ಮೊದಲಿಗಿಂತ ಸ್ವಲ್ಪ ದೊಡ್ಡದಾಗಿ ಮತ್ತು ಮೊದಲಿಗಿಂತ ಸ್ವಲ್ಪ ಪ್ರಕಾಶಮಾನವಾಗಿ ಚಂದ್ರ ಕಾಣುವುದನ್ನೂ ಸೂಪರ್ ಮೂನ್ಎನ್ನಲಾಗುತ್ತದೆ. ಚಂದ್ರನು ತನ್ನ ಕಕ್ಷೆಯಲ್ಲಿ ಭೂಮಿಗೆ ಹತ್ತಿರ ಬರುವುದರಿಂದ ಈ ವಿದ್ಯಮಾನವು ಉಂಟಾಗುವುದನ್ನು ಪೆರಿಜಿ ಎಂದುಕರೆಯಲಾಗುತ್ತದೆ.
ಸೂಪರ್ ಮೂನ್ ಎಂಬ ಪದವನ್ನು 1979 ರಲ್ಲಿ ಜ್ಯೋತಿಷಿ ರಿಚರ್ಡ್ ನೋಲ್ ರಚಿಸಿದ್ದು, ಚಂದ್ರನು ಪೆರಿಜಿಯಿಂದ 90% ಒಳಗೆಇದ್ದಾಗ ಉಂಟಾಗುವ ಹೊಸ ಅಥವಾ ಹುಣ್ಣಿಮೆ ಚಂದ್ರನನ್ನು ಸೂಚಿಸುತ್ತದೆ. ಇದು ಭೂಮಿಗೆ ಹತ್ತಿರ ಇರುತ್ತದೆ.
ಇಂದು ಸೂಪರ್ ಮೂನ್: ಹೆಚ್ಚುತ್ತಾ ಪ್ರವಾಹ..?
ಇಂದು ಚಂದ್ರ ಗ್ರಹ ಭೂಮಿಗೆ ಹತ್ತಿರಕ್ಕೆ ಬರಲಿದೆ. ಚಂದ್ರ ಭೂಮಿಗೆ ಕೇವಲ 3,57,264 ಕಿಲೋಮೀಟರ್ ದೂರದಲ್ಲಿರುತ್ತಾನೆ. ಹುಣ್ಣಿಮೆ ಚಂದ್ರನು ಒಂದೆರಡು ದಿನಗಳವರೆಗೆ ಕಾಣಿಸಿಕೊಳ್ಳಬಹುದಾದರೂ, ಪರಿಪೂರ್ಣತೆಯು ವಾಸ್ತವದಲ್ಲಿ ಕ್ಷಣಿಕವಾಗಿಇರುತ್ತದೆ.
ಇನ್ನು ಇಂದು ಸಂಭವಿಸುವ ಸೂಪರ್ ಮೂನ್‌ನಿಂದಾಗಿ ಸಮುದ್ರದಲ್ಲಿನ ಅಲೆಗಳ ಆರ್ಭಟ ಹೆಚ್ಚಾಗಲಿದ್ದು, ಕರಾವಳಿ ತೀರಗಳುಪ್ರವಾಹಕ್ಕಿಡಾಗಬಹುದು ಎಂದು ಖಗೋಳಶಾಸ್ತ್ರಜ್ಞರು ಮುನ್ಸೂಚನೆ ನೀಡಿದ್ದಾರೆ.