TOP STORIES:

FOLLOW US

ಕನಸಿನ ಮನೆ ನನಸಾಗಿಸಲು ಆಸರೆಯಾದ ಗುರು ಬೆಳದಿಂಗಳು


ಬಂಟ್ವಾಳ: ಮಂಗಳೂರಿನ ಗುರುಬೆಳದಿಂಗಳು ಸಂಸ್ಥೆಯ ನೇತೃತ್ವದಲ್ಲಿ ದಾನಿಗಳ ಸಹಕಾರದೊಂದಿಗೆ ಬಂಟ್ವಾಳ ತಾಲೂಕಿನ ಬಿ.ಮೂಡ ಗ್ರಾಮದ ಪರಾರಿ ಎಂಬಲ್ಲಿ ನಿರ್ಮಾಣಗೊಂಡ ಚಿತ್ರಾಕ್ಷಿ ಅವರ ನೂತನ ಮನೆಯ ಹಸ್ತಾಂತರ ಕಾರ್ಯಕ್ರಮ ಗುರುವಾರ ನಡೆಯಿತು.

ಪಣಂಬೂರು ಎಸಿಪಿ ಮಹೇಶ್ ಕುಮಾರ್ ಅವರು ಈ ಸಂದರ್ಭ ನಡೆದ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ ಹಲವಾರು ಗೃಹಪ್ರವೇಶಕ್ಕೆ ಹೋಗಿದ್ದೇನೆ. ಆದರೆ ಇದೊಂದು ಹೃದಯಸ್ಪರ್ಷಿ ಗೃಹಪ್ರವೇಶದ ಕಾರ್ಯಕ್ರಮ ಎಂದರು. ಯುವಕರ ತಂಡವನ್ನು ಕಟ್ಟಿಕೊಂಡು ಸಮಾಜಕ್ಕೆ ಆಸರೆಯಾಗುವಂತಹ ಕಾರ್ಯಕ್ರಮವನ್ನು ಗುರುಬೆಳದಿಂಗಳು ತಂಡ ಮಾಡುತ್ತಿದೆ. ಇಂತಹ ಸಂಘ ಸಂಸ್ಥೆಗಳ ಅಗತ್ಯತೆ ಸಮಾಜಕ್ಕೆ ಇದೆ.‌ ಇದು ಯುವ ಸಮುದಾಯಕ್ಕೆ ಮಾದರಿ ಎಂದು ತಿಳಿಸಿದರು.

ಗುರು ಬೆಳದಿಂಗಳು ಸಂಘಟನೆಯ ಅಧ್ಯಕ್ಷ ಪದ್ಮರಾಜ್ ಆರ್. ಅಧ್ಯಕ್ಷತೆ ವಹಿಸಿ ಮಾತನಾಡಿ ಗುರುಬೆಳದಿಂಗಳು ಸಂಘಟನೆಗೆ ಇಂತಹ ಸೇವಾ ಕಾರ್ಯಗಳನ್ನು ಮಾಡಲುವ ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವಾದರ್ಶ, ಮಾಜಿ ಸಚಿವ ಬಿ. ಜನಾರ್ದನ ಪೂಜಾರಿ ಯವರು ಗೋಕರ್ಣ ಕ್ಷೇತ್ರದಲ್ಲಿ ಮಾಡಿದ ಜನಪರ ಕಾರ್ಯ ಪ್ರೇರಣೆ ನೀಡಿದೆ. ಬಡವರ ಕಣ್ಣೊರೆಸುವ ಕಾರ್ಯ ಆಗಬೇಕು ಎನ್ನುವ ನಿಟ್ಟಿನಲ್ಲಿ ಶಿಕ್ಷಣ, ಆರೋಗ್ಯ, ಆಸರೆ ಎನ್ನುವ ಧ್ಯೆಯೋದ್ದೇಶಗಳನ್ನಿಟ್ಟುಕೊಂಡು ಇಂತಹ ಸೇವಾ ಕಾರ್ಯಕ್ರಮ ಮಾಡುತ್ತಿದ್ದೇವೆ. ಯುವಕರ ಪರಿಶ್ರಮದಿಂದ ಹಾಗೂ ಹಲವು ಮಂದಿ ದಾನಿ ಸಹಕಾರದಿಂದ ಮನೆ ನಿರ್ಮಾಣಗೊಂಡಿದೆ ಎಂದು ತಿಳಿಸಿದರು.

