ಮಂಗಳೂರು: ಕೊರೊನಾ ಪಾಸಿಟಿವ್ ಬಂದ ಹಿನ್ನಲೆಯಲ್ಲಿ ಜನಾರ್ದನ ಪೂಜಾರಿ ಹಾಗು ಕುಟುಂಬದ ಮೂವರು ಸದಸ್ಯರು ಜುಲೈ ೪ ರಂದು ನಗರದ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ದೈವ – ದೇವರ ಅನುಗ್ರಹ, ಸಮಾಜದ ಹಾರೈಕೆಯಿಂದ ಗುಣಮುಖರಾಗಿದ್ದು, ಇವತ್ತು ಜುಲೈ ೨೦ ರಂದು ಬಿಡುಗಡೆ ಹೊಂದಿದ್ದಾರೆ. ಹಿತೈಷಿಗಳಿಗೆ ಹಾಗೂ ಆಸ್ಪತ್ರೆಯ ವೈದ್ಯರು ದಾದಿಯರು, ಸಿಬ್ಬಂದಿ ವರ್ಗದವರಿಗೆ ಧನ್ಯವಾದ ತಿಳಿಸಿದ್ದಾರೆ.
ಹಾಗೂ ಕೊರೊನಾ ರೋಗಕ್ಕೆ ಯಾರು ಭಯಪಡಬೇಕಾಗಿಲ್ಲ, ಪ್ರತಿಯೊಬ್ಬರೂ ಆತ್ಮಸ್ಥೈರ್ಯವನ್ನು ಬೆಳೆಸಿಕೊಳ್ಳಿ ಹಾಗೂ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಉತ್ತಮ ಪೌಷ್ಟಿಕ ಆಹಾರವನ್ನು, ಕಶಾಯವನ್ನು ಸೇವನೆ ಮಾಡಿ. ಪ್ರತಿಯೊಬ್ಬರೂ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ. ಎಂದು ಹೇಳಿದ್ದಾರೆ.
Email us: billavaswarriors@gmail.com