ಕೆಲ ದಿನಗಳ ನಂತರ ಸಾಮಾಜಿಕ ಜಾಲತಾಣದಲ್ಲಿ ಬರೆಯಬೇಕೆನಿಸಿತು.ದಿನಾಂಕ 26.09.2021 ನೇ ಭಾನುವಾರ ಬೆಳ್ತಂಗಡಿಯಲ್ಲಿ ಶ್ರೀ ಗುರು ನಾರಾಯಣ ಸ್ವಾಮಿ ಸೇವಾ ಸಂಘ, ಮತ್ತು ಯುವವಾಹಿನಿ ಬೆಳ್ತಂಗಡಿ ಘಟಕದ ವತಿಯಿಂದ ನಡೆದ ಅಮರ್ ಬೊಳ್ಳಿಲು ವಿಚಾರ ಮಂಡನೆ ಮತ್ತು ಸಂವಾದ ಕಾರ್ಯಕ್ರಮದಲ್ಲಿ ವಿಚಾರಗಳನ್ನು ತಿಳಿಯಬೇಕು ಎಂಬ ಆಸಕ್ತಿಯಿಂದ ಭಾಗವಹಿಸಿದೆ.ಸಂಘಟಕರು ಸಮಯಕ್ಕೆ ಸರಿಯಾಗಿ ಕಾರ್ಯಕ್ರಮ ಪ್ರಾರಂಭಿಸಿದರು.ಚುಟುಕಾದ ಉದ್ಘಾಟನಾ ಕಾರ್ಯಕ್ರಮ ಮತ್ತು ನಮ್ಮ ಸಮುದಾಯದ ಕಳಕಳಿ ಮತ್ತು ಮನ ಮುಟ್ಟುವ ಮಾತುಗಳು ಮಾಜಿ ಶಾಸಕರಾದ ಕೆ ವಸಂತ ಬಂಗೇರ ರವರ ಉದ್ಘಾಟನಾ ಭಾಷಣದಲ್ಲಿ ಇತ್ತು ನಂತರ ನೇರವಾಗಿ ವಿಚಾರ ಮಂಡನೆ ಮತ್ತು ಸಂವಾದ ಕಡೇ ನಮ್ಮ ಗಮನ, ಶ್ರೀ ಬ್ರಹ್ಮ ಬೈದರ್ಕಳ ಸಾಂಸ್ಕೃತಿಕ ಅಧ್ಯಯನ ಕೇಂದ್ರ , ಬೈದ್ಯ ಶ್ರೀ ಉಡುಪಿಯ ಅಧ್ಯಕ್ಷರಾದ ಶ್ರೀ ದಾಮೋದರ ಕಲ್ಮಾಡಿ, ಸಾಹಿತಿಗಳಾದ ಚೆಲುವರಾಜ್ ಪೆರಂಪಳ್ಳಿ, ರಂಗಕರ್ಮಿ, ಸಾಹಿತಿ, ಪತ್ರಕರ್ತರಾದ ಪರಮಾನಂದ ಸಾಲ್ಯಾನ್ , ಕಾರ್ಯಕ್ರಮದ ಸಮನ್ವಯಕಾರು ರಾಣಿ ಅಬ್ಬಕ್ಕ ಜಾನಪದ ತುಳು ಅಧ್ಯಯನ ಕೇಂದ್ರದ ಅಧ್ಯಕ್ಷರಾದ ಪ್ರೊ.ಡಾ.ತುಕರಾಮ ಪೂಜಾರಿ.
ಕಾರ್ಯಕ್ರಮದಲ್ಲಿ ಮಂಡನೆ ಮತ್ತು ಸಂವಾದ ಉತ್ತಮ ರೀತಿಯಲ್ಲಿ ನಡೆಯಿತು. ಕಳೆದ ಬಾರಿ ಮಂಗಳೂರಿನಲ್ಲಿ ನಡೆದ ಈ ರೀತಿಯ ಸಂವಾದ ಕಾರ್ಯಕ್ರಮದಲ್ಲಿ ನಾನೂ ಒಬ್ಬ ಪ್ರೇಕ್ಷಕನಾಗಿ ಭಾಗವಹಿಸಿದ್ದೆ. ಆದರೆ ಅದು ಗೊಂದಲದ ಗೂಡಾಯಿತು ನನ್ನ ಮನಸ್ಸಿಗೆ ಅತೀವ ನೋವು ಕೂಡ ಆಯಿತು.ಈ ಕಾರ್ಯಕ್ರಮದಲ್ಲಿ ನನ್ನ ಮನಸ್ಸಿನ ಮೂಲೆಯಲ್ಲೊಂದು ಆಶಾಭಾವನೆ ಚಿಗುರೊಡೆಯಿತು.ಕೋಟಿ ಚೆನ್ನಯ್ಯ ರ ಕೆಲವೊಂದು ವಿಚಾರದಲ್ಲಿ ವ್ಯತ್ಯಾಸಗಳು ಇದ್ದ ಎರಡು ತಂಡಗಳ ಮುಖ್ಯಸ್ಥರು ಉಪಸ್ಥಿತರಿದ್ದದ್ದು ನನಗೆ ಖುಷಿ ನೀಡಿತು. ಅಂತಿಮವಾಗಿ ತಿಳಿದ ವಿಚಾರ ಇಷ್ಟೇ ವೀರ ಪುರುಷರ ವಿಚಾರದಲ್ಲಿ ಜನಸಾಮಾನ್ಯರಿಗೆ (ಭಕ್ತರಿಗೆ ) ಯಾವುದೇ ಗೊಂದಲ ಇಲ್ಲ, ಕೋಟಿ ಚೆನ್ನಯರು ನಡೆದಾಡಿದ ಪ್ರತಿ ಜಾಗವೂ ಪವಿತ್ರ ,ನಮ್ಮ ಸಮಾಜ ಈ ವಿಚಾರದ ದ್ವಂದ್ವದಿಂದ ಸಮಾಜದ ಒಗ್ಗಟ್ಟಿಗೆ ತುಂಬಾ ನಷ್ಟವಾಗಿದೆ.ಇನ್ನೂ ಮುಂದೆ ಈ ವಿಚಾರದಲ್ಲಿ ಗೊಂದಲವನ್ನು ಸೃಷ್ಟಿ ಮಾಡದೇ ನಮ್ಮ ಸಮಾಜ ಒಗ್ಗಟ್ಟಾಗಿ ಇರೋಣ, ಎಂಬ ಸಂದೇಶವು ಎರಡು ತಂಡಗಳಿಂದ ವ್ಯಕ್ತವಾಯಿತು.
ಎಸ್ ಆರ್ ಪ್ರವೀಣ್