TOP STORIES:

10ನೇ ಅಖಿಲ ಭಾರತ ಅರ್ಬನ್ ಕೋ-ಆಪರೇಟಿವ್ ಬ್ಯಾಂಕಿಂಗ್ ಶೃಂಗಸಭೆಯಲ್ಲಿ ಭಾರತ್ ಬ್ಯಾಂಕಿಗೆ ಪ್ರತಿಷ್ಠಿತ ಲೀಡಿಂಗ್ ಬ್ಯಾಂಕ್ ಅವಾರ್ಡ್.


ಪುಣೆಯ ಕೊರೆಗಾಂವ್ ಪಾರ್ಕ್‌ನ ಹೋಟೆಲ್ ವೆಸ್ಟಿನ್‌ನಲ್ಲಿ ನಡೆದ 10ನೇ ಅಖಿಲ ಭಾರತ ಅರ್ಬನ್ ಕೋ-ಆಪರೇಟಿವ್ ಬ್ಯಾಂಕಿಂಗ್ ಶೃಂಗಸಭೆಯಲ್ಲಿ ಭಾರತ್ ಬ್ಯಾಂಕಿಗೆ ಪ್ರತಿಷ್ಠಿತ “ಲೀಡಿಂಗ್ ಬ್ಯಾಂಕ್ ಅವಾರ್ಡ್” (Leading Bank Award) ನೀಡಿ ಗೌರವಿಸಲಾಯಿತು.

ಈ ಪ್ರಶಸ್ತಿಯನ್ನು ಕ್ರೆಸ್ಟ್ ಇನ್ಫೋಮೀಡಿಯಾದ ಸಂಸ್ಥಾಪಕರಾದ ಶ್ರೀ ಗೌತಮ್ ನವೀನ್ ಭಾರತ್ ಬ್ಯಾಂಕಿನ ಕಾರ್ಯಾಧ್ಯಕ್ಷರಾದ ಶ್ರೀ ಸೂರ್ಯಕಾಂತ್ ಜಯ ಸುವರ್ಣ ಅವರಿಗೆ ನೀಡಿ ಗೌರವಿಸಿದರು. ಈ ಸಂದರ್ಭದಲ್ಲಿ ಭಾರತ್ ಬ್ಯಾಂಕಿನ ಜಂಟಿ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ದಿನೇಶ್ ಬಿ. ಸಾಲ್ಯಾನ್ ಮತ್ತು ಸಹಾಯಕ ಮಹಾ ಪ್ರಬಂಧಕರಾದ ಶ್ರೀ ರಾಜೇಶ್ ಅಮಿನ್ ಉಪಸ್ಥಿತರಿದ್ದರು.

ಕಾರ್ಯಾಧ್ಯಕ್ಷರ ದೂರದೃಷ್ಟಿ

ಈ ಸಂದರ್ಭದಲ್ಲಿ ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದ ಭಾರತ್ ಬ್ಯಾಂಕಿನ ಕಾರ್ಯಾಧ್ಯಕ್ಷರಾದ ಶ್ರೀ ಸೂರ್ಯಕಾಂತ್ ಜಯ ಸುವರ್ಣ ಅವರು “ಇಂದು ಭಾರತ್ ಬ್ಯಾಂಕ್ ಪಡೆದಿರುವ ಈ ಗೌರವವು ಕೇವಲ ಒಬ್ಬ ವ್ಯಕ್ತಿಯದ್ದಲ್ಲ, ಇದು ನಮ್ಮ ನಿರ್ದೇಶಕ ಮಂಡಳಿ, ಆಡಳಿತ ಮಂಡಳಿ ಮತ್ತು ನಮ್ಮ ಸಿಬ್ಬಂದಿ ವರ್ಗದವರ ಅಚಲ ಬೆಂಬಲಕ್ಕೆ ಸಂದ ಜಯವಾಗಿದೆ. ನಮ್ಮ ಬ್ಯಾಂಕಿನ ಯಶಸ್ಸಿನ ಪಯಣವು ಹಣಕಾಸಿನ ಸ್ಥಿರತೆ, ಅತ್ಯಾಧುನಿಕ ತಂತ್ರಜ್ಞಾನದ ಅಳವಡಿಕೆ ಮತ್ತು ಗ್ರಾಹಕ ಕೇಂದ್ರಿತ ಸೇವೆ ಎಂಬ ಮೂರು ಗಟ್ಟಿ ಸ್ತಂಭಗಳ ಮೇಲೆ ನಿಂತಿದೆ. ನಾವು ಬ್ಯಾಂಕಿಗೆ ಕೇವಲ ಲಾಭದ ಗುರಿಯನ್ನು ಮಾತ್ರ ನೀಡದೆ, ಸ್ಪಷ್ಟವಾದ ಸಾಮಾಜಿಕ ಉದ್ದೇಶ ಮತ್ತು ದಿಕ್ಕನ್ನು ನೀಡುವಲ್ಲಿ ಸದಾ ಕಾರ್ಯಪ್ರವೃತ್ತರಾಗಿದ್ದೇವೆ.

ನಂಬಿಕೆ, ಪ್ರಾಮಾಣಿಕತೆ ಮತ್ತು ನಿಸ್ವಾರ್ಥ ಸೇವಾ ಮನೋಭಾವವು ನಮ್ಮ ಬ್ಯಾಂಕಿನ ಮೂಲ ಮೌಲ್ಯಗಳಾಗಿವೆ. ಈ ಮೌಲ್ಯಗಳನ್ನು ನಾವು ಸದಾ ಎತ್ತಿ ಹಿಡಿಯುತ್ತೇವೆ. ಕೇವಲ ಆರ್ಥಿಕ ಅಂಕಿಅಂಶಗಳ ಬೆಳವಣಿಗೆಯಷ್ಟೇ ನಮ್ಮ ಗುರಿಯಲ್ಲ, ಸಂಸ್ಥೆಯ ಆಂತರಿಕ ಮೌಲ್ಯಗಳ ಅಭಿವೃದ್ಧಿಯೂ ಅಷ್ಟೇ ಮುಖ್ಯವಾಗಿದೆ. ಇದು ನಮ್ಮ ಗ್ರಾಹಕರ ಮತ್ತು ಗೌರವಾನ್ವಿತ ಸದಸ್ಯರ ಸಂಪೂರ್ಣ ವಿಶ್ವಾಸವನ್ನು ಗಳಿಸಲು ನಮಗೆ ಶಕ್ತಿ ನೀಡಿದೆ. ಈ ಪ್ರಶಸ್ತಿಯು ನಮ್ಮ ಜವಾಬ್ದಾರಿಯನ್ನು ಇನ್ನಷ್ಟು ಹೆಚ್ಚಿಸಿದೆ ಎಂದು ಅವರು ನುಡಿದರು..

ಭಾರತ್ ಬ್ಯಾಂಕ್ ಈಗಾಗಲೇ ರಾಜ್ಯ ಮತ್ತು ರಾಷ್ಟ್ರ ಮಟ್ಟದ ಸಂಸ್ಥೆಗಳಿಂದ 80 ಕ್ಕಿಂತ ಹೆಚ್ಚು ಪ್ರಶಸ್ತಿಗಳನ್ನು ಪಡೆದಿದ್ದು ಈ ಪ್ರಶಸ್ತಿಯು ಬ್ಯಾಂಕಿನ ನಿರ್ದೇಶಕ ಮಂಡಳಿ, ಆಡಳಿತ ಮಂಡಳಿ ಮತ್ತು ಸಿಬ್ಬಂದಿಗಳ ನಿರಂತರ ಶ್ರಮ ಮತ್ತು ಸಮರ್ಪಣೆಗೆ ದೊರೆತ ಮಾನ್ಯತೆಯಾಗಿದೆ.

ಭಾರತ್ ಬ್ಯಾಂಕ್ ಸುಮಾರು ₹19000 ಕೋಟಿಗಿಂತಲೂ ಹೆಚ್ಚು ವ್ಯವಹಾರ ನಡೆಸುತ್ತಿರುವ ಸಂಸ್ಥೆಯಾಗಿದ್ದು, ಇದು ಸತತವಾಗಿ ‘A’ ವರ್ಗದ ಲೆಕ್ಕ ಪರಿಶೋಧನೆ (Audit Classification) ಪಡೆದಿದೆ. ಇದು ಬ್ಯಾಂಕ್‌ನ ಹಣಕಾಸಿನ ಶಿಸ್ತು, ಪಾರದರ್ಶಕತೆ ಮತ್ತು ನಿಯಮಗಳ ಪಾಲನೆಯ ಬಗ್ಗೆ ಉನ್ನತ ಮಟ್ಟದ ಬದ್ಧತೆಯನ್ನು ತೋರಿಸುತ್ತದೆ. ಇದು ಬ್ಯಾಂಕಿನ ಎಲ್ಲ ಹಂತದ ಸಿಬ್ಬಂದಿಗಳ ಮತ್ತು ನಿರ್ದೇಶಕ ಮಂಡಳಿಯ ನಿರಂತರ ಶ್ರಮದ ಫಲಿತಾಂಶವಾಗಿದೆ.

