ಗುರುವರ್ಯರ ಜನ್ಮದಿನದಂದು ಬೆಳಕು ನೀಡಿದ ಸಂತೃಪ್ತಿ
ಪದ್ಮರಾಜ್ ಆರ್. ಸಂತಸ
ಬಂಟ್ಬಾಳ: ಕುದ್ರೋಳಿ ಗುರುಬೆಳದಿಂಗಳು ವತಿಯಿಂದ ಬಂಟ್ವಾಳ ತಾಲೂಕಿನ ಸಜಿಪ ಮುನ್ನೂರು ಶಾಂತಿನಗರದ ಪರಿಶಿಷ್ಟ ಜಾತಿಯದಯಾನಂದ ಸುಜಾತರವರ ಮನೆಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಯಿತು.
ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ಕೋಶಾಧಿಕಾರಿ, ಗುರುಬೆಳದಿಂಗಳು ಅಧ್ಯಕ್ಷ ಪದ್ಮರಾಜ್ ವಿದ್ಯುತ್ ಸಂಪರ್ಕಕ್ಕೆ ಸೋಮವಾರ(ಆ.23) ಚಾಲನೆ ನೀಡಿ, *ಬ್ರಹ್ಮಶ್ರೀ ನಾರಾಯಣ ಗುರುವರ್ಯರ 167ನೇ ಜನ್ಮದಿನಾಚರಣೆಯ ಸುಸಂದರ್ಭ ಬಡವರ ಮನೆಗೆಬೆಳಕು ನೀಡುವ ಕಾರ್ಯ ಸಂತೃಪ್ತಿ ತಂದಿದೆ. ಮುಂದೆಯೂ ಗುರುಬೆಳದಿಂಗಳು ಮೂಲಕ ಸಂಕಷ್ಟದಲ್ಲಿರುವ ಕುಟುಂಬಕ್ಕೆಸಹಾಯಹಸ್ತ ನೀಡುವ ಕಾರ್ಯ ನಿರಂತರ ನಡೆಸಲಿದೆ ಎಂದರು.*
ಪರಿಶಿಷ್ಟ ಜಾತಿಗೆ ಸೇರಿದ ಈ ಕುಟುಂಬವು ಮೂವರು ಮಕ್ಕಳೊಂದಿಗೆ ವಿದ್ಯುತ್ ಸಂಪರ್ಕವಿಲ್ಲದೆ ಕತ್ತಲಲ್ಲಿ ಜೀವನ ಸಾಗಿಸುತ್ತಿರುವವಿಚಾರ ತಿಳಿದ ತಕ್ಷಣ ಗುರುಬೆಳದಿಂಗಳು, ಒಂದೇ ಜಾತಿ, ಒಂದೇ ಮತ, ಒಂದೇ ದೇವರು ಎಂಬ ನಾರಾಯಣ ಗುರುಗಳ ಸಂದೇಶಅನುಷ್ಠಾನದ ಆಶಯದಂತೆ ಶೀಘ್ರವಾಗಿ ಸ್ಪಂದಿಸಿ ವಿದ್ಯುತ್ ಸೌಲಭ್ಯ ನೀಡಿದೆ.
ಗುರುಬೆಳದಿಂಗಳು ಪ್ರಧಾನ ಕಾರ್ಯದರ್ಶಿ ರಾಜೇಶ್ ಸುವರ್ಣ, ಪ್ರವೀಣ್ ಅಂಚನ್, ರಾಜಶ್ರೀ ಜೆ.ಪೂಜಾರಿ, ಇಶಾನ್, ಸಾಮಾಜಿಕಕಾರ್ಯಕರ್ತ ಸತೀಶ್ ಪೂಜಾರಿ ಸಜಿಪ, ಯಶವಂತ ದೇರಾಜೆಗುತ್ತು, ವಿಶ್ವನಾಥ ಬೆಳ್ಚಾಡ ಕೂಡೂರು, ಪುರುಷೋತ್ತಮ ಪೂಜಾರಿಮಿತ್ತಕಟ್ಟ, ಜಯಶಂಕರ ಬಾಸ್ರಿತ್ತಾಯ, ಅರುಣ್‌ಕುಮಾರ್ ಕುಕ್ಕುದಕ್ಕಟ್ಟೆ, ಮನೋಜ್ ಪೂಜಾರಿ ಕಾಂತರಲಚ್ಚಿಲ್, ಲೋಹಿತ್ಪಣೋಲಿಬೈಲು, ಮನೋಹರ ಶಾಂತಿನಗರ, ಭಾಸ್ಕರ ಕಂಪದಕೋಡಿ, ರಕ್ಷಣ್ ಶಾಂತಿನಗರ, ಯಶ್ವಿತ್ ಮಡಿವಾಳಪಡ್ಫು, ಗಣೇಶ್ಮರ್ತಾಜೆ, ದಿಲೀಪ್ ಕಂದೂರು, ಪ್ರಶಾಂತ್ ಕಂದೂರು, ಅಶೋಕ್ ಕೇಪುಳಗುಡ್ಡೆ, ರಂಜಿತ್ ಪೂಜಾರಿ ಮಿತ್ತಮಜಲು ಮತ್ತಿತರರುಉಪಸ್ಥಿತರಿದ್ದರು.