TOP STORIES:

FOLLOW US

ಜೀವಮಾನ ಸಾಧಕರಾದ ವಿದ್ವಾನ್ ರಮನಾಥ ಕೋಟೆಕಾರು


ಒರ್ವ ಉತ್ತಮ ಕಲಾವಿದ ತನ್ನ ಪರಿಪೂರ್ಣತೆ ಹಾಗೂ ಪ್ರತಿಭೆಯನ್ನು ವಿಭಿನ್ನ ಚಿಂತನೆ ಕಲಿಕೆಯ ಹಂಬಲ, ಸಾಧನೆ, ಏಕಾಗ್ರತೆಯಿಂದ ಸಾಧಿಸುತ್ತಾನೆ.ಸಂಗೀತ,ಸಾಹಿತ್ಯ , ಜನಪದ ಅಧ್ಯಯನ ರಂಗದ ಅನರ್ಘ್ಯ ರತ್ನ ಶ್ರೀ ರಮನಾಥ‌ ಕೋಟೆಕಾರು ಮಂಗಳೂರು ಸೋಮೇಶ್ವರ ಗ್ರಾಮದ ಕಣೀರುತೋಟ ಸಾಯಿಸನ್ನಿಧಿ ನಿಲಯ ಇಲ್ಲಿ ತನ್ನ ಧರ್ಮಪತ್ನಿಯಾದ ಆಶಾ ಕೋಟೆಕಾರು ಹಾಗೂ ಏಕೈಕ ಪುತ್ರಿ ಸಾಯೀಕ್ಷಾ ಜೊತೆಗೆ ವಾಸವಾಗಿದ್ದಾರೆ.ಇವರ ತಾಯಿ ಸುಂದರಿಯವರ ಬಗ್ಗೆ ಹೇಳಬೇಕೆಂದರೆ! ಓರ್ವ ಮಹಿಳೆ ಆಗಿ ಪತಿಯನ್ನು ಅಗಲಿ ಯಾವ ಗಂಡಿಗೂ ಕಡಿಮೆಯಿಲ್ಲ ಎಂಬಂತೆ ಪ್ರಪ್ರಥಮವಾಗಿ ಅಂಗಡಿ (ವ್ಯಾಪಾರ) ಪ್ರಾರಂಭಿಸಿ ವ್ಯಾಪಾರದಿಂದ ಬಂದ ಕಿಂಚಿತ್ ಲಾಭಾಂಶಗಳಿಂದ ತನ್ನ 9 ಮಕ್ಕಳನ್ನು ಸಲಹಿ ವಿದ್ಯಾ ಬುದ್ಧಿ ನೀಡಿರುವರು.ಅನಂತರದ ಕಾಲದಲ್ಲಿ ಅನೇಕ ಮಹಿಳೆಯರು (ಅಂಗಡಿ) ವ್ಯಾಪಾರ ವಹಿವಾಟು ನಡೆಸಿ ಜೀವನ ಸಾಗಿಸಿದ ಹಲವಾರು ನಿದರ್ಶನಗಳಿರಬಹುದು. ಆದರೆ ಅವರಿಗೆಲ್ಲ ಮಾದರಿ ಇವರ ಮಾತೆ ಸುಂದರಿಯವರು. ಇವರು ಸರಳ ವ್ಯಕ್ತಿತ್ವದವರು ಬಿಳಿ ಅಥವಾ ಕಾವಿ ಸೀರೆಯನ್ನುಟ್ಟು ಜನರ ಸಂಕಷ್ಟಗಳಿಗೆ ನೆರವಾದವರು,ಮಾನಸಿಕ ಮಹಿಳಾ ರೋಗಿಯೊಬ್ಬರಿಗೆ ಜನರು ಕಿರುಕುಳ ನೀಡಿದಾಗ ಆಗಿನ ಕಾಲದ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯಾಗಿದ್ದ ಎಸ್.ಕೆ. ದಾಸ್ ರವರನ್ನು ನೇರವಾಗಿ ಭೇಟಿಯಾಗಿ ಬೀದಿ ಬದಿ ಅಲೆಯುವ ಮಹಿಳಾ ಮಾನಸಿಕ ರೋಗಿಗೆ ಪೋಲಿಸ್ ರಕ್ಷಣೆ ಒದಗಿಸುವುದರೊಂದಿಗೆ ಮಾನವೀಯತೆ ಮೆರೆದ ಅಮ್ಮ ಇವರು. ವಿಶೇಷವಾಗಿ ಒಂದು ಶಾಶ್ವತ ಹೆಮ್ಮರದಂತೆ ಜೀವಿಸಿದ ತಾಯಿಯ ಸೃಜನಶೀಲತೆಯನ್ನು ಇಂದು ನಾವು ರಮಾನಾಥ ಕೋಟೆಕಾರು ಇವರಲ್ಲಿ ಕಾಣಬಹುದು.

