ಅತ್ತಾವರ ಶ್ರೀ ಅರಸು ಮುಂಡತ್ತಾಯ ದೈವಸ್ಥಾನದ ವೈಭವ ದ “ಬಂಡಿ ನೇಮೋತ್ಸವ“(ಅತ್ತಾವರ ಬಂಡಿ) ಇಂದಿನಿಂದ ಪ್ರಾರಂಭಭಂಡಾರ ಮನೆ “ಬೈದೆರೆ ಗುತ್ತು“ನೇತ್ರತ್ವ ದಲ್ಲಿ ಶ್ರೀ ಅರಸು ಮುಂಡತ್ತಾಯ ಮತ್ತು ಪರಿವಾರ ದೈವಗಳ “ಬಂಡಿ ನೇಮೋತ್ಸವವುಇಂದು ಧ್ವಜಾರೋಹಣದೊಂದಿಗೆ ಪ್ರಾರಂಭಗೊಳ್ಳಲಿದೆ.ಏಪ್ರಿಲ್ 9 ರಂದು ಅರಸು ದೈವಗಳ ಕಂಚಿಲ ನೇಮೋತ್ಸವ, ಏಪ್ರಿಲ್10ರಂದು ಶ್ರೀ ವೈದ್ಯನಾಥ ದೈವದ “ಅರ್ಧ ಬಂಡಿ“, ಏಪ್ರಿಲ್ 11ರಂದು ಶ್ರೀ ಅರಸು ದೈವದ “ಇಡೀಬಂಡಿ, ಏಪ್ರಿಲ್ 12ರಂದು ಶ್ರೀಜುಮಾದಿ –ಬಂಟ ದೈವಗಳ ನೇಮೋತ್ಸವ ಏಪ್ರಿಲ್ 13ರಂದು ಶ್ರೀ ವೈದ್ಯನಾಥ ದೈವದ ವಲಸರಿ ನೇಮೋತ್ಸವ ಮತ್ತು ಪರಿವಾರದೈವಗಳ ನೇಮೋತ್ಸವದೊಂದಿಗೆ ಸಂಪನ್ನಗೊಳ್ಳಲಿದೆ. ನೇಮೋತ್ಸವದ ದಿನಗಳಲ್ಲಿ ಪ್ರತಿ ದಿನ ಸಂಜೆ ಸೇವಾ ರೂಪದಲ್ಲಿ ಅನ್ನದಾನಸೇವೆ ನಡೆಯಲಿದೆ ಭಕ್ತಾದಿಗಳು ನೇಮೋತ್ಸವ ದಲ್ಲಿ ಪಾಲ್ಗೊಂಡು, ದೈವಗಳ ಗಂಧ ಪ್ರಸಾದ ಸ್ವೀಕರಿಸಬೇಕೆಂದು ಶ್ರೀ ಕ್ಷೇತ್ರ ದೈವಸ್ಥಾನದ ಅನುವಂಶಿಕ ಆಡಳಿತ ಮೋಕ್ತೆಸರ “ಗುರು ಶ್ರೀ” ವಿದ್ಯಾಧರ್, ಕುಟುಂಬದ ಸದಸ್ಯ ರಾದ ಶ್ರೀ ಪ್ರದೀಪ್ ಕುಮಾರ್, ಸಂದೀಪ್ಕುಮಾರ್, ವೈನಾ ಸಾರಂಗದರ,ಪ್ರತಿಭಾ ಸನಿಲ್,ಬಿಲ್ಲವ ಮುಖಂಡ ಚಂದ್ರಹಾಸ್ ಸುವರ್ಣ ಮತ್ತಿತರರು ಪ್ರಕಟಣೆಯಲ್ಲಿ ತಿಳಿಸಿದರು.