ಮಂಗಳೂರು: ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಅನ್ನದಾನ ಸೇವೆಗೆ ಒಂದು ಲಕ್ಷ ರೂಪಾಯಿ ನೀಡಲಾಯಿತು.
ಶ್ರೀ ಗೋಕರ್ಣನಾಥ ಕ್ಷೇತ್ರದ ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷ ಎಚ್.ಎಸ್. ಸಾಯಿರಾಂಗೆ ಬ್ಯಾಂಕ್ ಅಧ್ಯಕ್ಷ ಎಂ.ರಾಮಚಂದ್ರರವರು ಧನಸಹಾಯ ಹಸ್ತಾಂತರಿಸಿದರು.
ಶ್ರೀಕ್ಷೇತ್ರದ ಕಾರ್ಯದರ್ಶಿ ಮಾಧವ ಸುವರ್ಣ, ಕೋಶಾಧಿಕಾರಿ ಪದ್ಮರಾಜ್.ಆರ್, ಬ್ಯಾಂಕ್ ಜನರಲ್ ಮ್ಯಾನೇಜರ್ ಭರತ್ ಭೂಷಣ್, ಉಪಾಧ್ಯಕ್ಷ ರಾಧಾಕೃಷ್ಣಪ್ಪ ಪೂಜಾರಿ, ನಿರ್ದೇಶಕರಾದ ಹರೀಶ್ ಕೆ. ಪೂಜಾರಿ, ವಿಜಯ್ ಕುಮಾರ್ ಸೊರಕೆ, ಪದ್ಮನಾಭ, ವಿಶ್ವನಾಥ್ ಮುಂತಾದವರು ಉಪಸ್ಥಿತರಿದ್ದರು.