ಶ್ರೀ ಸತೀಶ್ ಕುಮಾರ್ ಬಜಾಲ್ , ಸೌದಿ ಅರೇಬಿಯಾ ಮೂಲತ: “ಅಂಚನ್ಸ್ ಹೌಸ್” ಕಂಕನಾಡಿ ಪಕ್ಕಲಡ್ಕ ಬಜಾಲ್ ನವರು. ತಂದೆ :ದಿ! ಚಂದ್ರಶೇಖರ್ ಕುಂದರ್ ಕೊಡಿಯಲ್ ಬೈಲ್, ತಾಯಿ:ದಿ! ಶಾರದ ಅಂಚನ್, ಕಂಕನಾಡಿ ಪಕ್ಕಲಡ್ಕ, ಬಜಾಲ್. 3ಗಂಡು ಮಕ್ಕಳಲ್ಲಿ ಕಿರಿಯವನು ಸತೀಶ್ ಕುಮಾರ್ ಬಜಾಲ್. ತನ್ನ 3ನೇ ವಯಸಿನಲ್ಲೇ ತಾಯಿಯನ್ನು ಕಳೆದುಕೊಂಡು ನಂತರ ತನ್ನ ಅಜ್ಜಿ ಹಾಗೂ ಮಾವ ಶ್ರೀ ರಾಘವ ಅಂಚನ್ ಆರೈಕೆಯಲ್ಲಿ -ಬಜಾಲ್ ಸಂತ ಜೋಸೆಫರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ, ಹಾಗೂ ರೋಸಾರಿಯೊ ಹೈಸ್ಕೂಲ್ ನಲ್ಲಿ ಪ್ರೌಢಶಿಕ್ಷಣ.
ಸಂತ ಅಲೋಸಿಯಸ್ ಕಾಲೇಜಿನಲ್ಲಿ ಪದವಿ ಪೂರ್ವ ಹಾಗೂ ಪದವಿ ಶಿಕ್ಷಣವನ್ನು ಸಂತ ಅಲಾಸಿಯಸ್ ಸಂಧ್ಯಾ ಕಾಲೇಜ್.
ಅಂತಿಮ B.A ಕಲಿಯುತ್ತಿರುವಾಗ ಅಲ್ಲಿನ ಆಡಳಿತ ಮಂಡಳಿ ಸಂಧ್ಯಾ ಕಾಲೇಜನ್ನು ಸರಕಾರಿ ಅನುದಾನವಿಲ್ಲದ ಕಾರಣ ಮುಚ್ಚುವ ನಿರ್ಧಾರ ಮಾಡಿ, ಮೊದಲು ಪ್ರಥಮ ಪಿಯುಸಿ, ಪ್ರಥಮ ಪದವಿ ಕಾಲೇಜನ್ನು ನಿಲ್ಲಿಸಿದಾಗ ಎಲ್ಲಾ ವಿದ್ಯಾರ್ಥಿ ಸಂಘಗಳನ್ನು ಒಗ್ಗೂಡಿಸಿ ಹಾಗೂ ಸರ್ವ ಕಾಲೇಜು ವಿದ್ಯಾರ್ಥಿ ಸಂಘದ ನೇತೃತ್ವದಲ್ಲಿ 50 ದಿನಗಳ ಅವಿರತ ಹೋರಾಟದ ಫಲವಾಗಿ ಸರಕಾರದಿಂದ ಕಾಲೇಜಿಗೆ ಅನುದಾನ ಬಿಡುಗಡೆ. ಹಾಗೂ 1991-92 ಸಾಲಿನ ಕಾಲೇಜು ವಿದ್ಯಾರ್ಥಿ ಸಂಘಕ್ಕೆ ಅಧ್ಯಕ್ಷರಾಗಿ ಅವಿರೋಧ ಆಯ್ಕೆ. ಕಾಲೇಜಿನ 25 ವರ್ಷದ ಬೆಳ್ಳಿ ಹಬ್ಬವನ್ನು ಸಂಭ್ರಮದಿಂದ ಆಚರಣೆ.ಸರ್ವ ಕಾಲೇಜು ವಿದ್ಯಾರ್ಥಿ ಸಂಘಕ್ಕೆ ಉಪಾಧ್ಯಕ್ಷಾರಾಗಿ ಆಯ್ಕೆ. ಸರ್ವ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿ ಸಂಘಕ್ಕೆ-3 ವರ್ಷಗಳ ಸತತವಾಗಿ ಸಂಚಾಲಕಾರಾಗಿ ಆಯ್ಕೆ. ನಂತರ ಸಲಹೆಗರರಾಗಿ ಸೇವೆಸಲ್ಲಿಸಿದ್ದಾರೆ.
ವೃತ್ತಿಪರ ಕಾಲೇಜು ಶಿಕ್ಷಣ ವಿದ್ಯಾರ್ಥಿ ಸಂಘದ ಸಂಚಾಲಕಾರಾಗಿ ಹಾಗು ಭಾರತ ವಿದ್ಯಾರ್ಥಿ ಫೆಡರೇಶನ್ ಅಧ್ಯಕ್ಷರಾಗಿ, ಜಿಲ್ಲಾ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿ. ಹಲವಾರು ಹೋರಾಟ ಚಳುವಳಿಗಳಿಗೆ ನಾಯಕತ್ವವನ್ನು ನೀಡಿದ್ದಾರೆ. ದ.ಕ ಜಿಲ್ಲೆಯಲ್ಲಿ ತ್ರೋಬಾಲ್ ಅಸೋಷ್ಷಯೇಷನ್ ಸ್ಥಾಪಕಲ್ಲಿ ಒಬ್ಬರಾಗಿದ್ದಾರೆ
ತನ್ನ ಊರಿನ ಪಕ್ಕಲಡ್ಕ ಯುವಕ ಮಂಡಲದ (ರಿ) ಇದರ ಕಾರ್ಯದರ್ಶಿಯಾಗಿರುವಾಗ ಇಡೀ ಬಜಾಲ್ ಗ್ರಾಮವನ್ನು ಸಾಕ್ಷರತ ಅಂದೋಲನದ ಸಮಯ ದತ್ತು ಸ್ವೀಕಾರ ಮಾಡಿ. ತಾಲೂಕಿನಲ್ಲಿ ದ್ವಿತೀಯ ಸ್ಥಾನ ಪಡೆದಿರುತ್ತಾರೆ.ಬಜಾಲ್, ಕಂಕನಾಡಿ ಮತ್ತು ಜಪ್ಪಿನ ಮೊಗರು ಗ್ರಾಮದಲ್ಲಿ ಪ್ರಥಮ ಬಾರಿಗೆ ಲೋಕ ಅದಾಲತ್ ಕಾರ್ಯಕ್ರಮವನ್ನು PYM ಮತ್ತು SDM ಕಾಲೇಜಿನ ಸಹಯೋಗದಿಂದ ಆಗಿನ ಜಿಲ್ಲಾಧಿಕಾರಿ ಭರತ್ ಲಾಲ್ ಮೀನರಿಂದ ಉದ್ಘಾಟಿಸಿ. ಜಿಲ್ಲಾ ಮಾಜಿಸ್ಟೇಟ್, ಅಸಿಸ್ಟೆಂಟ್ ಕಮಿಷನರ್ ತಹಸೀಲ್ದಾರ್, ಇನ್ನಿತರ ಎಲ್ಲಾ ಅಧಿಕಾರಿಗಳನ್ನು-ಬಜಾಲಿನ ಸಂತ ಜೋಸೆಫರ ಪ್ರೌಢಶಾಲೆಯಲ್ಲಿ ಸೇರಿಸಿ ಒಂದೇ ದಿನ 460ಅರ್ಜಿಗಳನ್ನು ಸ್ವೀಕರಿಸಿ ಅದೇ ದಿನ 270 ಅರ್ಜಿಗಳ ಸಮಸ್ಯೆಗಳನ್ನು ಪರಿಹರಿಸಿ ಇನ್ನುಳಿದ ಅರ್ಜಿಗಳ ಸೊಕ್ತ ದಾಖಲೆಗಳು ಬಟ್ಟುಗೂಡಿಸಿ ನಂತರ ದಿನಗಳಲ್ಲಿ ಸರಿಪಡಿಸಿ ಪರಿಹರಿಸಿ ಬಗೆಹರಿಸುವುದರಲ್ಲಿ ಇವರು ಶ್ರಮಿಸಿದ್ದಾರೆ.
ರಾಜ್ಯದಲ್ಲಿ ಪ್ರಥಮ ಬಾರಿ ಬಜಾಲ್ ಗ್ರಾಮದ 48 ಸ್ಥಳಗಳನ್ನು ಗುರುತಿಸಿ ಒಂದೇ ದಿನ ಒಂದೇ ಸಮಯದಲ್ಲಿ -ಪಕ್ಕಲಡ್ಕ ಯುವಕ ಮಂಡಲ ಹಾಗೂ ಮಂಗಳೂರು ವಿಶ್ವವಿದ್ಯಾಲಯದ ಎಲ್ಲಾ ಕಾಲೇಜಿನ NSS ವಿದ್ಯಾರ್ಥಿಗಳು ಹಾಗೂ ಊರಿನ ಸಂಘ ಸಂಸ್ಥೆಯ ಯುವಕರನ್ನು ಸೇರಿಸಿ ಬ್ರಹತ್ ಶ್ರಮದಾನ ಆಂದೋಲನವನ್ನು ಮಾಡಿದ ಕೀರ್ತಿ ಅವರದು. ಅದಕ್ಕೆ ಆಗಿನ ಜಿಲ್ಲಾ ಪಂಚಾಯತ್ ಕಾರ್ಯದರ್ಶಿ ಶಾಲಿನಿ ಗೋಯಲ್, ಜಿಲ್ಲಾಧಿಕಾರಿ ಭರತ್ ಲಾಲ್ ಮೀನರಿಂದ ಪ್ರಶಂಸೆಗೆ ಪಾತ್ರ.
ಜಲ್ಲಿಗುಡ್ಡೆ ಮಾರಿಯಮ್ಮ ಸೇವಾ ಮಂದಿರದಲ್ಲಿ ಹಲವು ಕಂದಾಯ ಶಿಬಿರ ಹಾಗೂ ಲಯನ್ಸ್ ಕ್ಲಬ್ ಮಂಗಳಾದೇವಿ ಇದರ ಸಹಯೋಗದಿಂದ ಹಲವು ನೇತ್ರ ಚಿಕಿತ್ಸೆ, ವೈದ್ಯಕೀಯ ಶಿಬಿರಗಳನ್ನು ಮಾಡಿ ಹಲವರಿಗೆ, ನೇತ್ರ ಶಸ್ತಚಿಕಿತ್ಸೆ, ಕನ್ನಡಕ್ಕ ನೀಡುವಲ್ಲಿ ನೆರವಾಗಿದ್ದಾರೆ.
ಗ್ರಾಮೀಣ ಯುವಕರಿಗೆ ಕಲಾ ಪ್ರತಿಭೆಗೆ ಪೋತ್ಸಾಹಿಸಲು PYM ಡಾನ್ಸ್ ಗ್ರೂಪ್ ಸ್ಥಾಪನೆ -ತಾಲೂಕು, ಜಿಲ್ಲಾ ಹಾಗೂ ರಾಜ್ಯಮಟ್ಟದಲ್ಲಿ ಪ್ರಶಸ್ತಿ ಪಡೆದಿರುತ್ತಾರೆ.
ಹಲವು ಬಾರಿ ಯುವಕ ಮಂಡಲ ಹಾಗೂ ಶಾಲೆಗಳಲ್ಲಿ ರಕ್ತದಾನ ಶಿಬಿರವನ್ನು ಮಾಡಿ ಹಾಗೂ ಇತರ ಸಮಯದಲ್ಲಿ ರಕ್ತದಾನಿಗಳನ್ನು ಸಂಪರ್ಕಿಸಿ ರಕ್ತದ ವ್ಯವಸ್ಥೆ ಮಾಡುತಿದ್ದ ಮಂಗಳೂರಿನ 24*7 ಆಗಿದ್ದ ಅಸಮಾನ್ಯ ವ್ಯಕ್ತಿ.
ಸಂದೇಶ ಬಜ್ಜೋಡಿ ನಂತೂರು, ಹಾಗೂ ದ. ಕ. ಪತ್ರಕರ್ತರ ಸಂಘದ ವತಿಯಿಂದ -ಪತ್ರಿಕೋದ್ಯಮ ತರಬೇತಿಯನ್ನು ಪಡೆದು ಅದರ ಪ್ರಮಾಣ ಪತ್ರವನ್ನು -ಸಂತ-ಮದರ್ ತೆರೇಸಾರವರ ದಿವ್ಯಹಸ್ತದಿಂದ ಆಶೀರ್ವಾದ ಪಡೆದಿರುತ್ತಾರೆ. ನಂತರ ಮಂಗಳೂರು ಮಿತ್ರ, ಕರಾವಳಿ ಮಾರುತ ಇದರ ವರದಿಗಾರರಾಗಿ. ಹಾಗೂ ಮಂಗಳೂರು ಯೂನಿಟಿ ಹೆಲ್ತ್ ಕಾಂಪ್ಲೆಕ್ಸ್ ನಲ್ಲಿ 3 ವರ್ಷಗಳ ಕಾಲ Front Office incharge ಹಾಗೂ A.M.O ರವರ ಆಪ್ತಕಾರ್ಯದರ್ಶಿಯಾಗಿ ಕೆಲಸ ನಿರ್ವಹಿಸಿರುತ್ತಾರೆ.
ಮಧ್ಯಮ ಕುಟುಂಬದಿಂದ ಬಂದು- ತನ್ನ ಮನೆಯ ಆರ್ಥಿಕ ಪರಿಸ್ಥಿತಿಯನ್ನು ಮನಗಂಡು ತನ್ನ ಗೆಳೆಯರು ಮತ್ತು ಕುಟುಂಬಸ್ಥರ ಒತ್ತಾಯದ ಮೇರೆಗೆ -1996ಕ್ಕೆ ಸೌದಿ ಅರೇಬಿಯಾಕ್ಕೆ ಉದ್ಯೋಗ ನಿಮಿತ್ತ ಪ್ರಯಾಣ. -ಸೌದಿಯ ಜಿದ್ದ ,ರಿಯಾದ್ ,ದಮ್ಮಾಮ್ ಅಲ್ ಹಸಾ ರಲ್ಲಿ , Reginal Sales Manager/Business Development Manager, Brach Manager ಆಗಿ -ಒಟ್ಟು 12 ವರ್ಷಗಳ ಸೇವೆ ಮಾಡಿ ನಂತರ. ದಮ್ಮಾಮ್ ನಲ್ಲಿ ತನ್ನ ಸ್ವಂತ ಉದ್ದಿಮೆಯಲ್ಲಿ ತೊಡಗಿರುತ್ತಾರೆ.
ಸೌದಿಯಲ್ಲಿ 2010ರಲ್ಲಿ ಊರಿನ ಯುವಕರು ಮತ್ತು ಮಕ್ಕಳ ಕಲಾಪ್ರತಿಭೆಯನ್ನು ಪೋತ್ಸಾಹಿಸುವ ನಿಟ್ಟಿನಲ್ಲಿ -ಕುಡ್ಲ ಅಡ್ವೆಂಚರ್ ದಮ್ಮಮ್ (KAD)ನ್ನು ಸ್ಥಾಪಿಸಿದವರಲ್ಲಿ ಪ್ರಮುಖರು 2015ರಲ್ಲಿ (ಯಕ್ಷಗಾನ ಕಲಾವಿದರಿಗೆ ಪೋತ್ಸಾಹಿಸುವ ನಿಟ್ಟಿನಲ್ಲಿ) ಹವ್ಯಾಸಿ ಕಲಾವಿದರು ಸೌದಿ ಅರೇಬಿಯಾ ತಂಡದ ಸ್ಥಾಪಕರಲ್ಲೊಬ್ಬರು ಹಾಗೂ ಪ್ರಧಾನಕಾರ್ಯದರ್ಶಿಯಾಗಿದ್ದರು. ಅದರಿಂದ 3 ಬಾರಿ ಯಕ್ಷಗಾನ ಪ್ರದರ್ಶನವನ್ನು ಬಹರೈನ್ ನಲ್ಲಿ ಕನ್ನಡ ಸಂಘ ಬಹರೈನ್ ಸಹಕಾರದಿಂದ ಮಾಡಿಸಿರುತ್ತಾರೆ.
2016ರಲ್ಲಿ-(Damman Jubail )ದಮ್ಮಮ್ ಜುಬೈಲ್ ಬಿಲ್ಲವಾಸ್ ನ ಮುಖ್ಯ ಸಂಸ್ಥಾಪಕರಲ್ಲೊಬ್ಬರು. 2010ರಿಂದ ಸೌದಿ ಅರೇಬಿಯಾದ ಪ್ರತಿಸ್ಥಿತ charity organisation, ಮಂಗಳೂರು ಅಸೋಸಿಯೇಷನ್ ಸೌದಿ ಅರೇಬಿಯಾ (MASA)ದ ಸಂಸ್ಕೃತಿಕ ಕಾರ್ಯದರ್ಶಿ, ಉಪ ಖಜಾಂಚಿ, ಸಹ ಕಾರ್ಯದರ್ಶಿ, ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿರುತ್ತಾರೆ. ಹಾಗೂ 2020 ನೇ ಇಸವಿಯಲ್ಲಿ MASA ವರ್ಷದ ವ್ಯಕ್ತಿ (Man Of The Year ) ಪ್ರಶಸ್ತಿಯನ್ನು ಪಡೆದಿರುತ್ತಾರೆ. ಇದು ಅವರ ಸಮಾಜ ಸೇವೆಗೆ ಸಂದ ಗೌರವ ಸೌದಿ ಅರೇಬಿಯಾದ ದಮ್ಮಮ್ ನಲ್ಲಿ 24*7 ಲಭ್ಯವಾಗುವ ಆಶ್ತರ ಪಾಲಿಗೆ ಆಸರೆಯಾಗುವ ಏಕೈಕ ವ್ಯಕ್ತಿ -ಸದಾ ಸಮಾಜ ಸೇವೆಗೆ ತನ್ನನ್ನು ತಾನು ತೊಡಗಿಸಿಕೊಂಡಿರುವವರು.
ಇವರು ಉದ್ಯೋಗ ಕಳೆದುಕೊಂಡವರಿಗೆ ಉದ್ಯೋಗ ದೊರಕಿಸಿ ಕೊಡುವಲ್ಲಿ ಮಹತ್ಥರ ಪಾತ್ರ, ಕಾನೂನು ಸಲಹೆ ಸಹಕಾರ ಹಾಗೂ ಮುಖ್ಯವಾಗಿ Dead Body ಯನ್ನು ತನ್ನ ಹುಟ್ಟುರಿಗೆ ಕಳುಹಿಸಿ ಕೊಡುವ ಪುಣ್ಯದ ಕೆಲಸವನ್ನು ಯಾವುದೇ ಪ್ರತಿಫಲ, ಅಪೇಕ್ಷೆಯಿಲ್ಲದೆ ಸದಾ ಮಾಡುತಿರುತ್ತಾರೆ.
Covid-19 ಸಂಧಿಗ್ದ ಸಮಯದಲ್ಲಿ ದಮ್ಮಮ್ ಹಾಗೂ ಊರಿನಲ್ಲಿ ಆಹಾರ ಕಿಟ್ ಹಂಚುವ ವ್ಯವಸ್ಥೆ ಹಾಗೂ ಸೌದಿ ಯಿಂದ ಊರಿಗೆ ಹೋಗುವ ನಮ್ಮ ಸಮುದಾಯದವರಿಗೆ ಸಹಕಾರ, ಪ್ರಯಾಣ ವ್ಯವಸ್ಥೆಯನ್ನು ಮಾಡಿ ಎಲ್ಲರಾ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಅಷ್ಟೇ ಅಲ್ಲದೆ ಇತ್ತಿಚೆಗೆ CARDTS Pompwel ಏಡ್ಸ್ ಪೀಡಿತ ಮಕ್ಕಳ ಆರೈಕೆ ಮಾಡಲು ದಾನಿಗಳ ಕೊರತೆ ಇದ್ದಾಗ ತನ್ನನ್ನು ಸಂಪರ್ಗಿಸಿದ ತಕ್ಷಣವೇ ಸ್ಪಂದಿಸಿ ಸೌದಿಯ ಮಾಸ ಸಂಸ್ಥೆಯ ಹಾಗು ಇತರ ದಾನಿಗಳನ್ನು ಒಟ್ಟುಸೇರಿಸಿ ದೋಡ್ಡ ಮೊತ್ತದ ಧನಸಹಾಯ ನೀಡಿ ಸಹಕರಿಸಿ ಮಾನವೀಯತೆ ಮೆರೆದಿದ್ದಾರೆ.
