TOP STORIES:

FOLLOW US

ಕೋವಿಡ್ ಗುಣವಾಯ್ತಾ? ಹಾರ್ಟ್ ಚೆಕಪ್ ಮಾಡಿಸದಿದ್ರೆ ಅಪಾಯ ಇನ್ನೂ ಇದೆ!


  • ಬೆಂಗಳೂರು : ಕೋವಿಡ್ ಗುಣಮುಖರಾದ ನಂತರ ಅಬ್ಬಾ ಅಂತೂ ಬದುಕಿಕೊಂಡೆ ಅಂತ ನಿಟ್ಟುಸಿರು ಬಿಡುತ್ತಿರುವ ಅನೇಕರು ನಂತರವೂ ಆರೋಗ್ಯದ ಬಗ್ಗೆ ಕಾಳಜಿ ವಹಿಸಲೇಬೇಕು. ಅದರಲ್ಲೂ ಹೃದಯದ ಪರೀಕ್ಷೆಯನ್ನಂತೂ ಖಂಡಿತಾ
    ತಪ್ಪಿಸಬಾರದು ಎನ್ನುತ್ತಾರೆ ವೈದ್ಯರು.
  • ಕೋವಿಡ್ ನಿಂದ ಬಳಲಿ ನಂತರ ಸಂಪೂರ್ಣವಾಗಿ ಗುಣಮುಖರಾದ ಅನೇಕರಲ್ಲಿ ಹೃದಯ ಮತ್ತು ರಕ್ತನಾಳ ಸಂಬಂಧಿ ಸಮಸ್ಯೆಗಳು ಕಂಡುಬಂದಿವೆ. ಅನೇಕ ಪ್ರಕರಣಗಳಲ್ಲಂತೂ ಬಹಳ ತುರ್ತು ಪರಿಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾದ ಉದಾಹರಣೆಗಳೂ ಸಾಕಷ್ಟಿವೆ. ಹಾಗಾಗಿ ತಪ್ಪದೇ ಕನಿಷ್ಟ 3 ತಿಂಗಳಿಗೆ ಒಂದು ಸಲವಾದರೂ ಹೃದಯದ ಪರೀಕ್ಷೆ ಮಾಡಿಸಿಕೊಳ್ಳಬೇಕು ಎನ್ನುತ್ತಾರೆ ವೈದ್ಯರು. ಇದರಿಂದ ದಿಢೀರನೆ ಹೃದಯಾಘಾತವಾಗುವುದನ್ನು ತಪ್ಪಿಸಬಹುದು.
  • ಕೋವಿಡ್ ನಂತರದ ಹೃದ್ರೋಗಗಳು ಸಣ್ಣ ವಯಸ್ಸಿನವರನ್ನು ಕಾಡುತ್ತಿರುವುದು ಆತಂಕಕಾರಿ ವಿಚಾರ. ಅದರಲ್ಲೂ 50 ವರ್ಷದೊಳಗಿನವರಾದರೆ ಹೃದ್ರೋಗ ಇರಲಿ, ಇಲ್ಲದಿರಲಿ ಒಮ್ಮೆ ತಪಾಸಣೆ ಮಾಡಿಸಿಕೊಳ್ಳುವ ಅಭ್ಯಾಸ ರೂಢಿಸಿಕೊಳ್ಳಬೇಕು ಎನ್ನುತ್ತಾರೆ
ಫೋರ್ಟಿಸ್ ಆಸ್ಪತ್ರೆಯ ಹೃದ್ರೋಗ ತಜ್ಞ ಡಾ ಆರ್ ಕೇಶವ.
ಕೋವಿಡ್ ಗೂ ಹೃದಯಾಘಾತಕ್ಕೂ ಏನು ಸಂಬಂಧ?

