TOP STORIES:

ಕಂಬಳ ಲೋಕದ ಕಿಂಗ್‌ ‘ತಾಟೆ’: ₹ 8 ಲಕ್ಷಕ್ಕೂ ಅಧಿಕ ದರಕ್ಕೆ ಮಾರಾಟವಾಗಿದ್ದ ಕೋಣದ ಸಾಧನೆ ಏನು..?


ಮಂಗಳೂರು, ನವೆಂಬರ್‌ 6: ಕರಾವಳಿಯಲ್ಲಿ ಕಂಬಳ ಕಲರವ ಆರಂಭವಾಗಿದೆ. ಋತುವಿನ ಆರಂಭದ ಎರಡೂಕಂಬಳಗಳು ಭರ್ಜರಿ ಯಶಸ್ಸುಗಳಿಸಿದೆ.

ಜೊತೆಗೆ ಕಂಬಳ ಕ್ಷೇತ್ರದ ಅತೀ ವೇಗದ ಓಟದ ಕೋಣ ಎಂಬ ಬಿರುದು ಪಡೆದತಾಟೆಎಂಬ ಕಂಬಳ ಕೋಣದ ಯಶಸ್ಸಿನನಾಗಲೋಟವೂ ಮುಂದುವರಿದಿದೆ. ಕಳೆದ ಎರಡು ಕಂಬಳದಲ್ಲೂ ಅಡ್ಡಹಲಗೆ ವಿಭಾಗದಲ್ಲಿತಾಟೆಕೋಣ ಪ್ರಥಮಸ್ಥಾನವನ್ನು ಪಡೆದಿದೆ.

ಕ್ರಿಕೆಟ್ ಲೋಕದ ದಿ ಬೆಸ್ಟ್ ಫಿನಿಷರ್ ಮಹೇಂದ್ರ ಸಿಂಗ್ ಧೋನಿಯಾದರೆ ಕಂಬಳ ಕ್ಷೇತ್ರದ ದಿ ಬೆಸ್ಟ್ ಫಿನೀಶರ್ ತಾಟೆಕೋಣ ಎನ್ನುವುದು ಕಂಬಳ ಕೂಟದ ಲಕ್ಷಾಂತರ ಮಂದಿ ಕಂಬಳ ಕೂಟದ ಅಭಿಮಾನಿಗಳ ಮಾತಾಗಿದೆ.


ಎಂಟೂ ಮುಕ್ಕಾಲು ಲಕ್ಷ ರೂಪಾಯಿಗೆ ಮಾರಾಟವಾಗಿದ್ದ ತಾಟೆ

ಕೊನೆಯ ಹತ್ತು ಮೀಟರ್ ದೂರದಲ್ಲಿ ಗಾಳಿಯನ್ನು ಸೀಳಿ ಮುನ್ನುಗ್ಗುವ ತಾಟೆ ಎಲ್ಲರ ಹುಬ್ಬೇರಿಸುವಂತೆ ವಿಜಯದ ಗುರಿತಲುಪುತ್ತದೆ. ಇದೇ ಮಾದರಿಯಲ್ಲಿ ನೂರಾರು ಪ್ರಶಸ್ತಿಯನ್ನು ತನ್ನ ತೆಕ್ಕೆಗೆ ಹಾಕಿಕೊಂಡಿದೆ. ಕಂಬಳ ಕ್ಷೇತ್ರಕ್ಕೆ ಹಗ್ಗ ಕಿರಿಯವಿಭಾಗದಲ್ಲಿ ಕಾಲಿಟ್ಟ ತಾಟೆ ಬಳಿಕ ಹಿಂದೆ ತಿರುಗಿ ನೋಡಲೇ ಇಲ್ಲ. ಹಗ್ಗ ಕಿರಿಯ ವಿಭಾಗದಲ್ಲಿ ನೂರಾರು ಪದಕಗಳನ್ನುಸಂಪಾದಿಸಿದ ಬಳಿಕ ನೇಗಿಲು ಹಿರಿಯ ವಿಭಾಗಕ್ಕೆ ಕಾಲಿಟ್ಟಾಗ ಎಂಟೂ ಮುಕ್ಕಾಲು ಲಕ್ಷ ರೂಪಾಯಿಗೆ ಕಂಬಳದ ಪ್ರಸಿದ್ಧಕೋಣಗಳ ಯಜಮಾನ ಇರುವೈಲು ಪಾಣಿಲ ಬಾಡ ಪೂಜಾರಿಯವರ ಮಡಿಲು ಸೇರಿದೆ. ಇಷ್ಟು ದೊಡ್ಡ ಮೊತ್ತದಲ್ಲಿ ಕೋಣಮಾರಾಟವಾಗಿದ್ದು ಕಂಬಳ ಕ್ಷೇತ್ರದಲ್ಲೇ ಭಾರಿ ಸಂಚಲನ ಮೂಡಿಸಿತ್ತು.

