TOP STORIES:

ಬೈಂದೂರು: 4000ಕ್ಕೂ ಅಧಿಕ ಬಡ ಕುಟುಂಬಗಳಿಗೆ ಆಹಾರ ಸಾಮಾಗ್ರಿಗಳ ಕಿಟ್ ವಿತರಿಸಿದ ಯುವ ಉದ್ಯಮಿ


ಬೈಂದೂರು: ಕೊರೊನಾ 2ನೇ ಅಲೆ ಅದೆಷ್ಟೋ ಬಡ ಕುಟುಂಬಗಳ ನೆಮ್ಮದಿಯನ್ನೆ ಕಸಿದುಕೊಂಡಿದೆ. ಕಳೆದ 45 ದಿನಗಳ ಪೂರ್ಣ ಲಾಕ್ ಡೌನ್ ಸಮಯದಲ್ಲಿ ಸಾವಿರಾರು ಕುಟುಂಬಗಳಿಗೆ ದಿನದ ತುತ್ತಿಗಾಗಿ ಪರದಾಡಿದ ಉದಾಹರಣೆಗಳಿವೆ. ಅಂದಿನ ಸಂಪಾದನೆಯಿಂದ ಆ ದಿನದ ನಿರ್ವಹಣೆ ಮಾಡುತ್ತಿದ್ದ ಕುಟುಂಬಗಳಿಗೆ ಲಾಕ್ ಡೌನ್‍ನಿಂದ ಕೂಲಿ ಕೆಲಸ ಸಿಗದೆ ಅತಂತ್ರರಾಗಿರಬೇಕಾದ ಸ್ಥಿತಿ ನಿರ್ಮಾಣವಾಯಿತು. ಸರ್ಕಾರವೇನು ಪಡಿತರ ನೀಡಿತ್ತಾದರೂ ಅದಕ್ಕೆ ದಿನಸಿ ಸಾಮಾಗ್ರಿಗಳನ್ನು ಖರೀದಿಸಲು ಹಣವಿಲ್ಲದೆ ಅಸಹಾಯಕವಾದ ಕುಟುಂಬಗಳು ಹಲವು. ಈ ಸಂದರ್ಭದಲ್ಲಿ ಬಡ ಜನರಿಗೆ ತನ್ನಿಂದಾದ ಸಹಾಯ ನೀಡಲು ಮುಂದಾದರು ಉದ್ಯಮಿ ಗೋವಿಂದ ಬಾಬು ಪೂಜಾರಿಯವರು.

ಬೈಂದೂರು ಬಿಜೂರಿನವರಾದ ಗೋವಿಂದ ಬಾಬು ಪೂಜಾರಿ ಅವರು ನಿಜಾರ್ಥದಲ್ಲಿ ಬಡವರ ಬಂಧು. ಸದಾ ಬಡವರ, ದೀನ ದುರ್ಬಲರು, ನಿರ್ಗತಿಕರು, ಅಸಾಹಯಕರ ಕಂಡರೆ ಅದೇನೋ ಕನಿಕರ. ಹೃದಯ ಶ್ರೀಮಂತಿಕೆ ಮೂರ್ತಿವೆತ್ತ ಗೋವಿಂದ ಬಾಬು ಪೂಜಾರಿಯವರು ಬೆಂಗಳೂರಿನಲ್ಲಿ ಉದ್ಯಮಿಯಾಗಿದ್ದರೂ ಕೂಡಾ ತನ್ನೂರಿನ ಜನರ ಕಣ್ಣೀರು ಒರೆಸುವುದರಲ್ಲಿ ಸದಾ ಮುಂದೆ. ಕೊರೊನಾ 2ನೇ ಅಲೆಯ ಸಂದರ್ಭದಲ್ಲಿ ಬೈಂದೂರು ಕ್ಷೇತ್ರ ವ್ಯಾಪ್ತಿಯ ಜನರ ನೆರವಿಗೆ ನಿಂತ ಇವರು ಕಳೆದ ಒಂದು ವಾರದಿಂದ ಶ್ರೀ ವರಮಹಾಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಸುಮಾರು 4000ಕ್ಕೂ ಹೆಚ್ಚಿನ ಬಡ ಕುಟುಂಬಗಳಿಗೆ ಆಹಾರ ಸಾಮಾಗ್ರಿಗಳ ಕಿಟ್ ವಿತರಿಸಿದ್ದಾರೆ.

