ಕಾರ್ಕಳ: ಸ್ವಸ್ತಿಕ್ ಪ್ರೊಡಕ್ಷನ್ ಇದರ ನಿರ್ಮಾಣದಲ್ಲಿ ಸುರೇಂದ್ರ ಮೋಹನ್ ಇವರ ಸಾರಥ್ಯದಲ್ಲಿ ನಮ್ಮ ಕುಡ್ಲ 24×7ನಲ್ಲಿ ಪ್ರಸಾರವಾಗುತ್ತಿರುವಂತಹ “ತುಳುನಾಡ ಬಂಗಾರ್ ಗರೋಡಿಲು” ಸಾಕ್ಷ್ಯಚಿತ್ರದ ಟೈಟಲ್ ಗೀತೆಯ ಮರು ವೀಡಿಯೋ ಚಿತ್ರೀಕರಣವು ಯೂತ್ ಬಿಲ್ಲವ(ರಿ) ಕಾರ್ಕಳ ಇವರ ಸಹಯೋಗದೊಂದಿಗೆ ನಿನ್ನೆ ದಿನಾಂಕ 07/07/2020 ಥೀಮ್ ಪಾರ್ಕ್ ಕಾರ್ಕಳದಲ್ಲಿ ನೇರವೆರಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಡಿ ಆರ್ ರಾಜು ಕಾರ್ಕಳ ಬಿಲ್ಲವ ಸಂಘ(ರಿ) ಇದರ ಅಧ್ಯಕ್ಷರು ಹಾಗೂ ಅಂತರರಾಷ್ಟ್ರೀಯ ಕ್ರೀಡಾಪಟು ರೋಹಿತ್ ಕುಮಾರ್ ಕಟೀಲು ರವರು ನೇರವೇರಿಸಿದರು.
ಕಾರ್ಯಕ್ರಮದಲ್ಲಿ ದೀನೆಶ್ ಸುವರ್ಣ ರಾಯಿ,ಸುನೀಲ್ ನೆಲ್ಲಿಗುಡ್ಡೆ, ಶ್ರೀನಿವಾಸ ಪೂಜಾರಿ ಎರ್ಲಪಾಡಿ,ಶರತ್ ಪೂಜಾರಿ ಬಗ್ಗತೋಟ ಹಾಗೂ ತಂಡದ ಸಾರಥಿ ಸುರೇಂದ್ರ ಮೋಹನ್ ಮುದ್ರಾಡಿ, ತಂಡದ ಸದಸ್ಯರು ಹಾಗೂ ಹಲವಾರು ಕಲಾವಿದರು,ಯೂತ್ ಬಿಲ್ಲವ ಕಾರ್ಕಳ ಇದರ ಸದಸ್ಯರು ಉಪಸ್ಥಿತಿಯಿದ್ದರು..ಕಾರ್ಯಕ್ರಮದ ನಿರೂಪಣೆಯನ್ನು ರಮೇಶ್ ಕಲ್ಲೊಟ್ಟೆಯವರು ನೆರವೇರಿಸಿದರು.
ಕೋವಿಡ್ ಲಾಕ್ಡೌನ್ನಿಂದ ನಿಂತು ಹೋಗಿದ್ದ ಕಾರ್ಯಕ್ರಮವು ಅತೀ ಶೀಘ್ರದಲ್ಲಿ ಭಾನುವಾರ ಬೆಳ್ಳಿಗೆ 11;30 ನಮ್ಮ ಕುಡ್ಲ 24×7 ಪ್ರಸಾರಗೊಳ್ಳಲಿದೆ ಎಂದು ಸುರೇಂದ್ರ ಮೋಹನ್ ತಿಳಿಸಿರುತ್ತಾರೆ.
Credits: ನೀತು ಬೆದ್ರ