ಆಕಾಶದ ತಾರೆಗಳ ಎಣಿಸಲು ಸಾಧ್ಯವಿಲ್ಲ,ಅದೇ ರೀತಿ ಎಣಿಕೆಗೆ ಸಿಗಲು ಸಾಧ್ಯವಾಗದಷ್ಟು ಸಾಧನೆಯನ್ನು ಇವರು ಮಾಡಿರುವರು. ವಿದ್ಯಾರ್ಹತೆಯಲ್ಲಿ ಇವರು ಎಂ ಎ ಪದವೀಧರರಾಗಿದ್ದು ‘ಕಲಿಕೆಗೆ ಕೊನೆಯಿಲ್ಲ ಸಾಧನೆಗೆ ಮಿಲೆಯಿಲ್ಲ’ ಎಂಬತೆ ಮಂಗಳೂರಿನ ಭಾರತೀಯ ವಿದ್ಯಾಭವನದಲ್ಲಿ ಸಂಗೀತ ಜ್ಯೂನಿಯರ್ ಪೂರೈಸಿ, ಹಿಮ್ಮೇಳ ವಾದ್ಯಗಳಾದ ತಬ್ಲಾ, ಹಾರ್ಮೋನಿಯಂ, ವಾಯೊಲಿನ್ ಶಿಕ್ಷಣ ಪಡೆದು ಉಡುಪಿಯ ಅಕಾಡೆಮಿ ಸಂಗೀತ ಶಾಲೆಯಲ್ಲಿ ವಿದ್ವಾನ್ ಮಹಾಬಲೇಶ್ವರ ಭಾಗವತರಲ್ಲಿ ೮ ವರ್ಷ ಶಿಕ್ಷಣ ಪಡೆದು ೧೯೯೫ರಲ್ಲಿ ಹಾವೇರಿಯಲ್ಲಿ ಜರುಗಿದ ವಿದ್ವತ್ ಪರೀಕ್ಷೆಯಲ್ಲಿ ದಾಖಲೆ ಶೇಕಡ ೯೪ ಅಂಕಗಳೊಂದಿಗೆ ವಿದ್ವತ್ ಪದವಿ ಪಡೆದರು.

ದೇಶದ ಹೆಸರಾಂತ ಹಾರ್ಮೋನಿಯಂ ವಾದಕರಾದ ವಸಂತ ಕನಕಾಪುರ ಇವರಲ್ಲಿ‌ ಹಾರ್ಮೋನಿಯಂ ಶಿಕ್ಷಣ ಪಡೆದರು ಹಾಗೂ ಅಂಧ ಗಾಯಕ ಮಲ್ಲಿಕಾರ್ಜುನ ಶಂಶಿಯವರಲ್ಲಿ ಶಿಕ್ಷಣ.ಬಿ.ಎಸ್.ರಾವ್ ರವರಲ್ಲಿ ಭಜನೆ, ಭಾವಗೀತೆ ತರಬೇತಿಯನ್ನು ಪಡೆದಿರುತ್ತಾರೆ.