ಬ್ಯಾಂಕ್ ತನ್ನ ಬಂಡವಾಳ ಸಾಕಷ್ಟತೆ ಅನುಪಾತ (CRAR – Capital to Risk-weighted Assets Ratio) ಅನ್ನು ಯಾವಾಗಲೂ RBI ನಿಗದಿಪಡಿಸಿದ ಮಿತಿಗಿಂತ ಮೇಲ್ಮಟ್ಟದಲ್ಲಿ ಕಾಪಾಡಿಕೊಂಡಿದೆ.

ಗ್ರಾಹಕ ಸೇವೆ ಮತ್ತು ಅಭಿವೃದ್ಧಿ

ಭಾರತ್ ಬ್ಯಾಂಕ್ ಕೇವಲ ಆರ್ಥಿಕ ಸಂಸ್ಥೆ ಮಾತ್ರವಲ್ಲ, ಸಮಾಜದ ಸರ್ವಾಂಗೀಣ ಅಭಿವೃದ್ಧಿಗೆ ಪ್ರತಿಬದ್ಧವಾದ ಸಂಸ್ಥೆಯಾಗಿದ್ದು. ಸಣ್ಣ ವ್ಯಾಪಾರಿಗಳು, ಮಹಿಳಾ ಉದ್ಯಮಿಗಳು ಮತ್ತು ಸಾಮಾನ್ಯ ಜನರಿಗೆ ಸೂಕ್ತ ಸಾಲ ಮತ್ತು ಠೇವಣಿ ಸೇವೆ ನೀಡುವ ಮೂಲಕ ಬ್ಯಾಂಕ್ ಸಮಾಜದ ಆರ್ಥಿಕ ಸಶಕ್ತೀಕರಣಕ್ಕೆ ತನ್ನ ಕೊಡುಗೆ ನೀಡುತ್ತಿದೆ.

ಡಿಜಿಟಲ್ ಬ್ಯಾಂಕಿಂಗ್ – ಗ್ರಾಹಕರಿಗಾಗಿ ಉತ್ತಮ ಬ್ಯಾಂಕಿಂಗ್

ಇಂದಿನ ಬದಲಾಗುತ್ತಿರುವ ಜಗತ್ತಿನಲ್ಲಿ ಗ್ರಾಹಕರ ಅಗತ್ಯಗಳು ಸಹ ಬದಲಾಗಿವೆ. ಜನರಿಗೆ ಬ್ಯಾಂಕಿಂಗ್ ಸರಳವಾಗಿ, ವೇಗವಾಗಿ ಮತ್ತು ಅವರ ಜೀವನದ ಒಂದು ಅಂಗವಾಗಿ ಲಭ್ಯವಾಗಬೇಕು ಎಂಬ ಭಾವನೆ ಇದೆ. ಈ ನಿಟ್ಟಿನಲ್ಲಿ ಭಾರತ್ ಬ್ಯಾಂಕ್ ತಂತ್ರಜ್ಞಾನದಲ್ಲಿ ನಿರಂತರ ಹೂಡಿಕೆ ಮಾಡುತ್ತಾ, ಗ್ರಾಹಕರಿಗೆ ಹೆಚ್ಚು ಅನುಕೂಲಕರ ಮತ್ತು ಉತ್ತಮ ಬ್ಯಾಂಕಿಂಗ್ ಅನುಭವ ನೀಡಲು ಸದಾ ಶ್ರಮಿಸುತ್ತಿದೆ.

ಬ್ಯಾಂಕ್ ತಂತ್ರಜ್ಞಾನವನ್ನು ಕೇವಲ ಒಂದು ಸಾಧನವಾಗಿ ಮಾತ್ರ ನೋಡದೆ, ಗ್ರಾಹಕರ ಅಗತ್ಯತೆಯನ್ನು ಸುಲಭಗೊಳಿಸುವ ಒಂದು ಮಾರ್ಗವಾಗಿ ಕಂಡಿದೆ. ಬ್ಯಾಂಕಿನ ತಂತ್ರಜ್ಞಾನ ಹೂಡಿಕೆ ಗ್ರಾಹಕರ ಸಮಯ ಮತ್ತು ಶ್ರಮ ಉಳಿತಾಯ ಮಾಡುವ ಉದ್ದೇಶದಿಂದ ಮಾಡಲ್ಪಡುತ್ತಿದ್ದು, ಪ್ರತಿಯೊಬ್ಬ ಗ್ರಾಹಕನಿಗೂ ಬ್ಯಾಂಕ್ ಸೇವೆ ಸುಲಭ ಮತ್ತು ಸಂತೋಷದಾಯಕ ಅನುಭವವಾಗಬೇಕು ಎಂಬ ಗುರಿ ಸ್ಪಷ್ಟವಾಗಿದೆ.