ಬೈಂದೂರು ಕ್ಷೇತ್ರ ವ್ಯಾಪ್ತಿಯ ಹಳ್ಳಿ ಹಳ್ಳಿಯ ಗ್ರಾಮೀಣ ಪ್ರದೇಶಗಳಿಗೆ ತಾನೇ ಖುದ್ದಾಗಿ ಭೇಟಿ ನೀಡಿ ತನ್ನ ಕೈಯಾರೆ ಕಿಟ್ ವಿತರಿಸಿದ್ದಾರೆ. ಪ್ರತಿ ಗ್ರಾಮದಲ್ಲಿಯೂ ಈಗ ಜಿ.ಬಿ.ಪಿ (ಗೋವಿಂದ ಬಾಬು ಪೂಜಾರಿ ಜನಸೇವಾ ಸಂಘ) ವಿದ್ದು ಆ ಸಂಘದ ಮೂಲಕ ಸ್ಥಳೀಯ ಪ್ರದೇಶದಲ್ಲಿ ಆರ್ಹ ಕುಟುಂಬಗಳನ್ನು ಗುರುತಿಸಿ ಆ ಕುಟುಂಬಗಳಿಗೆ ಅಗತ್ಯ ಆಹಾರ ಪದಾರ್ಥಗಳ ಕಿಟ್ ನೀಡಿದ್ದಾರೆ. ಈಗಾಗಲೇ ಬೈಂದೂರು ಕ್ಷೇತ್ರ ವ್ಯಾಪ್ತಿಯ 66 ಗ್ರಾಮಗಳ 4 ಸಾವಿರ ಅಧಿಕ ಮಂದಿಗೆ ಕಿಟ್ ವಿತರಿಸಿದ್ದಾರೆ.

ಇಷ್ಟಕ್ಕೆ ಇವರ ಸೇವಾಧರ್ಮ ನಿಂತಿಲ್ಲ. ಬೇಸಿಗೆಯಲ್ಲಿ ಉಪ್ಪುಂದ, ತಾರಾಪತಿ ಸೇರಿದಂತೆ 470 ಮನೆಗಳಿಗೆ ಕುಡಿಯುವ ನೀರು ಸರಬರಾಜು ಮಾಡಿದ್ದಾರೆ. ತೀರ ಬಡ ಕುಟುಂಬಗಳು ಸೂರು ಹೊಂದಲು ಕಷ್ಟ ವ್ಯಕ್ತ ಪಡಿಸಿದಾಗ ಸ್ಪಂದಿಸಿದ ಇವರು ತಾನೇ ಮನೆ ನಿರ್ಮಾಣ ಮಾಡಿಕೊಡುವ ಆಶ್ವಾಸನೆವಿತ್ತು. ಈಗಾಗಲೇ ಶ್ರೀ ವರಮಹಾಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ ವತಿಯಿಂದ 3 ಮನೆಗಳ ನಿರ್ಮಾಣ ಮಾಡಿದ್ದಾರೆ. ಶೀಘ್ರ ಅದರ ಪ್ರವೇಶೋತ್ಸವವೂ ನಡೆಯಲಿದೆ.

ಇವರ ಉದ್ಯಮ ಕ್ಷೇತ್ರವಿರುವುದು ಬೆಂಗಳೂರಿನಲ್ಲಿ. ಅಲ್ಲಿಯೂ ಕೂಡಾ ಕೊರೊನಾ 2ನೇ ಅಲೆಯಿಂದ ಸಮಸ್ಯೆಗಿಡಾದವರಿಗೆ ಸ್ಪಂದಿಸಿದ್ದಾರೆ. ಆಶಾ ಕಾರ್ಯಕರ್ತೆಯರು, ಬಿಬಿಎಂಒಪಿಯ ಪೌರ ಕಾರ್ಮಿಕರಿಗೆ ಆಹಾರ ಸಾಮಾಗ್ರಿಯ ಕಿಟ್ ವಿತರಿಸಿದ್ದಾರೆ.

ಕಳೆದ ವರ್ಷ ತನ್ನೂರಿನ ಬಡ ಕುಟುಂಬವೊಂದಕ್ಕೆ ಮನೆ ನಿರ್ಮಿಸಿ ಹಸ್ತಾಂತರಿಸಿದ್ದರು. 300 ಅಧಿಕ ಮನೆಗಳಿಗೆ 2 ತಿಂಗಳು ಶುದ್ದ ಕುಡಿಯುವ ನೀರು ಸರಬರಾಜು ಮಾಡಿದ್ದರು. ಕೊರೊನಾ ಮೊದಲ ಅಲೆಯ ಸಂದರ್ಭದಲ್ಲಿಯೂ ಕೂಡಾ ಕೊರೊನಾ ವಾರಿಯರ್ಸ್ ಹಾಗೂ ಬಡ ಕುಟುಂಬಗಳಿಗೆ ನೆರವು ನೀಡಿದ್ದರು.