ಸಂಗೀತ ಕ್ಷೇತ್ರದಲ್ಲಿನ ಇವರ ಸಾಧನೆ ಹಾಗೂ ತನಗಿರುವ ಅನುಭವದಿಂದ ವಿವಿಧ ಕಾರ್ಯಕ್ರಮಗಳಲ್ಲಿ ಕರ್ನಾಟಕ ಸರಕಾರದ ಸಂಗೀತ ಪರೀಕ್ಷಕರಾಗಿ,ತೀರ್ಪುಗಾರರಾಗಿ ಹಲವಾರು ವಿಧ್ಯಾರ್ಥಿಗಳಿಗೆ ಹಾಗೂ ಜಿಲ್ಲಾದ್ಯಂತ ಭಜನೆ,ಸಂಗೀತ ಕಚೇರಿಗಳಲ್ಲಿ ಸಂಗೀತ ಶಿಕ್ಷಕರಾಗಿ,ಭಜನಾ ಕಮ್ಮಟಗಳ ಸಂಪನ್ಮೂಲ ವ್ಯಕ್ತಿಯಾಗಿ ಸೇವೆ ಸಲ್ಲಿಸಿರುವರು.

ಕವಿತೆ,ಲೇಖನಗಳ ಬರವಣಿಗೆಯಲ್ಲಿ ಅಪಾರ ಒಲುಮೆ ಹೊಂದಿದ್ದ ಇವರು ಈ ಒಲುಮೆಗೆ ಗರಿಮೆಯ ಕೊಂಡಿಯಂತೆ ಪುಸ್ತಕಗಳನ್ನು ಬರೆದಿರುವರು. “ಬಿಲ್ಲವರು ಮತ್ತು ಬಾಸೆಲ್ ಮಿಶನ್-ಒಂದು ಅಧ್ಯಯನ ೨೦೧೧”, “ತುಳುನಾಡಿನ ಬಿಲ್ಲವರು- ಒಂದು ಅಧ್ಯಯನ ೨೦೧೩” ಇವೆರಡು ಇವರ ಕೃತಿಗಳಾಗಿದ್ದು,ಬಿಲ್ಲವ ಕುಲದಲ್ಲಿ ಹುಟ್ಟಿದ ಸಾಕ್ಷಾತ್ಕಾರತೆ ಹಾಗೂ ಬಿಲ್ಲವರ ನಡೆ ನುಡಿಗಳನ್ನು ಲೋಕದೆಲ್ಲೆಡೆ ಪಸರಿಸುವ ಪ್ರಯತ್ನವನ್ನು ಬಿಂಬಿಸುತ್ತದೆ.

ಇತರೆ ಲೇಖನಗಳು-ತುಳುನಾಡಿನ ಚರಿತ್ರೆ,ಸಂಸ್ಕೃತಿ,ಭೂತಾರಾಧನೆ,ನಾಗಾರಾಧನೆ,ವ್ಯಕ್ತಿ ಪರಿಚಯ ಮುಂತಾದ ಹಲವಾರು ಲೇಖನಗಳು ನಿಯತಕಾಲಿಕೆ ಪತ್ರಗಳಲ್ಲಿ ಪ್ರಕಟಗೊಂಡಿದೆ.

ಸಮಾಜಮುಖಿಯಾದ ಇವರು ಹತ್ತು ಹಲವಾರು ಸಂಘ ಸಂಸ್ಥೆಗಳಲ್ಲಿ ಅಧ್ಯಕ್ಷ,ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿ ತಮ್ಮನ್ನು ತಾವು ನಿಸ್ವಾರ್ಥವಾಗಿ ತೊಡಗಿಸಿಕೊಂಡಿರುವರು.

