ವಯಸ್ಸಿನ್ನೂ ಸಣ್ಣದಿರುತ್ತದೆ, ಆದರೆ ಕೂದಲು ಬೆಳ್ಳಗಾಗುವುದರ ಜೊತೆಗೆ, ಗಡ್ಡ– ಮೀಸೆಯಲ್ಲಿ ಕೂಡ ಬಿಳಿ ಕೂದಲು ಅಲ್ಲಲ್ಲಿಇಣುಕುತ್ತಿರುತ್ತದೆ! ಈ ಸಮಸ್ಯೆ ಇರುವವರಿಗೆ ಇಲ್ಲಿದೆ ನೋಡಿ ಸಿಂಪಲ್ ಮನೆಮದ್ದುಗಳು
ಕೆಲವರಿಗೆ ಮುಖದಲ್ಲಿ ಗಡ್ಡ–ಮೀಸೆ ಇದ್ದರೆ, ನೋಡಲು ಚೆನ್ನಾಗಿ ಕಾಣುತ್ತಾರೆ. ಇನ್ನೂ ಕೆಲವರಿಗೆ ಗಡ್ಡ ಮೀಸೆ ಇಲ್ಲದಿದ್ದರೆ, ನೋಡಲುಜೆಂಟಲ್ ಮೆನ್ ರೀತಿಯಾಗಿ ಕಾಣುತ್ತಾರೆ. ಆದರೆ ಇತ್ತೀಚಿನ ಫ್ಯಾಷನ್ ತಕ್ಕ ಹಾಗೆ ಪುರುಷರು, ಒಮ್ಮೆ ಗಡ್ಡ ಮೀಸೆ ಬೆಳೆಸಿದರೆ, ಇನ್ನೊಮ್ಮೆ, ಕ್ಲೀನ್ ಶೇವ್ ಮಾಡಿ ಕೊಂಡು ಬಿಡುತ್ತಾರೆ. ಆದರೆ ಕೆಲವರಿಗೆ ಗಡ್ಡ ಮೀಸೆ ಬಿಡಲು ಇಷ್ಟವಿರುತ್ತದೆ, ಆದರೆ ಏನುಮಾಡುವುದು, ಅಲ್ಲಲ್ಲಿ ಇಣುಕುವ ಈ ಬಿಳಿ ಕೂದಲಿನ ಸಮಸ್ಯೆಗಳಿಂದಾಗಿ, ನೀಟ್ ಆಗಿ ಶೇವಿಂಗ್ ಮಾಡಿ ಬಿಡುವುದೇ ಲೇಸುಎಂದು ಭಾವಿಸುತ್ತಾರೆ.
ಇದಕ್ಕೆಲ್ಲಾ ಕಾರಣಗಳನ್ನು ನೋಡುವುದಾದರೆ, ಅನಾರೋಗ್ಯಕರ ಆಹಾರ ಪದ್ಧತಿ ಹಾಗೂ ಕೆಟ್ಟ ಜೀವನ ಶೈಲಿಯ ಜೊತೆಗೆ ದೇಹದಲ್ಲಿಆದ ಕೆಲವೊಂದು ಹಾರ್ಮೋನುಗಳ ವ್ಯತ್ಯಾಸದಿಂದಾಗಿ ಸಣ್ಣ ವಯಸ್ಸಿನಲ್ಲಿಯೇ, ಪುರುಷರಲ್ಲಿ ಗಡ್ಡ–ಮೀಸೆ ಬೆಳ್ಳಗಾಗುವ ಸಮಸ್ಯೆಎದುರಾಗುತ್ತದೆ. ಹಾಗಂತ ಇದನ್ನು ಮುಚ್ಚಿಡಲು ದಿನನಿತ್ಯ ಶೇವಿಂಗ್ ಮಾಡಲು ಆಗುತ್ತದೆಯಾ? ಇದು ಖಂಡಿತವಾಗಿಯೂ ಆಗುಹೋಗುವಂತಹ ಮಾತಲ್ಲ!
ಹಾಗಾದ್ರೆ ಇದಕ್ಕೆ ಪರಿಹಾರವೇ ಇಲ್ಲವೇ ಎನ್ನುವ ನಿಮ್ಮ ಪ್ರಶ್ನೆಯಾಗಿದ್ದರೆ, ಅದಕ್ಕೆ ಉತ್ತರ ಇಲ್ಲಿದೆ ನೋಡಿ… ಸ್ವಲ್ಪ ತಾಳ್ಮೆಯಿಂದಕೆಲವೊಂದು ಮನೆ ಮದ್ದುಗಳಿಂದ ಪ್ರತಿನಿತ್ಯ ಅನುಸರಿಸಿಕೊಂಡು ಹೋದರೆ, ಖಂಡಿತವಾಗಿಯೂ ಈ ಸಮಸ್ಯೆ ಯನ್ನು ಯಾವುದೇಅಡ್ಡಪರಿಣಾಮಗಳು ಇಲ್ಲದೆ ಶಾಶ್ವತವಾಗಿ ನಿವಾರಿಸಿಕೊಳ್ಳಬಹುದು.