ಕಂಬಳದಲ್ಲಿ ಬೊಟ್ಟಿಮಾರ್ ಮತ್ತು ತಾಟೆ ಕೋಣಗಳ ಜೋಡಿ ಮೋಡಿ

ಇರುವೈಲುಗೆ ಬಂದ ಬಳಿಕ ಬೊಟ್ಟಿಮಾರ್ ಮತ್ತು ತಾಟೆ ಕೋಣಗಳ ಜೋಡಿ ಕಂಬಳ ಪ್ರೇಮಿಗಳನ್ನು ಮೋಡಿ ಮಾಡಿದೆ. ಹಲವುವರ್ಷಗಳ ಕಾಲ ಕೋಣಗಳ ಜೋಡಿ ಕಂಬಳ ಕೂಟದಲ್ಲಿ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಬಾಚಿದೆ. 2019ರಲ್ಲಿ ಮಂಗಳೂರಿನಐಕಳದಲ್ಲಿ ನಡೆದ ಕಾಂತಾಭಾರೆ ಬೂಧಭಾರೆ ಜೋಡುಕರೆ ಕಂಬಳಕೂಟದಲ್ಲಿ ಕಂಬಳ ಇತಿಹಾಸದ ಅತೀ ವೇಗದ ಓಟ ಓಡಿದಖ್ಯಾತ ಓಟಗಾರ ಮಿಜಾರು ಅಶ್ವಥಪುರ ಶ್ರೀನಿವಾಸ ಗೌಡರ ಅಂದಿನ ಸಾಧನೆಗೆ ಕಾರಣ ಇದೇ ತಾಟೆ ಎನ್ನುವುದು ಕೂಡವಿಶೇಷವಾಗಿದೆ.

ತಾಟೆಯ ಓಟವನ್ನು ನೋಡಲೆಂದೇ ಕಂಬಳಕ್ಕೆ ಜನ ಸಾಗರ

ಕಂಬಳ ಕೂಟದಲ್ಲಿ ಎಲ್ಲರ ಕಣ್ಮನ ಸೆಳೆಯುವ ತಾಟೆ ಕೋಣ ಓಡುವ ರೀತಿಯೇ ಬಹಳ ವಿಶಿಷ್ಠವಾಗಿದೆ. ತಲೆ ಎತ್ತಿ ಓಡುವತಾಟೆ ವಿಜಯದ ಗುರಿಗೆ ಹಾರಿ ರೇಸ್‌ ಅನ್ನು ಅಂತಿಮ ಮಾಡುವುದೇ ವಿಶೇಷವಾಗಿದೆ. ಇಂದಿಗೂ ಜನ ಕಂಬಳಕ್ಕೆ ತಾಟೆಯಓಟವನ್ನು ನೋಡಲೆಂದೇ ಬರುವುದು. ಸದ್ಯ ನಾರಾವಿ ಯುವರಾಜ ಜೈನ್ ಅವರ ಯಜಮಾನಿಕೆಯ ತಂಡದಲ್ಲಿರುವ ತಾಟೆ, ಅಡ್ಡ ಹಲಗೆ ವಿಭಾಗದಲ್ಲಿ ಎರಡೂ ಕಂಬಳ ಕೂಟದಲ್ಲಿ ಪ್ರಥಮ ಸ್ಥಾನ ಗಳಿಸಿ ಯಜಮಾನನ ನಂಬಿಕೆ ಉಳಿಸಿದೆ.

