ನಮ್ಮ ವಿರೋಧಿಗಳು ದೇಶವನ್ನು ದೋಚಿದ ಬ್ರಿಟಿಷರು ಹೊರತು ಭಾರತವನ್ನು ಪ್ರೀತಿಸುವ ಕ್ರೈಸ್ತ ಮತ್ತು ಮುಸಲ್ಮಾನರಲ್ಲ.
ಮದರ್ ತೆರೇಸಾ ಕ್ರೈಸ್ತ ರಾಗಿದ್ದರು ಸರ್ವಧರ್ಮದವರು ಪ್ರೀತಿಸುವ ಮಹಾತಾಯಿ
ಅಬ್ದುಲ್ ಕಲಾಂ ಮುಸ್ಲಿಮರಾಗಿದ್ದರು ಸರ್ವಧರ್ಮದವರು ಗೌರವಿಸುವ ಮಹಾನ್ ವ್ಯಕ್ತಿ
ನಾರಾಯಣ ಗುರುಗಳು ಹಿಂದೂವಾಗಿದ್ದರು ಎಲ್ಲಾ ಧರ್ಮಗಳು ಒಂದೇ ಅದು ಮನುಷ್ಯ ಧರ್ಮ ಅಂತ ಜಗತ್ತಿಗೆ ಸಾರಿದ ಮಹಾನ್ ಪುರುಷ
ಕಣ್ಣಲ್ಲಿ ತುಂಬಿದ ಜಾತಿ-ಧರ್ಮದ ಕಲ್ಮಶವನ್ನು ಬದಿಗಿಟ್ಟು ನಮ್ಮ ದೇಶದಲ್ಲಿ ಹುಟ್ಟಿರುವ ಮಹಾನ್ ವ್ಯಕ್ತಿಗಳನ್ನು ಗೌರವಿಸುವ . ಅವರ ವೇದ ವಾಕ್ಯಗಳನ್ನು ಜೀವನದಲ್ಲಿ ಅಳವಡಿಸುವ. ಪ್ರೀತಿ ನಮ್ಮ ದೇಶದ ಮೇಲಿರಲಿ ನಮ್ಮವರ ಮೇಲಿರಲಿ ಹೊರತು ದೇಶವನ್ನು ದೋಚಿದ ಬಿಟೀಷರು ಇಟ್ಟ ಹೆಸರಿನ ಮೇಲೆ ಅಲ್ಲ. ಬ್ರಿಟೀಷರು ಇಟ್ಟ ಹೆಸರನ್ನು ಉಪಯೋಗಿಸಿ ರಾಜಕೀಯ ಮಾಡುವವರ ದರ್ಪವನ್ನು ಮುಗಿಸುವ ಕೆಲಸವನ್ನು ಎಲ್ಲರೂ ಒಗ್ಗಟ್ಟಾಗಿ ಮಾಡಬೇಕು.