ವಾಟ್ಸ್ ಪ್ ಕೃಪೆ
ಮೊಬೈಲ್ ನಲ್ಲಿ ಬಂದದ್ದನ್ನೆಲ್ಲಾ ಇನ್ನೊಬ್ಬರಿಗೆ ಹಂಚುವ ಮೊದಲು ನೂರು ಸಲ ಆಲೋಚಿಸ ಬೇಕಾದೀತೇ?
ಸಜ್ಜಿಗೆ ಬಣಲೆಡ್ ಉಂಡು ವೈರಲ್ ಆದ ಶಬ್ದ ಸಂದೇಶದ ಒಂದು ವಿಮರ್ಶೆ ಹೀಗಿದೆ.
ನಿಮ್ಮ ಕಣ್ಣಿನ ನೇರಕ್ಕೆ ಕಂಡದನ್ನು ಮಾತ್ರ ಸಮರ್ಥನೆ ಮಾಡುವುದು ಒಳಿತಲ್ಲ ಎಂಬುವುದು ನನ್ನ ಅಭಿಪ್ರಾಯ.
ಹೀಗಿದೆ ಆ ಬರಹ
ವೈರಲ್ ಆದ ಆಡಿಯೋದಲ್ಲಿ… ಮಗ ಕರೆ ಮಾಡಿ ಏನು ಹೇಳುತ್ತಿದ್ದಾನೆ ಎಂದು ಸರಿಯಾಗಿ ಕೇಳದಿದ್ದರು ಇನ್ನೊಂದು ಕಡೆಯಿಂದ ಮಮತೆಯ ಮಾತೃ ಹೃದಯ ತನ್ನ ಮಗು ಹಸಿವಿಗಾಗಿಯೇ ಕರೆ ಮಾಡಿರಬಹುದೇನೋ ಎಂದು ಊಹಿಸಿ ಬಾಣಲೆಯಲ್ಲಿ ಸಜ್ಜಿಗೆ ಇದೆ ತಿನ್ನು ಮಗನೇ ಎನ್ನುವ ಆಡಿಯೋ ಟ್ರೋಲ್ ಆಗುತ್ತಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ನನ್ನ ಸ್ವಲ್ಪ ವಿವರಣೆ .
ಆ ಘಟನೆಯ ತಾಯಿಯನ್ನು ಹತ್ತಿರದಿಂದ ನೋಡಿದವನು ನಾನು…. ತನ್ನ ಗಂಡ ಅನಾರೋಗ್ಯದಿಂದ ಬಳಲುತ್ತಿದ್ದ ಸಂದರ್ಭದಲ್ಲಿ ಸ್ವ-ಸಹಾಯ ಸಂಘದಿಂದ, ಪರಿಚಯಸ್ತರಿಂದ ಸಾಲ ಮಾಡಿ ಬದುಕಿಸಲು ಕೈ ಮೀರಿ ಪ್ರಯತ್ನ ಮಾಡಿದರೂ ಉಳಿಸಲು ಅಸಾಧ್ಯವಾಗಿ, ಮನೆಯ ಆಧಾರ ಸ್ತಂಭ ಕುಸಿದಾಗ ನನ್ನ ಮಕ್ಕಳ ಬೇಕು ಬೇಡಗಳನ್ನು ಪೂರೈಸಿ, ಎಲ್ಲರಂತೆ ತನ್ನ ಮಕ್ಕಳನ್ನು ವಿದ್ಯಾಭ್ಯಾಸ ಮಾಡಿಸುವ ಕನಸು ಕಾಣುವ ತಾಯಿ ಆಕೆ.
ಪತಿಯ ಅನಾರೋಗ್ಯದ ಸಂದರ್ಭದಲ್ಲಿ ಮಾಡಿದ ಸಾಲವನ್ನು ತೀರಿಸಲು ರಾತ್ರಿ ಹಗಲು ಬೀಡಿ ಕಟ್ಟಿ ತನ್ನ ಇಬ್ಬರು ಸಣ್ಣ ಮಕ್ಕಳನ್ನು ಸಾಕುವ ಕಷ್ಟದ ಜೀವನ ನಡೆಸುತ್ತಿದ್ದಾರೆ.
ಇನ್ನೊಂದು ಕಡೆ ಕೋರೊನ, ಈ ಕೋರೊನದಿಂದಾಗಿ ಸ್ವಲ್ಪ ದಿನ ಬೀಡಿ ಉದ್ಯಮವು ನಿಂತಿತು., ಬೀಡಿಯ ಆದಾಯವು ನಿಂತಿತು.
ಮಕ್ಕಳಿಗೆ ಮೊಬೈಲ್ ನೀಡಬಾರದು ನಿಜ ಅದು ತಿಳಿದೂ ಆಕೆ ತನ್ನ ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ತೊಂದರೆ ಆಗ ಬಾರದೆಂದು, ಮೊಬೈಲ್ ಬಳಕೆಯ ಮಾಹಿತಿ ಗೊತ್ತಿಲ್ಲದ ಆಕೆ ಮಗನಿಗೆ online class ಗಾಗಿ ಸಣ್ಣ Touch ಮೊಬೈಲ್ ನೀಡಿದಳು… ಆತ ಮೊಬೈಲ್ ಸಿಕ್ಕ ಖುಷಿಯಲ್ಲಿ online class ಹಾಗೂ ಗೇಮ್ ಆಡುತ್ತಿದ್ದ.. ಮತ್ತೊಂದು ವಿಷಯ ಏನೆಂದರೆ ಆ ಮೊಬೈಲ್ ನಲ್ಲಿ ಎಲ್ಲ ಕರೆಗಳು Record ಆಗುತಿತ್ತು ಅದು ಕೂಡ ಈ ಘಟನೆಯ ನಂತರವೇ ತಿಳಿದದ್ದು.
ಆ ತಾಯಿಯ ಮಗನೂ ಸಹ ಮೊಬೈಲ್ ಬಳಕೆಯ ಪೂರ್ಣ ಪ್ರಮಾಣದ ಮಾಹಿತಿ ಇಲ್ಲದವ.. ಜೋಕುಲಾಟಿಕೆ ಎಂಬಂತೆ ಮೊಬೈಲ್ ನಲ್ಲಿದ್ದ ಪದ್ಯ ಹಾಗೂ call record ನ್ನೂ ಸಹ ತನ್ನ whatsappನಲ್ಲಿ ಗೆಳೆಯರಿಗೆ ಕಳುಹಿಸಿದ್ದಾನೆ.. ಆದು ಒಬ್ಬರಿಂದ ಒಬ್ಬರಿಗೆ forward ಆಗುತ್ತಲೇ ಹೋಯಿತು.
ಆ ತಾಯಿಯ ಸ್ವರ ಬಲ್ಲವರು ಆಕೆಯನ್ನು ಕರೆ ಮಾಡಿ ವಿಚಾರಿಸುತ್ತಿರುವಾಗ ಆಕೆ “ಕೊರೊನಾ ಸುರುವಾದ್ ಮಗಕ್ ಸಾಲೆ ಸುರುವಾವಂದೆ, ಮೊಬೈಲ್ ಡ್ ಪಾಠ ಮಲ್ಪುವೆರ್ ಗೆ, ಮೊಬೈಲ್ ಕೊರ್ದು ಈತ್ ಮಾತ ಮಲ್ತ್ ಪಾಡಿಯೆ.. ನನ ಪೋನು ಮುಟ್ಪರೆ ಬುಡ್ಪುಜಿ…” ಎಂದು ತುಂಬಾ ನೊಂದುಕೊಳ್ಳುತ್ತಿದ್ದಾಳೆ.
ಇಲ್ಲಿ ತಪ್ಪು ಯಾರದು..?ಕೊರೊನದ್ದಾ? ಮಕ್ಕಳಿಗೆ online class ಪ್ರಾರಂಭ ಮಾಡಿದ ಸರಕ್ಕಾರದ್ದೋ? ಮಗನಿಗೆ ವಿದ್ಯಾಭ್ಯಾಸಕ್ಕೆ ತೊಂದರೆ ಆಗ ಬಾರದೆಂದು ಮೊಬೈಲ್ ಕೊಟ್ಟ ತಾಯಿಯದ್ದೋ? auto call record ಆಗುತ್ತಿದ್ದ ಮೊಬೈಲಿದ್ದೋ? ಮೊಬೈಲ್ ಬಳಕೆ ಸರಿಯಾಗಿ ಗೊತ್ತಿಲ್ಲದೆ ಎಲ್ಲವನ್ನೂ ಕಳುಹಿಸಿದ ಮಗನದ್ದೊ? ಸ್ವೀಕರಿಸಿದವರು ಕೇಳಿ ಆನಂದಿಸಿ ಎಲ್ಲರೂ ಖುಷಿ ಪಡೆಯಲಿ ಎಂದು ಒಬ್ಬರಿಂದ ಒಬ್ಬರಿಗೆ forward ಈಗಲೂ ಮಾಡುತ್ತಿರುವವರದ್ದೊ? ಎಂಬುವುದನ್ನು ನೀವು ನಿರ್ಧರಿಸಿ.