TOP STORIES:

FOLLOW US

ಕೋಗಿಲೆ ಕಂಠದಿಂದ ಜನಮನ ಸೆಳೆದ ತುಳುನಾಡಿನ ಚಲನ ಚಿತ್ರ ಹಿನ್ನಲೆ ಗಾಯಕಿ ವಿದ್ಯಾ ಸುವರ್ಣ


ಸಂಗೀತವೆಂದರೆ ಈ ಲೋಕದಲ್ಲಿ ಯಾರಿಗೆ‌ ತಾನೆ ಇಷ್ಟ ಇಲ್ಲ? ಮಾನವನ ಅಂತರಾಳದ ತುಡಿತಕ್ಕೆ ಸಂಗೀತವು ಬಹಳ ಹತ್ತಿರ. ಎಂತಹದನ್ನೂ ಕರಗಿಸುವ ಶಕ್ತಿ ಸಂಗೀತಕ್ಕಿರುತ್ತದೆ.ಇನ್ನು ಸಂಗೀತ ಕ್ಷೇತ್ರದಲ್ಲಿ ಮುಖ್ಯ ಆಕರ್ಶಣೆಯೆ ಹಾಡುಗಾರ.ಹಾಡುಗಾರನ ಸ್ವರ,ಜ್ಞಾನ, ಆಲಾಪ,ಸಪ್ತಸದವರ ರಾಗಗಳ ಮೂಲಕ ಪ್ರೇಕ್ಷಕರ ಮುಂದೆ ಹೇಗೆ ಪ್ರಸ್ತುತ ಪಡಿಸುತ್ತಾರೋ ಅದರ ಮೇಲೆ ವೇದಿಕೆಯ ಇಡೀ ಪ್ರದರ್ಶನವು ಅವಲಂಬಿಸಿರುತ್ತದೆ. ಗಾಯಕನ ಈ ಅದ್ಭುತ ಕಲೆಯನ್ನು ಹೊಂದಿರುವ ಹೀಗೊಂದು ಪ್ರತಿಭೆ ತನ್ನ ಕೋಗಿಲೆ ಕಂಠದಿಂದ ಜನಮನ ಸೆಳೆದು ತುಳುನಾಡಿನ ಚಲನ ಚಿತ್ರ ಹಿನ್ನಲೆ ಗಾಯಕಿ ವಿದ್ಯಾ ಸುವರ್ಣ.

ವಿದ್ಯಾ ಸುವರ್ಣ ಇವರು ದಿ.ನೋಣಯ್ಯ ಪೂಜಾರಿ ಹಾಗೂ ಯಮುನಾ ಪೂಜಾರಿಯವರ ಪುತ್ರಿಯಾಗಿ 03-08-1993 ರಂದು ಮಂಗಳೂರಿನಲ್ಲಿ ಜನಿಸಿದರು.ಬಾಲ್ಯದಲ್ಲೇ ಸಂಗೀತದ ಮೇಲೆ ಇವರು ಅಪಾರ ಆಸಕ್ತಿ ಹೊಂದಿದ್ದರು.ಈ ಸಂಗೀತ ಆಸಕ್ತಿಯಿಂದ ಶಾಲೆಯಲ್ಲಿಯೂ ಹಲವಾರು ಸ್ಪರ್ಧೆಯಲ್ಲಿ ಭಾಗವಹಿಸಿ ಸಂಗೀತದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದರು.ತನ್ನ ಈ ಪ್ರತಿಭೆಯಿಂದ ಸಣ್ಣ ವಯಸ್ಸಿನಲ್ಲೇ ಎಲ್ಲರ ಮೆಚ್ಚುಗೆಯನ್ನು ಪಡೆದಿದ್ದರು.

ಒಬ್ಬ ವ್ಯಕ್ತಿಯ ಕವಲೊಡೆಯುವ ಪ್ರತಿಭೆಗೆ ಪ್ರೋತ್ಸಾಹ ನೀಡುವ ಕೈಗಳ ಅಗತ್ಯವು ಇದೆ.ವಿದ್ಯಾ ಸುವರ್ಣ ಇವರಿಗೆ ತನ್ನ ಮನೆಯವರಿಂದಲೆ ಮೊದಲ ಪ್ರೋತ್ಸಾಹ ದೊರಕಿದೆ.ಹಾಗೆಯೆ ವಿ.ಜೆ.ಹಿಸ್ರಾರ್ ತಲ್ಲಣಿ ಇವರ ಸಂಪೂರ್ಣ ಬೆಂಬಲ ಹಾಗೂ ಪ್ರೋತ್ಸಾಹವು ಸಂಗೀತ ಕ್ಷೇತ್ರದಲ್ಲಿ ಮುಂದುವರೆಯಲು ಧೈರ್ಯ ತುಂಬಿದೆ.

