TOP STORIES:

ಮದುವೆಯಿಂದ ಮಲಿನಗೊಳ್ಳುತ್ತಿರುವ ಸಮಾಜ


ಲಾಕ್‌ಡೌನ್ ಕಾರಣಕ್ಕೆ ಈಗಾಗಲೇ ನಮ್ಮೆಲ್ಲರ  ಹೊಂದಾಣಿಕೆಗೊಳಗಾದ ಕೆಲವು ನಿರ್ಬಂಧಗಳು ಮುಂದಕ್ಕೂ ಹಾಗೆಯೇಇರಬೇಕೆಂದು ಕೆಲವು ಬಾರಿ ಅನ್ನಿಸುವುದಿದೆ. ನಿಯಮಿತವೆಂದೆನಿಸಿ  ನಿರಾಡಂಬರಗೊಂಡಿರುವ ನಮ್ಮಲ್ಲಿನ ಮದುವೆಸಮಾರಂಭಗಳನ್ನು ಕಂಡಾಗಲಂತೂ ಇದನ್ನು ಒಪ್ಪಲೇಬೇಕು.

  ಹೌದು ವರ್ತಮಾನವನ್ನು ಅನುಲಕ್ಷಿಸಿದರೆ ಇದು ವ್ಯಾಪಕವಾಗಿ ಪ್ರಸಾರಗೊಳ್ಳಲೇಬೇಕಾದ ಸಂದೇಶ. ಅತಿರೇಕದ ವಿವಾಹ, ಮದರಂಗಿ, ಹಲ್ದಿ ಮೊದಲಾದ ಸಮಾರಂಭಗಳು ಸದ್ಯಕ್ಕೆ ನಮ್ಮ ಹಿಂದೂ ಸಮಾಜಕ್ಕಿರುವ ಅತಿ ದೊಡ್ಡ ಪಿಡುಗು. ನಮ್ಮ  ಬದುಕುಹೊಸಸ್ಫೂರ್ತಿ ಪಡೆಯುವ ವಿವಾಹ, ಗೃಹಪ್ರವೇಶ, ಸೀಮಂತ ಮುಂತಾದ ಶುಭಾವಸರದಲ್ಲಿ ಇನ್ನೊಬ್ಬರ ಜೀವನವನ್ನುವ್ಯಸನಕ್ಕೀಡುಮಾಡಿಸಿ ದಾರಿತಪ್ಪಿಸುವುದು ಪರಮಪಾಪವಲ್ಲದೆ ಇನ್ನೇನು ?

ಮಗನೊಬ್ಬ ನಮ್ಮ ಸಮಾರಂಭವೊಂದರಿಂದ ಮೊದಲಾಗಿ ಕುಡಿತಕ್ಕೆ ಬಿದ್ದನೆಂದು ತಿಳಿದರೆ ಕೊನೆಗೊಮ್ಮೆ ಆತನ ಅಧೋಗತಿಯನ್ನುಕಂಡು‌ ಮಮ್ಮಲ ಮರುಗುವ  ಹೆತ್ತಕರುಳಿನ ಹಿಡಿಶಾಪ ನಮ್ಮನ್ನು ತಾಕದಿದ್ದೀತೇ ?

ಇವೆಷ್ಟೇ ಅಲ್ಲ.

ಇನ್ನೂ ಇದೆ, ಓದಿ.

        ನೀವು ಗಮನಿಸಿರಬಹುದು.

ಈಗಿನ ನಮ್ಮ ಸುಶಿಕ್ಷಿತ ವಧುವರರಿಗೆ ಸನಾತನ ಮದುವೆಯ ಶಾಸ್ತ್ರವಿಧಿಗಳಲ್ಲಿ ಸಾರ್ವಜನಿಕವಾಗಿ ಪಾಲ್ಗೊಳ್ಳಲು ನಾಚಿಕೆ. ಅದಕ್ಕಾಗಿತೀರಾ ಆಪ್ತರನ್ನು ಮಾತ್ರ ಆಹ್ವಾನಿಸಿ, ಮನೆಯಿಂದ ಸಾಕಷ್ಟು ದೂರವೇ ಇರುವ ದೇಗುಲದಲ್ಲಿ ಯಾರಿಗೂ ಕಾಣದಂತೆ, ಬರಿಯಸಾಕ್ಷಿಗಾಗಿ ಮಾತ್ರ ಒಂದೆರಡೇ ಫೋಟೋ ಕ್ಲಿಕ್ಕಿಸಿ (ಅದಕ್ಕೂ ದೇಗುಲದೊಳಗಡೆ ಅನುಮತಿ ಇಲ್ಲದಿದ್ದರೆ ಖುಷಿಪಟ್ಟು),  ಇನ್ನೂರುಜೋಡಿಗಳಲ್ಲಿ ತಾವೂ ಒಂದೆನಿಸಿ ಮುಹೂರ್ತ ತಪ್ಪಿ ಮದುವೆಯಾಗುತ್ತಾರೆ.

                  ನಂತರ ಅಂದೋ ಅಥವಾ ಶುಭಾಶುಭ ದಿನದ ಹಂಗಿಲ್ಲದೆ ಯಾವಗಲಾದರೊಂದು ದಿನ ತಮ್ಮವರೆಲ್ಲರನ್ನೂ ಆಹ್ವಾನಿಸಿ, ಎಲ್ಲರಿಗೂ ಕಾಣುವಂತೆ ನಗರದ ಮಧ್ಯೆಯೇ ಇರುವ ಬೃಹತ್ ಸಭಾಂಗಣದಲ್ಲಿ ಪ್ರತಿಷ್ಠೆಯ ರಿಸೆಪ್ಷನ್. ಯಥಾವತ್ ಹಿಂದಿಸೀರಿಯಲನ್ನೇ ಹೋಲುವ ವಸ್ತ್ರಸಂಹಿತೆ, ಅಲಂಕಾರ, ನೃತ್ಯವಿನೋದಾವಳಿ ಸಹಿತ ಸ್ವಾಗತ, ಕೇಕ್‌ಗೆ ಚೂರಿ ತಿವಿತ, ಪಾಶ್ಚಾತ್ಯವೃಂದನೃತ್ಯ, ಕೊನೆಯಲ್ಲಿ ತಿನ್ನುವುದಕ್ಕಿಂತ ಹೆಚ್ಚು ಪೋಲಾಗಿಸುವ 20‌ ರಿಂದ 40 ರಷ್ಟು ಅಪರಿಚಿತ ಖಾದ್ಯಯುಕ್ತ ಪುಷ್ಕಲ ಭೋಜನ. ಅವುಗಳಲ್ಲಿ ಮತ್ತೆ  5 ಭೋಜನಾಪೂರ್ವ ಖಾದ್ಯಗಳು. 5 ಭೋಜನೋತ್ತರ ಖಾದ್ಯಗಳು.

          ವಿವಾಹದ ಖರ್ಚಿಗಿಂತಲೂ ಮುಪ್ಪಟ್ಟು ಹೆಚ್ಚಾಗುವಷ್ಟು ವೆಚ್ಚದಲ್ಲಿ ಏರ್ಪಡಿಸುವ ರಾತ್ರಿಯ ಡಿಜೆ ಪಾರ್ಟಿ. 6 ಅಂತಸ್ತಿನಲ್ಲಿಸೌಂಡ್ ಬಾಕ್ಸ್‌ಗಳು, ಮದುವೆ ಮನೆಯವರಿಗೆ ಪರಿಚಿತರಾಗಿರಬೇಕು ಎಂಬ ಕನಿಷ್ಟ ನಿರ್ಬಂಧವೂ ಇಲ್ಲದಂತೆ ಸರ್ವರಿಗೂಮುಕ್ತವಾಗಿರುವ ಮನೆಮುಂದಿನ (ಕೆಲವೆಡೆ ಹಿಂದಿನ) ಓಪನ್ ಬಾರ್. ಬಂದವರನೇಕರಿಗೆ ಅಂದಿನ ಮದುಮಕ್ಕಳ್ಯಾರು, ಮನೆಯಾರದ್ದೆಂಬುದೇ ಗೊತ್ತಿರುವುದಿಲ್ಲ. ಪ್ರೌಢಶಾಲಾ ವಿದ್ಯಾರ್ಥಿಗಳಿಂದ ತೊಡಗಿ ಹಣ್ಣಣ್ಣಾದ ವೃದ್ಧರೆಲ್ಲರೂ ಕಲೆತು ನಮ್ಮಅಪರೂಪದಒಗ್ಗಟ್ಟು ಸಾರುವ ಸಾಮೂಹಿಕ ಪಾನಸಮಾವೇಶ. ಕಾವ್ಯಗಳಲ್ಲಿ ವರ್ಣಿತವಾಗಿರುವ ನೃತ್ಯಪಾನಗೊಷ್ಠಿಯ (ಈಗಿನ ಲೈವ್‌ಬ್ಯಾಂಡ್‌ನ) ಫೀಲ್.ಆಗುವಂತೆ ಕೆಲವೆಡೆ ಟೇಬಲ್‌ಗೆ ಬಾಟಲಿ ಸಪ್ಲೈಸರ್ವ್ ಮಾಡಲೆಂದೇ ಅಂದಚೆಂದದ ಹುಡುಗಿಯರಂತೆ.ಎಲ್ಲರಲ್ಲೂ ಹೊಸಹೊಸ ಇತಿಹಾಸ ನಿರ್ಮಾಣ ಮಾಡುವ ಆತುರ. ಹೀಗೆ ವೇಳೆಏರುತ್ತಿದ್ದಂತೆಯೇ  ತಂತಾನೇ ಒಳಮೂಡಿಬರುವ ನೃತ್ಯಾವೇಶ. ಆರ್ಭಟ, ಕೊನೆಕೊನೆಗೆ ದೈವಾರಾಧನೆ, ಯಕ್ಷಗಾನ ಮೊದಲಾದ ಪವಿತ್ರ ಆರಾಧನಾ ಕಲೆಗಳ ಅಣಕು ಪ್ರದರ್ಶನ, ಬಗೆಗಿನವ್ಯಂಗ್ಯಾಭಿವ್ಯಕ್ತಿಗೆ ಬಾರೀ ಬೇಡಿಕೆಮೆಚ್ಚುಗೆ. ಇಷ್ಟಕ್ಕೆ ಮುಗಿಯಲಿಲ್ಲ. ನಾಟ್ಯದ ನವರಂಗ ಮಂಟಪದಲ್ಲಿ ಸ್ತ್ರೀಯರಿಗೂ ಇದೆಮೀಸಲಾತಿ.  ಯಾರ್ಯಾರೋ ಅಪಾಪೋಲಿ ಯುವಕರೊಂದಿಗೆ  ಮದುಮಗಳ ಸಹಿತ ಮನೆಯ ಮಹಿಳೆಯರೆಲ್ಲರ ಕುಡಿತ -‌ಕುಣಿತ. ಇದೂ ಒಂದು‌ ವಿಧದ ಎಂತಹ ಸ್ತ್ರೀಪುರುಷ ಸಮಾನತೆ.

ಆಹಾ, ಎಲ್ಲಾ ಕಾರಣಗಳಿಂದ ಮನೆಯವರಿಗೆ‌ ಮಾತ್ರವಲ್ಲ, ನೆರೆಕರೆಯವರಿಗೂ ಗಳಿಗೆ ಜೀವನಪರ್ಯಂತ ಅವಿಸ್ಮರಣೀಯ!!!

 ಇಷ್ಟೆಲ್ಲಾ ಮುಗಿದು ಮರುದಿನ ಮದುವೆ ಮನೆಯನ್ನೊಮ್ಮೆ ನೋಡಿದರೆ ಕುರ್ಚಿ, ಆಹಾರ, ಅಲಂಕಾರ, ಚಪ್ಪಲಿ, ಬಾಟಲಿಎಲ್ಲವೂ ಚೆಲ್ಲಾಪಿಲ್ಲಿಯಾಗಿ ಹರಡಿಬಿದ್ದು, ಆಗಷ್ಟೇ ಸಮರ ಸಮಾಪನಗೊಂಡ ರಣರಂಗದಂತಿರುತ್ತದೆ.

ನನಗಿರುವುದು ಒಂದೇ ಪ್ರಶ್ನೆ. ಧರ್ಮಸಂರಕ್ಷಣಾ ಕಾರ್ಯಗಳೆಲ್ಲದಕ್ಕೂ ಸನ್ನದ್ಧರೆನ್ನುವ ನಮ್ಮ ಏರುತ್ಸಾಹದ ಯುವಕರು ಧರ್ಮಘಾತಕತನದ ಬಗ್ಗೆ ಏಕೆ ಕಿಂಚಿತ್ತೂ ಲಕ್ಷ್ಯ ಹರಿಸುವುದಿಲ್ಲ ? ಹೇಳಿಕೆ ಮಾತ್ರಕ್ಕೆ ನಾವೆಂದಿಗೂ ಧರ್ಮಪರರೆನಿಸಿಕೊಳ್ಳುವವರು ವಿಚಾರದಲ್ಲಿ  ಎಡವುತ್ತಿರುವುದು ಏಕೆ? ಮೂರ್ಕಾಸಿನ ಲಾಭವಿಲ್ಲದ ರಾಜಕೀಯ ಅಸಮಾಧಾನಕ್ಕೆ ತಕ್ಷಣ ಉರಿದು ಬೀಳುವರಿಗೆ   ಇದು ನಮ್ಮತನದ ಸ್ವಾಭಿಮಾನಕ್ಕೆ ಬೀಳುವ ಪೆಟ್ಟಾಗಿ ಏಕೆ ಕಾಣುವುದಿಲ್ಲ. ಸಮಾರಂಭವನ್ನು ಅಪವಿತ್ರಗೊಳಿಸುವುದು ಶಾಸ್ತ್ರವಿರೋಧವಲ್ಲವೇ ? ಅಕ್ಷಮ್ಯ ಧರ್ಮದ್ರೋಹವಲ್ಲವೇ ? ಇದರ ವಿರುದ್ಧ ಸಾರ್ವತ್ರಿಕ ಹೋರಾಟ ಅವಶ್ಯವಲ್ಲವೇ ?

ಸೂಕ್ಷ್ಮವಾಗಿ ಗಮನಿಸಿದರೆ ತಿಳಿದೀತು : ಬಲಿಯಾಗುತ್ತಿರುವವರು ಅಂತಸ್ತಿಲ್ಲಿ ಉನ್ನತರಲ್ಲ. ಎಲ್ಲರೂ ಮಧ್ಯಮವರ್ಗದ ಯುವಕಯುವತಿ, ವಿದ್ಯಾರ್ಥಿಗಳು ಮಾತ್ರ.

 ಇನ್ನು ಕೆಲವರು ಕೇಳಬಹುದು.. “ಅವರ ಹಣ, ಅವರ ಖರ್ಚು ನಿಮಗೇನು ನಷ್ಟ ? ನೀವು ಕುಡಿಯದಿದ್ದರೆ ಬೇಡ ಬಿಡಿ. ಅದು ಅವರವರ ಸ್ವಾತಂತ್ರ್ಯ, ಅವರವರ ಇಚ್ಛೆ

          

  ಹಾಗೆ ನೋಡಿದರೆ ಯಾವುದೂ ತಪ್ಪಲ್ಲ. ಯಾರೋ ಕೊಲೆಯೊಂದನ್ನು ಮಾಡಿದಾಕ್ಷಣಕೊಂದವನು ಅವನುಸತ್ತವನುಇವನು. ನಮಗೇನು ನಷ್ಟ ? ಅದು ಅವನವನ ಇಚ್ಛೆಎಂದು ನಿರ್ಲಕ್ಷ್ಯ ಧೋರಣೆಯಿಂದ ಸಮಾಜ ಕ್ಷಮಿಸುವುದಾದರೆ ಇದೂತಪ್ಪಲ್ಲ.  ಅಮಲುಮುಕ್ತ ಸುಸಭ್ಯ ಸಮಾಜ ನಿರ್ಮಾಣವಾಗದಿದ್ದರೆ ಮುಂದೊಂದು ದಿನ ಘೋರ ಪಶ್ಚಾತಾಪ ಪಡಬೇಕಾದೀತು. ಏಕೆಂದರೆ ಇದು ಕೂಡಾ ಸಮೂಹದ ಭಾವನಾತ್ಮಕ ಕೊಲೆ. ದಿವ್ಯಾದರ್ಶಗಳ ಮುಖೇನ ಸಮಾಜ ಬೆಳಗಬೇಕಾದ ಭವಿಷ್ಯದಪೀಳಿಗೆಯ ಕಗ್ಗೊಲೆ.

    

            ಡಾ॥.ಅರುಣ್ ಉಳ್ಳಾಲ್


Related Posts

ಶೈಕ್ಷಣಿಕ ಸಾಧನೆಯಲ್ಲೂ ‘ಸೇಮ್ ಟು ಸೇಮ್’: ಕುಂದಾಪುರದ ಅವಳಿ ಸಹೋದರಿಯರ SSLC ಪವಾಡ!


Share         ​ಕುಂದಾಪುರ: ಅವಳಿ ಜವಳಿ ಮಕ್ಕಳು ಅಂದಮೇಲೆ ಅವರ ರೂಪ, ಬಣ್ಣ, ನಡವಳಿಕೆ ಹಾಗೂ ಆಲೋಚನೆಗಳಲ್ಲಿ ಸಾಮ್ಯತೆ ಇರುವುದು ಸಹಜ ಸಂಗತಿ. ಆದರೆ, ಕುಂದಾಪುರದ ಈ ಇಬ್ಬರು ಸಹೋದರಿಯರು ಶೈಕ್ಷಣಿಕ ಸಾಧನೆಯಲ್ಲೂ ತಾವು ಸಂಪೂರ್ಣವಾಗಿ


Read More »

ಮಂಗಳೂರು ದಸರಾ ಇತಿಹಾಸದಲ್ಲಿ ಹೊಸ ಮೈಲಿಗಲ್ಲು – ₹67 ಕೋಟಿ ವೆಚ್ಚದ ಭೂಗತ ಕೇಬಲ್ ಯೋಜನೆಗೆ ಮಂಜೂರಾತಿ


Share         ವಿಶ್ವವಿಖ್ಯಾತ ಮಂಗಳೂರು ದಸರಾ ಮಹೋತ್ಸವದ ಮೆರವಣಿಗೆಗೆ ದಶಕಗಳಿಂದ ಎದುರಾಗಿದ್ದ ತಾಂತ್ರಿಕ ಸವಾಲಿಗೆ ಈಗ ಶಾಶ್ವತ ಪರಿಹಾರ ಸಿಕ್ಕಂತಾಗಿದೆ. ಕುದ್ರೋಳಿ ಶ್ರೀ ಗೋಕರ್ನಾಥ ಕ್ಷೇತ್ರದ ಆಡಳಿತ ಮಂಡಳಿಯ ಸುದೀರ್ಘ ಪ್ರಯತ್ನದ ಫಲವಾಗಿ, ಮೆರವಣಿಗೆ ಮಾರ್ಗದಲ್ಲಿ


Read More »

ಉಡುಪಿ ಸಿಟಿ ಬಸ್‌ ಚಾಲಕನ ಮಗಳು ಶಾಲೆಗೆ ಪ್ರಥಮ ರಾಂಕ್ – ದ್ರುತಿ ಪೂಜಾರಿ ಸಾಧನೆ…


Share         ಉಡುಪಿ: ಶ್ರಮ, ಸಂಕಲ್ಪ ಮತ್ತು ಕುಟುಂಬದ ಬೆಂಬಲ ಇದ್ದರೆ ಯಾವ ಸಾಧನೆಯೂ ಅಸಾಧ್ಯವಲ್ಲ ಎಂಬುದಕ್ಕೆ ನಗರದ ಸಿಟಿ ಬಸ್ ಚಾಲಕರ ಮಗಳು ದ್ರುತಿ ಪೂಜಾರಿ ಉತ್ತಮ ಉದಾಹರಣೆ ಆಗಿದ್ದಾಳೆ. 23/04/2026 ರಂದು ಪ್ರಕಟವಾದ


Read More »

ಶ್ರೀಯುತ ಮಂಜುನಾಥ ಪೂಜಾರಿ ಮುದ್ರಾಡಿ ಅವರಿಗೆ ಅವರಿಗೆ ರಾಜ್ಯ ಸಚಿವರ ಸ್ಥಾನಮಾನ


Share         ಶ್ರೀ ನಾರಾಯಣ ಗುರು ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶ್ರೀಯುತ ಮಂಜುನಾಥ ಪೂಜಾರಿ ಮುದ್ರಾಡಿ ಅವರಿಗೆ ರಾಜ್ಯ ಸಚಿವರ ಸ್ಥಾನಮಾನ ಲಭಿಸಿರುವುದು ನಮ್ಮ ಸಮಾಜಕ್ಕೆ ಹೆಮ್ಮೆಯ ಸಂಗತಿ. ಈ ಕುರಿತು ಏಪ್ರಿಲ್ 2ರಂದು ಸರಕಾರದ


Read More »

ಕಾರ್ಕಳದ ಸುಧಾಕರ್ ಪೂಜಾರಿಗೆ ‘ಐಕಾನಿಕ್ ಟ್ರೈನರ್’ ಗೌರವ ಪದವಿ


Share         ಬೆಂಗಳೂರು: ಎಕ್ಕಾರ ಲೈಫ್ ಸೈನ್ಸಸ್ ಪ್ರೈವೇಟ್ ಲಿಮಿಟೆಡ್ ಇದರ ಆಡಳಿತ ನಿರ್ದೇಶಕರಾದ ಕಾರ್ಕಳದ ಸುಧಾಕರ್ ಪೂಜಾರಿ ಅವರಿಗೆ ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ವತಿಯಿಂದ “ಐಕಾನಿಕ್ ಟ್ರೈನರ್” ಎಂಬ ಗೌರವಪೂರ್ಣ ಪದವಿ ಪ್ರದಾನ ಮಾಡಲಾಗಿದೆ.


Read More »

ಅನಿತಾ ಪಿ. ತಾಕೊಡೆ ಅವರ ‘ಮೇಣಕ್ಕಂಟಿದ ಬತ್ತಿ’ ಕವನಕ್ಕೆ ಒಲಿದ ಸಂಕಮ್ಮ ಸಂಕಣ್ಣನವರ್ ದತ್ತಿ ಪ್ರಶಸ್ತಿ


Share         ಕರ್ನಾಟಕ ಲೇಖಕಿಯರ ಸಂಘವು 2025ನೇ ಸಾಲಿನ ವಿವಿಧ ದತ್ತಿನಿಧಿ ವಾರ್ಷಿಕ ಪ್ರಶಸ್ತಿಗಳನ್ನು ಪ್ರಕಟಿಸಿದೆ. ಹಸ್ತಪ್ರತಿಯಲ್ಲಿ ಗವಿಸಿದ್ದ ಎನ್. ಬಳ್ಳಾರಿ ಕಾವ್ಯ ಪ್ರಶಸ್ತಿ ಪಡೆದ, ಅನಿತಾ ತಾಕೊಡೆಯವರ ‘ಮೇಣಕ್ಕಂಟಿದ ಬತ್ತಿ’ ಕವನ ಸಂಕಲನ ಕ್ಕೆ 


Read More »