ಯುವವಾಹಿನಿ(ರಿ) ಕೂಳೂರು ಘಟಕ ಪದಗ್ರಹಣ ಸಮಾರಂಭದಲ್ಲಿ ಗೆಜ್ಜೆಗಿರಿ ಜಾತ್ರಾ ಮಹೋತ್ಸವದ ಆಮಂತ್ರಣ ಬಿಡುಗಡೆ
ಗೆಜ್ಜೆಗಿರಿಯ ಜಾತ್ರಾ ಮಹೋತ್ಸವದ ಆಮಂತ್ರಣ ಪತ್ರಿಕೆ ಯುವವಾಹಿನಿ ಪದಗ್ರಹಣ ಕಾರ್ಯಕ್ರಮದಲ್ಲಿ ಯುವ ವಾಹಿನಿ ಕೇಂದ್ರ ಸಮಿತಿ ಅಧ್ಯಕ್ಷರಾದ ಲೋಕೇಶ್ ಕೋಟ್ಯಾನ್ ಬಿಡುಗಡೆ ಮಾಡಿದರು.
ಗೆಜ್ಜೆಗಿರಿ ಕ್ಷೇತ್ರಾಡಳಿತ ಸಮಿತಿಯ ಅಧ್ಯಕ್ಷರಾದ ರವಿಪೂಜಾರಿ ಚಿಲಿಂಬಿ ಮಾತನಾಡಿ ಗೆಜ್ಜೆಗಿರಿ ನಮ್ಮೆಲ್ಲರಿಗೂ ತಾಯಿ ಮನೆ ಇದ್ದಂತೆ ಗೆಜ್ಜೆಗಿರಿ ಜಾತ್ರಾ ಮಹೋತ್ಸವದ ಸಂಪೂರ್ಣ ಯಶಸ್ವಿಗೆ ಕೂಳೂರು ಯುವವಾಹಿನಿ ತಮ್ಮ ವ್ಯಾಪ್ತಿಯಲ್ಲಿ ಕೆಲಸ ಮಾಡಬೇಕು ಎಂದು ವಿನಂತಿಸಿದರು. ಜಾತ್ರಾ ಮಹೋತ್ಸವ ಕ್ಕೆ ಸಹಸ್ರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಬರುವ ಹಾಗೆ ತಮ್ಮ ಸಹಕಾರ ಅಗತ್ಯ ಹಾಗೂ ಗೆಜ್ಜೆಗಿರಿ ನೀವೆಲ್ಲರೂ ಸೇರಿ ನಿರ್ಮಿಸಿದ ಕ್ಷೇತ್ರ ಎಂದರು. ಈ ಗೆಜ್ಜೆಗಿರಿ ಕ್ಷೇತ್ರದ ಪ್ರಮುಖರು ಉಪಸ್ಥಿತರಿದ್ದರು.