ಮಲ್ಲೂರು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಹಾಗೂ ಸಂತ‌ ಆಂಥೋನಿ ಫೆ ಇಲ್ಲಿ ತಮ್ಮ ಪ್ರೌಢ ಶಿಕ್ಷಣ ಮುಗಿಸಿದರು ಇವರಿಗೆ ಸಂಗೀತದಲ್ಲೇ ಹೆಚ್ಚು ಆಸಕ್ತಿ ಇದ್ದ ಕಾರಣ ಕಲಿಕೆಯನ್ನು ಮುಂದುವರಿಸದೆ ಕಲಾ ಕ್ಷೇತ್ರದಲ್ಲಿ ಮುಂದುವರೆದರು.

ಹೀಗೆ ಸಂಗೀತದ ಪಯಣದಲ್ಲಿ ಸಿಕ್ಕಿದ ವೇದಿಕೆಗಳನ್ನೆಲ್ಲ ತಮ್ಮದಾಗಿಸಿಕೊಂಡು ಇವರು ಅನೇಕ ಭಕ್ತಿಗೀತೆ,ನಾಟಕಗಳಲ್ಲಿ ಧ್ವನಿ ನೀಡಿರುವರು.ಒಮಾನ್ ತುಳುವೆರ್ ಅರ್ಪಿಸಿದ ಗಾನಲೀಲೋತ್ಸವ, ಗೆಜ್ಜೆಗಿರಿಯಲ್ಲಿ ನಡೆದ ಬ್ರಹ್ಮಕಲಶೋತ್ಸವ, ಭಂಡಾರಿ ಬಿಲ್ಡರ್ಸ್ ಇವರ ಸಾರಥ್ಯದಲ್ಲಿ ನಡೆದ ಸರ್ಗಮ್ ಸಂಗೀತೋತ್ಸವ,ಒಡಿಯೂರು ರಥೋತ್ಸವ,ಗಂಗೊಳ್ಳಿಯಲ್ಲಿ ನಡೆದ ಸಂಗೀತ ಗಾನ ಸಂಭ್ರಮ,ಕುಮಟಾ ನುಡಿ ಹಬ್ಬ,ಕೋಟ ಅಮೃತೋತ್ಸವ,ವಿಶ್ವ ತುಳು ಸಮ್ಮೇಳನ,ವಿಟ್ಲ ಸ್ಟಾರ್ ನೈಟ್,ಉಡುಪಿ ಪರ್ಯಾಯ,ನರೇಂದ್ರ ಮೋದಿಯವರ ಆಗಮನ ದಿನದಂದು ಉಡುಪಿ ಮತ್ತು ಮಂಗಳೂರಿನಲ್ಲಿ ನಡೆದ ಆರ್ಯಭಟ ಪುರಸ್ಕೃತ ಜಗದೀಶ್ ಆಚಾರ್ಯ ಪುತ್ತೂರು ಇವರ ತಂಡದೊಂದಿಗೆ,ಮಾತ್ರವಲ್ಲದೆ ೧,೫೦೦ ಕ್ಕೂ ಹೆಚ್ಚು ವೇದಿಕೆಯಲ್ಲಿ‌ ಹಾಡಿರುವ ಮಂಗಳೂರಿನ ಹೆಮ್ಮೆಯ ಅಪ್ರತಿಮ ಕಲಾವಿದೆ ಇವರು.

ಇವರ ಅದ್ಭುತ ಸಿರಿಕಂಠವನ್ನು ಗುರುತಿಸಿ ಚಲನಚಿತ್ರದಲ್ಲಿಯೂ ಹಾಡು ಹಾಡಲು ಗಣೇಶ್ ಎನ್ನುವವರು ಪ್ರೋತ್ಸಾಹಿಸಿ ಇಂದು ಇವರು ಕುದುಕನ ಮದಿಮೆ, ಕಂಬಳಬೆಟ್ಟು ಭಟ್ರೇನ ಮಗಳು, ದಾಗಲ್ಬಾಜಿಳು, ಜೀವನಯಜ್ಞ,
ಗಂಧದಕುಡಿ ಮುಂತಾದ ಚಿತ್ರಗಳಲ್ಲಿ ಹಾಡಿರುತ್ತಾರೆ. ಹಾಗೆ ಮುಂದೆ ಬರುವಂತಹ ಕನ್ನಡ ಚಿತ್ರ,ನಿಶಾಚರ ಮತ್ತು ಪಿಸುಮಾತು ಎನ್ನುವ ಎರಡು ಚಿತ್ರಕ್ಕೆ ಧ್ವನಿ ನೀಡಿರುತ್ತಾರೆ.