ಮೊದಲಿಗೆ ಒಂದೆರಡು ಟೇಬಲ್ ಚಮಚ ಆಗುವಷ್ಟು ಬಿಳಿ ಎಳ್ಳನ್ನುರಾತ್ರಿ ಮಲಗುವ ಮುನ್ನ ನೀರಿನಲ್ಲಿ ನೆನೆಹಾಕಿ.
- ಇನ್ನು ಮರುದಿನ ಈ ನೆನೆಸಿಟ್ಟ ಬಿಳಿ ಎಳ್ಳನ್ನು ಮಿಕ್ಸರ್ ಜಾರ್‌ನಲ್ಲಿ, ನೆನೆಸಿಟ್ಟ ನೀರಿನ ಸಮೇತ ಹಾಕಿಕೊಂಡು, ಚೆನ್ನಾಗಿ ರುಬ್ಬಿಕೊಳ್ಳಿ. ಸ್ವಲ್ಪ ದಪ್ಪಗೆ ಪೇಸ್ಟ್ ರೀತಿಯಾಗಿ ಮಾಡಿಕೊಂಡರೆ ಒಳ್ಳೆಯದು.
- ಇನ್ನು ನಿಮ್ಮ ಗಡ್ಡ ಇಲ್ಲಾಂದ್ರೆ ಮೀಸೆಯ ಯಾವ ಭಾಗದಲ್ಲಿ ಹೆಚ್ಚಾಗಿ ಬಿಳಿ ಕೂದಲಿನ ಸಮಸ್ಯೆ ಕಂಡುಬರತ್ತಿದೆಯೋಅಲ್ಲಿಗೆಲ್ಲಾ ಈ ಪೇಸ್ಟ್ ನ್ನು ದಪ್ಪಗೆ ಹಚ್ಚಿ.
- ನಂತರ ಸುಮಾರು ಅರ್ಧ ಗಂಟೆಯವರೆಗೆ ಹಾಗೆಯೇ ಒಣಗಲು ಬಿಡಿ, ನಂತರ ನೀರಿನಿಂದ ತೊಳೆಯಿರಿ. ಉತ್ತಮಫಲಿತಾಂಶಕ್ಕಾಗಿ ವಾರದಲ್ಲಿ ಎರಡು ಮೂರು ಬಾರಿಯಾದರೂ ಈ ಮನೆಮದ್ದನ್ನು ಟ್ರೈ ಮಾಡಿ ನೋಡಿ…
- ಬೇಗಾಗುವ ಸಾಮಾಗ್ರಿಗಳು
- ಒಂದು ಕಪ್ ಆಗುವಷ್ಟು ಮೆಹಂದಿ ಎಲೆಗಳು
- ಒಂದು ಟೇಬಲ್ ನಿಂಬೆ ರಸ
- ಒಂದು ಟೇಬಲ್ ಟೇಬಲ್ ಚಮಚದಷ್ಟು ತೆಂಗಿನ ಎಣ್ಣೆ
- ಒಂದು ಟೇಬಲ್ ಟೇಬಲ್ ಚಮಚದಷ್ಟು ವಿನೆಗರ್
- ಒಂದು ಟೇಬಲ್ ಚಮಚದಷ್ಟು ಸೀಗೆಕಾಯಿ ಪುಡಿ
ತಯಾರು ಮಾಡಿ ಬಳಸುವ ವಿಧಾನ
- ಮೊದಲಿಗೆ ನೀಡಿರುವ ಎಲ್ಲಾ ನೈಸರ್ಗಿಕ ಪದಾರ್ಥಗಳನ್ನು ಒಂದು ಬೌಲ್‌ನಲ್ಲಿ ಹಾಕಿಕೊಂಡು ಚೆನ್ನಾಗಿ ಮಿಕ್ಸ್ಮಾಡಿಕೊಳ್ಳಿ. ಆಮೇಲೆ ಇವುಗಳನ್ನು ಸಣ್ಣ ಮಿಕ್ಸಿ ಜಾರ್‌ಗೆ ಹಾಕಿ, ಚೆನ್ನಾಗಿ ರುಬ್ಬಿ ಕೊಂಡು ಪೇಸ್ಟ್ ರೀತಿಯಾಗಿ ಮಾಡಿಕೊಳ್ಳಿ. ಆಮೇಲೆ ಇದನ್ನು ಇನ್ನೊಂದು ಪಾತ್ರೆಗೆ ವರ್ಗಾಹಿಸಿ, ಸ್ವಲ್ಪ ಹೊತ್ತು ಹಾಗೆಯೇ ಬಿಡಿ.
- ಇನ್ನು ಈ ಪೇಸ್ಟ್‌ನ್ನು ಗಡ್ಡ ಅಥವಾ ಮೀಸೆಯಲ್ಲಿ ಕಂಡುಬರುವ ಬಿಳಿ ಕೂದಲಿನ ಸಮಸ್ಯೆ ಇರುವ ಕಡೆಗೆಲ್ಲಾ ಹಚ್ಚಿ, ಸುಮಾರು ಅರ್ಧ ಗಂಟೆಗಳವರೆಗೆ ಹಾಗೆಯೇ ಬಿಡಿ. ಆಮೇಲೆ ತಣ್ಣೀರಿನಿಂದ ತೊಳೆಯಿರಿ, ಉತ್ತಮ ಫಲಿತಾಂಶಕ್ಕಾಗಿವಾರದಲ್ಲಿ ಎರಡು ಮೂರು ಬಾರಿಯಾದರೂ ಈ ಮನೆಮದ್ದನ್ನು ಟ್ರೈ ಮಾಡಿ ನೋಡಿ.
ತೆಂಗಿನ ಎಣ್ಣೆ ಮತ್ತು ನಿಂಬೆರಸ
- ಒಂದು ಬೌಲ್‌ಗೆ ಶುದ್ಧ ಒಂದೆರಡು ಚಮಚ ತೆಂಗಿನ ಎಣ್ಣೆ ಹಾಗೂ ಒಂದು ಚಮಚ ನಿಂಬೆರಸವನ್ನು ಹಾಕಿ ಚೆನ್ನಾಗಿಮಿಕ್ಸ್ ಮಾಡಿಕೊಳ್ಳಿ.
- ನಂತರ ಗಡ್ಡ ಅಥವಾ ಮೀಸೆಯ ಭಾಗದಲ್ಲಿ ಅಲ್ಲಲ್ಲಿ ಇಣುಕುತ್ತಿರುವ, ಬಿಳಿ ಕೂದಲಿಗೆ ಈ ಮಿಶ್ರಣವನ್ನು ಹಚ್ಚಿ. ಸುಮಾರು ಒಂದೆರಡು ಗಂಟೆಗಳವರೆಗೆ ಹಾಗೆಯೇ ಬಿಡಿ, ಆಮೇಲೆ, ಗಡ್ಡ– ಮೀಸೆಯ ಕೂದಲನ್ನು ನೀರಿನಿಂದ ತೊಳೆಯಿರಿ. ಉತ್ತಮ ಫಲಿತಾಂಶಕ್ಕಾಗಿ ವಾರದಲ್ಲಿ ಮೂರು ನಾಲ್ಕು ಬಾರಿ ಈ ಪ್ರಕ್ರಿಯೆಯನ್ನು ಮುಂದುವರೆಸಿ.
ಬ್ಲ್ಯಾಕ್ ಟೀ ಎಲೆಗಳು
- ಒಂದು ಪಾತ್ರೆಯಲ್ಲಿ ನೀರನ್ನು ಹಾಕಿ, ಚೆನ್ನಾಗಿ ಕುದಿಸಿಕೊಳ್ಳಿ. ಆಮೇಲೆ ಈ ಕುದಿ ಬಂದಿರುವ ನೀರಿಗೆ ಸ್ವಲ್ಪ ಬ್ಲ್ಯಾಕ್ಟೀ ಎಲೆಗಳನ್ನು ಹಾಕಿ, ಇನ್ನೊಮ್ಮೆ ಎರಡು ಮೂರು ನಿಮಿಷಗಳವರೆಗೆ ಕುದಿಸಿಕೊಳ್ಳಿ. ಆಮೇಲೆ ಗ್ಯಾಸ್ ಸ್ಟೌವ್ ಅಫ್ ಮಾಡಿ, ಈ ನೀರನ್ನು ತಣಿಯಲು ಬಿಡಿ.
- ಒಮ್ಮೆ ಈ ನೀರು ತಣಿದ ಬಳಿಕ, ಈ ಬ್ಲ್ಯಾಕ್ ಟೀ ಎಲೆಗಳಿಂದ, ನೀರನ್ನು ಚೆನ್ನಾಗಿ ಹಿಂಡಿ ತೆಗೆಯಿರಿ, ಆಮೇಲೆ ಆನೀರನ್ನು ಗಡ್ಡದ ಬಿಳಿ ಕೂದಲುಗಳ ಮೇಲೆ ಹಚ್ಚಿ, ಸುಮಾರು ಒಂದೆರಡು ಗಂಟೆಗಳವರೆಗೆ ಹಾಗಯೇ ಬಿಡಿ. ಆಮೇಲೆತಣ್ಣನೆಯ ನೀರಿನಲ್ಲಿ ಚೆನ್ನಾಗಿ ತೊಳೆದುಕೊಳ್ಳಿ.