ಗೋಕರ್ಣ ಕ್ಷೇತ್ರದ ಅಭಿವೃದ್ದಿ ಸಮಿತಿ ಅಧ್ಯಕ್ಷ ದೇವೇಂದ್ರ ಪೂಜಾರಿ,  ಪನಮ ಗ್ರೂಪ್ ವಿವೇಕ್ ರಾಜ್ ಪೂಜಾರಿ, ಉದ್ಯಮಿ ಕಿಶೋರ್ ದಂಡಕೇರಿ, ಎಂಸಿಸಿ ಬ್ಯಾಂಕ್ ಅಧ್ಯಕ್ಷ ಅನಿಲ್ ಲೋಬೋ, ಮನಪಾ ಸದಸ್ಯರಾದ ಪ್ರವೀಣ್ ಚಂದ್ರ ಆಳ್ವ, ಅನಿಲ್ ಕುಮಾರ್ ಪೂಜಾರಿ, ಪ್ರಮುಖರಾದ ವಿಷ್ಣುದಾಸ್ ಉಪಸ್ಥಿತರಿದ್ದರು.

ಸಂಚಾಲಕ ಸುನೀಲ್ ಕುಮಾರ್ ಬಜಾಲ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ‌ಕಾರ್ಯದರ್ಶಿ ರಾಜೇಶ್ ಸುವರ್ಣ ವಂದಿಸಿದರು.‌ ಮನೆ ನಿರ್ಮಾಣಕ್ಕೆ ಸಹಕರಿಸಿದ ದಾನಿಗಳನ್ನು ಗೌರವಿಸಲಾಯಿತು.


Share:

More Posts

Category

Send Us A Message

Related Posts

ಗೆಜ್ಜೆಗಿರಿ ನಂದನ ಬಿತ್ತಿಲಿನ ಆನುವಂಶಿಕ ಮೊಕ್ತೇಸರರಾದ, ಹಿರಿಯ ನಾಟಿ ವೈದ್ಯೆ ಲೀಲಾವತಿ ಪೂಜಾರಿ ಅವರಿಗೆ ಕರ್ನಾಟಕ ಜಾನಪದ ಪ್ರಶಸ್ತಿ..


Share       ಪುತ್ತೂರು, ನ. 4 : ಕಾರಣಿಕ ಶಕ್ತಿಗಳಾದ ಕೋಟಿ-ಚೆನ್ನಯ, ದೇಯಿಬೈದೇತಿ ಮೂಲಸ್ಥಾನ ಗೆಜ್ಜೆಗಿರಿ ನಂದನಬಿತ್ತಿಲು ನಿವಾಸಿ ನಾಟಿವೈದ್ಯೆ ಲೀಲಾವತಿ ಬೈದೇತಿ (77) ಅವರು ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಪಡುಮಲೆಯಲ್ಲಿನ ಪ್ರತಿ


Read More »

ಬೆಳ್ಳಿ ಹಬ್ಬದ ಸಂದರ್ಭದಲ್ಲಿ ನಮ್ಮಕುಡ್ಲ ಗೂಡುದೀಪ ಪಂಥ: ಚಾಲನೆ ನೀಡಿದ ಜನಾರ್ದನ ಪೂಜಾರಿ ದಂಪತಿ


Share       ನಮ್ಮ ಕುಡ್ಲ ವಾಹಿನಿ ಆಯೋಜಿಸಿದ್ದ 25ನೇ ವರ್ಷದ ಗೂಡುದೀಪ ಸ್ಪರ್ಧೆ ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನದಲ್ಲಿ ನಡೆದಿದೆ. ಕುದ್ರೋಳಿ ಕ್ಷೇತ್ರದ ನವೀಕರಣ ರೂವಾರಿ ಮಾಜಿ ಕೇಂದ್ರ ಸಚಿವ ಬಿ.ಜನಾರ್ಧನ ಪೂಜಾರಿ ಹಾಗೂ ಅವರ


Read More »