ಸಾಧನೆಯ ಗರಿ ಏರುತ್ತಲೆ ಜನರ ಅಭಿಮಾನಕ್ಕೆ ಪಾತ್ರರಾಗಿ ಇವರು ಉತ್ತರ ಕನ್ನಡ ಕ್ಷತ್ರಿಯ ಸಮಾಜ ಬೆಂಗಳೂರು ವತಿಯಿಂದ ಸನ್ಮಾನ,ಓಮಾನ್ ತುಳುವೆರ್ ವತಿಯಿಂದ ಸನ್ಮಾನ,ಜೆ.ಸಿ.ಐ ವತಿಯಿಂದ ಗೌರವ ಸ್ಮರಣಿಕೆ,ಶ್ರೀ ಲಕ್ಷ್ಮೀ ಹೋಮ್ಸ ಆ್ಯಂಡ್ ಇನ್ಫ್ರಾಸ್ಟ್ರಕ್ಚರ್ ಉಡುಪಿ ವತಿಯಿಂದ ಗೌರವ ಸ್ಮರಣಿಕೆ,ಕರ್ನಾಟಕ ಜಾನಪದ ಪರಿಷತ್ತು ಬೆಂಗಳೂರು ಕೇರಳ ಗಡಿನಾಡ ಘಟಕ ವತಿಯಿಂದ ಗೌರವ ಸ್ಮರಣಿಕೆ,ಭಾವಲಿಪಿ ಪ್ರಕಾಶನ ಸಂಸ್ಥೆಯಿಂದ ಸ್ಮರಣಿಕೆ,ಶ್ರೀ ಕ್ಷೇತ್ರ ಮಹಾದೇವಿ ಮಂದಿರ ಮೂಡುಶೆಡ್ಡೆ ವತಿಯಿಂದ ಸನ್ಮಾನ ಸ್ಮರಣಿಕೆ,ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವಿಕಲ ಚೇತನರ ಹಾಗೂ ಹಿರಿಯ ನಾಗರೀಕ ಸಬಲೀಕರಣ ಇಲಾಖೆ ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರು ಇವರ ವಿಶ್ವ ವಿಕಲ ದಿನಾಚರಣೆಯ ಪ್ರಯುಕ್ತ ಗೌರವಾರ್ಥ ಸ್ಮರಣಿಕೆ,ಅಮ್ಮಾ ಗ್ರೂಪ್ ಕಮ್ಮಾಜೆ ಒಡಿಯೂರು ಬಂಟ್ವಾಳ ತಾಲೂಕು ದಕ್ಷಿಣ ಕನ್ನಡ ಗಾನ-೨೦೨೦ ಸಂಗೀತ ರಸಸಂಜೆ ಪ್ರಯುಕ್ತ ಸ್ಮರಣಿಕೆ,ಶಿವಂ ಡಾನ್ಸ್ ಅಕಾಡೆಮಿ ವಿಟ್ಲ ಸಾಂಸ್ಕೃತಿಕ ವೈಭವ-೨೦೨೦ ಸಂಭ್ರಮದಿ ಗೌರವ ಸ್ಮರಣಿಕೆ ಹೀಗೆ ಹತ್ತು ಹಲವಾರು ಪ್ರಶಸ್ತಿ,ಪುರಸ್ಕಾರಗಳಿಗೆ ಭಾಜನರಾಗಿರುವ ತಮಗೆ ಮುಂದೆ ಹೆಚ್ಚಿನ ಬಹುಮಾನಗಳು ನಿಮ್ಮ ಪಾಲಿಗೆ ಯಶಸ್ವಿಯಾಗಿ ದೊರಕಲಿ.

ಬಾಲಿವುಡ್ ನ ಪ್ರಖ್ಯಾತ ಗಾಯಕಿಯಾದ ಶ್ರೇಯಾ ಘೋಷಾಲ್ ರವರ ಸ್ವರ ಶೈಲಿಗೆ ಹೊಂದುವ ಇವರ ಕಂಠಕ್ಕೆ ತುಳುನಾಡಿನ ಶ್ರೇಯಾ ಘೋಷಾಲ್ ಎಂದೇ ಪ್ರಖ್ಯಾತರಾಗಿರುವರು.