ಬಿಲ್ಲವ ಸೇವಾ ಸಮಾಜ(ರಿ.) ಕೊಲ್ಯ ಸೋಮೇಶ್ವರ ಇದರ ಕಾರ್ಯದರ್ಶಿಯಾಗಿ ನಿರಂತರ ೮ ವರ್ಷಗಳ ಸೇವೆ.ಅಧ್ಯಕ್ಷರಾಗಿ ೨ ವರ್ಷ ಸೇವೆ,ಇವರ ಅಧ್ಯಕ್ಷಾವಧಿಯಲ್ಲಿ ಕೊಲ್ಯ ಪರಿಸರದಲ್ಲಿ ಬ್ರಹ್ಮ ಶ್ರೀ ನಾರಾಯಣ ಗುರು ಧ್ಯಾನ ಮಂದಿರ ದ ನಿರ್ಮಾಣ ಕಾರ್ಯ,ಹಲವಾರು ವೈದ್ಯಕೀಯ ಶಿಬಿರ,ಉಚಿತ ಕಾನೂನು ನೆರವು ಶಿಬಿರ,ಸರ್ವಧರ್ಮ ಸಮ್ಮೇಳನ,ವ್ಯಕ್ತಿತ್ವ ವಿಕಸನ ಶಿಬಿರಗಳನ್ನು ಆಯೋಜಿಸಿದ ಅನುಭವಿ ಇವರಾಗಿರುವರು.

ಅದೇ ರೀತಿ ಸತ್ಯ ಸಾಯಿ‌ ಭಕ್ತವೃಂದ ಟ್ರಸ್ಟ್ ಪಜೀರು ಕೊಣಾಜೆ ಇದರ ಕಾರ್ಯದರ್ಶಿಯಾಗಿ ಸಂಸ್ಥೆಯಲ್ಲಿ ಉಚಿತ ವೈದ್ಯಕೀಯ ಶಿಬಿರವನ್ನು ನಿರಂತರ ನೆರವೇರಿಸುತ್ತಾ ಬಂದಿರುವರು,ಕೊಲ್ಯ ರಾಜೀವ ಆಳ್ವ ಟ್ರಸ್ಟ್ ನ ಕಾರ್ಯದರ್ಶಿಯಾಗಿ ಜಾತಿ,ಮತ,ಭೇದವಿಲ್ಲದೆ ಕ್ರೈಸ್ತ, ಮುಸ್ಲಿಂ, ಹಿಂದೂ ವರ್ಗದ ಬಡ ತಂದೆ ತಾಯಿಯನ್ನು ಕಳೆದುಕೊಂಡ ವಿಧ್ಯಾರ್ಥಿಗಳಿಗೆ ಕನಿಷ್ಠ ೨೦೦೦ ರೂಪಾಯಿಯಂತೆ ೪೫ವಿಧ್ಯಾರ್ಥಿಗಳಿಗೆ ಶೈಕ್ಷಣಿಕ ನೆರವು,ಕನ್ನಡ ಮಾಧ್ಯಮದ ಎಸ್.ಎಸ್.ಎಲ್.ಸಿ.ಹಾಗೂ ಪಿ.ಯು.ಸಿ. ವಿಧ್ಯಾರ್ಥಿಗಳಲ್ಲಿ ಅತ್ಯಧಿಕ ಅಂಕ ಪಡೆದವರಿಗೆ ಸನ್ಮಾನ,ಕ್ರೀಡಾ ಪಟುಗಳಿಗೆ ಸನ್ಮಾನ ಪ್ರೋತ್ಸಾಹ ನಿಧಿ.ಅದಲ್ಲದೆ ಮಂಗಳೂರು ವಿಶ್ವ ವಿದ್ಯಾನಿಲಯದ ೩ ೪ ವಿದ್ಯಾರ್ಥಿಗಳಿಗೆ ಉಚಿತ ವಾಸ್ತವ್ಯದ ವ್ಯವಸ್ಥೆಯನ್ನು ನೀಡಿರುವರು. ಯುವವಾಹಿನಿಯ ವಾರ್ಷಿಕ ವಿಶು ಕುಮಾರ್ ಪ್ರಶಸ್ತಿಯ ಆಯ್ಕೆ ಸಮಿತಿಯ ಸದಸ್ಯರು ಆಗಿರುತ್ತಾರೆ.

ದೇಶ ಸುತ್ತಿ ಕೋಶ ಕಲಿತು ನಮ್ಮ ನೆರೆಯವರ ಮರೆತರೇನು ಚೆಂದ? ಅಲ್ಲವೆ!!

ಆದರೆ ಶ್ರೀಯುತರು ಹುಟ್ಟಿ ಬೆಳೆದ ನಾಡು,ಮಾತೃಭಾಷೆಯನ್ನು ಬಿಡದೆ ತನ್ನ ತುಳುನಾಡು ನುಡಿಯಲ್ಲೇ ದೇಶ ಕಂಡು ಇಂದು ಕುರಲ್ ಇಷ್ಟೆರ್ ಕುಡ್ಲಇದರ ಕಾರ್ಯದರ್ಶಿಯಾಗಿ, ಸದಸ್ಯರಾಗಿ, ಅಧ್ಯಕ್ಷರಾಗಿ ತುಳು‌ ಜನಪದ ಕಥಾ ಸ್ಪರ್ಧೆ ಜಿಲ್ಲಾ ಮಟ್ಟದ ಯಕ್ಷಗಾನ ತಾಳ ಮದ್ದಳೆ ಸ್ಪರ್ಧೆ, ತುಳುನಾಡಿನಾದ್ಯಂತ ತುಳು ತೂಟೆ,ತುಳು ಒಲಿಂಪಿಕ್ಸ್ ಕಾರ್ಯದರ್ಶಿಯಾಗಿ ಜಿಲ್ಲಾದ್ಯಂತ ಚೆನ್ನ-ಮಣೆ,ಬಿರುಪಗರಿ,ಕುಂಟೆಬಿಲ್ಲೆ ಜನಪದ ಕ್ರೀಡೆಗಳ ನಿಯೋಜನೆ,ಅಧ್ಯಕ್ಷರಾಗಿ ಕೋಟಿ-ಚೆನ್ನಯ ಪಾರ್ದನ ಸಂಪುಟ-ಈ ಕೃತಿಗೆ ಸದಸ್ಯರು ಹಾಗೂ ಸಲಹೆಗಾರರಾಗಿ ಸೇವೆ,ತುಳುನಾಡಿನ ಗುತ್ತು ಮನೆಗಳು-ಅಧ್ಯಯನ ತಂಡದ ಸದಸ್ಯರು,ಉಡುಪಿಯ ಬೈದರ್ಕಳ ಪ್ರತಿಷ್ಠಾನದವರು ಹೊರತಂದ ಪಾಡ್ದನ ಸಂಗ್ರಹದ ಸಕ್ರಿಯ ಸದಸ್ಯರಾಗಿ ಸೇವೆಸಲ್ಲಿಸಿರುವರು.

ಉಡುಪಿಯ ದಿ.ಬೋಳ ಪೂಜಾರಿಯವರ ಪ್ರಾಯೋಜಕತ್ವದಲ್ಲಿ ಅಮೃತ್ ಸೋಮೇಶ್ವರ ಸಾಹಿತ್ಯದ ನಾರಾಯಣ ಗುರು ‘ಸ್ತವನಾಂಜಲ’ ಭಕ್ತಿ ಗೀತೆಗಳ ಕ್ಯಾಸೆಟ್ ನಿರ್ಮಾಣ. ಮಂಗಳೂರು ಆಕಾಶವಾಣಿಯಲ್ಲಿ ಹಲವಾರು ನಾಟಕ ಕರಾವಳಿ ಗಾಂಧಿ ‘ಕುದ್ಮುಲ್-ರಂಗರಾವ್’ ರೂಪಕ ಹಲವಾರು ಸಾಮಾಜಿಕ ಹಾಗೂ ನವ್ಯ ನಾಟಕಗಳಲ್ಲಿ ಪಾತ್ರವಹಿಸಿರುವರು.

