TOP STORIES:

ಚಳಿಗಾಲದಲ್ಲಿ ಸಿಹಿ ಪೊಟಾಟೋ ಪೌಷ್ಟಿಕಾಂಶ ಆಹಾರ


750BC ಯಿಂದಲೂ ಬಳಕೆಯಲ್ಲಿರುವ ಆಹಾರ ಗೆಣಸು. ಆದಿಮಾನವ ಕಾಡಿನಲ್ಲಿ ಹುಡುಕಿ ತಿನ್ನುತ್ತಿದ್ದು ಇದೇ ಗೆಣಸು. ಸಿಹಿ ಪೊಟಾಟೋ ಪೌಷ್ಟಿಕಾಂಶದ ಆಗರ ಎನ್ನುತ್ತಾರೆ ತಜ್ಞರು. ಹಸಿಯಾಗಿಯೂ ಸೇವಿಸಬಹುದಾದ ತರಕಾರಿ ಈ ಗೆಣಸು.

 

ಆದಿ ಮಾನವರೂ ಕೂಡ ಕಾಡುಗಳಲ್ಲಿ ಸಿಗುತ್ತಿದ್ದ ಗಡ್ಡೆಯ ಗೆಣಸನ್ನು ತಿಂದು ಬದುಕು ನಡೆಸುತ್ತಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಗೆಣಸು ತಿಂದರೆ ಗ್ಯಾಸ್ಟ್ರಿಕ್​ ಸಮಸ್ಯೆ ಕಾಡಬಹುದು ಎಂದು ಗೆಣಸಿನಿಂದ ದೂರ ಓಡುವವರೇ ಹೆಚ್ಚು. ಆದರೆ ಅದನ್ನು ಸರಿಯಾದ ಪ್ರಮಾಣದಲ್ಲಿ, ಸರಿಯಾದ ರೀತಿಯಲ್ಲಿ ಸೇವಸಿದರೆ ಪರಿಪೂರ್ಣ ಆಹಾರವಾಗಿಲಿದೆ. ಚಳಿಗಾಲದಲ್ಲಿ ದೇಹಕ್ಕೆ ಪೌಷ್ಟಿಕಾಂಶ ನೀಡುವ ಆಹಾರದ ಸೇವನೆ ಅಗತ್ಯ. ಹೀಗಾಗಿ ಅದಕ್ಕೆ ಸಿಹಿ ಆಲೂಗಡ್ಡೆ ಅಥವಾ ಗೆಣಸು ಉತ್ತಮ ಆಹಾರವಾಗಿದೆ. ಇದರಲ್ಲಿ ಯಥೇಚ್ಛವಾದ ಕಾರ್ಬೋಹೈಡ್ರೇಟ್​, ಕೊಲೆಸ್ಟ್ರಾಲ್​ ಸೋಡಿಯಮ್​ನಂತಹ ಅಂಶಗಳು ಇರುತ್ತವೆ. ಇವು ದೇಹವನ್ನು ಬೆಚ್ಚಗಿರಿಸಿ, ಚಳಿಗಾಲದಲ್ಲಿ ಕಾಡುವ ಸುಸ್ತು ಹಾಗೂ ಇನ್ನಿತರ ಕಾಯಿಲೆಗಳಿಂದ ರಕ್ಷಿಸುತ್ತದೆ.

