TOP STORIES:

FOLLOW US

ಕೊರೊನಾ ವಿರುದ್ಧ ಯುಧ್ಧ ಸಾರಿ ಗೆದ್ದ ಯಂಗ್ ಕೋವಿಡ್ ವಾರಿಯರ್ ಪ್ರಶಸ್ತಿ ಪಡೆದ ಅಭಿನ್ ಬಂಗೇರ


ಕೊರೊನಾ ವಿರುದ್ಧ ಯುಧ್ಧ ಸಾರಿ ಗೆದ್ದ ಯಂಗ್ ಕೋವಿಡ್  ವಾರಿಯರ್ ಪ್ರಶಸ್ತಿ ಪಡೆದ ಅಭಿನ್ ಬಂಗೇರ

ಜಗತ್ತಿಗೆ ಕೊರೊನಾ ಎಂಬ ಮಹಾಮಾರಿಯ ಆರ್ಭಟದ ಸಮಯ .ಇಡೀ ಲೋಕದಲ್ಲಿ ನೀರವ ಮೌನ ಆವರಿಸಿದ ಕಾಲ. ಎಲ್ಲಿನೋಡಿದರು ಕೊರೊನಾ ಎಂಬ ಮೂರಕ್ಷರದ ವೈರಸ್ ಆರ್ಭಟದಿಂದ ಜಗತ್ತು ತತ್ತರಿಸಿದ ದಿನ.ಇಂತಹ ಸಮಯದಲ್ಲಿ ಸಂಕಷ್ಟದಲ್ಲಿಇರುವ ಜನರಿಗೆ ಸಹಾಯಕ್ಕೆ ಬಂದವರೇ ಕೊರೊನಾ ವಾರಿಯರ್ಸ್. ಕಷ್ಟದ ದಿನಗಳನ್ನು ಎದುರಿಸುತ್ತಾ ಅನ್ಯರ ಪಾಲಿಗೆಸಹಾಯದ ಬೆಳಕು ಚೆಲ್ಲುವ ವಾರಿಯರ್ಸ್ ಗಳ ಸೇವೆ ನಿಜಾಕ್ಕೂ ಅಧ್ಧುತ. ಇಂತಹ ಕೊರೊನಾ ವಾರಿಯರ್ಸ್ ಗಳ ಪಟ್ಟಿಯಲ್ಲಿನಮ್ಮ ಬಿಲ್ಲವ ಸಮಾಜದ ಯುವ ತರುಣ ಈಗ ಸುದ್ದಿಯಲ್ಲಿ ಇದ್ದಾರೆ. ವಿದ್ಯಾಭ್ಯಾಸದೊಂದಿಗೆ ಯುವ ಸಮಾಜ ಸೇವಕರಾಗಿಗುರುತಿಸಿಕೊಂಡು. ಜನಪ್ರಿಯ ಸಮಾಜಸೇವಕರಾಗಿ ಮೆಚ್ಚುಗೆ ಗಳಿಸಿದ ಇವರೇ ಅಭಿನ್ ಬಂಗೇರ. ಇವರ ಸಾಧನೆಯ ಹಾದಿಯನ್ನುನಿಮ್ಮ ಮುಂದೆ ಇಡಲು ಬಯಸುತ್ತೇನೆ.. ಬಂಟ್ವಾಳ ತಾಲೂಕಿನ ಸಂಜೀಪ ಮುನ್ನೂರು ಮೂಲದ  ಯೋಗೀಶ್ ಪೂಜಾರಿ ಮತ್ತು ಶ್ರೀಮತಿ ನೀತಾ ಯೋಗೀಶ್ ದಂಪತಿಗಳ ಮಡಿಲಿಗೆ ಹೂ ಮಳೆ ಸುರಿಸಿದ ಹೆಮ್ಮೆಯ ಸುಪ್ರುತ. ಪ್ರಸ್ತುತ ಬಿ.ಕಾಂ ವಿದ್ಯಾರ್ಥಿ. ಬಾಲ್ಯಕಾಲದಲ್ಲಿ ಇದ್ದ ಸಮಾಜಮುಖಿ ಕಾರ್ಯಗಳ ಬಗ್ಗೆ ಇದ್ದ  ಆತಿಯಾದ ಆಸ್ತಕಿ ಮುಂದೆ ಇವರ ಸಮಾಜಮುಖಿ ಕಾರ್ಯಕ್ಕೆಅಡಿಪಾಯವಾಯಿತು. ಮುಂದೆ ಜೀವನದಲ್ಲಿ ಸಮಾಜ ಮುಖಿ ಕಾರ್ಯಗಳಿಗೆ ಮುನ್ನುಡಿ ಬರೆದ ಇವರು ನಂತರ ಸೃಷ್ಟಿಸಿದೆಲ್ಲಇತಿಹಾಸ‌.