ಶೆಫ್ಟಾಕ್ ಫುಡ್ ಹಾಗೂ ಹಾಸ್ಪಿಟಾಲಿಟಿ ಸರ್ವಿಸಸ್ ಪ್ರೈವೆಟ್ ಲಿಮಿಟೆಡ್ ಸಂಸ್ಥಾಪಕರು ಮತ್ತು ಆಡಳಿತ ನಿರ್ದೇಶಕರಾಗಿರುವ ಇವರು, ಶೆಫ್ಟಾಕ್ ನ್ಯೂಟ್ರಿಫುಡ್ ಪ್ರೈ.ನ ಆಡಳಿತ ನಿರ್ದೇಶಕರು, ಪ್ರಗ್ನ್ಯಾ ಸಾಗರ್ ಹೋಟೆಲ್ಸ್ ಹಾಗೂ ರೆಸಾರ್ಟ್ ಪ್ರೈ. ಲಿ. ಮತ್ತು ಮತ್ಯ ಬಂಧನ ಪ್ರೈ. ಲಿ.ನ ಆಡಳಿತ ನಿರ್ದೇಶಕರು. ಶೆಫ್ಟಾಕ್ ಕ್ಯಾಟರಿಂಗ್ ಸರ್ವಿಸಸ್‍ನ ಮಾಲಕರು ಆಗಿರುವ ಇವರು ಹಲವಾರು ಸಂಸ್ಥೆಗಳ ಪ್ರಮುಖ ಜವಾಬ್ದಾರಿಯುತ ಹುದ್ದೆಗಳನ್ನು ನಿರ್ವಹಿಸುತ್ತಿದ್ದಾರೆ.

 


Related Posts

ಶೈಕ್ಷಣಿಕ ಸಾಧನೆಯಲ್ಲೂ ‘ಸೇಮ್ ಟು ಸೇಮ್’: ಕುಂದಾಪುರದ ಅವಳಿ ಸಹೋದರಿಯರ SSLC ಪವಾಡ!


Share         ​ಕುಂದಾಪುರ: ಅವಳಿ ಜವಳಿ ಮಕ್ಕಳು ಅಂದಮೇಲೆ ಅವರ ರೂಪ, ಬಣ್ಣ, ನಡವಳಿಕೆ ಹಾಗೂ ಆಲೋಚನೆಗಳಲ್ಲಿ ಸಾಮ್ಯತೆ ಇರುವುದು ಸಹಜ ಸಂಗತಿ. ಆದರೆ, ಕುಂದಾಪುರದ ಈ ಇಬ್ಬರು ಸಹೋದರಿಯರು ಶೈಕ್ಷಣಿಕ ಸಾಧನೆಯಲ್ಲೂ ತಾವು ಸಂಪೂರ್ಣವಾಗಿ


Read More »

ಮಂಗಳೂರು ದಸರಾ ಇತಿಹಾಸದಲ್ಲಿ ಹೊಸ ಮೈಲಿಗಲ್ಲು – ₹67 ಕೋಟಿ ವೆಚ್ಚದ ಭೂಗತ ಕೇಬಲ್ ಯೋಜನೆಗೆ ಮಂಜೂರಾತಿ


Share         ವಿಶ್ವವಿಖ್ಯಾತ ಮಂಗಳೂರು ದಸರಾ ಮಹೋತ್ಸವದ ಮೆರವಣಿಗೆಗೆ ದಶಕಗಳಿಂದ ಎದುರಾಗಿದ್ದ ತಾಂತ್ರಿಕ ಸವಾಲಿಗೆ ಈಗ ಶಾಶ್ವತ ಪರಿಹಾರ ಸಿಕ್ಕಂತಾಗಿದೆ. ಕುದ್ರೋಳಿ ಶ್ರೀ ಗೋಕರ್ನಾಥ ಕ್ಷೇತ್ರದ ಆಡಳಿತ ಮಂಡಳಿಯ ಸುದೀರ್ಘ ಪ್ರಯತ್ನದ ಫಲವಾಗಿ, ಮೆರವಣಿಗೆ ಮಾರ್ಗದಲ್ಲಿ