ಬ್ಯಾಂಕಿನ ಮುಖ್ಯ ಧ್ಯೇಯ ಎಂದರೆ – ತಂತ್ರಜ್ಞಾನ ಗ್ರಾಹಕರನ್ನು ಬ್ಯಾಂಕ್‌ನಿಂದ ದೂರ ಮಾಡಬಾರದು, ಬದಲಾಗಿ ಇನ್ನಷ್ಟು ಹತ್ತಿರ ತರಬೇಕು. ಇದೇ ತತ್ತ್ವದ ಮೇಲೆ ಬ್ಯಾಂಕ್ ತನ್ನ ಡಿಜಿಟಲ್ ಯಾತ್ರೆ ಮುಂದುವರೆಸುತ್ತಿದೆ. ಗ್ರಾಹಕರಿಗೆ ಯಾವಾಗ, ಎಲ್ಲಿ ಬೇಕಾದರೂ ತಮ್ಮ ಆರ್ಥಿಕ ವ್ಯವಹಾರ ನಿರ್ವಹಿಸಲು ಅನುಕೂಲ ಮಾಡಿಕೊಡುವ ಮೂಲಕ ಭಾರತ್ ಬ್ಯಾಂಕ್ ಒಂದು ನಂಬಿಕಸ್ಥ ಡಿಜಿಟಲ್ ಭಾಗೀದಾರನಾಗಿ ರೂಪುಗೊಂಡಿದೆ.


Related Posts

ರಾಜ್ಯದಲ್ಲಿ ರಚನೆಯಾಗಲಿರುವ ನೂತನ ಸಚಿವ ಸಂಪುಟ ಸಚಿವ ಸಂಪುಟದಲ್ಲಿ ಬಿಲ್ಲವ ಸಮಾಜಕ್ಕೆ ಸೂಕ್ತ ಪ್ರಾತಿನಿಧ್ಯ ನೀಡಬೇಕು


Share         ಹಿರಿಯ ಕಾಂಗ್ರೆಸ್ ನಾಯಕ ಬಿ.ಕೆ. ಹರಿಪ್ರಸಾದ್ ಅವರಿಗೆ ಸಚಿವ ಸ್ಥಾನ ನೀಡಬೇಕು ಬಿಲ್ಲವ ಸಮಾಜಕ್ಕೆ ನ್ಯಾಯಯುತ ಪ್ರಾತಿನಿಧ್ಯ ಒದಗಿಸಬೇಕು ಸೋಲೂರು ಮಠದ ಪೀಠಾಧಿಪತಿಗಳಾದ ಶ್ರೀ ಶ್ರೀ ವಿಖ್ಯಾತಾನಂದ ಸ್ವಾಮೀಜಿ ಆಗ್ರಹ ರಾಜ್ಯದಲ್ಲಿ ರಚನೆಯಾಗಲಿರುವ


Read More »

ಕುಂದಾಪುರ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷರಾಗಿ ಅಶೋಕ್ ಪೂಜಾರಿ ಪುನಾರಾಯ್ಕೆ


Share         ಕುಂದಾಪುರ, ಮೇ 24: ಬಿಲ್ಲವ ಸಮಾಜ ಸೇವಾ ಸಂಘ ಕುಂದಾಪುರ ಇದರ 2025-26ನೇ ಸಾಲಿನ ವಾರ್ಷಿಕ ಮಹಾಸಭೆಯು ರವಿವಾರ ಶ್ರೀ ನಾರಾಯಣ ಗುರು ಕಲ್ಯಾಣ ಮಂಟಪದಲ್ಲಿ ಜರಗಿತು. ಕುಂದಾಪುರ ಬಿಲ್ಲವ ಸಮಾಜ ಸೇವಾ


Read More »

ನಿಸ್ವಾರ್ಥ ಸೇವೆ ಸಲ್ಲಿಸಿ “ಜನಸ್ನೇಹಿ ಪೊಲೀಸ್” ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ನಮ್ಮ ಸಮಾಜದ ಹೆಮ್ಮೆ ಎಸಿಪಿ ಶ್ರೀ ಎಸ್. ಮಹೇಶ್ ಕುಮಾರ್