ಇತ್ತೀಚೆಗೆ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ ನಡೆಸಿದ ಅಧ್ಯಯನದಲ್ಲಿ ಕೋವಿಡ್ನಿಂದ ಗುಣಮುಖರಾದ 3-4 ವಾರಗಳ ಬಳಿಕ ಹೃದಯಾಘಾತ ಹೆಚ್ಚಳವಾಗುತ್ತಿರುವ ಬಗ್ಗೆ ತಿಳಿದುಬಂದಿದೆ. ಅದರಲ್ಲೂ ಎರಡನೇ ಅಲೆಯಲ್ಲಿ ಸಣ್ಣ ವಯಸ್ಸಿನವರನ್ನೇ ಹೆಚ್ಚಾಗಿ ಕೋವಿಡ್ ಬಾಧಿಸಿತ್ತು. ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದವರು ನಂತರವೂ ದೀರ್ಘಕಾಲದವರಗೆ ಸಂಪೂರ್ಣ ನಿಶ್ಶಕ್ತಿ ಹೊಂದಿರುತ್ತಾರೆ. ಇಂಥ ಸಂದರ್ಭದಲ್ಲಿ ಹೃದಯಾಘಾತ ಸಂಭವ ಹೆಚ್ಚಿರುತ್ತದೆ ಎನ್ನುತ್ತಾರೆ ವೈದ್ಯರು.
ಎಚ್ಚರಿಕೆ ವಹಿಸುವುದು ಹೇಗೆ?
ಒಂದು ಸಲ ಕೋವಿಡ್ ಬಂದರೆ ದೇಹ ಸಹಜವಾಗಿಯೇ ಸುಸ್ತಾಗಿರುತ್ತದೆ. ಅದು ರೋಗಲಕ್ಷಣ ಇಲ್ಲದಿರುವ ಏಸಿಂಪ್ಟಮ್ಯಾಟಿಕ್ ಸ್ಥಿತಿ ಇರಲಿ ಅಥವಾ ತೀವ್ರವಾದ ಸೋಂಕು ತಗುಲಿ ಆಸ್ಪತ್ರೆಯಲ್ಲಿ ವಾರಗಟ್ಟಲೆ ಇರಬೇಕಾಗಿ ಬಂದ ಗಂಭೀರ ಪ್ರಕರಣವಿರಲಿ ದೇಹವನ್ನು ಕೋವಿಡ್ ಹೈರಾಣು ಮಾಡಿ ಹಾಕಿರುವುದಂತೂ ಸತ್ಯ. ಇದೇ ಗೊಂದಲದಲ್ಲಿ ಇರುವ ಜನ ಹೆಚ್ಚಾಗಿ ಹೃದಯದ ಆರೋಗ್ಯದ ಬಗ್ಗೆ ಗಮನ ಹರಿಸುವುದಿಲ್ಲ. ಆದರೆ ಕೋವಿಡ್ನಿಂದ ಗುಣವಾದ ಬಳಿಕ ದೇಹದಲ್ಲಿ ರೋಗನಿರೋಧಕ ಶಕ್ತಿ ಕುಗ್ಗಿರುತ್ತದೆ. ಹೀಗಾಗಿ, ದೇಹಕ್ಕೆ ಅಗತ್ಯ ಪ್ರೋಟಿನ್ಯುಕ್ತ ಆಹಾರ ನೀಡುವುದು, ವ್ಯಾಯಾಮ, ಯೋಗ, ಧ್ಯಾನ ಮಾಡುವುದು, ಧೂಮಪಾನ, ಮದ್ಯಪಾನ ತ್ಯಜಿಸುವುದು, ಜಂಕ್ ಫುಡ್ ಸೇವನೆ ನಿಯಂತ್ರಣ ಸೇರಿದಂತೆ ಇತರೆ ಅನಾರೋಗ್ಯಕರ ಹವ್ಯಾಸವನ್ನು ತ್ಯಜಿಸಿ, ಹೃದಯದ ಆರೈಕೆಗೆ ಒತ್ತು ನೀಡಬೇಕು. ಅಲ್ಲದೆ, ಕೆಲಸದ ಒತ್ತಡ ಕೂಡ ಹೃದಯದ ಮೇಲೆ ಗಂಭೀರ ಪರಿಣಾಮ ಬೀರಬಹುದು. ಹೀಗಾಗಿ ಕನಿಷ್ಠ 3 ತಿಂಗಳು ಹೃದಯದ ಆರೋಗ್ಯದತ್ತ ಎಚ್ಚರಿಕೆಯಿಂದಿರುವುದು ಒಳ್ಳೆಯದು ಎನ್ನುತ್ತಾರೆ ವೈದ್ಯರು.