Read More »

ಉಡುಪಿ ಸಿಟಿ ಬಸ್‌ ಚಾಲಕನ ಮಗಳು ಶಾಲೆಗೆ ಪ್ರಥಮ ರಾಂಕ್ – ದ್ರುತಿ ಪೂಜಾರಿ ಸಾಧನೆ…


Share         ಉಡುಪಿ: ಶ್ರಮ, ಸಂಕಲ್ಪ ಮತ್ತು ಕುಟುಂಬದ ಬೆಂಬಲ ಇದ್ದರೆ ಯಾವ ಸಾಧನೆಯೂ ಅಸಾಧ್ಯವಲ್ಲ ಎಂಬುದಕ್ಕೆ ನಗರದ ಸಿಟಿ ಬಸ್ ಚಾಲಕರ ಮಗಳು ದ್ರುತಿ ಪೂಜಾರಿ ಉತ್ತಮ ಉದಾಹರಣೆ ಆಗಿದ್ದಾಳೆ. 23/04/2026 ರಂದು ಪ್ರಕಟವಾದ


Read More »

ಶ್ರೀಯುತ ಮಂಜುನಾಥ ಪೂಜಾರಿ ಮುದ್ರಾಡಿ ಅವರಿಗೆ ಅವರಿಗೆ ರಾಜ್ಯ ಸಚಿವರ ಸ್ಥಾನಮಾನ


Share         ಶ್ರೀ ನಾರಾಯಣ ಗುರು ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶ್ರೀಯುತ ಮಂಜುನಾಥ ಪೂಜಾರಿ ಮುದ್ರಾಡಿ ಅವರಿಗೆ ರಾಜ್ಯ ಸಚಿವರ ಸ್ಥಾನಮಾನ ಲಭಿಸಿರುವುದು ನಮ್ಮ ಸಮಾಜಕ್ಕೆ ಹೆಮ್ಮೆಯ ಸಂಗತಿ. ಈ ಕುರಿತು ಏಪ್ರಿಲ್ 2ರಂದು ಸರಕಾರದ


Read More »

ಕಾರ್ಕಳದ ಸುಧಾಕರ್ ಪೂಜಾರಿಗೆ ‘ಐಕಾನಿಕ್ ಟ್ರೈನರ್’ ಗೌರವ ಪದವಿ


Share         ಬೆಂಗಳೂರು: ಎಕ್ಕಾರ ಲೈಫ್ ಸೈನ್ಸಸ್ ಪ್ರೈವೇಟ್ ಲಿಮಿಟೆಡ್ ಇದರ ಆಡಳಿತ ನಿರ್ದೇಶಕರಾದ ಕಾರ್ಕಳದ ಸುಧಾಕರ್ ಪೂಜಾರಿ ಅವರಿಗೆ ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ವತಿಯಿಂದ “ಐಕಾನಿಕ್ ಟ್ರೈನರ್” ಎಂಬ ಗೌರವಪೂರ್ಣ ಪದವಿ ಪ್ರದಾನ ಮಾಡಲಾಗಿದೆ.


Read More »

ಅನಿತಾ ಪಿ. ತಾಕೊಡೆ ಅವರ ‘ಮೇಣಕ್ಕಂಟಿದ ಬತ್ತಿ’ ಕವನಕ್ಕೆ ಒಲಿದ ಸಂಕಮ್ಮ ಸಂಕಣ್ಣನವರ್ ದತ್ತಿ ಪ್ರಶಸ್ತಿ


Share         ಕರ್ನಾಟಕ ಲೇಖಕಿಯರ ಸಂಘವು 2025ನೇ ಸಾಲಿನ ವಿವಿಧ ದತ್ತಿನಿಧಿ ವಾರ್ಷಿಕ ಪ್ರಶಸ್ತಿಗಳನ್ನು ಪ್ರಕಟಿಸಿದೆ. ಹಸ್ತಪ್ರತಿಯಲ್ಲಿ ಗವಿಸಿದ್ದ ಎನ್. ಬಳ್ಳಾರಿ ಕಾವ್ಯ ಪ್ರಶಸ್ತಿ ಪಡೆದ, ಅನಿತಾ ತಾಕೊಡೆಯವರ ‘ಮೇಣಕ್ಕಂಟಿದ ಬತ್ತಿ’ ಕವನ ಸಂಕಲನ ಕ್ಕೆ 


Read More »