2019 ರಲ್ಲಿ ಉಂಟಾದ ಪ್ರಾಕೃತಿಕ ವಿಕೋಪದಲ್ಲಿ ಹಾನಿಯಾದ ಕೊಡಗು ಜಿಲ್ಲೆಯ  ನಿರಾಶ್ರಿತರಿಗೆ ಹಣ ಸಂಗ್ರಹ ಮತ್ತು ಆಹಾರ  ಧಾನ್ಯಗಳ ಸಂಗ್ರಹವನ್ನು ಮಾಡುತ್ತಾರೆ.ಜೊತೆಗೆ  ಚಾರ್ಮಾಡಿ ಭೂ ಕುಸಿತ ಸಂದರ್ಭದಲ್ಲಿ ರಕ್ಷಣಾ ಕಾರ್ಯದಲ್ಲೂ ಕೈ ಜೋಡಿಸಿ ತಮ್ಮಕೈಲಾದಷ್ಟು ಸಹಾಯ ಮಾಡುತ್ತಾರೆ. ಹನಿ ಹನಿ ಕೂಡಿ ಹಳ್ಳ ಎಂಬ ನುಡಿಯಂತೆ ಬಂಟ್ವಾಳದಲ್ಲಿ ಯುವಕರನ್ನು ಒಂದುಗೂಡಿಸಿ  ತಮ್ಮಸಾರಥ್ಯದಲ್ಲಿಟೀಮ್ ಎಸ್ ವಿ ಎಸ್  ಎಂಬ ತಂಡವನ್ನು ನಿರ್ಮಿಸಿ ಹಲವಾರು  ಜನಜಾಗೃತಿ ಅಭಿಯಾನಗಳು ನಡೆಸಿದ್ದಾರೆ. ತಂಡದ ಮುಖೇನಪ್ಲಾಸಿಕ್ ಮುಕ್ತ ಬಂಟ್ವಾಳಮತ್ತುಗೋ ಗ್ರೀನ್ ಬಂಟ್ವಾಳಹೀಗೆ ಮುಂತಾದ ಯಶ್ವಸಿ ಅಭಿಯಾನಗಳು ತಂಡದ  ಹೆಸರಿಗೆ ಸೇರಿದೆ. ಜೊತೆಗೆ ಅಲ್ಲಿಯ ಶಾಸಕರು ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದು ಬೆನ್ನು ತಟ್ಟಿ ಪೋತ್ಸಾಹಿಸಿದ್ದಾರೆ.

ಹೀಗೆ ಸಾಗುವ ಇವರ ಸಮಾಜ ಮುಖಿ ಕಾರ್ಯ ಕೊರೊನಾ ಸಮಯದಲ್ಲಿ ಮತ್ತುಷ್ಟು ವೇಗ ಪಡೆಯುತ್ತಾದೆ. ಕೊರೊನಾದ ದಿನಗಳಲ್ಲಿ ಅನೇಕ ಬಡ ಜನರಿಗೆ ಹಾಗೂ ಸಂಕಷ್ಟದಲ್ಲಿರುವ ಕುಟುಂಬಗಳಿಗೆ ಉಚಿತ ದಿನಬಳಕೆ ವಸ್ತುಗಳು ಒದಗಿಸಿ. ನೆರವಿನ ಹಸ್ತಚಾಚುತ್ತಾ ಬಂದಿದ್ದಾರೆ. ಲಾಕ್ ಡೌನ್ ಸಮಯದಲ್ಲಿ ಬೀದಿ ಬದಿಯ ಮೂಕಪ್ರಾಣಿಗಳಿಗೆ ಆಹಾರ ನೀಡುತ್ತಾ. ಇತರರಿಗೆಮಾದರಿಯಾಗಿದ್ದಾರೆ.

