ದೂರ ಸಂಪರ್ಕ ಕ್ಷೇತ್ರದಲ್ಲಿ ಸದಾ ಒಂದಿಲ್ಲೊಂದು ಬದಲಾವಣೆಯನ್ನು ತರುತ್ತಿರುವ ದೂರಸಂಪರ್ಕ ಇಲಾಖೆಯು ಇದೀಗ ಮತ್ತೊಮ್ಮೆ ಹೊಸ ಮಾನದಂಡಗಳನ್ನು ಪರಿಚಯಿಸಿದೆ. ಓರ್ವ ವ್ಯಕ್ತಿ ಎಷ್ಟು ಸಿಮ್ ಕಾರ್ಡ್‌ಗಳನ್ನು ಖರೀದಿಸಬಹುದು?, ಅಪ್ರಾಪ್ತ ವಯಸ್ಕರಿಗೆ ಸಿಮ್ ಖರೀದಿಸಲು ಅವಕಾಶವನ್ನು ನೀಡದಂತೆ ಟೆಲಿಕಾಂ ಕಂಪೆನಿಗಳು ಹೇಗೆ ಎಚ್ಚರಿಕೆ ವಹಿಸಬೇಕು ಎಂಬುದು ಸೇರಿದಂತೆ ಹಲವು ಬದಲಾವಣೆಗಳನ್ನು ಟೆಲಿಕಾಂ ವ್ಯವಸ್ಥೆಯಲ್ಲಿ ತಂದಿದೆ.
ದೂರ ಸಂಪರ್ಕ ಕ್ಷೇತ್ರದಲ್ಲಿ ಸದಾ ಒಂದಿಲ್ಲೊಂದು ಬದಲಾವಣೆಯನ್ನು ತರುತ್ತಿರುವ ದೂರಸಂಪರ್ಕ ಇಲಾಖೆಯು ಇದೀಗ ಮತ್ತೊಮ್ಮೆ ಹೊಸ ಮಾನದಂಡಗಳನ್ನು ಪರಿಚಯಿಸಿದೆ. ಓರ್ವ ವ್ಯಕ್ತಿ ಎಷ್ಟು ಸಿಮ್ ಕಾರ್ಡ್‌ಗಳನ್ನು ಖರೀದಿಸಬಹುದು?, ಅಪ್ರಾಪ್ತ ವಯಸ್ಕರಿಗೆ ಸಿಮ್ ಖರೀದಿಸಲು ಅವಕಾಶವನ್ನು ನೀಡದಂತೆ ಟೆಲಿಕಾಂ ಕಂಪೆನಿಗಳು ಹೇಗೆ ಎಚ್ಚರಿಕೆ ವಹಿಸಬೇಕು ಎಂಬುದು ಸೇರಿದಂತೆ ಹಲವು ಬದಲಾವಣೆಗಳನ್ನು ಟೆಲಿಕಾಂ ವ್ಯವಸ್ಥೆಯಲ್ಲಿ ತಂದಿದೆ. ಇದರಿಂದ ಟೆಲಿಕಾಂ ಕಂಪೆನಿಗಳು ನಿರ್ದಿಷ್ಟ ಮಾನದಂಡಗಳನ್ನು ಹೊಂದಲು ಸಾಧ್ಯವಾಗಲಿದೆ ಎಂದು ಹೇಳಲಾಗಿದೆ.
ದೂರಸಂಪರ್ಕ ಇಲಾಖೆಯ ನೂತನ ನಿಯಮಗಳ ಪ್ರಕಾರ, ಭಾರತದಲ್ಲಿ ಇನ್ಮುಂದೆ ಹೊಸ ಸಿಮ್ ಖರೀದಿಸಲು ಗ್ರಾಹಕ ಸ್ವಾಧೀನ ನಮೂನೆ ಎಂಬ ಫಾರ್ಮ್ ಅನ್ನು ಭರ್ತಿ ಮಾಡಬೇಕು ಎಂಬ ಮಾನದಂಡವನ್ನು ತರಲಾಗಿದೆ. ಈ ನಿಯಮದ ಪ್ರಕಾರ, ಹೊಸ ಫಾರ್ಮ್ ಒಂದನ್ನು ಗ್ರಾಹಕರು ಮತ್ತು ಟೆಲಿಕಾಂ ಆಪರೇಟರ್‌ಗಳಿಗಾಗಿಯೇ ವಿಶೇಷವಾಗಿ ವಿನ್ಯಾಸಗೊಳಿಸಲಾಗಿದ್ದು, ಕೆಲವು ನಿಯಮ ಮತ್ತು ಷರತ್ತುಗಳಲ್ಲಿ ಬಂದಿರುವ ಈ ನಿಯಮಗಳಿಗೆ ಗ್ರಾಹಕರು ಅರ್ಹರಾಗಿರಬೇಕಿದ್ದು, ಇದು ಗ್ರಾಹಕರು ಮತ್ತು ಟೆಲಿಕಾಂಗಳ ನಡುವಿನ ಒಪ್ಪಂದವಾಗಿರಲಿದೆ ಎಂದು ಹೇಳಲಾಗಿದೆ.
