ಸವಿತಾ ಚೇತನ್ ಗೆ ಒಲಿದ ಮಿಸೆಸ್ ಇಂಡಿಯಾ ಮಂಗಳೂರು ಕಿರೀಟ
ಮಂಗಳೂರು: ಸವಿತಾ ಚೇತನ್ ಕುಮಾರ್ ಮಿಸೆಸ್ ಇಂಡಿಯಾದ ಮಂಗಳೂರು ಕಿರೀಟವನ್ನ ತಮ್ಮದಾಗಿಸಿಕೊಡಿದ್ದಾರೆ. ಈ ಮೂಲಕಮಿಸೆಸ್ ಕರ್ನಾಟಕಕ್ಕೆ ಅರ್ಹತೆಯನ್ನ ಪಡೆದುಕೊಂಡಿದ್ದಾರೆ. ಮಂಗಳೂರಿನ ರೋಶನಿ ನಿಲಯದಲ್ಲಿ ನಡೆದ ಈ ಕಾರ್ಯಕ್ರಮವನ್ನಮಿಸೆಸ್ ಇಂಡಿಯಾ ಕರ್ನಾಟಕದ ನಿರ್ದೇಶಕಿ ಪ್ರತಿಭಾ ಸೌಂಶಿಮಠ್, ದ.ಕ. ಮಿಸೆಸ್ ಇಂಡಿಯಾ ನಿರ್ದೇಶಕ ದೀಪಕ್ ಗಂಗೂಲಿ, ಮರ್ಸಿ ಬ್ಯೂಟಿ ಅಕಾಡೆಮಿ ಮತ್ತು ಬ್ಯೂಟಿ ಸಲೂನ್ ನ ಮರ್ಸಿ ವೀಣಾ ಡಿಸೋಜ ಆಯೋಜಿಸಿದ್ದರು. ಇನ್ನು ಮಿಸೆಸ್ ಇಂಡಿಯಾಮಂಗಳೂರು ಕಿರೀಟವನ್ನ ಪಡೆದಿರುವ ಸವಿತಾ ಅವರು ವಿದೇಶದಲ್ಲಿ ಒಂದು ದಶಕದ ಕಾಲ ಆಡಳಿತ ವ್ಯವಸ್ಥಾಪಕರಾಗಿ ಕೆಲಸಮಾಡಿದ ಅನುಭವವಿದೆ. ಆದ್ರೆ ಇದೀಗ ಮಂಗಳೂರಿನಲ್ಲಿ ನೆಲೆಸಿದ್ದಾರೆ. ನೃತ್ಯ, ಛಾಯಾಗ್ರಹಣದ ಹವ್ಯಾಸವನ್ನಿಟ್ಟುಕೊಂಡಿದ್ದಾರೆ.