ಸಾಮಾನ್ಯವಾಗಿ ಹೆಣ್ಣುಮಕ್ಕಳಿಗೆ ಕೇಶರಾಶಿ ಎಂದರೆ ಎಲ್ಲಿಲ್ಲದೆ ಪ್ರೀತಿ. ಆದರೆ, ಮಂಗಳೂರಿನ ಕೊಟ್ಟರದ ಯುವತಿಯೊಬ್ಬಳು ಕ್ಯಾನ್ಸರ್ ಪೀಡಿತರಿಗಾಗಿ ತನ್ನ ಕೇಶರಾಶಿಯನ್ನೇ ಕತ್ತರಿಸಿ ದಾನವಾಗಿ ನೀಡಿದ್ದಾಳೆ. ಮಂಗಳೂರಿನ ಕೊಟ್ಟರ ಮೂಲದ ಯುವತಿ ಪ್ರಸ್ತುತ ಶಿಪ್ಪಿಂಗ್ ಕಂಪೆನಿಯ ಉದ್ಯೋಗಿಯಾಗಿದ್ದು ಮೇಘ ಕೋಟ್ಯನ್ ತನ್ನ ಕೇಶ ದಾನ ಮಾಡಿದ್ದಾರೆ.
ಕ್ಯಾನ್ಸರ್ ಪೀಡಿತರ ನೋವನ್ನು ಕಣ್ಣಾರೆ ಕಂಡಿದ್ದ ಮೇಘ ಕೋಟ್ಯನ್ ತನ್ನ ಕೇಶರಾಶಿಯನ್ನು ಚಾರಿಟಿಗೆ ನೀಡಬೇಕೆಂಬ ಅಭಿಲಾಶೆ ಇಟ್ಟುಕೊಂಡಿದ್ದರು. ಹಾಗೂ ಕ್ಯಾನ್ಸರ್ ಪೀಡಿತರ ಕೂದಲು ಕಳೆದುಕೊಂಡಗ ಯಾವುದೆ ಮುಜುಗರ ಪಡಬಾರದು. ಸಮಾಜದಲ್ಲಿ ಎಲ್ಲರಂತೆ ಬದುಕಬಹುದು ಎಂಬ ಸಂದೇಶ ನೀಡಿದ್ದಾರೆ. ಕೇಶದಾನದಿಂದ ತುಂಬಾ ಖುಷಿಯಾಗಿದ್ದೇನೆ ಎಂದಿದ್ದಾರೆ.