ಹೀಗೆ ಸಂಗೀತ ಕ್ಷೇತ್ರಕ್ಕೆ ತನ್ನ ಅಧ್ಬುತ ಸ್ವರ ಮಾಧುರ್ಯದಿಂದ ಸಾಧನೆಯ ಹಾದಿಯಲ್ಲಿ ಸಾಗುವ ಇವರು ಇನ್ನು ಹದಿ ಹರೆಯ.ನಿಮ್ಮ ಸಾಧನೆಯ ಹಾದಿಯಲ್ಲಿ ಇನ್ನೂ ಹೆಚ್ಚು ಜನ ಮನ ತಲುಪಿ ಮುಂದೊಂದು ದಿನ ರಾಷ್ಟ್ರೀಯ ಹಿನ್ನಲೆ ಗಾಯಕರ ಸಾಲಿನಲ್ಲಿ ನಿಮ್ಮ ಹೆಸರು ಮಿಂಚಲಿ.

ತೃಪ್ತಿ.ಜಿ.ಕುಂಪಲ.


Share:

More Posts

Category

Send Us A Message

Related Posts

ಗೆಜ್ಜೆಗಿರಿಯ ಮೂಲಕ ಬಿಲ್ಲವ ಸಮಾಜಕ್ಕೆ ಸಂಘಟಾನಾತ್ಮಕ ಬಲ ತುಂಬಲು ಹೊರಟ ಗೆಜ್ಜೆಗಿರಿ ಕ್ಷೇತ್ರಾಡಳಿತ ಸಮಿತಿಗೆ ಅಭಿನಂದನೆ


Share       ಬಿಲ್ಲವ ಸಮಾಜ ಸೇವಾ ಸಂಘ(ರಿ) ಕುಂದಾಪುರ ಇದರ ಅಧ್ಯಕ್ಷರಾದ ಅಶೋಕ್ ಪೂಜಾರಿ ಬಿಜಾಡಿ ಹಾಗೂ ಸಂಘದ ಪಧಾಧಿಕಾರಿಗಳು  ಬ್ರಹ್ಮ ಶ್ರೀ ನಾರಾಯಣ ಗುರುಗಳ ವಿದ್ಯೆಯಿಂದ ಸ್ವತಂತ್ರರಾಗಿರಿ ಸಂಘಟನೆಯಿಂದ  ಬಲಯುತರಾಗಿ ಎಂಬ ತತ್ವದಂತೆ  ಬಿಲ್ಲವ


Read More »

ರಕ್ತಹೀನತೆಯಿಂದ ಬಳಲುತ್ತಿರುವವರು ಹುರುಳಿ ಸೇವನೆ ಮಾಡಿ


Share       ಹುರುಳಿ ನಾಲಿಗೆಗೆ ರುಚಿ ನೀಡುವುದರ ಜೊತೆಗೆ ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ. ಏಕೆಂದರೆ ಇದು ಪೌಷ್ಠಿಕಾಂಶಗಳಿಂದ ಸಮೃದ್ಧವಾಗಿದ್ದು, ಪ್ರೋಟೀನ್, ಫೈಬರ್, ಜೀವಸತ್ವಗಳು ಮತ್ತು ಖನಿಜಗಳ ಭಂಡಾರವಾಗಿದೆ. ಇದು ದೇಹಕ್ಕೆ ಅಗತ್ಯ ಪ್ರಯೋಜನಗಳನ್ನು ನೀಡುವ ಧಾನ್ಯವಾಗಿದೆ.


Read More »

ಬಂಟ್ವಾಳ ತಾಲೂಕು ಬಿಲ್ಲವ ಸಂಘದಲ್ಲಿ ಗೆಜ್ಜೆಗಿರಿ ಜಾತ್ರೋತ್ಸವ ಸಮಾಲೋಚನಾ ಸಭೆ


Share       ಬಂಟ್ವಾಳ : ಬಂಟ್ವಾಳ ತಾಲೂಕು ಬಿಲ್ಲವ ಸಮಾಜ ಸೇವಾ ಸಂಘದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಶ್ರೀ ಕ್ಷೇತ್ರ ಗೆಜ್ಜೆಗಿರಿ ಆಡಳಿತ ಸಮಿತಿಯ ಪದಾಧಿಕಾರಿಗಳು ಕ್ಷೇತ್ರದ ವಾರ್ಷಿಕ ಜಾತ್ರಾ ಮಹೋತ್ಸಕ್ಕೆ ಆಮಂತ್ರಿಸಿದರು. ಗೆಜ್ಜೆಗಿರಿ ಕ್ಷೇತ್ರಾಡಳಿತ