ತಮ್ಮ ದೈನಂದಿನ ಜೀವನದಲ್ಲಿ ಸಮಾಜ ಸೇವೆ ಒಂದು ಭಾಗ ಎಂದು ತೊಡಗಿಸಿಕೊಂಡಿರುವ ಇವರ ಕಾರ್ಯ ವೈಖರಿಯನ್ನು ಮೆಚ್ಚಿ. ರಾಷ್ಟ್ರೀಯ ಸೇವಾ ಯೋಜನೆ ಹಾಗೂ ಯೆನಪೊಯಾ ವಿಶ್ವವಿದ್ಯಾಲಯದ ಸಹಯೋಗದಲ್ಲಿ ನಡೆದ ರಾಷ್ಟ್ರ ಮಟ್ಟದ ಸ್ಪರ್ಧೆಯಲ್ಲಿ278  ಸ್ಪರ್ಧಿಗಳ ಪೈಕಿ ಇವರ ಮಾಡಿರುವ ಕೋವಿಡ್ ಸೇವಾ ಕಾರ್ಯನ್ನು ಗುರುತಿಸಿ” Youth covid warrior” ಎಂಬ ರಾಷ್ಟೀಯಪುರಸ್ಕಾರವನ್ನು ನೀಡಿ ಗೌರವಿಸಿದೆ.

ಜೊತೆಗೆ “national council of rural education Dept of higher education minister  of Human resource  development  govt of India” ಇದರ ವೆಬಿನಾರ್ ನಲ್ಲಿ   ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡ ಹೆಮ್ಮೆ ಇವರಿಗಿದೆ. ಹಾಗೇವಿಶ್ವದ ಅತೀ ದೀರ್ಘ ವೆಬಿನಾರ್ ನಲ್ಲಿ ಭಾಗವಹಿಸಿ  ಗಮನ ಸೆಳೆದ ಇವರು World book of record, Lodon  ಆಯ್ಕೆಯಾಗಿ ಸೈಎನಿಸಿಕೊಂಡಿದ್ದಾರೆ. ಇಷ್ಟು ಮಾತ್ರವಲ್ಲದೇ ಇತ್ತೀಚಿನ ದಿನದಲ್ಲಿ ನಡೆದ ರಾಷ್ಟ್ರೀಯ ಸೇವಾ ಯೋಜನೆ ದಿನದ ಅಂಗವಾಗಿ  Savitri bhai phule university of Pune ಎಂಬ ರಾಷ್ಟ್ರ ಮಟ್ಟದಲ್ಲಿ ನಡೆಯುವ ವೆಬಿನಾರ್ ನಲ್ಲಿ  ಕರ್ನಾಟಕ ರಾಜ್ಯವನ್ನು  ಪ್ರತಿನಿಧಿಸಿದಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡ ಹೆಮ್ಮೆ ಇವರ ಹೆಸರಿನಲ್ಲಿದೆ. ಇವರ ಸಾಧನೆಯನ್ನು ಗುರುತಿಸಿ ಪ್ರಸಿಧ್ಧಮಂಗಳೂರು ಆಕಾಶವಾಣಿಇದರ ಜನಪ್ರಿಯ ಕಾರ್ಯಕ್ರಮದಲ್ಲಿ ಇವರನ್ನು ಸಂದರ್ಶಿಸುವ ಮೂಲಕ ಗೌರವಿಸಲಾಗಿದೆ. ಮತ್ತು ಮಂಗಳೂರು ವಿಶ್ವವಿದ್ಯಾಲಯದ ಉಪಕುಲಪತಿಗಳ ಕೈಯಿಂದ ಇವರ ಸಾಧನೆಗೆ  ಸನ್ಮಾನ ಹಾಗೂ ಗೌರವ ಮತ್ತು ಮೆಚ್ಚುಗೆಯ ಮಾತುಗಳನ್ನುಹಾಡಿದ್ದಾರೆ.