ತಾಟೆ ಓಟ ಸಾಮಾಜಿಕ ಜಾಲತಾಣದಲ್ಲಿ ವೈರಲ್‌

ಒಟ್ಟಿನಲ್ಲಿ ಕರಾವಳಿಯಲ್ಲಿ ಕಂಬಳ ರಂಗು ಹೆಚ್ಚಾಗಿದೆ. ಓಟಗಾರನ ಪ್ರಸಿದ್ಧಿಗೆ ಓಡುವ ಕೋಣದ ಪ್ರಸಿದ್ಧಿಯೇಜಗದಗಲವಾಗಿದ್ದು ಕಂಬಳದ ಮೇಲಿರುವ ಜನರ ಪ್ರೀತಿಗೆ ಸಾಕ್ಷಿಯಾಗಿದೆ. ತಾಟೆಯ ಓಟದ ವಿಡಿಯೋಗಳು ಸಾಮಾಜಿಕಜಾಲತಾಣದಲ್ಲಿ, ರೀಲ್ಸ್‌ ಮೂಲಕ ಜನಪ್ರಿಯತೆ ಪಡೆಯುತ್ತಿದೆ. ಚಿಗರೆಯ ಓಟದ ತಾಟೆಯನ್ನು ಅಭಿಮಾನಿಗಳು ಪ್ರೀತಿಯಿಂದಕಿಂಗ್ ತಾಟೆ ಎಂದು ಬಿರುದು ನೀಡಿ ಅಭಿಮಾನ ತೋರಿಸಿದ್ದಾರೆ.


Related Posts

ಸ್ವಾಮಿಗಳ ಚಿತ್ರ ಮತ್ತು ಪ್ರತಿಮೆಯ ಮುಂದೆ ರಾಜ್ಯಪಾಲರೊಂದಿಗೆ ಇರುವ ಚಿತ್ರ


Share         ಶಿವಗಿರಿ: ರಾಜ್ಯಪಾಲ ಆರ್.ವಿ. ಅರ್ಲೆಕ್ಕರ್ ಅವರು ರಾಜಭವನದ ಅತಿಥಿ ಕೊಠಡಿಯಲ್ಲಿ ಶ್ರೀ ನಾರಾಯಣ ಗುರುಗಳ ಚಿತ್ರ ಮತ್ತು ಕಂಚಿನ ಪ್ರತಿಮೆಯನ್ನು ಸ್ವಾಮಿಗಳಿಗೆ ತೋರಿಸಿದರು. ಅತಿಥಿ ಕೊಠಡಿಯನ್ನು ಪ್ರವೇಶಿಸುವಾಗ ಮೊದಲು ನೋಡುವುದು ಗುರುಗಳ ಚಿತ್ರ.


Read More »

ಕವಿ ಗವಿಸಿದ್ದ ಎನ್. ಬಳ್ಳಾರಿ ಸಾಹಿತ್ಯೋತ್ಸವದಲ್ಲಿ ಅನಿತಾ ಪಿ. ತಾಕೊಡೆಯವರ “ಮೇಣಕ್ಕಂಟಿದ ಬತ್ತಿ” ಕವನ ಸಂಕಲನ ಬಿಡುಗಡೆ


Share         ಅ.26: ಕವಿ ಗವಿಸಿದ್ಧ ಎನ್. ಬಳ್ಳಾರಿ ಸಾಹಿತ್ಯೋತ್ಸವದಲ್ಲಿ ಅನಿತಾ ಪಿ. ತಾಕೊಡೆಯವರ ‘ಮೇಣಕ್ಕಂಟಿದ ಬತ್ತಿ’ಕವನ ಸಂಕಲನ ಬಿಡುಗಡೆ, ಪ್ರಶಸ್ತಿ ಪ್ರದಾನ,ಸಾಹಿತ್ಯ ಚರ್ಚೆ ಮುಂಬಯಿ, ಅ.23-  ಖ್ಯಾತ ಬಂಡಾಯ ಕವಿ ಗವಿಸಿದ್ದ ಎನ್. ಬಳ್ಳಾರಿ


Read More »

ಮಂಗಳೂರು: ಅಳದಂಗಡಿಯ ಶ್ರೀಮತಿ ಅನುಷಾ ಪ್ರಸಾದ್ ಪೂಜಾರಿ ಅವರಿಗೆ ಗಣಿತಶಾಸ್ತ್ರ ವಿಷಯದಲ್ಲಿ ಪಿ.ಎಚ್.ಡಿ ಪದವಿ


