ಮಂಗಳೂರು: ದೇಶದ ಗಮನ ಸೆಳೆದ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರ ಹಾಗೂ ತುಳು ಬದುಕು ವಸ್ತುಸಂಗ್ರಹಾಲಯದ ಅಧ್ಯಕ್ಷರಾದ, ಜನಪದ ವಿದ್ವಾಂಸರಾದ ಡಾ/ ತುಕಾರಾಂ ಪೂಜಾರಿಯವರಿಗೆ ಯುವ ಕೇಂದ್ರ ಸಮಿತಿ ಕೊಡಮಾಡುವ ವಿಶುಕುಮಾರ್ ಸಾಹಿತ್ಯ ಪ್ರಶಸ್ತಿಯನ್ನು ಇಂದು ಉಳ್ಳಾಲದಲ್ಲಿ ನಡೆದ ಸಮಾರಂಭದಲ್ಲಿ ಪ್ರದಾನಿಸಲಾಯಿತು.
ಕೇಂದ್ರ ಸಮಿತಿ ಆಶ್ರಯದಲ್ಲಿ ಹಾಗೂ ಉಳ್ಳಾಲ ಘಟಕದ ಆಶ್ರಯದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಕೇಂದ್ರ ಸಮಿತಿ ಅಧ್ಯಕ್ಷರಾದ ಡಾ. ರಾಜಾರಾಮ್ ಹಾಗೂ ಇನ್ನಿತರ ಪದಾಧಿಕಾರಿಗಳು ಉಪಸ್ಥಿತರಿದ್ದರು.