 

ಚಳಿಗಾಲದಲ್ಲಿ ಗಡ್ಡೆಗಳ ಬಳಕೆ ದೇಹಕ್ಕೆ ಪೋಷಕಾಂಶವನ್ನು ನೀಡಿ ದೇಹದ ಸ್ವಾಸ್ಥ್ಯವನ್ನು ಕಾಪಾಡಿಕೊಳ್ಳುತ್ತದೆ. ಉದಾಹರಣೆಗೆ ಬಿಟ್ರೂಟ್​, ಕ್ಯಾರೆಟ್​ ಇತ್ಯಾದಿಗಳನ್ನು ಸೇವಿಸುವುದರಿಂದ ದೇಹಕ್ಕೆ ಬೇಕಾದ ಪೋಷಕಾಂಶಗಳನ್ನು ಒದಗಿಸುತ್ತದೆ. ಅದರಲ್ಲಿ ಸಿಹಿ ಪೊಟಾಟೋ ಅಥವಾ ಗೆಣಸು ಕೂಡ ಹೌದು. ಈ ಕುರಿತು ಪೌಷ್ಟಿಕ ತಜ್ಞರಾದ ರಜುತಾ ದಿವೇಕರ್​ ಎನ್ನುವವರು ಗೆಣಸಿನ ಉಪಯೋಗಗಳನ್ನು ತಿಳಿಸಿದ್ದಾರೆ. 750BC ಯಿಂದಲೂ ಬಳಕೆಯಲ್ಲಿರುವ ಆಹಾರ ಗೆಣಸು. ಆದಿಮಾನವ ಕಾಡಿನಲ್ಲಿ ಹುಡುಕಿ ತಿನ್ನುತ್ತಿದ್ದು ಇದೇ ಗೆಣಸು. ಸಿಹಿ ಪೊಟಾಟೋ ಪೌಷ್ಟಿಕಾಂಶದ ಆಗರ ಎನ್ನುತ್ತಾರೆ ತಜ್ಞರು. ಹಸಿಯಾಗಿಯೂ ಸೇವಿಸಬಹುದಾದ ತರಕಾರಿ ಈ ಗೆಣಸು. ಅಲ್ಲದೆ ಇದನ್ನು ವಿವಿಧ ರೀತಿಯ ಸಿಹಿತಿನಿಸುಗಳನ್ನು ತಯಾರಿಸಿಯೂ ಸೇವಿಸಬಹುದು. ಆದ್ದರಿಂದ ಸಿಹಿ ಪೊಟಾಟೊ ಒಂದು ಪರಿಪೂರ್ಣ ಆಹಾರವಾಗಿದೆ.

 

ಗೆಣಸಿನ ಉಪಯೋಗಗಳು

ಮಧುಮೇಹಿಗಳಿಗೆ ಗೆಣಸು ಉತ್ತಮ ಆಹಾರವಾಗಿದೆ. ಅಲ್ಲದೆ ಬೊಜ್ಜು, ಪಿಸಿಒಡಿ ಸಮಸ್ಯೆ ಇರುವವರಿಗೆ ಉತ್ತಮ ನಾರಿನ ತರಕಾರಿಯಾಗಿದೆ.

ನೀವು ಜಿಮ್​ಗಳಿಗೆ ಹೋಗುವವರಾದರೆ ಅಥವಾ ಇನ್ನಿತರ ಟ್ರೈನಿಂಗ್​ಗಳಿಗೆ ತೆರಳುವವರಾದರೆ ಸಂಜೆ ಸಮಯದಲ್ಲಿ ಗೆಣಸು ಉತ್ತಮ ಸ್ನಾಕ್ಸ್​ ಆಗಲಿದೆ. ಗೆಣಸಿನ ಪರೋಟ ಅಥವಾ ಅದನ್ನು ಬೇಯಸಿ ಹಾಗೆಯೇ ತಿನ್ನಬಹುದು.

ಗೆಣಸಿನಲ್ಲಿ ಯಥೇಚ್ಛವಾದ ವಿಟಮಿನ್​ ಎ ಅಂಶವಿದೆ. ವಿಟಮಿನ್​ ಎ ರೋಗದ ವಿರುದ್ಧ ಹೋರಾಡಲು ಸಹಾಯಕವಾಗಿದೆ.