ಹಾಗೆಯೇ, ಭಾರತದಲ್ಲಿ ಓರ್ವ ವ್ಯಕ್ತಿ ಎಷ್ಟು ಸಿಮ್ ಹೊಂದಬಹುದು ಎಂಬುದನ್ನು ಸಹ ದೂರ ಸಂಪರ್ಕ ಇಲಾಖೆ ತಿಳಿಸಿದ್ದು, ಹೊಸ ನಿಯಮದಂತೆ, ದೇಶದ ಓರ್ವ ಪ್ರಜೆಯು ತನ್ನ ಹೆಸರಿನಲ್ಲಿ ( ಅವನು ಮತ್ತು ಅವಳ) ಒಟ್ಟು 18 ಸಿಮ್‌ಗಳನ್ನು ಖರೀದಿಸಬಹುದು ಎಂದು ಇಲಾಖೆ ತಿಳಿಸಿದೆ. ಈ 18 ಸಿಮ್‌ಗಳಲ್ಲಿ ಸಾಮಾನ್ಯ ಸಂವಹನಕ್ಕಾಗಿ 9 ಸಿಮ್‌ಗಳನ್ನು ಖರೀದಿಸಬಹುದು ಹಾಗೂ M2M ಸಂವಹನಕ್ಕಾಗಿ 9 ಸಿಮ್‌ಗಳನ್ನು ಖರೀದಿಸಬಹುದಾದ ಆಯ್ಕೆಯನ್ನು ನೀಡಲಾಗಿದೆ. ಜೊತೆಗೆ ಗ್ರಾಹಕರು ತಮ್ಮ ಡಿವೈಸ್ ಬದಲಾಯಿಸಿದರೆ ಹೊಸ ವಿವರಗಳನ್ನು ಸಲ್ಲಿಸಬೇಕಾಗುತ್ತದೆ.
ಅಂದರೆ, ಇದೀಗ ಓರ್ವ ವ್ಯಕ್ತಿ ಇದೀಗ ತನ್ನ ಹೆಸರಿನಲ್ಲಿ ಸಾಮಾನ್ಯ ಕೆಲಸಗಳಿಗೆ 9 ಸಿಮ್‌ಗಳನ್ನು ಹೊಂದಬಹುದಾಗಿದೆ. ಹಾಗೂ M2M (ಮಷಿನ್ ಟು ಮಷಿನ್) ಸಿಮ್ ಪಡೆಯಲು ಗ್ರಾಹಕರು ಪರಿಶೀಲನಾ ನಮೂನೆಯನ್ನು ಸಲ್ಲಿಸಬೇಕು ಎಂದು ಹೇಳಲಾಗಿದೆ. ಹಾಗೆಯೇ, ಅಪ್ರಾಪ್ತ ವಯಸ್ಕರಿಗೆ ಸಿಮ್ ಪಡೆಯಲು ಯಾವುದೇ ಅವಕಾಶವನ್ನು ಇದೀಗ ತೆಗೆದುಹಾಕಲಾಗಿದೆ. ಇದರರ್ಥ ಯಾವುದೇ ಗ್ರಾಹಕರು 18 ವರ್ಷಕ್ಕಿಂತ ಕಡಿಮೆ ಇದ್ದರೆ, ಟೆಲಿಕಾಂ ಆಪರೇಟರ್‌ಗಳಿಂದ ಸಿಮ್ ಖರೀದಿಸಲು ಸಾಧ್ಯವಿಲ್ಲ. ಹಾಗೂ ಸ್ಥಿರಲೈನ್ ಸಂಪರ್ಕಕ್ಕೂ ಸಹ ಅರ್ಜಿ ಸಲ್ಲಿಸಲು ಅವಕಾಶವಿಲ್ಲ.
ಇಲಾಖೆಯು ಇಂತಹ ಮಾನದಂಡಗಳನ್ನು ತರಲು ಹೆಚ್ಚುತ್ತಿರುವ ಸಿಮ್ ಕಾರ್ಡ್ ವಂಚನೆ ಪ್ರಕರಣಗಳು ಕಾರಣ ಎನ್ನಲಾಗಿದೆ. ಹಾಗೂ ಗ್ರಾಹಕರು ತಮ್ಮ ಹೆಸರುಗಳಲ್ಲಿನ ಸಿಮ್ ಅನಧಿಕೃತ ಬಳಕೆಯಾಗುತ್ತಿದೆಯಾ ಎಂಬುದನ್ನು ಪರೀಕ್ಷಿಸಲು ಹೊಸ ಕ್ರಮವನ್ನು ನೀಡಲಾಗಿದೆ. ನೀವು ನಿಮ್ಮ ಆಧಾರ್ ಕಾರ್ಡ್‌ನೊಂದಿಗೆ ಲಿಂಕ್ ಮಾಡಲಾದ ಎಲ್ಲಾ ಮೊಬೈಲ್ ಸಂಖ್ಯೆಗಳನ್ನು ನೋಡಲು ಇದೀಗ ಅನುಮತಿಸಿದ್ದು, tafcop.dgtelecom.gov.in ವೆಬ್‌ಸೈಟ್‌ನಲ್ಲಿ ನಿಮ್ಮ ಮೊಬೈಲ್ ನಂಬರ್ ಲಗ್ಗತ್ತಿಸಿ ಸಿಮ್ ದುರುಪಯೋಗ ಆಗಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಬಹುದು.