ಮೂಡುಬಿದಿರೆ: ಅತಿ ಚಿಕ್ಕ ಎಲೆಯಲ್ಲಿ ವಿಶ್ವದ ಹಾಸ್ಯ ಕಲಾವಿದ ಚಾರ್ಲಿ ಚಾಪ್ಲಿನ್ ಅವರ ಚಿತ್ರ ಬಿಡಿಸಿದ ಮೂಡುಬಿದಿರೆಯ ಅಕ್ಷಯ್ ಎಂ ಕೋಟ್ಯಾನ್ ಅವರು ಗೋಲ್ಡನ್ ಬುಕ್ ರೆಕಾರ್ಡ್‌ಗೆ ಆಯ್ಕೆಯಾಗಿದ್ದು, ವಿಶ್ವ ಸರ್ಟಿಫಿಕೇಟ್ ಲಭಿಸಿದೆ.
11.7 ಸೆ.ಮೀ ಎಲೆಯಲ್ಲಿ ಚಾರ್ಲಿ ಚಾಪ್ಲಿನ್ ಚಿತ್ರ ಬಿಡಿಸಿದ್ದು, ಗೋಲ್ಡನ್ ಬುಕ್ ವರ್ಲ್ಡ್ ರೇಕಾರ್ಡ್‌ಗೆ ಆಯ್ಕೆಯಾಗಿದ್ದು, ಸರ್ಟಿಫಿಕೇಟ್ ಪಡೆದುಕೊಂಡಿದ್ದಾರೆ.
ಈ ಹಿಂದೆ ಅಕ್ಷಯ್ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವಿರೇಂದ್ರ ಹೆಗ್ಗಡೆ ಹಾಗೂ ಹೇಮಾವತಿ ವಿರೇಂದ್ರ ಹೆಗ್ಗಡೆ ಅವರ ಚಿತ್ರವನ್ನು ಅಶ್ವತ್ಥ ಎಲೆಗಳಲ್ಲಿ ಬಿಡಿಸಿ ಹೆಗ್ಗಡೆಯವರಿಂದ ಆಶೀರ್ವಾದ ಪಡೆದುಕೊಂಡಿದ್ದರು.
ಮೂಲತಃ ಮೂಡುಬಿದಿರೆಯ ಕಲ್ಲಬೆಟ್ಟುವಿನ ಮೋಹನ್ ಬಿ ಪೂಜಾರಿ ಹಾಗೂ ಶೋಭಾ ಕೋಟ್ಯಾನ್ ದಂಪತಿಯ ಪುತ್ರ. ಈಗಾಗಲೇ ಇವರು ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಡಾ.ವಿರೇಂದ್ರ ಹೆಗ್ಗಡೆ, ನಾರಾಯಣಗುರು, ಶಾಸಕ ಹರೀಶ್ ಪೂಂಜಾ, ಸಿನೆಮಾ ನಟರ ಹಾಗೂ ದೇವರ ಚಿತ್ರಗಳನ್ನು ಎಲೆಗಳಲ್ಲಿ ಬಿಡಿಸಿದ್ದಾರೆ.