್ ಬಂಗೇರ ದಾಖಲೆ


Share         ದಾವಣಗೆರೆ : ನಗರದ ಶಾಂತಪ್ಪ ಪೂಜಾರಿ ಹಾಗೂ ಶ್ರೀಮತಿ ಹೇಮಾ ಶಾಂತಪ್ಪ ಪೂಜಾರಿ ಇವರ ಮೊಮ್ಮಗನಾದ ಕು. ಸುಹಾಂಶ್ ಎಸ್ ಬಂಗೇರ “ಇಂಡಿಯಾ ಬುಕ್ ಆಫ್ ರೆಕಾರ್ಡ್’ನ ಸಾಧಕನಾಗಿದ್ದು, ಸರಿಸುಮಾರು 195 ರಾಷ್ಟ್ರಗಳ


Read More »

ಖೇಲೋ ಇಂಡಿಯಾ ರಾಷ್ಟ್ರೀಯ ಕರಾಟೆ ತಂಡಕ್ಕೆ ಆಯ್ಕೆಯಾದ ಕರಾಟೆ ಪಟು ಛಾಯಾ ಎಸ್. ಪೂಜಾರಿ.


Share         ಚಿನ್ನ 30 ಬೆಳ್ಳಿ 1 ಕಂಚು – ಇದು ಛಾಯಾ ಎಸ್. ಪೂಜಾರಿ ಅವರ ಒಂದು ದಶಕದ ಪರಿಶ್ರಮ ಹಾಗೂ ಸಾಧನೆಗೆ ಸಂದಿರುವ ಗೌರವದ ತುರಾಯಿ. ಉಡುಪಿ ಜಿಲ್ಲೆಯ ಹೆರ್ಗ ಕಾಂತಾ ಬೆಟ್ಟು


Read More »

ಪವರ್‌ಲಿಫ್ಟಿಂಗ್ ಕ್ರೀಡಾಪಟು ಶ್ರೀಮತಿ ಅಕ್ಷತಾ ಪೂಜಾರಿ ಅವರಿಗೆ ‘ಮಹಿಳಾ ಮಾಣಿಕ್ಯ’ ಪ್ರಶಸ್ತಿ


Share         ನಮ್ಮ ಹೆಮ್ಮೆಯ ಕರಾವಳಿಯ ಪ್ರತಿಭೆ, ಅಂತರಾಷ್ಟ್ರೀಯ ಪವರ್‌ಲಿಫ್ಟಿಂಗ್ ಕ್ರೀಡಾಪಟು ಶ್ರೀಮತಿ ಅಕ್ಷತಾ ಪೂಜಾರಿ ಸಿದ್ದಕಟ್ಟೆ ಅವರಿಗೆ ಫಸ್ಟ್ ನ್ಯೂಸ್ ವಾಹಿನಿಯ ಪ್ರತಿಷ್ಠಿತ ‘ಮಹಿಳಾ ಮಾಣಿಕ್ಯ’ ಪ್ರಶಸ್ತಿ ಲಭಿಸಿರುವುದು ನಾಡಿಗೆ ಸಂದ ಗೌರವ. ಗ್ರಾಮೀಣ


Read More »

ಪುತ್ತೂರು:ಶಾಂತಿಗೋಡು ಬಿಲ್ಲವ ಗ್ರಾಮ ಸಮಿತಿಯ ಮಾಜಿ ಅಧ್ಯಕ್ಷ ರವಿಕುಮಾರ್ ಕಲ್ಕಾರ್ ನಿಧನ


Share         ಪುತ್ತೂರು: ಶಾಂತಿಗೋಡು ಕಲ್ಕಾರ್ ನಿವಾಸಿ ರವಿಕುಮಾರ್ ಕಲ್ಕಾರ್(48ವ.)ರವರು ಫೆ.15ರಂದು ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ಬ್ರಹ್ಮಶ್ರೀ ನಾರಾಯಣ ಗುರುಪೂಜೆ ಸಂದರ್ಭ ಶಾಂತಿಗೋಡು ಬಿಲ್ಲವ ಗ್ರಾಮ ಸಮಿತಿ ವತಿಯಿಂದ ನಡೆಸಲ್ಪಟ್ಟ ಕ್ರೀಡಾಕೂಟದಲ್ಲಿ ರವಿ ಕಲ್ಕಾರ್ ರವರು


Read More »

ಉದಯೋನ್ಮುಖ ಪ್ರತಿಭಾ ಪುರಸ್ಕಾರಕ್ಕೆ ಅಕ್ಷತಾ ಸುಧೀರ್


Share         ಮಂಗಳೂರು/ಬೆಂಗಳೂರು: ಕರ್ನಾಟಕ ಆರ್ಯ ಈಡಿಗ ಮಹಿಳಾ ಸಂಘದ ವತಿಯಿಂದ ಆಯೋಜಿಸಲಾದ ರಾಷ್ಟ್ರೀಯ ಸಮ್ಮೇಳನದಲ್ಲಿ, ಯುವವಾಹಿನಿಯ ಬೆಂಗಳೂರು ಘಟಕದ ಹೆಮ್ಮೆಯ ಸದಸ್ಯೆಯೂ ಹಾಗೂ ಪ್ರಸಕ್ತ ಲೆಕ್ಕಪರಿಶೋಧಕರೂ ಆಗಿರುವ ಶ್ರೀಮತಿ ಅಕ್ಷತಾ ಸುಧೀರ್ ಅವರಿಗೆ ಉದಯೋನ್ಮುಖ


Read More »

ಕಲರ್ಸ್ ಕನ್ನಡ ಬಿಗ್ ಬಾಸ್ 12ರ ಸ್ಪರ್ಧಿ ಧ್ರುವಂತ್ (ಚರಿತ್ ಬಾಳಪ್ಪ ಪೂಜಾರಿ) ಜೀವನದ ಯಶೋಗಾಥೆ


Share         ಜೀವನದಲ್ಲಿ ಅದೆಷ್ಟೋ ಕಷ್ಟಗಳನ್ನು ಸಹಿಸಿಕೊಂಡು, ಅವಕಾಶಗಳಿಂದ ವಂಚಿತನಾದರೂ ಧೃತಿಗೆಡದೆ, ಸಾಧನೆಯ ಹಾದಿಯಲ್ಲಿ ಹಂತ ಹಂತವಾಗಿ ಮುನ್ನಡೆಯುತ್ತ ಇಂದು ಎಲ್ಲರ ಮನಗಳಲ್ಲಿ ಮನೆ ಮಾಡಿರುವಂತಹ ನಮ್ಮೆಲ್ಲರ ಹೆಮ್ಮೆಯ ಸಾಧಕ ಧ್ರುವಂತ್ ಇವರ ಯಶಸ್ಸಿನ ಹಿಂದಿನ


Read More »