ತನ್ನ ಹುಟ್ಟುರಿನಲ್ಲಿ ಇರುವ ಬಡ ವಿಧ್ಯಾರ್ಥಿಗಳು ಮತ್ತು ಬಡ ರೋಗಿಗಳ ಚಿಕಿಸ್ಸ್ತಯ ಆರ್ಥಿಕ ನೆರವಿಗಾಗಿ ಊರಿನ ಸಂಘ ಸಂಸ್ಥಗಳಿಂದ ಬಂದ ವಿನಂತಿ ಪತ್ರಗಳಿಗೆ ಸ್ಪಂದಿಸಿ ಸೌದಿಯ ಮುಖ್ಯವಾಗಿ MASA ಹಾಗೂ ಇನ್ನಿತರ ಸಂಸ್ಥೆಗಳ ಮೂಲಕ ಪ್ರತೀ ವರ್ಷವೂ ನೆರವನ್ನು ನೀಡುತಿದ್ದಾರೆ. ಹಾಗೂ ಕಂಕನಾಡಿ ವಲಯ ಬಂಟರ ಸಂಘದ (ಅಳಪೆ,ಕಂಕನಾಡಿ,ಬಜಾಲ್ )ವತಿಯಿಂದ ಸಂತ ಜೋಸೆಫ್ ರ ಪ್ರೌಡ ಶಾಲೆಯಲ್ಲಿ ನಡೆದ ವಾರ್ಪಿಕೋತ್ಸವ ಹಾಗೂ ಕಾರ್ಯಕ್ರಮದಲ್ಲಿ ಇವರು ಮಾಡುತ್ತಿರುವ ಸಮಾಜ ಮುಖಿ ಕೆಲಸಗಳನ್ನು ಗುರುತಿಸಿ 2017 ರಲ್ಲಿ ಸನ್ಮಾನಿಸಲಾಗಿದೆ.
ಇಂತಹ ಮೇರು ವ್ಯಕ್ತಿತ್ವ ಕೊಡುಗೈ ಧಾನಿಗಳು, ನಿಸ್ವಾರ್ಥ ಸೌದಿ ಅರೇಬಿಯಾದ ಪ್ರತಿಸ್ಥಿತ charity organisation, ಮಂಗಳೂರು ಅಸೋಸಿಯೇಷನ್ ಸೌದಿ ಅರೇಬಿಯಾ (MASA)ದ ಸಂಸ್ಕೃತಿಕ ಕಾರ್ಯದರ್ಶಿ, ಉಪ ಖಜಾಂಚಿ, ಸಹ ಕಾರ್ಯದರ್ಶಿ, ಉಪಾಧ್ಯಕ್ಷ) ಸೇವೆ ಸಲ್ಲಿಸಿರುತ್ತಾರೆ. ಹಾಗೂ 2020 ನೇ ಇಸವಿಯಲ್ಲಿ MASA ವರ್ಷದ ವ್ಯಕ್ತಿ (Man Of The Year ) ಪ್ರಶಸ್ತಿಯನ್ನು ಪಡೆದಿರುತ್ತಾರೆ.ಸೌದಿ ಅರೇಬಿಯಾದ ಪ್ರತಿಷ್ಠಿತ Charity Organization ಮಂಗಳೂರು ಆಸೋಷಿಯೇಷನ್ (ರಿ) (MASA) ಇದರ ವತಿಯಿದ ನಡೆದ ವಾರ್ಷಿಕ ಮಹಾ ಸಭೆಯಲ್ಲಿ COVID-19 ಸಮಯದಲ್ಲಿ ಅವರು ಮಾಡುತ್ತಿರುವ ಸಕ್ರೀಯ ಸೇವೆಯನ್ನು ಗುರುತಿಸಿ COVID-19 Warriors ಪ್ರಶಸ್ತಿಯನ್ನು 28/01/2021 ರಂದು ನೀಡಿ ಗೌರವಿಸಲಾಯಿತು.ಹಾಗೂ Charity Organization ಮಂಗಳೂರು ಆಸೋಷಿಯೇಷನ್ (ರಿ) (MASA) ನೂತನ ಅಧ್ಯಕ್ಷರಾಗಿ ಸರ್ವಾನು ಮತದಿಂದ ಅವಿರೋದವಾಗಿ ಆಯ್ಕೆಯಾಗಿದ್ದಾರೆ
ಶೈಕ್ಷಣಿಕ, ಸಾಂಸ್ಕೃತಿಕ, ಕ್ರೀಡಾ ಕ್ಷೇತ್ರಕ್ಕೆ ಪ್ರೋತ್ಸಾಹ ನೀಡುವುದರ ಜೊತೆಗೆ ಹಲವಾರು ಧಾರ್ಮಿಕ ಶ್ರದ್ಧಾ ಕೇಂದ್ರಗಳಿಗೆ ಸಹಕಾರವನ್ನು ನೀಡಿದ ಕೊಡುಗೈ ದಾನಿ.
ಮಂಗಳೂರಿನ ಹೃದಯ ಭಾಗದಲ್ಲಿರುವ ಕಾರಣಿಕದ ಪುಣ್ಯ ಕ್ಷೇತ್ರ ಕಂಕನಾಡಿ ಶ್ರೀ ಬ್ರಹ್ಮಬೈದರ್ಕಳ ಗರಡಿ ಕ್ಷೇತ್ರ ಮತ್ತು ದೇಯಿ ಬೈದ್ಯೆತಿ ಕೋಟಿ ಚೆನ್ನಯ ಮೂಲಸ್ಥಾನ ಶ್ರೀ ಕ್ಷೇತ್ರ ಗೆಜ್ಜೆಗಿರಿ ನಂದನ ಬಿತ್ತ್’ಲ್ ಇದರ ಕ್ಷೇತ್ರಾಭಿವೃದ್ಧಿಗೆ ತನ್ನ ಕೈಲಾದಷ್ಟು ಸಹಕಾರ ನೀಡಿದಲ್ಲದೆ ಇತರರನ್ನು ಒಗ್ಗೂಡಿಸಿ ಕ್ಷೇತ್ರದ ಬಗ್ಗೆ ಮನವರಿಕೆ ಮಾಡುವುದರೊಂದಿಗೆ ಧನ ಸಂಗ್ರಹ ಮಾಡಿ ಕ್ಷೇತ್ರಕ್ಕೆ ಸಮರ್ಪಿಸಿದ್ದಾರೆ. ಶ್ರೀಯುತರು ಗೆಜ್ಜೆಗಿರಿ ಬ್ರಹ್ಮಕಲಶೋತ್ಸವ ಸಮಿತಿಯ ಸೌದಿ ಅರೇಬಿಯಾದ ಸಂಚಾಲಕರಾಗಿ ಸೇವೆಯನ್ನು ಸಲ್ಲಿಸಿದ್ದಾರೆ.
ಶ್ರೀಯುತರ ಧರ್ಮ ಪತ್ನಿ ಹೆಜಮಾಡಿಯ :ಶ್ರೀಮತಿ ಸುಚಿತ್ರ ಸತೀಶ್ ಬಜಾಲ್ ಮತ್ತು ಇಬ್ಬರು ಮಕ್ಕಳು ಶ್ರೀನಿಧಿ & ಶ್ರೇಯ ಅವರೊಂದಿಗೆ ದಮ್ಮಾಮ್ ಸೌದಿ ಅರೇಭಿಯ ದಲ್ಲಿ ಸುಖಿ ಜೀವನವನ್ನು ನಡೆಸುತ್ತಿದ್ದಾರೆ.
ಇಂತಹ ಮೇರು ವ್ಯಕ್ತಿತ್ವ ಕೊಡುಗೈ ಧಾನಿಗಳು, ನಿಸ್ವಾರ್ಥ ಸಮಾಜ ಸೇವಕರು ಸಮಾಜಕ್ಕೆ ಮಾದರಿ…
ಇವರ ನಿಸ್ವಾರ್ಥ ಸೇವೆಗೆ ಡೊಡ್ಡ ಸಲಾಂ
ಬರಹ:- ಪ್ರಶಾಂತ್ ಪೂಜಾರಿ ಪಜೀರ್,ಮಸ್ಕತ್