ನೆಹರು ಒಳಕ್ರೀಡಾಂಗಣದಲ್ಲಿ ಆ.5 ಮತ್ತು 6ರಂದು ಎರಡು ದಿನಗಳ ಕಾಲ ಅಂತರಾಷ್ಟ್ರೀಯ 4ನೇಯ ಮಟ್ಟದ ಓಪನ್ ಕರಾಟೆಪಂದ್ಯಾವಳಿ ಆಯೋಜಿಸಲಾಗಿದ್ದು, ಕರ್ನಾಟಕ ರಾಜ್ಯ ಕರಾಟೆ ಸಂಸ್ಥೆ ಮತ್ತು ಶಿವಮೊಗ್ಗ ನಗರ ಕರಾಟೆ ಸಂಸ್ಥೆ ಜಂಟಿಯಾಗಿ ಈಸ್ಪರ್ಧೆಯನ್ನು ಆಯೋಜನೆ ಮಾಡಿದ್ದವು. ಪಂಜಾಬ್, ತಮಿಳುನಾಡು, ತೆಲಂಗಾಣ, ಗೋವಾ, ಮಹಾರಾಷ್ಟ್ರ ವಿವಿಧ ರಾಜ್ಯಗಳಿಂದ, ಶ್ರೀಲಂಕಾ ಮತ್ತು ನೇಪಾಳ ವಿದೇಶದಿಂದ, ದಾವಣಗೆರೆ, ದಕ್ಷಿಣ ಕನ್ನಡ, ಉಡುಪಿ, ಬಳ್ಳಾರಿ, ಮಂಡ್ಯ,ಹಾಸನ, ತುಮಕೂರು, ಬೆಂಗಳೂರು, ಚಿಕ್ಕಮಗಳೂರು, ಬೆಳಗಾವಿ ಸೇರಿದಂತೆ ವಿವಿಧ ಜಿಲ್ಲೆಯಿಂದ ಒಟ್ಟು 1200ಕ್ಕೂ ಹೆಚ್ಚು ಕರಾಟೆ ಪಟುಗಳುಭಾಗವಹಿಸಿದ್ದರು.
ಈ ಸ್ಪರ್ಧೆಯಲ್ಲಿ ಜೆ.ಬಿ.ಪಿ.ಆರ್ ಎಸ್‌ಎಸ್ ಇಂಡಿಯನ್ ಕೊಯ್ ಕುಶಿನ್ ಕಾಯ್ ಕರಾಟೆ ಡೂ ಅಸೋಸಿಯೇಶನ್, ಕಲ್ಯಾಕಾರ್ಕಳದ ಬ್ರಹ್ಮಋಪಿ ಉಮಾಮಹೇಶ್ವರ ಸ್ವಾಮೀಜಿಯವರ ಮೂವರು ವಿದ್ಯಾರ್ಥಿಗಳು 2 ಚಿನ್ನ ಮತ್ತು 2ಬೆಳ್ಳಿ ಪದಕಗಳನ್ನುತನ್ನದಾಗಿಸಿಕೊಂಡಿದ್ದಾರೆ. ಕಲ್ಯಾ ಕಾರ್ಕಳದ ಬ್ರಹ್ಮಋಪಿ ಉಮಾಮಹೇಶ್ವರ ಸ್ವಾಮೀಜಿಯವರು ವಿದ್ಯಾರ್ಥಿಗಳಿಗೆ ಉಚಿತವಾಗಿಕರಾಟೆಯನ್ನು ತರಬೇತಿಯನ್ನು ನೀಡುತ್ತಿದ್ದಾರೆ. ಸೋಟೋಕನ್ ಕರಾಟೆ ಮತ್ತು ಜಪಾನ್ ಸ್ಟೈಲ್ 8ಕರಾಟೆಯನ್ನುಹೇಳಿಕೊಡಲಾಗುತ್ತದೆ. ಪೂನಾ ಮಹಾರಾಷ್ಟದಲ್ಲಿ ಕೂಡ ಉಚಿತ ಕರಾಟೆಯನ್ನು ಹೇಳಿಕೊಡಲಾಗುತ್ತದೆ. ಅಲ್ಲಿ ಸುಮಾರು 10 ಮಂದಿಕರಾಟೆ ತರಬೇತಿ ಪಡೆದು ಬ್ಲಾಕ್ ಬೆಲ್ಟ್ ಪಡೆದಿದ್ದಾರೆ.
ಈ ಕರಾಟೆ ಸ್ಪರ್ಧೆಯಲ್ಲಿ ಕಾರ್ಕಳ ಭುವನೇಂದ್ರ ಕಾಲೇಜಿನ ಪ್ರಥಮ ಬಿ.ಸಿ.,ಎ ವಿದ್ಯಾರ್ಥಿನಿಯರಾದ ನಿರೀಕ್ಷಾ ಕಟಾದಲ್ಲಿ ಪ್ರಥಮಸ್ಥಾನವನ್ನು, ಕುಮಿತೆ ಫೈಟ್‌ನಲ್ಲಿ ಪ್ರಥಮ ಸ್ಥಾನವನ್ನು ಪಡೆದಿದ್ದಾರೆ. ಇನ್ನು ನಿಟ್ಟೆ ವಿದ್ಯಾಸಂಸ್ಥೆಯ ಪ್ರಥಮ ವರ್ಷದ ಡಿಪ್ಲೋಮಾಕಂಪ್ಯೂಟರ್ ಸೈನ್ಸ್ ವಿದ್ಯಾರ್ಥಿ ಹೃತಿಕ್ ಅಮೀನ್ ಕಟಾದಲ್ಲಿ ದ್ವಿತೀಯ ಸ್ಥಾನ ಪಡೆದಿರುತ್ತಾರೆ. ನಿಟ್ಟೆ ವಿದ್ಯಾಸಂಸ್ಥೆಯ ಡಾ. ಎನ್‌ಎಸ್‌ಎಎಂ ನ ಪಿಯು ಕಾಲೇಜಿನ ಪ್ರಥಮ ವರ್ಷದ ವಿದ್ಯಾರ್ಥಿ ರಾಹುಲ್ ಕೆ.ಕಟಾದಲ್ಲಿ ದ್ವಿತೀಯ ಸ್ಥಾನ ಪಡೆದಿರುತ್ತಾರೆ.