ಸಂಘಟನೆಗಾಗಿ ಜೀವನವನ್ನೇ ಮುಡಿಪಾಗಿಟ್ಟವರು ಸತ್ಯಜಿತ್‌ ಸುರತ್ಕಲ್. ಸಂಪೂರ್ಣ ಕಥೆ


Share       ಕಟ್ಟರ್ ಹಿಂದೂ ಹೋರಾಟಗಾರ, ಸಂಘಟನೆಯೇ ಕುಟುಂಬ ಎಂದು ಸಂಘಟನೆಗಾಗಿ ಜೀವನವನ್ನೇ ಮುಡಿಪಾಗಿಟ್ಟವರು ಸತ್ಯಜಿತ್‌ ಸುರತ್ಕಲ್. ಹಿಂದೂ ಧರ್ಮಕ್ಕಾಗಿ ಹೋರಾಟ ನಡೆಸುತ್ತ ಬಂದಿರುವ ಸತ್ಯಜಿತ್‌ ಸುರತ್ಕಲ್ ಅವರ ಸೇವಾ ಮನೋಭಾವ, ಕಾರ್ಯವೈಖರಿ ಬಗ್ಗೆ ಹೇಳೋದಾದ್ರೆ


Read More »

ಸರ್ವಸಮಾನತೆಯ ಧಾರ್ಮಿಕ ತೆಯನ್ನು ಸಾಮಾಜಿಕ ನ್ಯಾಯದ ಪಥದಲ್ಲಿ ಮುನ್ನಡೆಸುವಲ್ಲಿ ಮುಂಚೂಣಿಯಲ್ಲಿ ಕೆಲಸ ಮಾಡಿದವರು ಜನಾರ್ಧನ ಪೂಜಾರಿ ಹಾಗೂ ಅವರ ಜೊತೆ ಗಟ್ಟಿಯಾಗಿ ನಿಂತವರು ಪದ್ಮರಾಜ್ ಆರ್


Share       ಸರ್ವಸಮಾನತೆಯ ಧಾರ್ಮಿಕ ತೆಯನ್ನು ಸಾಮಾಜಿಕ ನ್ಯಾಯದ ಪಥದಲ್ಲಿ ಮುನ್ನಡೆಸುವಲ್ಲಿ ಮುಂಚೂಣಿಯಲ್ಲಿ ಕೆಲಸ ಮಾಡಿದವರು ಜನಾರ್ಧನ ಪೂಜಾರಿ ಹಾಗೂ ಅವರ ಜೊತೆ ಗಟ್ಟಿಯಾಗಿ ನಿಂತವರು ಪದ್ಮರಾಜ್ ಆರ್ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರ ಬ್ರಹ್ಮ


Read More »

ಬಂಟ್ವಾಳ: ಬಾಳೆಕಲ್ಲು ಗರಡಿಮನೆ ದೇವಕಿ ನಿಧನ


Share       ಬಂಟ್ವಾಳ: ಬಾಳೆಕಲ್ಲು ಗರಡಿಮನೆ ಶ್ರೀ ಕೊರಗಪ್ಪ ಪೂಜಾರಿಯವರ ಧರ್ಮಪತ್ನಿ ಶ್ರೀಮತಿ ದೇವಕಿ(85 ವ ) ಇವರು 21.10.2024 ನೇ ಸೋಮವಾರ ನಿಧನರಾಗಿದ್ದಾರೆ. ಇತ್ತೀಚೆಗೆ ಅನಾರೋಗ್ಯಕ್ಕೆ ತುತ್ತಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದರು. ಎರಡು


Read More »

ಬಿರುವೆರ್ ಕುಡ್ಲ ಸಂಘಟನೆಯಿಂದ ಯುವವಾಹಿನಿಗೆ ಗೌರವದ ಸನ್ಮಾನ.. ಕೇಂದ್ರ ಸಮಿತಿಯ ಅಧ್ಯಕ್ಷರಾದ ಹರೀಶ್ ಕೆ ಪೂಜಾರಿ ಸನ್ಮಾನ ಸ್ವೀಕಾರ


Share       ಮಂಗಳೂರು : ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರ ಬಿರುವೆರ್ ಕುಡ್ಲ(ರಿ) ಮಂಗಳೂರು ಸಂಘಟನಯ ದಶಮಾನೋತ್ಸವದ ಸವಿನೆನಪಿಗಾಗಿ, ರಾಜ್ಯದ ಪ್ರತಿಷ್ಠಿತ ಯುವವಾಹಿನಿ ಸಂಸ್ಥೆಯು ಕಳೆದ 36 ವರ್ಷಗಳ ಸಮಾಜಮುಖಿ ಸೇವೆಯನ್ನು ಗುರುತಿಸಿ ಗೌರವಿಸಿ ಗೌರವದ


Read More »