ಮಂಗಳೂರು: ಆರ್ಥಿಕ ಹಿಂದುಳಿದ ಕುಟುಂಬವೊಂದರ ಹುಟ್ಟು ಅಂಗವೈಕಲ್ಯದ 7 ವರ್ಷದ ಮಗುವಿಗೆ ಗುರುಬೆಳದಿಂಗಳು (ರಿ) ಕುದ್ರೋಳಿ ವತಿಯಿಂದ ಸೇವಾ ಯೋಜನೆಯ ಆರೋಗ್ಯ ನಿಧಿಯಿಂದ ಸುಮಾರು 25 ಸಾವಿರ ರೂ. ವೆಚ್ಚದ ಅತ್ಯಾಧುನಿಕ ಸೌಲಭ್ಯದ ವೀಲ್‌ಚೇರ್ ಅನ್ನು ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದಲ್ಲಿ ಬುಧವಾರ ಹಸ್ತಾಂತರಿಸಲಾಯಿತು.
ಕುದ್ರೋಳಿ ಗೋಕರ್ಣನಾಥ ಕಾಲೇಜು ಬಳಿಯ ನಿವಾಸಿಯೊಬ್ಬರು ನಮ್ಮ ಸಂಸ್ಥೆಯ ಜತೆ ಬಂದು ತನ್ನ ಮಗಳು ಹುಟ್ಟು ಅಂಗವೈಕಲ್ಯದಿಂದ ನಡೆದಾಡದ ಸ್ಥಿತಿಯಲ್ಲಿದ್ದು,. ಆರ್ಥಿಕ ಸಮಸ್ಯೆಯಿಂದ ವೀಲ್‌ಚೇರ್ ತೆಗೆದುಕೊಳ್ಳಲು ಕಷ್ಟಪಡುತ್ತಿದ್ದೇವೆ. ಆದರಿಂದ ಸಾಮಾನ್ಯ ಒಂದು ವೀಲ್‌ಚೇರ್ ಆದರೂ ನೀಡಿ ಸಹಕರಿಸಿ ಎಂದು ಮನವಿ ಮಾಡಿದ್ದರು. ಆದರಂತೆ ಮಗುವಿನ ಸಮಸ್ಯೆ ಬಗ್ಗೆ ಮಾಹಿತಿ ಪಡೆದುಕೊಂಡ ಗುರುಬೆಳದಿಂಗಳು ಆಯ್ಕೆ ಸಮಿತಿಯು ತಜ್ಞರ ಜತೆ ಚರ್ಚಿಸಿ ಅವರ ಸಲಹೆಯಂತೆ ಅತ್ಯಾಧುನಿಕ ಸೌಲಭ್ಯದ ( PAEDIATRIC WHEEL CHAIR) ವೀಲ್‌ಚೇರ್ ನೀಡಲು ಟೀಮ್ ಗುರುಬೆಳದಿಂಗಳು ನಿರ್ಧರಿಸಿತು.
ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ಕೋಶಾಧಿಕಾರಿ, ಪದ್ಮರಾಜ್ ಆರ್., ಉದ್ಯಮಿಗಳಾದ ರಘುನಾಥ ಮಾಬೆನ್ ಉಡುಪಿ, ಕೋಮಲ್ ಅಂಚನ್, ಮಂಗಳೂರು ಮಹಾನಗರ ಪಾಲಿಕೆ ಸದಸ್ಯ ಅನಿಲ್‌ಕುಮಾರ್, ಗೋಕರ್ಣನಾಥ ಸೇವಾದಳದ ಪ್ರೇಮ್‌ಕುಮಾರ್, ಪ್ರಮೋದ್ ಕೋಟ್ಯಾನ್, ಸಾಮಾಜಿಕ ಹೋರಾಟಗಾರ ಸುನೀಲ್ ಕುಮಾರ್ ಬಜಾಲ್, ರಾಜೇಂದ್ರ ಚಿಲಿಂಬಿ, ಕುದ್ರೋಳಿ ಕ್ಷೇತ್ರದ ಅರ್ಚಕರು, ಗುರುಬೆಳದಿಂಗಳು ಸದಸ್ಯರು, ಗೋಕರ್ಣನಾಥ ಸೇವಾದಳದ ಸದಸ್ಯರು ಉಪಸ್ಥಿತರಿದ್ದರು.