ಕಾರ್ಕಳ: ಕೇವಲ ಆರೇ ಆರು ಸೆಂಕಡು ಇರೋ ವಿಡಿಯೋ ತುಂಬಾನೇ ವೈರಲ್ ಆಗಿದೆ. ಎಲ್ಲಿವರೆಗೆ ಅಂದ್ರೆ ಅಂತರಾಷ್ಟ್ರೀಯ ಮಾಧ್ಯಮ ESPN ಈ ವಿಡಿಯೋವನ್ನು ಪೋಸ್ಟ್ ಮಾಡಿ ಹಾಡಿ ಹೊಗಳಿದೆ.ಇಂಥದೊಂದು ಹೊಡೆತವನ್ನು ನೀವು ಎಂದಾದ್ರೂ ನೋಡಿದ್ದಿರಾ ಅಂತಾ ಬಣ್ಣಿಸಿದೆ. ಲೆಗ್ ಸ್ಪಂಪ್ನಿಂದ ಆಚೆ ಹೋಗಿ ಒಂದು ಸ್ಪೆಪ್ ಮುಂದೆ ಬಂದು ಚೆಂಡಿನ ಮೇಲೆ ಹದ್ದಿನ ಕಣ್ಣಿನ ಗುರಿಯಿಟ್ಟ ಹುಡುಗಿಯೊಬ್ಬಳು ಹೊಡೆದ ಕವರ್ ಡ್ರೈವ್ ನೋಡಿ ಕ್ರಿಕೆಟ್ ಅಭಿಮಾನಿಗಳು ಕ್ಲೀನ್ ಬೋಲ್ಡ್ ಆಗಿದ್ದಾರೆ.
ಈ ಹುಡಗಿ ಹೊಡೆದ ಈ ಕವರ್ ಡ್ರೈವ್ ಅಂತರಾಷ್ಟ್ರೀಯ ಮಟ್ಟದ ಕ್ರಿಕೆಟಿಗರನ್ನೇ ನಾಚಿಸುವಂತಿದೆ. ಇದೇ ಹೊಡೆತ ಒಂದು ವೇಳೆ ಗೌಂಡ್ನಲ್ಲಿ ಹೊಡೆದಿದ್ರೆ..ಚೆಂಡು ಬುಲೆಟ್ ವೇಗದಲ್ಲಿ ನುಗ್ಗಿ ಬೌಂಡರಿ ಗೆರೆಯಲ್ಲಿ ಹಾಕುವ ಜಾಹೀರಾತು ಫಲಕದ ಮೇಲೆ ಸಿಡಿಲಿನಂತೆ ಬಂದಪ್ಪಳಿಸುತ್ತಿತ್ತೋ ಏನೋ..! ವಿರಾಟ್ ಕೊಹ್ಲಿ, ಕ್ರಿಕೆಟ್ ದೇವರು ಸಚಿನ್ ತೆಂಡುಲ್ಕರ್ ಇಂಥದೊಂದು ಕವರ್ ಡ್ರೈವ್ ಹೊಡೆದಿರೋದನ್ನು ನೀವೆಲ್ಲಾ ನೋಡಿರಬಹುದು.ಸೇಮ್ ಟು ಸೇಮ್ ಆದೇ ರೀತಿ ಈ ಹುಡುಗಿ ತನ್ನೆಲ್ಲಾ ಬಲವನ್ನು ಚೆಂಡಿಗೆ ರವಾನಿಸಿ ಬ್ಯಾಟ್ ಬೀಸಿದ್ದಾಳೆ.
ಈ ಪ್ರತಿಭೆಯನ್ನು ಗುರುತಿಸುವ ಕೆಲಸವಾಗಬೇಕಿದೆ.
Video is here: https://www.facebook.com/billavawarriors/videos/289792429100157/