ಮಕ್ಕಳಿಂದ ಹಿಡಿದು ಯುವಕರವರೆಗೆ ಎಲ್ಲರಿಗೂ ಇಷ್ಟವಾಗುವ ಫ್ರೂಟ್ ಜಾಮ್ ಗಳನ್ನು ಬ್ರೆಡ್ ಜೊತೆ ತಿನ್ನುವುದು ಕ್ರಮ. ಆದರೆ ಅದರ ಮಿತಿಮೀರಿದ ಬಳಕೆ ಹಲವು ಸಮಸ್ಯೆಗಳನ್ನು ತಂದೊಡ್ಡುತ್ತದೆ.
ಹಲವು ಬಗೆಯ ಹಣ್ಣುಗಳನ್ನು ಜೊತೆಯಾಗಿ ಸೇರಿಸಿ ತಯಾರಿಸುವ ಫ್ರುಟ್ ಜಾಮ್ ಇಂದು ಮಾರುಕಟ್ಟೆಯಲ್ಲಿ ಹಲವು ಬ್ರಾಂಡ್ ಗಳಲ್ಲಿ ಲಭ್ಯವಿದೆ.
ಇದರಲ್ಲಿ ನೈಸರ್ಗಿಕ ವಸ್ತುಗಳ ಬಳಕೆಯೇ ಹೆಚ್ಚಿರುವ ಕಾರಣದಿಂದ ನಾವೂ ಹೆಚ್ಚು ಯೋಚಿಸದೆ ಇದನ್ನು ಕೊಳ್ಳುತ್ತೇವೆ. ಆದರೆ ಇದರ ಮಿತಿಮೀರಿದ ಸೇವನೆ ಹಲವು ಸಮಸ್ಯೆಗಳನ್ನು ತಂದೊಡ್ಡಬಹುದು.
ಮಧುಮೇಹಿಗಳು ಸಾಧ್ಯವಾದಷ್ಟು ಇದನ್ನು ಸೇವಿಸದೇ ಇರುವುದು ಒಳ್ಳೆಯದು. ಏಕೆಂದರೆ ಇದರಲ್ಲಿ ತಾಜಾ ಹಣ್ಣಿನ ಸಹಜತೆಯನ್ನು ಕಾಪಾಡಲು ಸಾಕಷ್ಟು ಪ್ರಮಾಣದ ಸಿಹಿಯ ಅಂಶವನ್ನು ಬಳಸಿರುತ್ತಾರೆ.
ದೇಹ ತೂಕ ಇಳಿಸಲು ಬಯಸುವವರು ಈ ಜಾಮ್ ನಿಂದ ದೂರವಿರಿ. ಹಾಲಿನ ಕೆನೆ, ಚೀಸ್, ಬೆಣ್ಣೆ ಮೊದಲಾದ ಅಂಶಗಳು ದೇಹದಲ್ಲಿ ಕೊಲೆಸ್ಟ್ರಾಲ್ ಪ್ರಮಾಣವನ್ನು ಹೆಚ್ಚಿಸುತ್ತದೆ. ಆರೋಗ್ಯಕರವಾದ ತಿನಿಸೆಂದು ವಿಪರೀತ ಸೇವಿಸಿದರೆ ನಿಮ್ಮ ದೇಹದ ತೂಕ ಹೆಚ್ಚಬಹುದು. ಹಾಗಾಗಿ ನಿಯಮಿತವಾಗಿ ಸೇವಿಸಿ ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಿ.