ಸಮಾಜ ಸೇವಕರೂ, ಉದ್ಯಮಿ, ತುಳು ಸಂಘ ಅಂಕ್ಲೇಶ್ವರ ಗುಜರಾತ್ ಇದರ ಉಪಾಧ್ಯಕ್ಷ ಹಾಗೂ ಗುಜರಾತ್ ಬಿಲ್ಲವ ಸಂಘದಉಪಾಧ್ಯಕ್ಷರು ಶ್ರೀ ಹರೀಶ್ ಪೂಜಾರಿ ಅವರು ಮಾತೆ ದೇಯಿಬೈದೆತಿ ಅಮ್ಮನವರ ಬೆಳಕಿನ ಗೆಜ್ಜೆಸೇವೆಗೆ ಸುಮಾರು 51 ಸಾವಿರರೂಪಾಯಿ ಮೊತ್ತವನ್ನು ಸೇವಾ ರೂಪದಲ್ಲಿ ಸಮರ್ಪಿಸಿರುವ ಶ್ರೀ ಹರೀಶ್ ಪೂಜಾರಿ ಗುಜರಾತ್ ಅವರಿಗೆ ದೇಯಿಬೈದೆತಿಕೋಟಿ–ಚೆನ್ನಯ ಮೂಲಸ್ಥಾನ ಕ್ಷೇತ್ರಾಡಳಿತ ಸಮಿತಿ(ರಿ) ಮತ್ತು ಶ್ರೀ ಆದಿ ಧೂಮಾವತಿ, ಶ್ರೀ ದೇಯಿಬೈದೆತಿ ಕೃಪಾಪೋಷಿತಯಕ್ಷಗಾನ ಮಂಡಳಿಯ ಪರವಾಗಿ ಧನ್ಯವಾದಗಳು.
ಈ ಹಿಂದೆಯೂ ಕ್ಷೇತ್ರದ ಪುನರುತ್ಥಾನದ ಯೋಜನೆಗೆ ಸಹಕರಿಸಿರುವ ಸೇವೆಯನ್ನು ಸ್ಮರಿಸುತ್ತ ಶ್ರೀಯುತರ ಜೀವನದ ಮುಂದಿನದಿನಗಳು ಸಂತೋಷದಾಯಕವಾಗಿರಲಿ, ವ್ಯಾಪಾರ–ವ್ಯವಹಾರದಲ್ಲಿ ಉತ್ತಮವಾದ ಯಶಸ್ಸನ್ನು ಪಡೆಯಲಿ ಇವರಿಗೆ ಮತ್ತು ಇವರಕುಟುಂಬಕ್ಕೆ ಕ್ಷೇತ್ರದ ಸರ್ವ ಶಕ್ತಿಗಳು ನೆಮ್ಮದಿ ಮತ್ತು ಆರೋಗ್ಯ ಭಾಗ್ಯವನ್ನು ಕರುಣಿಸಲಿ ಎಂದು ಕ್ಷೇತ್ರದ ವತಿಯಿಂದ ನಮ್ಮಹಾರೈಕೆಗಳು.