ಎಲ್ಲರ ಸಹಕಾರದಿಂದ ಸಾಧ್ಯವಾದ ಸಾಧನೆ.
80ನೇ ಬಡಗಬೆಟ್ಟು ವ್ಯಾಪ್ತಿಯಲ್ಲಿ ಮನೆ ಮನೆಗೆ ಕುಡಿಯುವ ನೀರು ಪೊರೈಸುವ ಕೇಂದ್ರ ಸರಕಾರದ ಮಹತ್ವಕಾಂಕ್ಷಿ ಯೋಜನೆಯನ್ನು ಸಮರ್ಥವಾಗಿ ಅನುಷ್ಠಾನ ಮಾಡುವಲ್ಲಿ ಉಡುಪಿ ಜಿಲ್ಲಾ ಪಂಚಾಯತಿ ಅಧಿಕಾರಿಗಳು, ನಮ್ಮಗ್ರಾಮ ಪಂಚಾಯತಿನ ಪಿ.ಡಿ.ಓ, ಕಾರ್ಯದರ್ಶಿ, ಸರ್ವ ಸದಸ್ಯರು ಸಿಬ್ಬಂದಿವರ್ಗ ಹಾಗೂ ಗ್ರಾಮಸ್ತರ ಸಂಪೂರ್ಣ ಸಹಕಾರವೇ ಕಾರಣವಾಗಿದ್ದು ಎಲ್ಲರನ್ನೂ ಅಭಿನಂದಿಸುತ್ತೇನೆ. ನಮ್ಮ ಪಂಚಾಯತಿಯ ಈ ಸಾಧನೆ ಗಮನಿಸಿ ಜ.26ರಂದು ದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವಕ್ಕೆ ಪಾಲ್ಗೊಳ್ಳಲು ಕೇಂದ್ರ ಸರಕಾರ ಆಹ್ವಾನ ನೀಡಿರುವುದು ಸಂತಸದ ಹಾಗೂ ಹೆಮ್ಮೆ ತಂದಿದೆ ಎಂದು ಗ್ರಾಮ ಪಂಚಾಯತ್ ಅಧ್ಯಕ್ಷರಾಗಿರುವ ಕೇಶವ ಕೋಟ್ಯಾನ್ ತಿಳಿಸಿದ್ದಾರೆ.