ಕುದ್ರೋಳಿ:- ಫ್ರೆಂಡ್ಸ್ ಬಳ್ಳಾಲ್‍ಬಾಗ್ ಬಿರುವೆರ್ ಕುಡ್ಲ ಇದರ ವತಿಯಿಂದ ಕುಪ್ಪೆ ಪದವಿನ ಜಗದೀಶ್ ಜಯಶ್ರೀ ಅವರ ಪುತ್ರ ಎರಡುವರ್ಷದ ಶಮಿತ್ ಚಿಕಿತ್ಸೆಗಾಗಿ 50 ಸಾವಿರ ಆರ್ಥಿಕ ನೆರವನ್ನು ಬುಧವಾರ ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನದವಠಾರದಲ್ಲಿ ಹಸ್ತಾಂತರಿಸಲಾಯಿತು.
ಕ್ಷೇತ್ರದ ಮೊಕ್ತೇಸರ ಸಾಯೀರಾಮ್ ಅವರು ನೆರವಿನ ಚೆಕ್ ಹಸ್ತಾಂತರಿಸಿ, ಬಿರುವೆರ್ ಕುಡ್ಲ ಸಮಾಜಮುಖೀ ಸೇವೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಬಿರುವೆರ್ ಕುಡ್ಲ ವಕ್ತಾರ ದಿನೇಶ್ ರಾಯಿ ಅವರು ಬಿರುವೆರ್ ಕುಡ್ಲದ ಕುರಿತಾಗಿ ಮಾಹಿತಿ ನೀಡಿ,
ಬಿರುವೆರ್ ಕುಡ್ಲದ ಸ್ಥಾಪಕಾಧ್ಯಕ್ಷ ಉದಯಪೂಜಾರಿ ಬಳ್ಳಾಲ್‍ಬಾಗ್ ನೇತೃತ್ವದಲ್ಲಿ ಅವರ ಸದಸ್ಯರ,ಸ್ನೇಹಿತರ,ದಾನಿಗಳಕೊಡುಗೆಯಿದೆ.
ನಮ್ಮ ಸಂಘಟನೆಯು ಶಾರದಾ ಹುಲಿ ವೇಷ ಕುಣಿತ, ಕುದ್ರೋಳಿ ಕ್ಷೇತ್ರದ ದಸರದಲ್ಲಿ ಭಾಗವಹಿಸುತ್ತಾ ಬಂದಿದೆ. ಹುಲಿ ವೇಷದಲ್ಲಿಬಂದ ಹಣವನ್ನು ಸೇವಾ ರೂಪದಲ್ಲಿ ಖರ್ಚು ಮಾಡುತ್ತಿದ್ದೆವು. ಕಳೆದ 8 ವರ್ಷದಿಂದ ಸಂಸ್ಥೆಯು ಬಡ ವರ್ಗದ ಸೇವೆಗಾಗಿ 5 ಕೋಟಿರೂ.ನಷ್ಟು ನೆರವಿಗೆ ವಿನಿಯೋಗಿಸಿದ್ದೇವೆ. ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವಾದರ್ಶದಲ್ಲಿ ಎಲ್ಲಾ ಜಾತಿ ಧರ್ಮದ ಕುಟುಂಬಕ್ಕೆನೆರವು ನೀಡಲಾಗಿದೆ.ಬೇರೆ ಬೇರೆ ಘಟಕಗಳು ತಮ್ಮ ಕರ್ತವ್ಯ ನಿರತವಾಗಿದೆ. ಕೊರೊನಾ ಸಂದರ್ಭದಲ್ಲಿ ನೀಡಿದ ಉಚಿತವಾಗಿ ಸೇವೆನೀಡುವ ಆಂಬುಲೆನ್ಸ್ ನಿರ್ವಹಣೆ ಮಾಡುತ್ತಿದ್ದೇವೆ.ಹೀಗೆ ನಮ್ಮಿಂದಾದ ಸೇವೆ ಸಮಾಜಕ್ಕೆ ನಿರಂತರವಾಗಿ ಮಾಡುತ್ತಾ ಬಂದಿದ್ದೇವೆಎಂದರು.
ನೆರವು ಪಡೆದ ಕುಟುಂಬದ ಸದಸ್ಯರಾದ ಸಂಜಿತ್ ಅಚಾರ್ಯ ಮನವಿ ಮಾಡಿ,
ಪ್ರತೀ ತಿಂಗಳು 50 ರ ಸಾವಿರ ವೆಚ್ಚ ಬರುತ್ತಿದ್ದು,ಬಡ ಕುಟುಂಬಕ್ಕೆ ಭರಿಸಲು ಕಷ್ಟವಾಗುತ್ತಿದೆ.
ಬಿರುವೆರ್ ಕುಡ್ಲದ ನೆರವಿಗೆ ಕೃತಜ್ಞತೆ ವ್ಯಕ್ತ ಪಡಿಸುತ್ತೇವೆ.
ಇತರರೂ ಮುಂದೆ ಬಂದು ಸಹಾಯ ಮಾಡಿದರೆ ನಮಗೆ ಮಗುವಿನ ರಕ್ಷಣೆಗೆ ಸಹಾಯವಾಗುತ್ತದೆ ಎಂದು ಮನವಿ ಮಾಡಿದರು.
ಪ್ರಮುಖರಾದ ಸ್ಥಾಪಕಾಧ್ಯಕ್ಷ ಉದಯ ಪೂಜಾರಿ ಬಳ್ಳಾಲ್ ಬಾಗ್, ವಸಂತ ಪೂಜಾರಿ, ವೆಂಕಟೇಶ್ ಭಂಡಾರಿ,ರಾಧಕೃಷ್ಣಮುಂಬಾಯಿ ಅಧ್ಯಕ್ಷ ರಾಕೇಶ್ ಪೂಜಾರಿ ಬಳ್ಳಾಲ್‍ಬಾಗ್,ವಿನು ಶೆಟ್ಟಿ ತಲಪಾಡಿ,ಲತೀಶ್ ಪೂಜಾರಿ,ಕಿಶೋರ್ ಬಾಬು,ರಾಕೇಶ್ಚಿಲಿಂಬಿ,ಲೋಹಿತ್ ಗಟ್ಟಿ,ರಾಮ್‍ಪ್ರಸಾದ್ ಎಕ್ಕೂರ್,ಗಣೇಶ್ ಚಿಲಿಂಬಿ,ವಾಝಿ ಫೆರ್ನಾಂಡಿಸ್,ಪ್ರಾಣೇಶ್ ಬಂಗೇರ,ವಿಘ್ನೇಶ್ ಮತ್ತಿತರರು ಉಪಸ್ಥಿತರಿದ್ದರು.






