TOP STORIES:

FOLLOW US

ಗರೋಡಿ ಸ್ಟೀಲ್ ಸಂಸ್ಥೆಯಿಂದ ಜೆಎಸ್‌ಡಬ್ಲ್ಯೂ ಸಹಕಾರದೊಂದಿಗೆ ಉಚಿತ ಅಂಬುಲೆನ್ಸ್ ಸೇವೆ


ಮಂಗಳೂರು: ಗರೋಡಿ ಸ್ಟೀಲ್ ಸಂಸ್ಥೆಯಿಂದ ಜೆಎಸ್‌ಡಬ್ಲ್ಯೂ ಸಹಕಾರದೊಂದಿಗೆ ಮೂಡುಬಿದಿರೆ ವಿಧಾನಸಭಾ ಕ್ಷೇತ್ರ ಸೇರಿದಂತೆ ಸುತ್ತಮುತ್ತಲಿನ ವ್ಯಾಪ್ತಿಗೆ ಆರಂಭಿಸಲಾದ ಉಚಿತ ಅಂಬುಲೆನ್ಸ್ ಸೇವೆಗೆ ಸೋಮವಾರ ಬೈಕಂಪಾಡಿ ಗರೋಡಿ ಸ್ಟೀಲ್ ಪ್ರಾಂಗಣದಲ್ಲಿ ಚಾಲನೆ ನೀಡಲಾಯಿತು.

ಮೂಡುಬಿದಿರೆ ಶಾಸಕ ಉಮಾನಾಥ ಕೋಟ್ಯಾನ್ ಅಂಬುಲೆನ್ಸ್ ಸೇವೆ ಉದ್ಘಾಟಿಸಿ ಮಾತನಾಡಿ, ಕೋವಿಡ್ ಸಂಕಷ್ಟಕ್ಕೆ ದಕ್ಷಿಣ ಕನ್ನಡ ಜಿಲ್ಲೆಯ ಉದ್ಯಮಿಗಳು ನಾನಾ ರೀತಿಯಲ್ಲಿ ಸಹಕಾರ ನೀಡಿದ್ದಾರೆ. ಇದೀಗ ಗರೋಡಿ ಸ್ಟೀಲ್ ಸಂಸ್ಥೆಯ ಸಂಸ್ಥಾಪಕರಾದ ಮನೋಜ್ ಸರಿಪಲ್ಲ ಅವರು ಮೂಡುಬಿದಿರೆ ಕ್ಷೇತ್ರಕ್ಕೆ ಉಚಿತ ಅಂಬುಲೆನ್ಸ್ ಸೇವೆ ನೀಡಿರುವುದು ಶ್ಲಾಘನೀಯ ಮತ್ತು ಅವರ ಸಮಾಜಮುಖಿ ಕಾರ್ಯವನ್ನು ವ್ಯಕ್ತಪಡಿಸುತ್ತದೆ.

ಈ ಕಾರ್ಯಕ್ಕೆ ಮೂಡುಬಿದಿರೆ ಜನತೆಯ ಪರವಾಗಿ ನಾನು ಅಭಿನಂದನೆ ಸಲ್ಲಿಸುತ್ತೇನೆ ಮತ್ತು ಇನ್ನಷ್ಟು ಸಾಮಾಜಿಕ ಕಾರ್ಯಗಳು ಈ ಸಂಸ್ಥೆಯ ಮುಖೇನ ನಡೆಯಲಿ ಎಂದು ಶುಭ ಹಾರೈಸಿದರು.

ಶಾಸಕ ಡಾ.ಭರತ್ ಶೆಟ್ಟಿ ವೈ ಅವರು ಮಾತನಾಡಿ, ಸಾಮಾಜಿಕ ಸೇವಾ ಮನೋಭಾವದಿಂದ ಉದ್ಯಮಿಗಳು ಸರಕಾರದ ಜತೆ ಕೈ ಜೋಡಿಸಿದಾಗ ಜನರಿಗೆ ಉತ್ತಮ ಸೌಲಭ್ಯ ನೀಡಲು ಸಾಧ್ಯವಾಗುತ್ತದೆ.  ಕೊರೊನಾ ವಿರುದ್ದದ ಹೋರಾಟದಲ್ಲಿ ಜೀವದ ರಕ್ಷಣೆಗೆ ಪ್ರಥಮ ಆಧ್ಯತೆಯಾಗಿದೆ.ಈ ನಿಟ್ಟಿನಲ್ಲಿ ಮನೋಜ್ ಅವರ ಕೊಡುವೆ ಅಭಿನಂದನೀಯ ಎಂದರು.

ಗರೋಡಿ ಸ್ಟೀಲ್ ಸಂಸ್ಥೆಯ ಸಂಸ್ಥಾಪಕ ಮನೋಜ್ ಸರಿಪಲ್ಲ ಮಾತನಾಡಿ, ಅಂಬುಲೆನ್ಸ್ ಸಂಪೂರ್ಣ ಉಚಿತ ಸೇವೆ ನೀಡಲಿದ್ದು, ಹವಾನಿಯಂತ್ರಿತ ಸಹಿತ ಆಕ್ಸಿಜನ್, ಪ್ರಥಮ ಚಿಕಿತ್ಸೆಗೆ ಪೂರಕವಾದ ವ್ಯವಸ್ಥೆಗಳು ಇವೆ. ಇಬ್ಬರು ಸಿಬ್ಬಂದಿಗಳು ಅದಕ್ಕಾಗಿ ನೇಮಿಸಲಾಗಿದೆ. ಮೂಡುಬಿದಿರೆ ಶಾಸಕರ ಮನವಿ ಮೇರೆಗೆ ಈ ಅಂಬುಲೆನ್ಸ್ ನ್ನು ನೀಡಲಾಗಿದ್ದು ಜನತೆಯ ಜೀವ ರಕ್ಷಣೆಗೆ ಬಳಕೆಯಾಗಲಿದೆ ಎಂದರು.

ಜೆಎಸ್‌ಡಬ್ಲ್ಯೂ ಸ್ಟೀಲ್ ಲಿ. ಸಂಸ್ಥೆಯ ರಾಜ್ಯ ಪ್ರಾಂತೀಯ ಸೇಲ್ಸ್ ಮ್ಯಾನೇಜರ್ ಶ್ರೀವತ್ಸ ಕಲುಮಂಗಿ ಮಾತನಾಡಿ, ಸಮಾಜಮುಖೀ ಚಟುವಟಿಕೆಯ ಭಾಗವಾಗಿ ಸಂಸ್ಥೆಯಿಂದ ಬೆಂಗಳೂರು, ಹುಬ್ಬಳ್ಳಿ ಗೋವಾದಲ್ಲಿ ಉಚಿತ ಅಂಬುಲೆನ್ಸ್ ಕೊಡುಗೆ ನೀಡಲಾಗಿದೆ. ಮಹಾರಾಷ್ಟ ಬಳ್ಳಾರಿಯಲ್ಲಿ ೨ಸಾವಿರ ಆಕ್ಸಿಜನ್ ಬೆಡ್ ನಿರ್ಮಿಸಲಾಗಿದೆ. ನಾಗರಿಕರ ಸೇವೆಯಲ್ಲಿ ಜೆಎಸ್‌ಡಬ್ಲ್ಯೂ ಸಂಸ್ಥೆ ಸದಾ ಮುಂದಿದೆ ಎಂದರು.

ಈ ಸಂದರ್ಭ ಮನಪಾ ಸದಸ್ಯ ರಾಜೇಶ್ ಸಾಲ್ಯಾನ್, ಗರೋಡಿ ಸ್ಟೀಲ್ ಸಂಸ್ಥೆಯ ಪಾಲುದಾರರಾದ ಬಿಂಬಾ ಮನೋಜ್, ಕನ್ಸಲ್ಟೆಂಟ್ ಗಿರೀಶ್ ರಾವ್, ಜನರಲ್ ಮ್ಯಾನೇಜರ್‌ಗಳಾದ ಸುಮಂತ್ ಮಲ್ಯ, ನಾಗರಾಜ್ ಎಸ್. ಪ್ರವೀಣ್ ಶೆಟ್ಟಿ ಉಪಸ್ಥಿತರಿದ್ದರು.


Share:

More Posts

Category

Send Us A Message

Related Posts

ಉಜಿರೆ ಕನ್ಯಾಡಿ ಸರ್ಕಾರಿ ಶಾಲೆಗೆ 1.65 ಲಕ್ಷ ರೂಪಾಯಿ ವೆಚ್ಚದ ಸ್ಮಾರ್ಟ್ ಕ್ಲಾಸ್ ಹಸ್ತಾಂತರ


Share       ಹಿಂದೂ ಧಾರ್ಮಿಕ ಸೇವಾ ಸಮಿತಿ ಆಶ್ರಯದಲ್ಲಿ ನಡೆದ ಸಾರ್ವಜನಿಕ ಶ್ರೀ ಗಣೇಶೋತ್ಸವದಲ್ಲಿ ಬೆಂಗಳೂರಿನ ಬಿಟ್ಸ್  & ಬೈಟ್ ಐಟಿ ಕಂಪನಿಯ ಶ್ರೀ ಪ್ರಕಾಶ್ ರಾವ್ ಇವರು ನೀಡಿದ ಒಂದು ಲಕ್ಷ ಅರವತ್ತೈದು ಸಾವಿರ


Read More »

ದುಬೈಯಲ್ಲಿ ಶಿಕ್ಷಣ ಪಡೆಯುತ್ತಿರುವ ಬಹುಮುಖ ಪ್ರತಿಭೆ ಪ್ರಿಷ ಪೂಜಾರಿ ಬೆಳ್ವಾಯಿ…


Share       ಬಹುಮುಖ ಪ್ರತಿಭೆ ಪ್ರಿಷ ಪೂಜಾರಿ ಬೆಳ್ವಾಯಿ… ಇತ್ತೀಚಿನ ಕಾಲಗಟ್ಟದಲ್ಲಿ ಮಕ್ಕಳು ಹೆಚ್ಚಾಗಿ ಮೊಬೈಲ್‌  ಟಿವಿ ಇಂಟರ್ನೆಟ್ ಗಳ ಜೊತೆಗೆ ಕಾಲ‌ ಕಳೆಯುತ್ತಿರುವಾಗ, ಇಳ್ಳೊಬ್ಬಲು ತನ್ನ ರಜಾದಿನಗಳನ್ನು ಯಕ್ಷಗಾನ ಭಜನೆ, ಇನ್ನು‌ ಅನೇಕ‌ ನೃತ್ಯಗಳ


Read More »

ಛಲ ಬಿಡದೆ ಹೋರಾಡಿ ವಿರೋಧಿಗಳ ಕುತಂತ್ರವನ್ನು ಮನದಟ್ಟು ಮಾಡುವಲ್ಲಿ ಯಶಸ್ವಿಯಾದ ಮಹೇಶ್ ಕೋಟ್ಯಾನ್


Share       lಮಂಗಳೂರು SEZ ಸಂತ್ರಸ್ತರ ನಡುವಿನ ಛಲ ಬಿಡದ ಹೋರಾಟಗಾರ ಆತ ಆಗ ಹದಿಹರೆಯದ ಹುಡುಗ, ಸಂಘಟನೆಗಳಲ್ಲಿ ತೊಡಗಿಸಿಕೊಂಡು ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಾ ಜೀವನೋಪಾಯಕ್ಕಾಗಿ ಕುಟುಂಬದ 16 ಎಕರೆ ಜಾಗದಲ್ಲಿ ವಾಣಿಜ್ಯ ಕೃಷಿ ಬೆಳೆಯುವ


Read More »

ಚತುರ್ಭಾಷಾ ತಾರೆ, ಮಂಗಳೂರು ಮೂಲದ ಚಿರಶ್ರೀ ಅಂಚನ್ ಅವರು ಮುಂಬಯಿನಲ್ಲಿ ಉದ್ಯಮಿ ಲೋಹಿತ್ ಪೂಜಾರಿ ಜತೆ ನಿಶ್ಚಿತಾರ್ಥ


Share       ಉಡುಪಿ: ಚತುರ್ಭಾಷಾ ತಾರೆ, ಮಂಗಳೂರು ಮೂಲದ ಚಿರಶ್ರೀ ಅಂಚನ್ ಅವರು ಮುಂಬಯಿನಲ್ಲಿ ಉದ್ಯಮಿ ಲೋಹಿತ್ ಪೂಜಾರಿ ಜತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.ಇನ್ನು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಮುಂಬೈ ಲೋನಾವಾಲದ ಉದ್ಯಮಿ ಲೋಹಿತ್ ಪೂಜಾರಿ ಅವರೊಂದಿಗೆ 


Read More »

ಬಂಟ್ವಾಳ ತಾಲೂಕು ಆಸ್ಪತ್ರೆಯ ಆರೋಗ್ಯ ರಕ್ಷಾ ಸಮಿತಿಯ ಸದಸ್ಯರಾಗಿ ವೆಂಕಪ್ಪ ಪೂಜಾರಿ ಆಯ್ಕೆ


Share       ಬಂಟ್ವಾಳ ತಾಲೂಕು ಆಸ್ಪತ್ರೆಯ ಆರೋಗ್ಯ ರಕ್ಷಾ ಸಮಿತಿಯ ಸದಸ್ಯರಾಗಿ ವೆಂಕಪ್ಪ ಪೂಜಾರಿ ಆಯ್ಕೆ ಬಂಟ್ವಾಳ : ಬಂಟ್ವಾಳ ತಾಲೂಕು ಆಸ್ಪತ್ರೆಯ ಆರೋಗ್ಯ ರಕ್ಷಾ ಸಮಿತಿಯ ಅಧಿಕಾರೇತರ ಸದಸ್ಯರಾಗಿ ವೆಂಕಪ್ಪ ಪೂಜಾರಿ ಅರ್ಬಿಗುಡ್ಡೆ ನಾಮ


Read More »

ವಿಶ್ವ ಮಾನ್ಯ ಕನ್ನಡಿಗ. 2024 ಪ್ರಶಸ್ತಿಗೆ ಭಾಜನರಾದ ಸನ್ಮಾನ್ಯ ಶ್ರೀ ಕೆ.ಪಿ ಮಂಜುನಾಥ್ ಸಾಗರ್ 


Share       ಅಮೆರಿಕದ ರಿಚ್ಮಂಡ್ ನಗರ ದ ಗ್ರೇಟರ್ ರಿಚ್ಮಂಡ್ ಕನ್ವೆನ್ಷನ್ ಸೆಂಟರ್ ನಲ್ಲಿ ನಡೆದ 12 ನೇ ಅಕ್ಕ ವಿಶ್ವ ಮಾನ್ಯ ಕನ್ನಡ ಸಮ್ಮೇಳನವು ನಡೆಯಿತು. ಈ ಸಂದರ್ಭದಲ್ಲಿ ಕನ್ನಡ ಭಾಷೆ, ಸಂಸ್ಕೃತಿ, ಸಾಹಿತ್ಯ


Read More »