ಕೋಟಿ-ಚೆನ್ನಯ ಚಲನಚಿತ್ರದ ಸಾಹಿತ್ಯ ರಚನೆಯಲ್ಲಿ ವಿಮರ್ಶಕರು ಹಾಗೂ ಮಾಹಿತಿದಾರರಾಗಿ ಕೆಲಸ ಮಾಡಿರುವರು.ದೇಯಿಬೈದ್ಯೆತಿ ಚಲನಚಿತ್ರದಲ್ಲಿ ಮೂಡಿಬಂದ ದೇಯಿ ಯ ಮನೆಯ ಚಿತ್ರೀಕರಣದ ಸ್ಥಳಕ್ಕೆ ವೀಳ್ಯದೆಲೆಯ ಬಳ್ಳಿ ಇರುವ ಮಣ್ಣಿನ ಚಟ್ಟಿಯನ್ನು ನೀಡಿರುವರು. ಇವರು ನೀಡಿರುವ ವೀಳ್ಯದೆಲೆಯನ್ನು ಪಾಡ್ದನದಲ್ಲಿ ಮದ್ದು ತಯಾರಿಕೆಯ (ಪಂಚೋಲಿ-ಬಚ್ಚಿರೆ) ವೀಳ್ಯದೆಲೆ ಎಂದು ಕರೆಯುತ್ತಾರೆ ಎಂಬ ಮಾಹಿತಿಯನ್ನು ಇವರು ನೀಡಿರುವರು.

ಇಂತಹದೊಂದು ಶ್ರೇಷ್ಠ ವ್ಯಕ್ತಿಯನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರದ ಮುಕುಟವೇರಿಸಿದೆ. ಇವರಿಗೆ ಕರ್ನಾಟಕ ತುಳು ಸಾಹಿತ್ಯ ಅಕಾಡಮಿಯ ವತಿಯಿಂದ ಪುಸ್ತಕ ಬಲ್ಮಾನ ಪ್ರಶಸ್ತಿ ೨೦೧೨,ಕನ್ನಡ ಸಂಘ ಕಾಂತಾವರ, ಮಾಸ್ಟರ್ ಭವಾನಿ ಶಂಕರ್ ಕುಂದರ್ ಸ್ಮರಣಾರ್ಥ ಸಾಧನಾ ಪ್ರಶಸ್ತಿ,ತುಳುನಾಡ ರಕ್ಷಣಾ ವೇದಿಕೆಯ ವತಿಯಿಂದ ಸನ್ಮಾನ ಪ್ರಶಸ್ತಿ ಪಡೆದಿರುವರು.

ರಮಾನಾಥ ಕೋಟೆಕಾರು ಇವರು ಹವ್ಯಾಸಿ ಕಲೆಯಿಂದ ಕದ ತಟ್ಟಿ ಸಾಹಿತ್ಯ ಕ್ಷೇತ್ರದಲ್ಲಿ ಮುಗಿಲು ಮುಟ್ಟುವವರೆಗಿನ ಸಾಧನೆಯನ್ನು ಮಾಡಿ ಯುವ ಜನರಿಗೆ ಮಾರ್ಗದರ್ಶಕರಾಗಿ,
ಸಾಧಿಸುವ ಛಲವಿರುವ ಯುವಶಕ್ತಿಗಳಿಗೆ ಮಾದರಿಯಾಗಿದ್ದಾರೆ.ನೈಜ ಪರಿಸರದಲ್ಲಿ ನಲ್ಮೆಯ ಜೀವಿ ಇವರು ಸಹನಾ ಮನೋಭಾವಿಯಾಗಿರುವರು.ಬಿಲ್ಲವ ಮಾಣಿಕ್ಯ,ಜ್ಞಾನ ದೀವಿಗೆ,ಪಾರದರ್ಶಕ ವ್ಯಕ್ತಿತ್ವ, ಸಂಪನ್ಮೂಲ ವ್ಯಕ್ತಿಯಾಗಿ ಇವರು ಜೀವಮಾನ ಸಾಧಕರಾಗಿದ್ದಾರೆ.

