ಮಂಗಳೂರು: ಸುರತ್ಕಲ್ ಟೋಲ್ ಡಿ.1ರಿಂದ ರದ್ದಾಗಿದ್ದುಉದ್ಯೋಗ ಕಳೆದುಕೊಂಡ ಟೋಲ್ ಕಾರ್ಮಿಕರಿಗೆಕೆಪಿಸಿಸಿ ಸಂಯೋಜಕಿಪ್ರತಿಭಾ ಕುಳಾಯಿ ಉದ್ಯೋಗದ ವ್ಯವಸ್ಥೆ ಮಾಡಿದ್ದಾರೆ.
ಟೋಲ್ ತೆರವು ಹಿನ್ನೆಲೆ ಉದ್ಯೋಗ ಕಳೆದುಕೊಂಡವರಲ್ಲಿ 22 ಮಂದಿ ಯುವಕ ಯುವತಿಯರು ಪ್ರತಿಭಾ ಕುಳಾಯಿ ಅವರನ್ನು ಭೇಟಿಮಾಡಿದ್ದಾರೆ. ಭೇಟಿ ಮಾಡಿದವರಿಗೆ ಉದ್ಯೋಗದ ವ್ಯವಸ್ಥೆ ಮಾಡಿರುವುದಾಗಿ ಪ್ರತಿಭಾ ಕುಳಾಯಿ ಫೇಸ್ ಬುಕ್ ಪೋಸ್ಟ್ ನಲ್ಲಿಹೇಳಿದ್ದಾರೆ.
ಪ್ರತಿಭಾ ಫೋಸ್ಟ್ ನಲ್ಲಿ ಏನೇನಿದೆ..? ಸುರತ್ಕಲ್ ಟೋಲ್ ಗೇಟ್ ನಲ್ಲಿ ಉದ್ಯೋಗ ಕಳೆದುಕೊಂಡ 35 ಮಂದಿಯನ್ನು ನಾನುಭೇಟಿಯಾಗಿ ಅವರಿಗೆ ಅವರ ವಿದ್ಯಾರ್ಹತೆಗೆ ಅನುಸಾರವಾಗಿ ಉದ್ಯೋಗ ದೊರಕಿಸಿಕೊಡುವ ಭರವಸೆ ನೀಡಿದ್ದು ಅದರಂತೆ ಇಂದುಬೆಳಗ್ಗಿನಿಂದ ನನ್ನ ಕಚೇರಿಯಲ್ಲಿ ಕಾರ್ಯ ನಿರತಳಾಗಿದ್ದೇನೆ. ಟೋಲ್ ಇನ್ ಚಾರ್ಜ್ ಮಿಥುನ್ ಬೈಕಂಪಾಡಿ ಸೂಕ್ತ ರೀತಿಯಲ್ಲಿಸ್ಪಂದಿಸಿದ್ದು ಈಗಾಗಲೇ 22 ಮಂದಿ ನನ್ನನ್ನು ಭೇಟಿಯಾಗಿ ಬಹುಪಾಲು ಯುವಕ–ಯುವತಿಯರಿಗೆ ಬೇರೆ ಬೇರೆ ಸಂಸ್ಥೆಗಳಲ್ಲಿ ಸೂಕ್ತಉದ್ಯೋಗ ಕಲ್ಪಿಸುವಲ್ಲಿ ಯಶಸ್ವಿಯಾಗಿದ್ದೇನೆ.
ಉದ್ಯೋಗ ಕಳೆದುಕೊಂಡವರಲ್ಲಿ ಒಬ್ಬ ವಿದ್ಯಾರ್ಥಿಯಾಗಿದ್ದು ಆತನ ಮನೆಯ ಪರಿಸ್ಥಿತಿ ತೀರಾ ಹದಗೆಟ್ಟಿರುವ ಕಾರಣ ಹಗಲುಕೆಪಿಟಿಯಲ್ಲಿ ಕಲಿತು ರಾತ್ರಿ ಟೋಲ್ ನಲ್ಲಿ ಕೆಲಸ ಮಾಡುತ್ತಿದ್ದ.ಆತನನ್ನು ನನ್ನ ಕುಳಾಯಿ ಫೌಂಡೇಶನ್ ಮೂಲಕ ದತ್ತು ಪಡೆದುಶಿಕ್ಷಣದ ಖರ್ಚು ವೆಚ್ಚ ನೋಡಿಕೊಳ್ಳುವ ಜೊತೆಗೆ ಉದ್ಯೋಗಕ್ಕೆ ವ್ಯವಸ್ಥೆ ಮಾಡಿದ್ದೇನೆ. ಇನ್ನೊಬ್ಬ ಮಹಿಳೆ ಟೋಲ್ ನಲ್ಲಿ ದುಡಿದು ತನ್ನಮಕ್ಕಳನ್ನು ಸಾಕುತ್ತಿದ್ದು ಆಕೆಗೆ ಸೂಕ್ತ ಉದ್ಯೋಗ ಕೊಡಿಸಿ ಮಕ್ಕಳನ್ನು ಶೈಕ್ಷಣಿಕ ದತ್ತು ಪಡೆಯಲಿದ್ದೇನೆ ಎಂದು ಹೇಳಿದ್ದಾರೆ.
ಕುಳಾಯಿ ಫೌಂಡೇಶನ್ ಮೂಲಕ ಈಗಾಗಲೇ 500ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಶೈಕ್ಷಣಿಕ ದತ್ತು ಪಡೆಯಲಾಗಿದ್ದು ಈ ವರ್ಷಇನ್ನಷ್ಟು ಮಕ್ಕಳನ್ನು ಶಿಕ್ಷಣದ ಉದ್ದೇಶದಿಂದ ದತ್ತು ಪಡೆಯಲಿದ್ದೇನೆ. ನಾನು ಭರವಸೆಗಳನ್ನು ಮಾತ್ರ ಕೊಡುವುದಿಲ್ಲ, ನುಡಿದಮಾತಿನಂತೆ ನಡೆಯುತ್ತೇನೆ. ಈ ಕುರಿತು ಇನ್ನಷ್ಟು ಮಾಹಿತಿ ಮುಂದಿನ ದಿನಗಳಲ್ಲಿ ನಿಮ್ಮೆದುರು ನೀಡಲಿದ್ದೇನೆ ಎಂದು ಬರೆದಿದ್ದಾರೆ.
ಸುರತ್ಕಲ್ ಟೋಲ್ ಗೇಟ್ ನಲ್ಲಿ ಉದ್ಯೋಗ ಕಳೆದುಕೊಂಡರೆ ಅವರಿಗೆ ಅವರ ವಿದ್ಯಾರ್ಹತೆಗೆ ಅನುಸಾರವಾಗಿ ಉದ್ಯೋಗದೊರಕಿಸಿಕೊಡುವ ಭರವಸೆಯನ್ನು ಈ ಮೊದಲು ಪ್ರತಿಭಾ ಕುಳಾಯಿ ನೀಡಿದ್ದರು.