ಕೋವಿಡ್-19 ಸೋಂಕು ನಮ್ಮಲ್ಲಿರುವ ಮಾನವೀಯ ಮುಖಗಳ ಪರಿಚಯವನ್ನು ಪ್ರಪಂಚಕ್ಕೆ ಮಾಡುತ್ತಿದೆ. ಇಂತವರಲ್ಲಿ ಒಬ್ಬರು ಬೆಳ್ತಂಗಡಿ ತಾಲೂಕಿನ ಯುವಕ, ಉದಯ್ ಬಂಗೇರ ನಾವೂರು.
ವರ್ಷದ ಹಿಂದೆ ತನ್ನ ಸ್ವಂತ ಉದ್ಯಮವನ್ನು ಸ್ಥಾಪಿಸಿದ ಇವರು ಸ್ವಂತಕ್ಕೆ ಸ್ವಲ್ಪ ಸಮಾಜಕ್ಕೆ ಸರ್ವಸ್ವ ಅನ್ನುವ ರೀತಿಯಲ್ಲಿ ಸೇವೆ ಮಾಡುತ್ತಿದ್ದಾರೆ.
ಒಬ್ಬ ವ್ಯಕ್ತಿಗೆ ಬೇರೆ ಜನರ ಕಷ್ಟ ತಿಳಿಯುವುದು ತಾನು ಜೀವನದಲ್ಲಿ ನಡೆದು ಬಂದ ದಾರಿಯಿಂದ ತಿಳಿಯುತ್ತದೆ. ಬಡ ಕುಟುಂಬದಲ್ಲಿ ಜನಿಸಿದ ಇವರಿಗೆ ತುಂಬ ತಿಳಿದಿದೆ.
ಇವರು ಚಿಕ್ಕ ವಯಸ್ಸಿನಲ್ಲಿ ತನ್ನ ತಂದೆ ಮಾಡುತ್ತಿದ್ದ ಕೂಲಿ ಕೆಲಸದಿಂದ ಜೀವನ ಸಾಗಿಸುವ ರೀತಿ ಅರಿತ್ತಿದ್ದರು.
ಕೊರೊನಾ ಹಿನ್ನಲೆಯಲ್ಲಿ ದೇಶ ಲಾಕ್ ಡೌನ್ ನಲ್ಲಿ ಇರುವುದರಿಂದ ಸಮಸ್ಯೆಗೆ ಸಿಲುಕಿದ ನಾವೂರು ಗ್ರಾಮದ ಸುಮಾರು 50 ಕುಟುಂಬಗಳಿಗೆ ಆಹಾರ ಕಿಟ್ಟನ್ನು ತಮ್ಮ ದುಡಿಮೆಯ ಒಂದು ಪಾಲಿನಲ್ಲಿ ವಿತರಣೆ ಮಾಡಿ ಮಾನವೀಯತೆ ಮೆರೆದಿದ್ದಾರೆ.
ಮೂಲತಃ ಬೆಳ್ತಂಗಡಿ ತಾಲೂಕಿನ ನಾವೂರು ದಲ್ಲಿ ಜನಿಸಿದ ಇವರು ಪ್ರಾಥಮಿಕ ಹಾಗೂ ಹೈ ಸ್ಕೂಲ್ ಸರ್ಕಾರಿ ಶಾಲೆ ನಾವೂರುದಲ್ಲಿ ಮುಗಿಸಿದ ಇವರು ಡಿಪ್ಲೋಮ ಕೋರ್ಸ್ ಮುಗಿಸಿ, ದುಬಾಯಿಯಲ್ಲಿ ೪ ವರ್ಷ ಕೆಲಸ ಮಾಡಿ. ಊರಿನಲ್ಲಿ ತನ್ನದೆ ಆದ ಸ್ವಂತ ವಿ5 ಟೆಕ್ನಾಲಜಿಸ್ ಸಂಸ್ಥೆ ಮಾಡಿಕೊಂಡರು.
ವಿ5 ಟೆಕ್ನಾಲಜಿಸ್ ಎರಡು ಶಾಖೆಗಳು ವಿವಿದ ರೀತಿಯಲ್ಲಿ ಜನರಿಗೆ ಸೇವೆಯನ್ನು ನೀಡುತ್ತಾ ಬರುತ್ತಿದ್ದು ಇದರಲ್ಲಿ ಸಿ.ಸಿ ಕ್ಯಾಮರ, ಕಂಪ್ಯೂಟರ್ ಸೇಲ್ಸ್ ಽ ಸರ್ವಿಸ್, ಇನ್ ವರ್ಟ್ ರ್ ಬ್ಯಾಟರಿ, ಸೋಲರ್, ಡೋರ್ ಲಾಕ್ ಸಿಸ್ಟಮ್, ಸಬ್ ಮರ್ಸಿಟಲ್ ಪಂಪ್ ಸೆಟ್, ಸೋಲರ್ ವಾಟರ್ ಹೀಟರ್, ವಿಸಿಟಿಂಗ್ ವೀಸಾ, ಪಾಸ್ ಪೊರ್ಟ್, ಪೊಲೀಸ್ ಕ್ಲಿಯರೆನ್ಸ್, ಇನ್ನು ಮುಂತಾದ ಸೇವೆಯನ್ನು ಜನರಿಗೆ ಉಪಯುಕ್ತವಾಗುವ ರೀತಿಯಲ್ಲಿ ನೀಡುತ್ತಿದ್ದಾರೆ.
V5 technologies Sapthagiri Complex Guruvayanakere,
V5 technologies Sri Damodara complex Bear Hotel Ujala Belman
Info@v5 technologies.com
Website: www.v5 technologies.com
ಇವರ ಈ ಸಮಾಜ ಸೇವೆ ಮುಂದಿನ ದಿನಗಳಲ್ಲಿ ಇನ್ನಷ್ಟು ಜನರಿಗೆ ಉಪಯೋಗವಾಗಲಿ. ವಿ5 ಟೆಕ್ನಾಲಜಿಸ್ ಸಂಸ್ಥೆ ಇನ್ನಷ್ಟು ಎತ್ತರಕ್ಕೆ ಏರಲು ನಮ್ಮ ಎಲ್ಲರ ಬೆಂಬಲ ಇವರಿಗೆ ನೀಡಬೇಕು. ಪ್ರೀತಿಯ ಉದಯ್ ಬಂಗೇರ ಅವರಿಗೆ ಜನರ ಸೇವೆ ಮಾಡುವ ಇನ್ನಷ್ಟು ಶಕ್ತಿಯನ್ನು ಶ್ರೀ ದೇವರು ನೀಡಲಿ ಎಂಬ ಹಾರೈಕೆ ನಮ್ಮದು.
ಬರಹ: ಪುಷ್ಪರಾಜ್ ಪೂಜಾರಿ