ಬದಲಾಗುತ್ತಿರುವ ಜಗದಲ್ಲಿ ಸಮಾಜ ಸೇವೆ ಎಂಬ ಕೊಡಲೆ ಹಿಂಜರಿಯುವ ಜನಗಳೇ ಹೆಚ್ಚು.ಅದರಲ್ಲೂ ವಿಶೇಷವಾಗಿವಿದ್ಯಾಭ್ಯಾಸದೊಂದಿಗೆ ಇವರ ಸಮಾಜಮುಖಿ ಕಾರ್ಯ ನೋಡಿ ಚಪ್ಪಾಳೆ ತಟ್ಟದ ವ್ಯಕ್ತಿ ಇರಲು ಸಾಧ್ಯವಿಲ್ಲ. ಸಮಾಜ ಸೇವೆಗೆ ಪಣತೊಟ್ಟ ನಿಂತ ಇವರ ಸಾಧನೆಯ ದಾರಿ  ಶ್ಲಾಘನೀಯ. ಇವರ ಸಾಧನೆ ಇತರ ಯುವಕರಿಗೂ ಸ್ಪೂರ್ತಿ ನೀಡಲಿ. ಇವರ ಹಸ್ತದಮೂಲಕ ಇನ್ನಷ್ಟು ಸಮಾಜ ಸೇವೆ ಮಾಡಲು ದೇವರು ಅನುಗ್ರಹಿಸಿಲಿ ಎಂಬುಂದು ನಮ್ಮ ತಂಡದ ಆಶಯವಾಗಿದೆ.

 

ಬರಹ:- ಶ್ರವಣ್ ಬಿ.ಸಿ.ರೋಡ್


Share:

More Posts

Category

Send Us A Message

Related Posts

ವಿಶ್ವ ಮಾನ್ಯ ಕನ್ನಡಿಗ. 2024 ಪ್ರಶಸ್ತಿಗೆ ಭಾಜನರಾದ ಸನ್ಮಾನ್ಯ ಶ್ರೀ ಕೆ.ಪಿ ಮಂಜುನಾಥ್ ಸಾಗರ್ 


Share       ಅಮೆರಿಕದ ರಿಚ್ಮಂಡ್ ನಗರ ದ ಗ್ರೇಟರ್ ರಿಚ್ಮಂಡ್ ಕನ್ವೆನ್ಷನ್ ಸೆಂಟರ್ ನಲ್ಲಿ ನಡೆದ 12 ನೇ ಅಕ್ಕ ವಿಶ್ವ ಮಾನ್ಯ ಕನ್ನಡ ಸಮ್ಮೇಳನವು ನಡೆಯಿತು. ಈ ಸಂದರ್ಭದಲ್ಲಿ ಕನ್ನಡ ಭಾಷೆ, ಸಂಸ್ಕೃತಿ, ಸಾಹಿತ್ಯ


Read More »

ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮದಲ್ಲಿ ಶಾಲೆಗೆ ಶಾಲಾ ವಾಹನ ಕೊಡುಗೆ ನೀಡಿದ ಉದ್ಯಮಿ…!! ಸುಭಾಷ್ ಪೂಜಾರಿ


Share       ಬೈಂದೂರು : ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ತಗ್ಗರ್ಸೆ – ಬೈಂದೂರು ಇಲ್ಲಿ 78 ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯನ್ನು  ಎಸ್.ಡಿ.ಎಮ್.ಸಿ ಅಧ್ಯಕ್ಷರಾದ ಸುರೇಶ್ ಪೂಜಾರಿ ಧ್ವಜಾರೋಹಣ ಕಾರ್ಯಕ್ರಮ ನೆರೆವೆರೆಸಿದರು. ಈ ಸಮಯದಲ್ಲಿ ಶಾಲೆಗೆ


Read More »

ಬಿರುವೆರ್ ಕುಡ್ಲದಿಂದ ಸ್ವಾತಂತ್ರ್ಯ ದಿನಾಚರಣೆ ಮೂರು ಕುಟುಂಬಗಳಿಗೆ 1 ಲಕ್ಷ ರೂ.ನೆರವು


Share       ಕುದ್ರೋಳಿ,ಆ.15: ಬಿರುವೆರ್ ಕುಡ್ಲ ದಿಂದ ಲೇಡಿಹಿಲ್ ಸರ್ಕಲ್ ನಲ್ಲಿ ಅದ್ದೂರಿಯ ಸ್ವಾತಂತ್ರ್ಯ ದಿನಾಚರಣೆ ಹಾಗೂ ಮೂರು ಕುಟುಂಬಗಳಿಗೆ ಒಂದು ಲಕ್ಷ ರೂ.ನೆರವು ಹಸ್ತಾಂತರ ಕಾರ್ಯಕ್ರಮವು ಬಿರುವೆರ್ ಕುಡ್ಲ ಸ್ಥಾಪಕಾಧ್ಯಕ್ಷ ಉದಯ ಪೂಜಾರಿ ಬಳ್ಳಾಲ್


