ಕರ್ನಾಟಕದ ಉಚ್ಚನ್ಯಾಯಾಲಯದ ಹಿರಿಯ ವಕೀಲರಾಗಿ ಇರುವೈಲು ತಾರನಾಥ ಪೂಜಾರಿ ನೇಮಕ
ಕೈಕಂಬ: ಕರ್ನಾಟಕ ಉಚ್ಚ ನ್ಯಾಯಾಲಯವು ಖ್ಯಾತ ಹಿರಿಯ ವಕೀಲರಾದ ಇರುವೈಲು ತಾರನಾಥ ಪೂಜಾರಿಯವರನ್ನು ಹಿರಿಯನ್ಯಾಯವಾದಿಯನ್ನಾಗಿ ನೇಮಕ ಮಾಡಿ ಡಿ.೧೪ರಂದು ನೇಮಕ ಮಾಡಿದೆ.ಮಂಗಳೂರು ವಿಶ್ವವಿದ್ಯಾನಿಲಯದಿಂದ ಕಾನೂನು ಪದವಿ ಪಡೆದಿರುವ ತಾರನಾಥ ಪೂಜಾರಿಯವರು ರ‍್ಯಾಂಕ್ ವಿಜೇತರಾಗಿದ್ದು ಸ್ನಾತಕೋತ್ತರ ಪದವಿ ಪರೀಕ್ಷೆಯಲ್ಲಿ ಮೈಸೂರು ವಿಶ್ವವಿದ್ಯಾನಿಲಯದಿಂದ ಮೂರು ಚಿನ್ನದ ಪದವಿಗಳೊಂದಿಗೆ ಪ್ರಥಮ ರ‍್ಯಾಂಕ್ವಿಜೇತರು.ಶ್ರೀಯುತರು ೨೦೧೩ರಿಂದ ಎಂಟು ವರ್ಷಗಳ ಅವಧಿಯಲ್ಲಿ ಕರ್ನಾಟಕ ಸರಕಾರ ಹೆಚ್ಚುವರಿ ಅಧಿವೃತ್ತರಾಗಿ ಸೇವೆ ಸಲ್ಲಿಸಿ ಹುದ್ದೆಗೆ ರಾಜೀನಾಮೆ ನೀಡಿ ಖಾಸಗಿ ವಕೀಲ ವೃತ್ತಿಯಲ್ಲಿ ನಿರತರಾಗಿದ್ದರು. ಸಮಾಜಸೇವೆಯಲ್ಲಿ ಸಕ್ರೀಯರಾಗಿರುವ ಅವರುಹಲವಾರು ಸಂಘಸಂಸ್ಥೆಗಳಲ್ಲಿ ಸಕ್ರೀಯವಾಗಿ ಬಡ ವಿಧ್ಯಾರ್ಥಿಗಳಿಗೆ ವಿಧ್ಯಾರ್ಥಿ ವೇತನ ಮತ್ತು ಅಶಕ್ತರಿಗೆ ಧನ ಸಹಾಯ ಮಾಡುವಮೂಲಕ ಜನಾನುರಾಗಿಯಾಗಿ ಸಮಾಜದಲ್ಲಿ ಗುರುತಿಸಿಕೊಂಡಿದ್ದಾರೆ.