Share         ಶ್ರೀ ಎಸ್. ಮಹೇಶ್ ಕುಮಾರ್ ಅವರು ಕಳೆದ 25 ವರ್ಷಗಳಿಂದ ಪೊಲೀಸ್ ಇಲಾಖೆಯಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸಿ “ಜನಸ್ನೇಹಿ ಪೊಲೀಸ್” ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವುದು ಅವರ ಕರ್ತವ್ಯನಿಷ್ಠೆ ಮತ್ತು ಮಾನವೀಯತೆಯ ಪ್ರತೀಕವಾಗಿದೆ. 2012ರಲ್ಲಿ


Read More »

10ನೇ ಅಖಿಲ ಭಾರತ ಅರ್ಬನ್ ಕೋ-ಆಪರೇಟಿವ್ ಬ್ಯಾಂಕಿಂಗ್ ಶೃಂಗಸಭೆಯಲ್ಲಿ ಭಾರತ್ ಬ್ಯಾಂಕಿಗೆ ಪ್ರತಿಷ್ಠಿತ ಲೀಡಿಂಗ್ ಬ್ಯಾಂಕ್ ಅವಾರ್ಡ್.


Share         ಪುಣೆಯ ಕೊರೆಗಾಂವ್ ಪಾರ್ಕ್‌ನ ಹೋಟೆಲ್ ವೆಸ್ಟಿನ್‌ನಲ್ಲಿ ನಡೆದ 10ನೇ ಅಖಿಲ ಭಾರತ ಅರ್ಬನ್ ಕೋ-ಆಪರೇಟಿವ್ ಬ್ಯಾಂಕಿಂಗ್ ಶೃಂಗಸಭೆಯಲ್ಲಿ ಭಾರತ್ ಬ್ಯಾಂಕಿಗೆ ಪ್ರತಿಷ್ಠಿತ “ಲೀಡಿಂಗ್ ಬ್ಯಾಂಕ್ ಅವಾರ್ಡ್” (Leading Bank Award) ನೀಡಿ ಗೌರವಿಸಲಾಯಿತು.


Read More »

ಕುದ್ರೋಳಿ ಗೋಕರ್ಣ ಕ್ಷೇತ್ರ ಅಭಿವೃದ್ಧಿ ರೂವಾರಿ ಬಿ. ಜನಾರ್ದನ ಪೂಜಾರಿ ಅವರ ಉಪಸ್ಥಿತಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಪದ್ಮರಾಜ್ ಆರ್. ಸ್ಪಷ್ಟನೆ


Share         ಮಂಗಳೂರು: ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ಆಡಳಿತ ನಿರ್ವಹಣೆಗೆ ಪ್ರಸ್ತುತ ಇರುವ ಸಮಿತಿಯ ಹೊರತಾಗಿ ಯಾವುದೇ ಹೊಸ ಸಮಿತಿ ರಚನೆಯಾಗಿಲ್ಲ ಎಂದು ಸಮಿತಿಯ ಕೋಶಾಧಿಕಾರಿ ಪದ್ಮರಾಜ್ ಆರ್. ಶನಿವಾರ ಇಲ್ಲಿ ತಿಳಿಸಿದರು. ಕ್ಷೇತ್ರದ ಅಭಿವೃದ್ಧಿ


Read More »

ಶೈಕ್ಷಣಿಕ ಸಾಧನೆಯಲ್ಲೂ ‘ಸೇಮ್ ಟು ಸೇಮ್’: ಕುಂದಾಪುರದ ಅವಳಿ ಸಹೋದರಿಯರ SSLC ಪವಾಡ!


Share         ​ಕುಂದಾಪುರ: ಅವಳಿ ಜವಳಿ ಮಕ್ಕಳು ಅಂದಮೇಲೆ ಅವರ ರೂಪ, ಬಣ್ಣ, ನಡವಳಿಕೆ ಹಾಗೂ ಆಲೋಚನೆಗಳಲ್ಲಿ ಸಾಮ್ಯತೆ ಇರುವುದು ಸಹಜ ಸಂಗತಿ. ಆದರೆ, ಕುಂದಾಪುರದ ಈ ಇಬ್ಬರು ಸಹೋದರಿಯರು ಶೈಕ್ಷಣಿಕ ಸಾಧನೆಯಲ್ಲೂ ತಾವು ಸಂಪೂರ್ಣವಾಗಿ


Read More »