Read More »

ಶ್ರೀ ರಾಮ್ ಫ್ರೆಂಡ್ಸ್ ಕಟೀಲ್ ಸಂಸ್ಥೆ : ಬಿರುವೆರ್ ಕುಡ್ಲ ಸಂಸ್ಥೆಯ ಸ್ಥಾಪಕ ಅಧ್ಯಕ್ಷ ಉದಯ ಪೂಜಾರಿಗೆ ಸಮ್ಮಾನ


Share       ಶ್ರೀ ರಾಮ್ ಫ್ರೆಂಡ್ಸ್ ಕಟೀಲ್ ಸಂಸ್ಥೆಯ 5 ನೇ ವಾರ್ಷಿಕೋತ್ಸವದ ಸಂಭ್ರಮ. ಕಾರ್ಯಕ್ರಮದಲ್ಲಿ ಫ್ರೆಂಡ್ಸ್ ಬಲ್ಲಾಳ್ ಭಾಗ್,ಬಿರುವೆರ್ ಕುಡ್ಲ ಸಂಸ್ಥೆಯ ಸ್ಥಾಪಕ ಅಧ್ಯಕ್ಷರಾದ ಶ್ರೀ ಉದಯ ಪೂಜಾರಿಯವರ ಸಮಾಜ ಸೇವೆಯನ್ನು ಗುರುತಿಸಿ ಸಮ್ಮಾನ


Read More »

ವಿಟ್ಲ ಕಸಬಾ ಗ್ರಾಮದ ನೆತ್ರೆಕೆರೆ ನಿವಾಸಿ ನಿವೃತ್ತ ಶಿಕ್ಷಕ ಗುಡ್ಡಪ್ಪ ಪೂಜಾರಿ ನಿಧನ


Share       ವಿಟ್ಲ; ವಿಟ್ಲ ಕಸಬಾ ಗ್ರಾಮದ ನೆತ್ರೆಕೆರೆ ನಿವಾಸಿ ನಿವೃತ್ತ ಶಿಕ್ಷಕ ಗುಡ್ಡಪ್ಪ ಪೂಜಾರಿ( 92 ವರ್ಷ) ಇತ್ತೀಚಿಗೆ ತನ್ನ ಸ್ವಗೃಹದಲ್ಲಿ ವಯೋ ಸಹಜವಾಗಿ ನಿಧನರಾದರು. ಇವರು ಸರಕಾರಿ ಪ್ರಾಥಮಿಕ ಶಾಲೆ ಅನಿಲಕಟ್ಟೆಯಲ್ಲಿ ಶಿಕ್ಷಕರಾಗಿ


Read More »

ಫ್ರೆಂಡ್ಸ್ ಸುರತ್ಕಲ್ ತುಳುನಾಡ ಬಿರುವೆರ್ (ರಿ )ವತಿಯಿಂದ ಸಹಾಯ ಧನ ವಿತರಣೆ


Share       ಫ್ರೆಂಡ್ಸ್ ಸುರತ್ಕಲ್ ತುಳುನಾಡ ಬಿರುವೆರ್ ಸಂಘಟನೆಯ ಸಕ್ರಿಯ ಕಾರ್ಯಕರ್ತ ಹಾಗೂ ನಮ್ಮೆಲ್ಲರ ಅತ್ಮೀಯರಾದ ಯಶೋಧರ ಹೊಸಬೆಟ್ಟು ರುವರು ಹಲವು ದಿನಗಳ ಹಿಂದೆ ತೀವ್ರ ಅನಾರೋಗ್ಯಕ್ಕಿಡಾಗಿದ್ದು,  ಅವರ ಚಿಕಿತ್ಸೆಗಾಗಿ ಲಕ್ಷಾಂತರ ರೂಪಾಯಿಗಳ ಅಗತ್ಯವಿದ್ದು, ಅವರ


Read More »