ಮುಂಬಯಿ, (ಆರ್‌ಬಿಐ) ಜ.೧೧ : ಅನಿವಾಸಿ ಭಾರತೀಯ ಸಮಿತಿ ಕರ್ನಾಟಕ ಬಹರೈನ್ ಇದರ ನೂತನ ಸಮಿತಿಯ ಪದಗ್ರಹನ ಹಾಗೂ ಕರ್ನಾಟಕ ಸಂಗಮ ಸಾಂಸ್ಕೃತಿಕ ಕಾರ್ಯಕ್ರಮ ಬಹರೈನ್ ನ ದಿ ಇಂಡಿಯಾನ್ ಕ್ಲಬ್ ಸಭಾಂಗಣದಲ್ಲಿ ನಡೆಯಿತು.
ಕರ್ನಾಟಕ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶೀವರಾಜ್ ತಂಗಡಿಗಿ ರವರು ಪದಗ್ರಹನ ಹಾಗೂ ಕರ್ನಾಟಕ ಸಂಗಮ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು ನಮ್ಮ ಕರ್ನಾಟಕ ರಾಜ್ಯ ಹಾಗೂ ಬಹರೈನ್ ದೇಶಕ್ಕೂ ಯಾವುದೇ ವ್ಯತ್ಯಾಸ ಕಂಡುಬರುತ್ತಿಲ್ಲ. ಬಹರೈನ್ ದೇಶದಲ್ಲಿ ಕನ್ನಡ ಬಹರಗಳು ಹಾಗೂ ಬಾವುಟ ಕಾಣಲು ಸಾಧ್ಯ. ನಾನು ಬಹರೈನ್ ದೇಶದ ರಾಜನಿಗೆ ಅಭಿನಂದನೆ ಸಲ್ಲಿಸುತ್ತೆನೆ. ಕನ್ನಡ ಭಾಷೆ ಸಂಸ್ಕೃತಿ ಉಳಿವಿಗೆ ಅನಿವಾಸಿ ಕನ್ನಡಿಗರ ಕೊಡಿಗೆ ಅಪಾರವಾದುದು ಎಂದು ಹೇಳಿದರು.
ಅನಿವಾಸಿ ಭಾರತೀಯ ಸಮಿತಿ ಕರ್ನಾಟಕ ಬಹರೈನ್ ಇದರ ನೂತನ ಅಧ್ಯಕ್ಷರಾಗಿ ರಾಜ್ ಕುಮಾರ್, ಉಪಾಧ್ಯಕ್ಷರಾಗಿ ವಿಜಯ ನಾಯ್ ವರ್ಕಾಡಿ, ಪ್ರ.ಕಾರ್ಯದರ್ಶಿಯಾಗಿ ರೋಶನ್ ಲೆವೀಸ್, ಕಾರ್ಯದರ್ಶಿಯಾಗಿ ವಿಟ್ಲ ಜಮಾಲುದ್ದೀನ್, ಕೋಶಾಧಿಕಾರಿಯಾಗಿ ಮಂಗೇಶ್ ದೆಸೈ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಗಣೇಶ್ ಮಾಣಿಲ, ಸಾರ್ವಜನಿಕ ಸಂಬಂಧ ಕಾರ್ಯದರ್ಶಿಯಾಗಿ ಅಬ್ದುಲ್ ಜವಾದ್ ಪಾಷ, ಸದಸ್ಯರಾಗಿ ಸುಜಯ್ ಪಿಂಟೋ ಅಧಿಕಾರ ಸ್ವೀಕರಿಸಿದರು.
ಬೆಂಗಳೂರಿನ ಮೈಸೂರು ಮರ್ಚೆಂಟ್ ಕಂಪನಿಯ ಅಧ್ಯಕ್ಷ ಡಾ. ಎಚ್.ಎಸ್ ಶೆಟ್ಟಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ಸರಕಾರಿ ಹಾಗೂ ಅನುದಾನಿತ ಕನ್ನಡ ಶಾಲೆಗಳನ್ನು ಸರಕಾರವೇ ಆಂಗ್ಲ ಮಾಧ್ಯಮ ಶಾಲೆಯಾಗಿ ಪರಿವರ್ತಿಸುತ್ತಿದೆ.ಇದರ ಪರಿಣಾಮವಾಗಿ ಮುಂದಿನ ಮೂವತ್ತು ವರ್ಷಗಳಲ್ಲಿ ಕನ್ನಡ ಮಾತನಾಡುವ ಜನರು ಸಿಗಬಹುದು ಹೊರತು ಕನ್ನಡ ಬರೆಯ ಬಲ್ಲ ವ್ಯಕ್ತಿ ಸಿಗುವುದು ಕಷ್ಟ ಸಾಧ್ಯ ಎಂದು ಹೇಳಿದರು.