ಹೆತ್ತವರನ್ನು ಮರೆತು ಪ್ರೀತಿ ಚೆಲ್ಲಾಟವಾಡುವ ಯುವಜನತೆಗೆ ಕಿವಿ ಮಾತು ಹೇಳುವ ಸಿನೆಮಾ ’ಸೋಡಾ ಶರ್ಬತ್.
ಕದ್ದುಮುಚ್ಚಿ ಪ್ರೀತಿ ಮಾಡಿ ಕೊನೆಗೆ ಹೆತ್ತವರನ್ನು ಕಣ್ಣೀರು ಸುರಿಸುವಂತೆ ಮಾಡಿವ ಯುವಪ್ರೇಮಿಗಳು ನಮ್ಮ ಸಮಾಜದಲ್ಲಿ ಧಾರಾಳವಾಗಿ ಕಾಣಸಿಗುತ್ತಾರೆ. ಕ್ಷಣಿಕ ಆಕರ್ಷಣೆಗೆ ಬಲಿಯಾಗಿ ಕೊನೆಗೆ ಪ್ರೀತಿ ಕೊನೆಗೊಂಡು ವಿಛ್ಛೇಧನದ ಹಂತಕ್ಕೆ ಬಂದಾಗ ನಡುವಲ್ಲಿ ಹೆತ್ತವರು ಪಟ್ಟ ಮಾನಸಿಕ ಹಿಂಸೆಗೆ ಯಾರೂ ಉತ್ತರ ಕೊಡಲು ತಯಾರಾಗುವುದಿಲ್ಲ.
ಇಂತಹ ಪ್ರೇಮಿಗಳಿಬ್ಬರ ಕಥೆ ಹಾಗೂ ಇದರ ಸುತ್ತ ನಡೆಯುವ ಕೆಲ ಹಾಸ್ಯಸ್ಪದ ಘಟನೆಗಳನ್ನು ಸೋಡಾ ಶರ್ಬತಿನಲ್ಲಿ ಅತೀ ಸುಂದರವಾಗಿ ಚಿತ್ರೀಕರಿಸಲಾಗಿದೆ. ಕಾಪಿಕಾಡ್,ಬೋಳಾರ್, ವಾಮಂಜೂರು ತ್ರಯರ ಹಾಸ್ಯ ಸಿನೆಮಾದ ಹೈಲೈಟ್. ಬಾಯಮ್ಮ-ಪೊರ್ಬು ಪಾತ್ರಧಾರಿಗಳಾಗಿ ಮಿಂಚಿದ ಮೆಲ್ಲು ಹಾಗೂ ಲವೀನ ತುಳು ಸಿನೆಮಾ ಕ್ಷೇತ್ರಕ್ಕೆ ಗಂಭೀರ ಎಂಟ್ರಿ ಕೊಟ್ಟಿದ್ದಾರೆ. ಯಾವುದೇ ಅಶ್ಲೀಲ ಸಂಭಾಷಣೆಯಿಲ್ಲದೆ ಕುಟುಂಬ ಸಮೇತ ನೋಡಬಹುದಾದ ಚಿತ್ರ ಸೋಡಾ ಶರ್ಬತ್ ಎಂದರೆ ತಪ್ಪಾಗಲಾರದು.
ಒಟ್ಟಿನಲ್ಲಿ ನಿರ್ದೇಶಕ ಪ್ರದೀಪ್ ಬಾರ್ಬೋಜಾ ಹಾಗೂ ತಂಡ ವರ್ಷದ ಕೊನೆಯಲ್ಲಾದರೂ ಉತ್ತಮ ಚಿತ್ರ ನೀಡೂವಲ್ಲಿ ಯಶಸ್ವಿಯಾಗಿದೆ.
ಮಧುಕರ್ ಸಾಲ್ಯಾನ್, ಸುರತ್ಕಲ್