ದಿಗ್ವಿಜಯ ನ್ಯೂಸ್ ಮಂಗಳೂರು ವರದಿಗಾರ ಅಶೋಕ್ ಪೂಜಾರಿಗೆ ಗೋಲಿಬಾರ್ ಸಂದರ್ಭದಲ್ಲಿ ತೋರಿಸಿದ ಅತ್ಯುತ್ತಮ ವರದಿಗಾರಿಕೆಗೆ National Television Award ಗೌರವ ದಕ್ಕಿದೆ.
ಪುತ್ತೂರಿನ ಕೃಷ್ಣ ನಗರ ನಿವಾಸಿ ಮೋನಪ್ಪ ಹಾಗೂ ಕಮಲ ಅವರ ಪುತ್ರ, ವಿವೇಕಾನಂದ ಕಾಲೇಜುನಲ್ಲಿ ವಿದ್ಯಾಭ್ಯಾಸ ಮುಗಿಸಿದ ಇವರು. ಸುದ್ದಿ ಬಿಡುಗಡೆ ಪತ್ರಿಕೆ , ಪ್ರಜಾ ಟಿ.ವಿ ನ್ಯೂಸ್, ಪ್ರಸ್ತುತ ಮಂಗಳೂರು ವಿಭಾಗದ ದಿಗ್ವಿಜಯ ನ್ಯೂಸ್ ನಲ್ಲಿ ವರದಿಗಾರಿಕೆ ಕೆಲಸ ನಿರ್ವಹಿಸುತ್ತಿದ್ದಾರೆ.
ಗೋಲಿಬಾರ್ ಸಂದರ್ಭದಲ್ಲಿ ತೋರಿಸಿದ ಅತ್ಯುತ್ತಮ ವರದಿಗಾರಿಕೆಗೆ ಈ National Television Award ಪ್ರಶಸ್ತಿ ದೊರಕ್ಕಿದ್ದು, ಬಿಲ್ಲವ ಸಮಾಜಕ್ಕೂ ಗೌರವಕ್ಕೆ ಪಾತ್ರರಾಗಿದ್ದಾರೆ.
ಎನ್‌ಟಿ ಅವಾರ್ಡ್ಸ್ 2020 ಹಿಂದಿ, ಇಂಗ್ಲಿಷ್, ಮರಾಠಿ, ಬಂಗಾಳಿ, ಒಡಿಯಾ, ಕನ್ನಡ, ಮಲಯಾಳಂ, ತೆಲುಗು, ತಮಿಳು, ಗುಜರಾತಿ, ರಾಜಸ್ಥಾನಿ ಮತ್ತು ಪಂಜಾಬಿ ಭಾಷೆಗಳಲ್ಲಿ ನ್ಯೂಸ್ ಚಾನೆಲ್‌ಗಳನ್ನು ಸನ್ಮಾನಿಸುತ್ತದೆ.
ಪುಷ್ಪರಾಜ್ ಪೂಜಾರಿ