ಸಣ್ಣ ವಯಸ್ಸಿನವರಲ್ಲಿ ಹೃದಯ ಸಮಸ್ಯೆ ಹೆಚ್ಚಳ
ಮೊದಲೆಲ್ಲಾ ನಿವೃತ್ತಿ ಹೊಂದಿದವರಲ್ಲಿ ಹೃದಯ ಸಂಬಂಧಿ ಸಮಸ್ಯೆ ಕಂಡುಬರುತ್ತಿತ್ತು. ಆದ್ರೆ ಇತ್ತೀಚೆಗೆ ಯುವಕರಲ್ಲೇ ಹೆಚ್ಚೆಚ್ಚು ಹೃದಯಾಘಾತ ಮತ್ತು ಅದಕ್ಕೆ ಸಂಬಂಧಿಸಿದ ನಾನಾ ಸಮಸ್ಯೆಗಳು ಕಂಡುಬರುತ್ತಿವೆ. ಚಿದರಲ್ಲು 20ರಿಂದ 45 ವರ್ಷದೊಳಗಿನವರಲ್ಲಿ ಈ ಪ್ರಕರಣ ಮತ್ತಷ್ಟು ಹೆಚ್ಚು ಎನ್ನಲಾಗಿದೆ. 2017ರಲ್ಲಿ ನಡೆದ ಅಧ್ಯಯನ ಒಂದರ ಪ್ರಕಾರ ವರ್ಷಕ್ಕೆ 4 ಲಕ್ಷ ಮಧ್ಯವಯಸ್ಕರು ಹೃದಯಾಘಾತಕ್ಕೆ ಬಲಿಯಾಗುತ್ತಿದ್ದಾರಂತೆ.
ಲಸಿಕೆಯಿಂದ ಹೃದಯಕ್ಕೂ ಪ್ರಯೋಜನ ಇದೆಯಾ?
ಕೋವಿಡ್ ಬರದಂತೆ ಅಥವಾ ಬಂದರೂ ಹೆಚ್ಚು ಹಾನಿ ಮಾಡದಂತೆ ತಡೆಯುವಲ್ಲಿ ಲಸಿಕೆ ಪರಿಣಾಮಕಾರಿಯಾಗಿದೆ ಎನ್ನುವುದು ಈಗಾಗಲೇ ತಿಳಿದಿರುವ ವಿಚಾರ. ಹಾಗಾಗಿ ದೇಹದ ಮೇಲಾಗುವ ಅಪಾಯವನ್ನು ಕಡಿಮೆ ಮಾಡಿದರೆ ಸಹಜವಾಗಿಯೇ ಹೃದಯದ ಆರೋಗ್ಯವನ್ನೂ ಕಾಪಾಡುವ ಅವಕಾಶ ಸಿಕ್ಕಂತಾಗುತ್ತದೆ. ಹಾಗಾಗಿ ಲಸಿಕೆ ಪಡೆಯುವುದು ಬಹಳ ಅವಶ್ಯಕ ಎನ್ನುತ್ತಾರೆ ವೈದ್ಯರು. ಕೇವಲ ಕೋವಿಡ್ ನಿಂದ ಕಾಪಾಡುವುದು ಮಾತ್ರವಲ್ಲ, ಲಸಿಕೆ ಹೃದಯದ ಮೇಲಾಗುವ ವಿಪರೀತ ಪರಿಣಾಮಗಳನ್ನೂ ಆ ಮೂಕಲ ತಡೆಯಲು ಸಹಕಾರಿ ಎನ್ನಲಾಗಿದೆ. ಈಗಾಗಲೇ ಮೊದಲನೇ ಮತ್ತು ಎರಡನೇ ಅಲೆಯಲ್ಲಿ ಎಲ್ಲರೂ ಸಾಕಷ್ಟು ಏಟು ತಿಂದಿದ್ದೇವೆ. ಈಗಲಾದರೂ ಎಚ್ಚೆತ್ತುಕೊಂಡು ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ಉತ್ತಮ ಆರೋಗ್ಯವಂತ ಜೀವನಶೈಲಿ ರೂಢಿಸಿಕೊಂಡರೆ ಮೂರನೇ ಅಲೆಯ ಅಪಾಯ ತಪ್ಪಿಸಬಹುದು ಎನ್ನುವುದು ತಜ್ಞರ ಅಭಿಮತ.


Share:

More Posts

Category

Send Us A Message

Related Posts

ಭಾರತ್ ಬ್ಯಾಂಕ್ ನ ಕಾರ್ಯಾಧ್ಯಕ್ಷರಾದ ಸೂರ್ಯಕಾಂತ್ ಜಯ ಸುವರ್ಣರಿಗೆ ಬೆಸ್ಟ್ ಚೇರ್ಮನ್ ಅವಾರ್ಡ್


Share       ಮಲ್ಟಿ ಸ್ಟೇಟ್ ಸಹಕಾರಿ ಬ್ಯಾಂಕ್ ಗಳಲ್ಲಿ  ಒಂದಾದ ಮುಂಬೈಯ ಪ್ರತಿಷ್ಠಿತ *ಭಾರತ್ ಬ್ಯಾಂಕ್ ನ ಕಾರ್ಯಧ್ಯಕ್ಷರಾದ ಸೂರ್ಯಕಾಂತ್ ಜಯ ಸುವರ್ಣರ ದಕ್ಷ  *ಬೆಸ್ಟ್ ಚೇರ್ಮನ್* ಪ್ರಶಸ್ತಿಯನ್ನು *ಭಾರತ ಸರಕಾರದ ಜನರಲ್ ಮಿನಿಸ್ಟ್ರಿ ಆಫ್ ಕಮ್ಯುನಿಕೇಶನ್ಸ್


Read More »

ಹೃದಯ ಹೃದಯಗಳಲ್ಲಿ ಬೆಸೆದ ಹೃದಯ ಶ್ರೀಮಂತ ಜಯ ಸುವರ್ಣರ ಜನ್ಮದಿನದ ನೆನಪಿನ ಸಲುವಾಗಿ ನುಡಿನಮನ


Share       ಹೃದಯ ಹೃದಯಗಳಲ್ಲಿ ಬೆಸೆದ ಹೃದಯ ಶ್ರೀಮಂತ ಜಯ ಸುವರ್ಣರ ಜನ್ಮದಿನದ ನೆನಪಿನ ಸಲುವಾಗಿ ನುಡಿನಮನ ಮುಂಬೈ ವಿಶ್ವವಿದ್ಯಾಲಯದಲ್ಲಿ ಪಿ ಎಚ್. ಡಿ ಕೋರ್ಸ್ ವರ್ಕ್ ನ ಸಲುವಾಗಿ ಜಯ ಸುವರ್ಣರ ಕುರಿತು ಶೋಧ ಪ್ರಬಂಧವನ್ನು


Read More »

ಬೆಳ್ತಂಗಡಿ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಕ್ಕೆ ವಸಂತ ಬಂಗೇರರ ಹೆಸರಿಡಲು ಮನವಿ


Share       ಬೆಳ್ತಂಗಡಿ: 5 ಬಾರಿ ಬೆಳ್ತಂಗಡಿ ಕ್ಷೇತ್ರದ ಶಾಸಕರಾಗಿ, ಕಳೆದ 50 ವರ್ಷದಲ್ಲಿ ಕ್ಷೇತ್ರದ ಬಡ ಜನತೆಯ ಧ್ವನಿಯಾಗಿ ಕೆಲಸ ಮಾಡಿ ಇಹಲೋಕ ತ್ಯಜಿಸಿದ ಬೆಳ್ತಂಗಡಿ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಸ್ಥಾಪನೆಗೆ ಕಾರಣಕರ್ತರು ಹಾಗೂ