ಶ್ರೀಯುತರು ಪ್ರಸ್ತುತ ನಾರಾವಿ ಸಮೀಪದ ಬೊಲ್ಲೊಟ್ಟು ಗುರುಕೃಪಾ ಸೆಂಟ್ರಲ್ ಸ್ಕೂಲಿನ ಕಾರ್ಯದರ್ಶಿಯಾಗಿರುವರು ಮಗಳು ಸಾಯಿಕ್ಷಾ ನವದೆಹಲಿಯ ರಾಮ್ ಮನೋಹರ್ ಲೋಹಿಯಾ ವೈದ್ಯಕೀಯ ಸಂಸ್ಥೆಯ ಎಂ.ಡಿ.ಸ್ನಾತಕೋತ್ತರ ಮಹಿಳಾ ವಿಭಾಗದ ವಿಧ್ಯಾರ್ಥಿನಿ,ಪತ್ನಿ ಆಶಾ ಕೋಟೆಕಾರು ಉದ್ಯಮದ ಸಹ ಹೊಣೆಗಾರಿಕೆ ನಿರ್ವಹಣೆ. ಶ್ರೀಯುತರಿಗೆ ಹಾಗೂ ಇವರ ಕುಟುಂಬ ವರ್ಗಕ್ಕೆ ದೇವರ ಆಶೀರ್ವಾದ ಹಾಗೂ ನಾರಾಯಣ ಗುರುವರ್ಯರ ಅನುಗ್ರಹ ಇರಲೆಂಬ ಸದಾ ಆಶಯ ನಮ್ಮದಾಗಿರಲಿ.

ಬರಹ: ತೃಪ್ತಿ.ಜಿ.ಕುಂಪಲ


Share:

More Posts

Category

Send Us A Message

Related Posts

ವಿಶ್ವ ಮಾನ್ಯ ಕನ್ನಡಿಗ. 2024 ಪ್ರಶಸ್ತಿಗೆ ಭಾಜನರಾದ ಸನ್ಮಾನ್ಯ ಶ್ರೀ ಕೆ.ಪಿ ಮಂಜುನಾಥ್ ಸಾಗರ್ 


Share       ಅಮೆರಿಕದ ರಿಚ್ಮಂಡ್ ನಗರ ದ ಗ್ರೇಟರ್ ರಿಚ್ಮಂಡ್ ಕನ್ವೆನ್ಷನ್ ಸೆಂಟರ್ ನಲ್ಲಿ ನಡೆದ 12 ನೇ ಅಕ್ಕ ವಿಶ್ವ ಮಾನ್ಯ ಕನ್ನಡ ಸಮ್ಮೇಳನವು ನಡೆಯಿತು. ಈ ಸಂದರ್ಭದಲ್ಲಿ ಕನ್ನಡ ಭಾಷೆ, ಸಂಸ್ಕೃತಿ, ಸಾಹಿತ್ಯ


Read More »

ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮದಲ್ಲಿ ಶಾಲೆಗೆ ಶಾಲಾ ವಾಹನ ಕೊಡುಗೆ ನೀಡಿದ ಉದ್ಯಮಿ…!! ಸುಭಾಷ್ ಪೂಜಾರಿ


Share       ಬೈಂದೂರು : ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ತಗ್ಗರ್ಸೆ – ಬೈಂದೂರು ಇಲ್ಲಿ 78 ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯನ್ನು  ಎಸ್.ಡಿ.ಎಮ್.ಸಿ ಅಧ್ಯಕ್ಷರಾದ ಸುರೇಶ್ ಪೂಜಾರಿ ಧ್ವಜಾರೋಹಣ ಕಾರ್ಯಕ್ರಮ ನೆರೆವೆರೆಸಿದರು. ಈ ಸಮಯದಲ್ಲಿ ಶಾಲೆಗೆ


Read More »

ಬಿರುವೆರ್ ಕುಡ್ಲದಿಂದ ಸ್ವಾತಂತ್ರ್ಯ ದಿನಾಚರಣೆ ಮೂರು ಕುಟುಂಬಗಳಿಗೆ 1 ಲಕ್ಷ ರೂ.ನೆರವು


Share       ಕುದ್ರೋಳಿ,ಆ.15: ಬಿರುವೆರ್ ಕುಡ್ಲ ದಿಂದ ಲೇಡಿಹಿಲ್ ಸರ್ಕಲ್ ನಲ್ಲಿ ಅದ್ದೂರಿಯ ಸ್ವಾತಂತ್ರ್ಯ ದಿನಾಚರಣೆ ಹಾಗೂ ಮೂರು ಕುಟುಂಬಗಳಿಗೆ ಒಂದು ಲಕ್ಷ ರೂ.ನೆರವು ಹಸ್ತಾಂತರ ಕಾರ್ಯಕ್ರಮವು ಬಿರುವೆರ್ ಕುಡ್ಲ ಸ್ಥಾಪಕಾಧ್ಯಕ್ಷ ಉದಯ ಪೂಜಾರಿ ಬಳ್ಳಾಲ್