Read More »

ಫುಡ್ ಫೆಸ್ಟ್ ನಿಂದ ಬಂದ ಹಣ ಬಡವರ್ಗಕ್ಜೆ ಮೀಸಲಿಡುತ್ತಿರುವ ಬಿರುವೆರ್ ಕುಡ್ಲ; 3 ಲಕ್ಷ ಮೌಲ್ಯದ ಕೃತಕ ಅಂಗಾಂಗ ಸಲಕರಣೆ ವಿತರಣೆ


Share       ಮಂಗಳೂರು: ಅವರೆಲ್ಲಾ ತಿಂಗಳ ಸಂಬಳಕ್ಕಾಗಿ ದುಡಿಯುವ ಯುವಕರು. ಆದ್ರೆ ದುಡಿದ ಹಣದಲ್ಲಿ ಸಮಾಜ ಸೇವೆಗಾಗಿ ಮೀಸಲಿಟ್ಟು ಸೇವಾ ಕಾರ್ಯ ನಡೆಸುತ್ತಿರುವ ಆ ತಂಡ ಮನೆಯಿಲ್ಲದವರಿಗೆ ಮನೆ,ಅನಾರೋಗ್ಯಕ್ಕೀಡಾದವರಿಗೆ ಚಿಕಿತ್ಸೆಗೆ ಹಣಕಾಸಿನ ನೆರವು,ದಿನಸಿ ಕಿಟ್ ,ಆಂಬುಲೆನ್ಸ್


Read More »

ಮಹಾ ಕುಂಭಮೇಳ: ಮಹಾಮಂಡಲೇಶ್ವರರಾಗಿ ಪಟ್ಟಾಭಿಶಕ್ತರಾದ ಕನ್ಯಾಡಿ ಶ್ರೀರಾಮ ಕ್ಷೇತ್ರದ ಬ್ರಹ್ಮಾನಂದ ಶ್ರೀ ಕರ್ನಾಟಕಕ್ಕೆ ಸಂದ ಮೊದಲ ಗೌರವ


Share       ಬೆಳ್ತಂಗಡಿ: ಧರ್ಮಸ್ಥಳ ಗ್ರಾಮದ ನಿತ್ಯಾನಂದ ನಗರದ ಕನ್ಯಾಡಿ ಶ್ರೀರಾಮ ಕ್ಷೇತ್ರ ಮಹಾಸಂಸ್ಥಾನದ ಪೀಠಾಧೀಶರಾದ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತೀ ಸ್ವಾಮೀಜಿಯವರಿಗೆ ಜ.31 ರಂದು ಪ್ರಯಾಗ್ ರಾಜ್ ನಲ್ಲಿ ನಡೆದ ಮಹಾ ಕುಂಬಮೇಳದಲ್ಲಿ ಉತ್ತರ


Read More »

ರಾಷ್ಟ್ರಮಟ್ಟದ ನ್ಯಾಷನಲ್ ಗೇಮ್ಸ್ -2025 ಗೆ ಕರ್ನಾಟಕ ತಂಡಕ್ಕೆ ಆಯ್ಕೆಯಾದ ಕಾಣಿಯೂರಿನ ಸೌಮ್ಯ ಪೂಜಾರಿ


Share       ಪುತ್ತೂರು: ಉತ್ತರಾಖಂಡದ ಹರಿದ್ವಾರದಲ್ಲಿ ನಡೆಯಲಿರುವ 38ನೇ ನ್ಯಾಷನಲ್ ಗೇಮ್ಸ್ -2025 ರಲ್ಲಿ ರಾಷ್ಟ್ರೀಯ ಮಹಿಳೆಯರ ಕಬಡ್ಡಿ ಚಾಂಪಿಯನ್‌ಶಿಪ್ ನಲ್ಲಿ ಭಾಗವಹಿಸಲು ಕರ್ನಾಟಕ ತಂಡಕ್ಕೆ ಕಾಣಿಯೂರಿನ ಸೌಮ್ಯ ಪೂಜಾರಿ ರವರು ಆಯ್ಕೆ ಆಗಿರುತ್ತಾರೆ. ಇವರು


Read More »