ಗೆಣಸು ನಿಮ್ಮ ದೇಹದ ಚರ್ಮವನ್ನು ಮೃದುಗೊಳಿಸುಲು ಸಹಾಯ ಮಾಡುತ್ತದೆ. ದೇಹ ಉಬ್ಬುವಿಕೆ, ಆಮ್ಲೀಯತೆಯಿಂದಲೂ ಇದು ರಕ್ಷಿಸಲಿದೆ.

ಗೆಣಸು ನಿಮಗೆ ನಿದ್ದೆ ಬರಲು ಸಹಾಯ ಮಾಡುತ್ತದೆ. ಹೀಗಾಗಿ ನೀವೇನಾದರೂ ನಿದ್ದೆಗಡುವ ಕೆಲಸವೇನಾದರೂ ಮಾಡಿದ್ದರೆ ಗೆಣಸಿನ ಖಾದ್ಯವನ್ನು ಸೇವಿಸಿ ಮಲಗಿ ನಿದ್ದೆ ಚೆನ್ನಾಗಿ ಬರಲಿದೆ.


Related Posts

ಶೈಕ್ಷಣಿಕ ಸಾಧನೆಯಲ್ಲೂ ‘ಸೇಮ್ ಟು ಸೇಮ್’: ಕುಂದಾಪುರದ ಅವಳಿ ಸಹೋದರಿಯರ SSLC ಪವಾಡ!


Share         ​ಕುಂದಾಪುರ: ಅವಳಿ ಜವಳಿ ಮಕ್ಕಳು ಅಂದಮೇಲೆ ಅವರ ರೂಪ, ಬಣ್ಣ, ನಡವಳಿಕೆ ಹಾಗೂ ಆಲೋಚನೆಗಳಲ್ಲಿ ಸಾಮ್ಯತೆ ಇರುವುದು ಸಹಜ ಸಂಗತಿ. ಆದರೆ, ಕುಂದಾಪುರದ ಈ ಇಬ್ಬರು ಸಹೋದರಿಯರು ಶೈಕ್ಷಣಿಕ ಸಾಧನೆಯಲ್ಲೂ ತಾವು ಸಂಪೂರ್ಣವಾಗಿ


Read More »

ಮಂಗಳೂರು ದಸರಾ ಇತಿಹಾಸದಲ್ಲಿ ಹೊಸ ಮೈಲಿಗಲ್ಲು – ₹67 ಕೋಟಿ ವೆಚ್ಚದ ಭೂಗತ ಕೇಬಲ್ ಯೋಜನೆಗೆ ಮಂಜೂರಾತಿ


Share         ವಿಶ್ವವಿಖ್ಯಾತ ಮಂಗಳೂರು ದಸರಾ ಮಹೋತ್ಸವದ ಮೆರವಣಿಗೆಗೆ ದಶಕಗಳಿಂದ ಎದುರಾಗಿದ್ದ ತಾಂತ್ರಿಕ ಸವಾಲಿಗೆ ಈಗ ಶಾಶ್ವತ ಪರಿಹಾರ ಸಿಕ್ಕಂತಾಗಿದೆ. ಕುದ್ರೋಳಿ ಶ್ರೀ ಗೋಕರ್ನಾಥ ಕ್ಷೇತ್ರದ ಆಡಳಿತ ಮಂಡಳಿಯ ಸುದೀರ್ಘ ಪ್ರಯತ್ನದ ಫಲವಾಗಿ, ಮೆರವಣಿಗೆ ಮಾರ್ಗದಲ್ಲಿ


Read More »