Read More »

ಚಿರನಿದ್ರೆಗೆ ಜಾರಿದ ಮಾಜಿ ಶಾಸಕ ಕೆ. ವಸಂತ ಬಂಗೇರ ಮೇ9 ರಂದು (ನಾಳೆ) ಬೆಳಿಗ್ಗೆ ಹಳೆಕೋಟೆ ನಿವಾಸದಲ್ಲಿ ಸಾರ್ವಜನಿಕ ಅಂತಿಮ ದರ್ಶನ


Share       ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನಲ್ಲಿ ಐದು ಬಾರಿ ಶಾಸಕರಾಗಿ ತಾಲೂಕಿನ ಅಭಿವೃದ್ಧಿಗೆ ತನ್ನದೇ ಆದ ವಿಶೇಷ ಕೊಡುಗೆಯನ್ನು ನೀಡಿದ್ದ ನೇರ ನಡೆನುಡಿಯ, ದಿಟ್ಟ ಹೋರಾಟಗಾರ, ಭ್ರಷ್ಟಾಚಾರಿಗಳಿಗೆ ದುಃಸ್ವಪ್ನರಾಗಿದ್ದ ಮಾಜಿ ಶಾಸಕ ಕೆ. ವಸಂತ ಬಂಗೇರ ಅವರು


Read More »

ಬಿಲ್ಲವ ಸಮಾಜದ ಭರವಸೆಯ ಸೂರ್ಯ ಜನ್ಮದಿನದ ಸಲುವಾಗಿ ನುಡಿ ಬರಹ


Share       ಎರಡು ವರ್ಷಗಳ ಹಿಂದೆ ಜಯ ಸುವರ್ಣರ ಕುರಿತು ಮಾಹಿತಿಯನ್ನು ಸಂಗ್ರಹಿಸುವ ಸಲುವಾಗಿ ಅವರ ಮಗ ಸೂರ್ಯಕಾಂತ್ ಸುವರ್ಣರನ್ನು ಸಂದರ್ಶನ ಮಾಡಲು ಗೊರೆಗಾವ್‍ನಲ್ಲಿರುವ ಜಯ ಸುವರ್ಣರ ಕಚೇರಿಗೆ ಮೊದಲ ಬಾರಿ ಭೇಟಿ ನೀಡಿದ್ದೆ. ಜಯ ಸುವರ್ಣರನ್ನೇ


Read More »

ಕಿನ್ನಿಗೋಳಿ: ಬುಡಸಹಿತ ಧರೆಗುರುಳಿದ ಅವಳಿ ವೀರರನ್ನು ತೊಟ್ಟಿಲು ಕಟ್ಟಿ ತೂಗಿದ್ದ ತಾಕೊಡೆ ಮರ ಇನ್ನು ನೆನಪು ಮಾತ್ರ


Share       ಕಾಂತಬಾರೆ – ಬೂದಬಾರೆ ಆಡಿ ಬೆಳೆದುದಕ್ಕೆ ಸಾಕ್ಷಿಯಾಗಿದ್ದ ಮರ ಇನ್ನು ನೆನಪು ಮಾತ್ರ ಮೂಲ್ಕಿ ತಾಲೂಕು ಕೊಲ್ಲೂರಿನ ಶ್ರೀ ಕಾಂತಬಾರೆ- ಬೂದ ಬಾರೆ ಜನ್ಮಕ್ಷೇತ್ರ ಕಾಂತಬಾರೆ – ಬೂದಬಾರೆ ಆಡಿ ಬೆಳೆದುದಕ್ಕೆ ಸಾಕ್ಷಿಯಾಗಿದ್ದ ಮರ


Read More »