Read More »

ಶ್ರೀ ರಾಮ್ ಫ್ರೆಂಡ್ಸ್ ಕಟೀಲ್ ಸಂಸ್ಥೆ : ಬಿರುವೆರ್ ಕುಡ್ಲ ಸಂಸ್ಥೆಯ ಸ್ಥಾಪಕ ಅಧ್ಯಕ್ಷ ಉದಯ ಪೂಜಾರಿಗೆ ಸಮ್ಮಾನ


Share       ಶ್ರೀ ರಾಮ್ ಫ್ರೆಂಡ್ಸ್ ಕಟೀಲ್ ಸಂಸ್ಥೆಯ 5 ನೇ ವಾರ್ಷಿಕೋತ್ಸವದ ಸಂಭ್ರಮ. ಕಾರ್ಯಕ್ರಮದಲ್ಲಿ ಫ್ರೆಂಡ್ಸ್ ಬಲ್ಲಾಳ್ ಭಾಗ್,ಬಿರುವೆರ್ ಕುಡ್ಲ ಸಂಸ್ಥೆಯ ಸ್ಥಾಪಕ ಅಧ್ಯಕ್ಷರಾದ ಶ್ರೀ ಉದಯ ಪೂಜಾರಿಯವರ ಸಮಾಜ ಸೇವೆಯನ್ನು ಗುರುತಿಸಿ ಸಮ್ಮಾನ


Read More »

ವಿಟ್ಲ ಕಸಬಾ ಗ್ರಾಮದ ನೆತ್ರೆಕೆರೆ ನಿವಾಸಿ ನಿವೃತ್ತ ಶಿಕ್ಷಕ ಗುಡ್ಡಪ್ಪ ಪೂಜಾರಿ ನಿಧನ


Share       ವಿಟ್ಲ; ವಿಟ್ಲ ಕಸಬಾ ಗ್ರಾಮದ ನೆತ್ರೆಕೆರೆ ನಿವಾಸಿ ನಿವೃತ್ತ ಶಿಕ್ಷಕ ಗುಡ್ಡಪ್ಪ ಪೂಜಾರಿ( 92 ವರ್ಷ) ಇತ್ತೀಚಿಗೆ ತನ್ನ ಸ್ವಗೃಹದಲ್ಲಿ ವಯೋ ಸಹಜವಾಗಿ ನಿಧನರಾದರು. ಇವರು ಸರಕಾರಿ ಪ್ರಾಥಮಿಕ ಶಾಲೆ ಅನಿಲಕಟ್ಟೆಯಲ್ಲಿ ಶಿಕ್ಷಕರಾಗಿ


Read More »

ಫ್ರೆಂಡ್ಸ್ ಸುರತ್ಕಲ್ ತುಳುನಾಡ ಬಿರುವೆರ್ (ರಿ )ವತಿಯಿಂದ ಸಹಾಯ ಧನ ವಿತರಣೆ


Share       ಫ್ರೆಂಡ್ಸ್ ಸುರತ್ಕಲ್ ತುಳುನಾಡ ಬಿರುವೆರ್ ಸಂಘಟನೆಯ ಸಕ್ರಿಯ ಕಾರ್ಯಕರ್ತ ಹಾಗೂ ನಮ್ಮೆಲ್ಲರ ಅತ್ಮೀಯರಾದ ಯಶೋಧರ ಹೊಸಬೆಟ್ಟು ರುವರು ಹಲವು ದಿನಗಳ ಹಿಂದೆ ತೀವ್ರ ಅನಾರೋಗ್ಯಕ್ಕಿಡಾಗಿದ್ದು,  ಅವರ ಚಿಕಿತ್ಸೆಗಾಗಿ ಲಕ್ಷಾಂತರ ರೂಪಾಯಿಗಳ ಅಗತ್ಯವಿದ್ದು, ಅವರ


Read More »