ಯುವವಾಹಿನಿ (ರಿ.) ಮಂಗಳೂರು ಘಟಕದ ಅಧ್ಯಕ್ಷರಾದ ಚಂದ್ರಶೇಖರ ಕರ್ಕೇರ ಹಾಗೂ ಮಹಿಳಾ ಘಟಕದ ನಿಕಟಪೂರ್ವ ಅಧ್ಯಕ್ಷರಾದ ರಶ್ಮಿ. ಸಿ ಕರ್ಕೇರ ದಂಪತಿಗಳ ಮಗಳು ಐಸಿರಿ ನಿನ್ನೆ ಇಹಲೋಕ ತ್ಯಜಿಸಿದ್ದಾರೆ.
ತನ್ನನ್ನು ಹೊತ್ತು ಸಲಹಿದ ಕಣ್ಣಿಗೆ ಕಾಣುವ ದೇವರುಗಳಾದ ತಂದೆ ತಾಯಿಯ ಬಾಳಿನ ಬೆಳಕಾಗಿ ಜೀವನದ ಆಸರೆಯಾಗಬೇಕಾಗಿದ್ದ ಐಸಿರಿ ಅಕಾಲಿಕವಾಗಿ ಜೀವನಕ್ಕೆ ಕೊನೆಹಾಡಿದ್ದಾರೆ.
ಐಸಿರಿಯನ್ನು ಕಳೆದುಕೊಂಡಿರುವುದು ಯುವವಾಹಿನಿ ಕುಟುಂಬಕ್ಕೂ ಕೂಡಾ ತುಂಬಲಾರದ ನಷ್ಟ.
ಮೃತ ಐಸಿರಿಯ ಆತ್ಮಕ್ಕೆ ಶಾಂತಿ ಲಭಿಸಲಿ, ಕುಟುಂಬಕ್ಕೆ ದು:ಖವನ್ನು ಸಹಿಸುವ ಶಕ್ತಿಯನ್ನು ದೇವರು ಒದಗಿಸಲಿ ಎಂಬುದು ನಮ್ಮ ಪ್ರಾರ್ಥನೆ