ಅಮೃತ ಕ್ರೀಡಾ ದತ್ತು ಯೋಜನೆಯಡಿಯಲ್ಲಿ ಪ್ಯಾರೀಸ್ ಒಲಂಪಿಕ್ಸ್ ಕ್ರೀಡಾಕೂಟದಲ್ಲಿ ಉತ್ತಮ ಸಾಧನೆ ತೋರಲು ಪದಕ ವಿಜೇತ ಸಾಮರ್ಥ್ಯವುಳ್ಳ 75 ಕ್ರೀಡಾಪಟುಗಳನ್ನು ಆಯ್ಕೆ ಮಾಡಲಾಗಿದೆ.
ಅಂತರಾಷ್ಟ್ರೀಯ ಪವರ್ ಲಿಫ್ಪಿಂಗ್ ಕ್ರೀಡಾಪಟು ಆಗಿರುವ ಕಾರ್ಕಳ ತಾಲೂಕಿನ ಬೋಳ ಗ್ರಾಮದ ಅಕ್ಷತಾ ಪೂಜಾರಿಯವರು ಒಲಂಪಿಕ್ಸ್‌ನಲ್ಲಿ ಭಾಗವಹಿಸುವ ಆರ್ಹತೆಯನ್ನು ಹೊಂದಿದ್ದಾರೆ.
ಇವರನ್ನು ಪ್ರೋತ್ಸಾಹಿಸಿದ್ದಲ್ಲಿ ಉತ್ತಮ ಫಲಿತಾಂಶ ನಿರೀಕ್ಷಿಸಬಹುದೆಂಬ ಕಾರಣದಿಂದ ಬೋಳ ಅಕ್ಷತಾ ಪೂಜಾರಿ ಅವರನ್ನು ಪವರ್ ಲಿಫ್ಪಿಂಗ್ ಕ್ರೀಡಾಪಟು ಇವರನ್ನು 76ನೇ ಕ್ರೀಡಾಪಟುವಾಗಿ ಆಯ್ಕೆ ಮಾಡಲಾಗಿದೆ ಎಂದು ಕರ್ನಾಟಕ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಅಧೀನ ಕಾರ್ಯದರ್ಶಿ ಎಂ.ಉಮೇಶ್ ಶಾಸ್ತ್ರೀ ಪ್ರಕಟಣೆ ಹೊರಡಿಸಿದ್ದಾರೆ.