ಉಡುಪಿ ಸಿಟಿ ಬಸ್‌ ಚಾಲಕನ ಮಗಳು ಶಾಲೆಗೆ ಪ್ರಥಮ ರಾಂಕ್ – ದ್ರುತಿ ಪೂಜಾರಿ ಸಾಧನೆ…


Share         ಉಡುಪಿ: ಶ್ರಮ, ಸಂಕಲ್ಪ ಮತ್ತು ಕುಟುಂಬದ ಬೆಂಬಲ ಇದ್ದರೆ ಯಾವ ಸಾಧನೆಯೂ ಅಸಾಧ್ಯವಲ್ಲ ಎಂಬುದಕ್ಕೆ ನಗರದ ಸಿಟಿ ಬಸ್ ಚಾಲಕರ ಮಗಳು ದ್ರುತಿ ಪೂಜಾರಿ ಉತ್ತಮ ಉದಾಹರಣೆ ಆಗಿದ್ದಾಳೆ. 23/04/2026 ರಂದು ಪ್ರಕಟವಾದ


Read More »

ಶ್ರೀಯುತ ಮಂಜುನಾಥ ಪೂಜಾರಿ ಮುದ್ರಾಡಿ ಅವರಿಗೆ ಅವರಿಗೆ ರಾಜ್ಯ ಸಚಿವರ ಸ್ಥಾನಮಾನ


Share         ಶ್ರೀ ನಾರಾಯಣ ಗುರು ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶ್ರೀಯುತ ಮಂಜುನಾಥ ಪೂಜಾರಿ ಮುದ್ರಾಡಿ ಅವರಿಗೆ ರಾಜ್ಯ ಸಚಿವರ ಸ್ಥಾನಮಾನ ಲಭಿಸಿರುವುದು ನಮ್ಮ ಸಮಾಜಕ್ಕೆ ಹೆಮ್ಮೆಯ ಸಂಗತಿ. ಈ ಕುರಿತು ಏಪ್ರಿಲ್ 2ರಂದು ಸರಕಾರದ


Read More »

ಕಾರ್ಕಳದ ಸುಧಾಕರ್ ಪೂಜಾರಿಗೆ ‘ಐಕಾನಿಕ್ ಟ್ರೈನರ್’ ಗೌರವ ಪದವಿ


Share         ಬೆಂಗಳೂರು: ಎಕ್ಕಾರ ಲೈಫ್ ಸೈನ್ಸಸ್ ಪ್ರೈವೇಟ್ ಲಿಮಿಟೆಡ್ ಇದರ ಆಡಳಿತ ನಿರ್ದೇಶಕರಾದ ಕಾರ್ಕಳದ ಸುಧಾಕರ್ ಪೂಜಾರಿ ಅವರಿಗೆ ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ವತಿಯಿಂದ “ಐಕಾನಿಕ್ ಟ್ರೈನರ್” ಎಂಬ ಗೌರವಪೂರ್ಣ ಪದವಿ ಪ್ರದಾನ ಮಾಡಲಾಗಿದೆ.


Read More »

ಅನಿತಾ ಪಿ. ತಾಕೊಡೆ ಅವರ ‘ಮೇಣಕ್ಕಂಟಿದ ಬತ್ತಿ’ ಕವನಕ್ಕೆ ಒಲಿದ ಸಂಕಮ್ಮ ಸಂಕಣ್ಣನವರ್ ದತ್ತಿ ಪ್ರಶಸ್ತಿ


Share         ಕರ್ನಾಟಕ ಲೇಖಕಿಯರ ಸಂಘವು 2025ನೇ ಸಾಲಿನ ವಿವಿಧ ದತ್ತಿನಿಧಿ ವಾರ್ಷಿಕ ಪ್ರಶಸ್ತಿಗಳನ್ನು ಪ್ರಕಟಿಸಿದೆ. ಹಸ್ತಪ್ರತಿಯಲ್ಲಿ ಗವಿಸಿದ್ದ ಎನ್. ಬಳ್ಳಾರಿ ಕಾವ್ಯ ಪ್ರಶಸ್ತಿ ಪಡೆದ, ಅನಿತಾ ತಾಕೊಡೆಯವರ ‘ಮೇಣಕ್ಕಂಟಿದ ಬತ್ತಿ’ ಕವನ ಸಂಕಲನ ಕ್ಕೆ 


Read More »