ಜ್ಯೋತ್ಸವ ಪರೇಡ್‌ಗೆ ನಾರಾಯಣ ಗುರುಗಳ ಸ್ತಬ್ಧ ಚಿತ್ರ ತಿರಸ್ಕರಿಸಿದ ಕೇಂದ್ರ ಸರ್ಕಾರದ ನಿರ್ಧಾರ ಖಂಡನೀಯ
ಈ ದೇಶದಲ್ಲಿ ಗಣರಾಜ್ಯ ದಿನದಂದು ನಡೆಯುವ ವಿಶೇಷ ಪರೆಡ್‌ನಲ್ಲಿ ಲೋಕಶಾಂತಿಯ ಹರಿಕಾರ ಬ್ರಹ್ಮಶ್ರೀ ನಾರಾಯಣ ಗುರುಗಳಸ್ತಬ್ದ ಚಿತ್ರವನ್ನು ತಿರಸ್ಕರಿಸುವ ಅತ್ಯಂತ ಕೆಟ್ಟ ನಿರ್ಧಾರವನ್ನು ಕೇಂದ್ರ ಸರ್ಕಾರ ಮಾಡಿದೆ. ಸಂವಿಧಾನದ ಆಶಯಗಳನ್ನು ತನ್ನ ಬದುಕುಮತ್ತು ಇಚ್ಚಾಶಕ್ತಿಯ ಮೂಲಕ ಸಾಧಿಸಿ ತೋರಿಸಿದ ಜಗದ್ಗುರುವೆನಿಸಿದವರಿಗೆ ಸಂವಿಧಾನ ಜಾರಿಗೆ ಬಂದ ದಿನವೆ ಅವಮಾನಮಾಡುತ್ತಿರುವ ಕೇಂದ್ರ ಸರ್ಕಾರದ ನಡೆಯಲ್ಲಿ ಇರುವ ಹುನ್ನಾರ ಬಹಿರಂಗಗೊಳ್ಳಬೇಕು.
ಸಾತ್ವಿಕ ಸಂದೇಶಗಳ ಮಾನವೀಯ ಮೌಲ್ಯದಿಂದ ಒಮ್ಮತದ ಸಮಾಜವನ್ನು ಪ್ರತಿಪಾದಿಸಿದ ಗುರುಗಳ ಅದರ್ಶ ಪ್ರಸ್ತುತ ಅತಿಅಗತ್ಯವೆನಿಸಿದೆ.ಕೇರಳ ಸರ್ಕಾರದ ಶಿಫಾರಸ್ಸನ್ನು ತಿರಸ್ಕರಿಸಿರುವ ಕೇಂದ್ರ ಸರ್ಕಾರ ಈ ಕೂಡಲೆ ನಿರ್ಧಾರ ಬದಲಾಯಿಸಬೇಕೆಂಬುದೆನಮ್ಮ ಒತ್ತಾಯ.ಧಾರ್ಮಿಕ, ಸಾಮಾಜಿಕ,ಶೈಕ್ಷಣಿಕ ಸಂಚಲನ ಮೂಡಿಸಿ ಸಮಾಜ ಸುಧಾರಣೆ ಮಾಡಿದ ಸರ್ವಶ್ರೇಷ್ಠ ಸಂತನಿಗೆ ಸೂಕ್ತಗೌರವವನ್ನು ನೀಡಬೇಕೆಂಬುದು ನಮ್ಮ ಆಗ್ರಹವಾಗಿದೆ.
ಪ್ರವೀಣ್ ಎಂ ಪೂಜಾರಿ
ಅಧ್ಯಕ್ಷರು
ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆ (ರಿ).