Share         ಮಣಿಪಾಲ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಮಣಿಪಾಲ (Manipal Institute of Technology, Manipal) ನ ಗಣಿತಶಾಸ್ತ್ರ ವಿಭಾಗದ ಸಂಶೋಧನಾ ವಿದ್ಯಾರ್ಥಿನಿ ಶ್ರೀಮತಿ ಅನುಷಾ ಎಲ್ ಅವರು ಮಂಡಿಸಿದ “A study on N-Covering


Read More »

ಬ್ರಿಟನ್ ಬಿಲ್ಲವ ಬಳಗ ಯುಕೆ ದೇಶದಲ್ಲಿ ಉತ್ಸಾಹದಿಂದ ಉದ್ಘಾಟನಾ ಸಮಾರಂಭವನ್ನು ಆಯೋಜಿಸಿದೆ.


Share         ಬ್ರಿಟನ್ ಬಿಲ್ಲವ ಬಳಗ ಯುಕೆಯ ಉದ್ಘಾಟನಾ ಸಮಾರಂಭವು ಸೆಪ್ಟೆಂಬರ್ 13 ರ ಶನಿವಾರದಂದು ಕೋವೆಂಟ್ರಿ ಹಾಲಿಡೇ ಇನ್ ಎಕ್ಸ್‌ಪ್ರೆಸ್ ಹೋಟೆಲ್‌ನಲ್ಲಿ ಸಂಘದ ಆಯ್ಕೆಯಾದ ಅಧ್ಯಕ್ಷ ಡಾ. ಪಿ.ಕೆ. ಮನೋಜ್ ಪೂಜಾರಿ ಅವರ ನೇತೃತ್ವದಲ್ಲಿ


Read More »

ಬಾರ್ಕೂರು ನಾಗರ ಮಠದ ಕ್ರೀಡಾ ಬಹು ಮುಖ ಪ್ರತಿಭೆಯ ಧನ್ವಿತಪೂಜಾರಿ ಧನ್ವಿತಪೂಜಾರಿ ಅವರಿಗೆ ಮೂರು ಪ್ರಶಸ್ತಿಗಳ ಗರಿ


Share         ಜನತಾ ಪದವಿ ಪೂರ್ವ ಕಾಲೇಜು ಹೆಮ್ಮಾಡಿ ಕಿರಿಮಂಜೇಶ್ವರ ಜನತಾ ನ್ಯೂ ಇಂಗ್ಲಿಷ್ ಮೀಡಿಯಂ ಕಿರಿ, ಮಂಜೇಶ್ವರ ಶಾಲಾ ಶಿಕ್ಷಣ ಇಲಾಖೆ ಪದವಿ ಪೂರ್ವ ಉಡುಪಿ ಜಿಲ್ಲೆ ಇವರ ಆಶ್ರಯದಲ್ಲಿ  ದಿನಾಂಕ 30-08-2025 ರಂದು


Read More »

ಸತತ 216 ಗಂಟೆಗಳ ಭರತನಾಟ್ಯ ಮಾಡುವುದರ ಮೂಲಕ ಗೋಲ್ಡನ್ ಬುಕ್ ವಲ್ಡ್ ರೆಕಾರ್ಡ್ ನಲ್ಲಿ ತನ್ನ ಹೆಸರನ್ನು ಬರೆಸಿಕೊಂಡ ನವರಸಧಾರ ದೀಕ್ಷಾ. ವಿ


Share         ದೀಕ್ಷಾ ವಿ. ಅವರ ಜೀವನವು ಕಲೆಯ ತಪಸ್ಸಿನ ಜೀವಂತ ಪ್ರತೀಕವಾಗಿದೆ. ತಂದೆ ಶ್ರೀ ವಿಠಲ್ ಪೂಜಾರಿ ಮತ್ತು ತಾಯಿ ಶುಭಾ ವಿಠಲ್ ಅವರ ಮಗಳಾದ ಅವರು, ಬಾಲ್ಯದಿಂದಲೇ ಕಲೆಯ ಕಡೆ ಮನಸ್ಸು ತಿರುಗಿಸಿಕೊಂಡಿದ್ದರು.


Read More »